ಸಹಾಯ ಮಾಡಿ ಎಂದು ಬೀದಿಬೀದಿ ಅಲೆದಾಡುತ್ತಿದ್ದಾನೆ ಪಾರ್ಥ; ವಿಷಯ ತಿಳಿದುಕೊಂಡ ಗೌತಮ್‌ ಅಭಿಪ್ರಾಯ ಹೀಗಿತ್ತು- ಅಮೃತಧಾರೆ ಸೀರಿಯಲ್‌ ಸ್ಟೋರಿ
ಕನ್ನಡ ಸುದ್ದಿ  /  ಮನರಂಜನೆ  /  ಸಹಾಯ ಮಾಡಿ ಎಂದು ಬೀದಿಬೀದಿ ಅಲೆದಾಡುತ್ತಿದ್ದಾನೆ ಪಾರ್ಥ; ವಿಷಯ ತಿಳಿದುಕೊಂಡ ಗೌತಮ್‌ ಅಭಿಪ್ರಾಯ ಹೀಗಿತ್ತು- ಅಮೃತಧಾರೆ ಸೀರಿಯಲ್‌ ಸ್ಟೋರಿ

ಸಹಾಯ ಮಾಡಿ ಎಂದು ಬೀದಿಬೀದಿ ಅಲೆದಾಡುತ್ತಿದ್ದಾನೆ ಪಾರ್ಥ; ವಿಷಯ ತಿಳಿದುಕೊಂಡ ಗೌತಮ್‌ ಅಭಿಪ್ರಾಯ ಹೀಗಿತ್ತು- ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥನ ಕಥೆಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಯ ತಾಯಿಗೆ ನೆರವಾಗಲು ಹಣ ಕಲೆಕ್ಟ್‌ ಮಾಡಲು ಬೀದಿಬೀದಿ ಅಲೆದಾಡುತ್ತಿದ್ದಾನೆ. ಇದೇ ವಿಚಾರ ಗೌತಮ್‌ಗೆ ತಿಳಿದಿದೆ.

ಸಹಾಯ ಮಾಡಿ ಎಂದು ಬೀದಿಬೀದಿ ಅಳೆದಾಡುತ್ತಿದ್ದಾನೆ ಪಾರ್ಥ; ವಿಷಯ ತಿಳಿದುಕೊಂಡ ಗೌತಮ್‌ ಅಭಿಪ್ರಾಯ ಹೀಗಿತ್ತು- ಅಮೃತಧಾರೆ ಸೀರಿಯಲ್‌ ಸ್ಟೋರಿ
ಸಹಾಯ ಮಾಡಿ ಎಂದು ಬೀದಿಬೀದಿ ಅಳೆದಾಡುತ್ತಿದ್ದಾನೆ ಪಾರ್ಥ; ವಿಷಯ ತಿಳಿದುಕೊಂಡ ಗೌತಮ್‌ ಅಭಿಪ್ರಾಯ ಹೀಗಿತ್ತು- ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday Episode: "ಪಾರ್ಥ ಇನ್ನೂ ಚಿಕ್ಕ ಹುಡುಗ. ನಿನ್ನ ಅಪ್ಪ ನನ್ನ ಮಗನನ್ನು ಈ ರೀತಿ ಟ್ರೀಟ್‌ ಮಾಡೋದ. ನನ್ನ ಮಗನಿಗೆ ಟಾರ್ಚರ್‌ ಕೊಡ್ತಾ ಇದ್ದೀರ" ಎಂದೆಲ್ಲ ಶಕುಂತಲಾದೇವಿ ಹೇಳುತ್ತಾರೆ. "ಅಲ್ಲಿ ಏನೂ ನಡೀತ ಇದೆ ಅಂತ ನನಗೆ ಗೊತ್ತಿಲ್ಲ. ಆದರೆ, ನನ್ನ ಅಪ್ಪ ಏನು ಮಾಡಿದ್ರೂ ಸರಿಯಾಗಿಯೇ ಮಾಡ್ತಾರೆ" ಎಂದು ಭೂಮಿಕಾ ಹೇಳುತ್ತಾಳೆ. "ನಿನ್ನ ಅಪ್ಪನಿಗೆ ಈಗಲೇ ಕಾಲ್‌ ಮಾಡಿ ಹೇಳು" ಎಂದಾಗ "ನನ್ನಿಂದ ಅಲ್ಲ ಯಾರಿಗೂ ಸಾಧ್ಯವೇ ಇಲ್ಲ. ಯಾಕೆಂದರೆ ಪ್ರೀತಿಯ ಶಕ್ತಿ ಅಂತಹದ್ದು. ಪಾರ್ಥನ ಪ್ರೀತಿಯೇ ಗೆದ್ದೇ ಗೆಲ್ಲುತ್ತೆ. ಪ್ರೀತಿ ಅಂತ ಬಂದ್ರೆ ಯಾರೂ ಏನೂ ಮಾಡೋಕ್ಕೆ ಆಗೋಲ್ಲ" ಎಂದು ಭೂಮಿಕಾ ಹೇಳಿದಾಗ ಶಕುಂತಲಾಗೆ ಮಾತೇ ಬರೋದಿಲ್ಲ.

ಇನ್ನೊಂದೆಡೇ ಪಾರ್ಥ ಶಾಲಾ ಮಕ್ಕಳಿಗೆ ಹೇಳಿಕೊಡುತ್ತಾನೆ. ಒಬ್ಬ ಹುಡುಗನ ತಾಯಿಗೆ ಹುಷಾರಿಲ್ಲ, ಅಪರೇಷನ್‌ಗೆ ಹಣ ಬೇಕು ಎನ್ನುತ್ತಾನೆ. ಆದರೆ, ಹಣ ಹೊಂದಿಸುವುದು ಹೇಗೆ ಎಂದು ಪಾರ್ಥ ಯೋಚಿಸುತ್ತಾನೆ. "ನೀನು ನಿನ್ನ ಮನೆಯ ಹಣ ಬಳಸಬಾರದು" ಎಂದೆಲ್ಲ ಮಾವ ಹೇಳಿದಾಗ ಪಾರ್ಥನಿಗೆ ಬೇಸರವಾಗುತ್ತದೆ. "ನಿನಗೆ ಇದೆಲ್ಲ ಸಾಧ್ಯವಿಲ್ಲ. ನೀನು ಚಿನ್ನದ ಸ್ಪೂನ್‌ನಲ್ಲಿ ಹುಟ್ಟಿ ಬೆಳೆದವನು. ನಿನಗೆ ಛಲ ಇಲ್ಲ" ಎಂದೆಲ್ಲ ಮಾವ ಹೇಳುತ್ತಾನೆ. "ನಾನೇ ಏನಾದರೂ ಮಾಡ್ತಿನಿ. ಯಾರಲ್ಲಿಯಾದರೂ ಸಹಾಯ ಪಡೆಯೋದಿಲ್ಲ" ಎಂದು ಪಾರ್ಥ ಯೋಚಿಸುತ್ತಾನೆ.

ಇನ್ನೊಂದೆಡೆ ಶಕುಂತಲಾದೇವಿಯ ಮನಸ್ಸಿಗೆ ಬೆಂಕಿ ಹಚ್ಚುವ ಮಾತುಗಳನ್ನು ಮನೆಹಾಳ ಮಾಡುತ್ತ ಇರುತ್ತಾನೆ. ಏನಾದರೂ ಮಾಡಲೇಬೇಕೆಂದು ಶಕುಂತಲಾದೇವಿ ಯೋಚಿಸುತ್ತಾಳೆ. ಗೌತಮ್‌ ನನ್ನನ್ನು ಸೈಡ್‌ಲೈನ್‌ ಮಾಡಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಸಹೋದರ ಅಲ್ಲಗೆಳೆಯುತ್ತಾನೆ. "ಭೂಮಿಕಾ ಸಖತ್‌ ಬುದ್ಧಿವಂತೆ. ಅವಳನ್ನು ಶಕ್ತಿಯಿಂದ ಗೆಲ್ಲಲು ಸಾಧ್ಯವಿಲ್ಲ. ಯುಕ್ತಿಯಿಂದ ಗೆಲ್ಲಬೇಕು" ಎಂದೆಲ್ಲ ತಲೆಹಾಳು ಮಾಡುತ್ತಾನೆ.

ಪಾರ್ಥ ತನ್ನ ವಿದ್ಯಾರ್ಥಿಯ ತಾಯಿಗೆ ಹಣ ಸಂಗ್ರಹಿಸಲು ತಾನೇ "ದಯವಿಟ್ಟು ಸಹಾಯ ಮಾಡಿ" ಎಂಬ ಬೋರ್ಡ್‌ ರೆಡಿ ಮಾಡುತ್ತಾನೆ. ಮೊದಲಿಗೆ ಮಾವನೇ ಹಣ ಡೊನೆಟ್‌ ಮಾಡುತ್ತಾರೆ. ಹೀಗೆ ಫಂಡ್‌ ಕಲೆಕ್ಟ್‌ ಮಾಡಲು ಬೀದಿಯಲ್ಲಿ ಅಳೆದಾಡುತ್ತಾನೆ. ಈ ರೀತಿ ಹಣ ಕಲೆಕ್ಟ್‌ ಮಾಡುವಾಗ ಆನಂದ್‌ ಮತ್ತು ಗೌತಮ್‌ ನೋಡುತ್ತಾರೆ. "ಅವನು ಈ ರೀತಿ ಮಾಡ್ತಾ ಇದ್ದಾನೆ ಅಂದ್ರೆ ಏನೋ ಬಲವಾದ ಕಾರಣ ಇದೆ. ನೀನು ಹೋಗಿ ವಿಚಾರಿಸಿಕೊಂಡು ಬಾ" ಎಂದು ಗೌತಮ್‌ ಹೇಳುತ್ತಾನೆ. ಆನಂದ್‌ ಹೋದಾಗ "ಹುಷಾರಿಲ್ಲ, ಅರ್ಜೆಂಟ್‌ ಹಣ ಕೊಡಿ" ಎಂದು ಕೇಳುವುದನ್ನು ನೋಡಿ ಆನಂದ್‌ಗೆ ಅಚ್ಚರಿಯಾಗುತ್ತದೆ. "ಬ್ರೇನ್‌ ಟ್ಯೂಮರ್‌ಗೆ ಈ ಹಣ ಸಾಕಾಗೋದಿಲ್ಲ" ಎಂದು ಆನಂದ್‌ ಹೇಳುತ್ತಾನೆ. "ನಾನು ಸ್ಕೂಲ್‌ನಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡ್ತಾ ಇದ್ದೇನೆ" ಎಂದು ಒಂದಿಷ್ಟು ವಿವರ ತಿಳಿಸುತ್ತಾನೆ. "ಆನಂದ್‌ ಇಲ್ಲಿ ನಡೆಯುತ್ತಿರುವ ವಿಚಾರ ಯಾರಿಗೂ ಹೇಳಬೇಡಿ" ಎಂದು ಹೇಳುತ್ತಾನೆ. ಆನಂದ್‌ ಕೂಡ ಹಣ ನೀಡುತ್ತಾನೆ. "ಇದು ಹೆಚ್ಚು ಸಮಯ ಬಯಸುವ ವಿಚಾರ. ಬೇರೆ ಏನಾದರೂ ಮಾಡು" ಎಂದು ಆನಂದ್‌ ಸಲಹೆ ನೀಡುತ್ತಾನೆ. ಮರೆಯಲ್ಲಿ ನಿಂತು ಈ ಮಾತನ್ನು ಗೌತಮ್‌ ಕೇಳಿಸಿಕೊಳ್ಳುತ್ತಾರೆ. "ಅವನಿಗೆ ಜೀವನದಲ್ಲಿ ತಾನೇ ಏನಾದರೂ ಮಾಡಬೇಕು ಎಂದು ಅನಿಸಿದ್ದು ಒಳ್ಳೆಯ ವಿಚಾರ" ಎಂದು ಗೌತಮ್‌ ಹೇಳುತ್ತಾರೆ. "ಅವನು ತುಂಬಾ ಈಸಿ ಗೋಯಿಂಗ್‌ ಅಂದುಕೊಂಡಿದ್ದೆ. ಈಗ ನೋಡಿದ್ರೆ ಅನಿಸುತ್ತದೆ ಆತ ಬಹಳ ಸ್ವಾಭಿಮಾನಿ" ಎಂದು ಪಾರ್ಥನ ಬಗ್ಗೆ ಆನಂದ್‌ ಬಳಿ ಗೌತಮ್‌ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

ಇನ್ನೊಂದೆಡೆ ಭೂಮಿಕಾ ಯೋಚಿಸ್ತಾ ಇದ್ದಾಳೆ. ಅಪ್ಪ ಈ ರೀತಿ ಟಾಸ್ಕ್‌ ಕೊಟ್ಟಿದ್ದಾರ? ಅಮ್ಮನಿಗೆ ಕಾಲ್‌ ಮಾಡಿ ವಿಷಯ ತಿಳಿದುಕೊಳ್ಳುವೆ ಎಂದು ಅಮ್ಮನಿಗೆ ಕಾಲ್‌ ಮಾಡ್ತಾಳೆ. "ಯಾಕೆ ಬೇಜಾರಾಗಿದ್ದೀಯ" ಎಂದಾಗ "ಆಕಾಶ ತಲೆಮೇಲೆ ಬಿದ್ದಂತೆ ಅಪ್ಪ ಇದ್ದಾರೆ. ಇನ್ನೊಂದೆಡೆ ಅಪೇಕ್ಷಾ ಇದ್ದಾಳೆ" ಎಂದು ಮಂದಾಕಿನಿ ಹೇಳುತ್ತಾನೆ. "ಪಾರ್ಥನ ವಿಚಾರದಲ್ಲಿ ಏನೋ ಆಗಿದೆ" ಎಂದು ಭೂಮಿಕಾ ಆಲೋಚಿಸುತ್ತಾಳೆ. "ಮಿಸ್‌ ಇಂಡಿಯಾ ಆಫರ್‌ ಕೊಟ್ರೂ ಅಪೇಕ್ಷಾ ಬೇಡ ಎನ್ನುತ್ತಾಳೆ" ಎಂದೆಲ್ಲ ತಾಯಿ ಹೇಳಿದಾಗ ಇವಳಿಗೆ ತುಸು ವಿಷಯ ಮನವರಿಕೆಯಾಗುತ್ತದೆ. ಬಳಿಕ ಅಪೇಕ್ಷಾಳ ಬಳಿ ಮಾತನಾಡುತ್ತಾಳೆ. "ಯಾಕೆ ಏನಾಗಿದೆ ನಿನಗೆ. ಏನೂ ಪ್ರಾಬ್ಲಂ" ಎಂದಾಗಲೂ ಅಪೇಕ್ಷಾ ಹೇಳುವುದಿಲ್ಲ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner