Amruthadhaare: ಹೆಣ್ಣು ನೋಡುವ ಶಾಸ್ತ್ರ ಮುಗೀತು, ಹುಡುಗಿಗೆ ಹುಡುಗ ಇಷ್ಟವಾದ, ಪಾರ್ಥನದ್ದು ಮೌನರಾಗ; ಅಪ್ಪಿ, ಭೂಮಿಕಾ ವಿಲವಿಲ
Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥನ ಜತೆ ಮದುವೆಯಾಗುವ ಹುಡುಗಿ ಮತ್ತು ಮನೆಯವರು ಬಂದಿದ್ದಾರೆ. ಅವರಿಗೆ ಗೌತಮ್ ಕುಟುಂಬ ತುಂಬಾ ಇಷ್ಟವಾಗಿದೆ. ಹುಡುಗಿಗೂ ಪಾರ್ಥ ಇಷ್ಟವಾಗಿದ್ದಾನೆ. ಇನ್ನೊಂದೆಡೆ ಅಪೇಕ್ಷಾ ನೋವಲ್ಲಿದ್ದಾಳೆ.
Amruthadhaare serial Yesterday Episode:ಗೌತಮ್ ದಿವಾನ್ ಮನೆಗೆ ಹೆಣ್ಣು ಕೊಡಲು ಹೆಣ್ಣಿನ ಕಡೆಯವರು ಬರುತ್ತಿದ್ದಾರೆ. ಇದೇ ರೀತಿ ಜುವೆಲ್ಲರಿ ಬಿಸ್ನೆಸ್ ಮಾಲೀಕರು ತನ್ನ ಮಗಳ ಕುರಿತು ಹೇಳುತ್ತಿದ್ದಾರೆ. ಪಾರ್ಥ ಒಳ್ಳೆಯ ಹುಡುಗ ಎಂದು ಗೊತ್ತಾಯ್ತು ಎಂದು ಹೆಣ್ಣಿನ ಕಡೆಯವರು ಹೇಳುತ್ತಾರೆ. ಇದೇ ಕಾರ್ಯಕ್ರಮದಲ್ಲಿ ಮದುವೆಯಾಗಬೇಕಿದ್ದ ಗಂಡು ಹೊರತುಪಡಿಸಿ ಮತ್ತೆಲ್ಲರೂ ಇದ್ದಾರೆ. ಅಪ್ಪಿ ಕೂಡ ಈ ಕಾರ್ಯಕ್ರಮದಲ್ಲಿದ್ದು ಬೇಸರದಲ್ಲಿದ್ದಾಳೆ. ನೀವು ಹಣಕ್ಕೆ ಬೆಲೆ ಕೊಡದವರು ಎಂದು ಗೊತ್ತಾಯ್ತು. ಭಾವನೆಗಳಿಗೆ ಬೆಲೆ ಕೊಡುವವರು ಎಂದು ತಿಳಿದು ಖುಷಿಯಾಯ್ತು ಎಂದೆಲ್ಲ ಹೆಣ್ಣಿನ ಕಡೆಯವರು ಹೊಗಳುತ್ತಾರೆ. ಇನ್ನೊಂದೆಡೆ ಎಲ್ಲವೂ ಕೈ ಮೀರಿ ಹೋಗ್ತಾ ಇದೆ ಎಂದು ಅಪ್ಪಿ ಆತಂಕದಲ್ಲಿದ್ದಾಳೆ.
ಇದ್ಯಾವುದರ ವಿಷಯ ಗೊತ್ತಿಲ್ಲದೆ ಪಾರ್ಥ ಬಡ ಹುಡುಗರಿಗೆ ಟೀಚಿಂಗ್ ಮಾಡ್ತಾ ಇದ್ದಾನೆ. ಎಲ್ಲಾ ಹುಡುಗರು ಈಗ ಈತ ಹೇಳಿದಂತೆ ಕೇಳುತ್ತಿದ್ದಾರೆ. ಇದೇ ಸಮಯದಲ್ಲಿ ಪಾರ್ಥನಿಗೆ ಗೌತಮ್ ಕಾಲ್ ಮಾಡಿ ತಕ್ಷಣ ಮನೆಗೆ ಬಾ ಎನ್ನುತ್ತಾನೆ. ಇನ್ನೊಂದೆಡೆ ಹೆಣ್ಣಿನ ಕಡೆಯವರು ಮನೆಯಲ್ಲಿ ಊಟ ಮುಗಿಸುತ್ತಾರೆ. ಎಲ್ಲರೂ ಹುಡುಗಿನಿಗಾಗಿ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಪಾರ್ಥ ಬರುತ್ತಾರೆ. ಆತನಿಗೆ ಕನ್‌ಫ್ಯೂಸ್ ಆಗುತ್ತದೆ. ಹೆಣ್ಣಿನ ಕಡೆಯವರಿಗೆ ಪಾರ್ಥನ ನೋಡಿ ಖುಷಿಯಾಗುತ್ತದೆ. ಇದೇ ಸಮಯದಲ್ಲಿ "ನೀನು ಮದುವೆಯಾಗುವ ಹುಡುಗಿ" ಎಂದು ಗೌತಮ್ ಹೇಳಿದಾಗ ಪಾರ್ಥನಿಗೆ ಕಸಿವಿಸಿಯಾಗುತ್ತದೆ. ಪರ್ಸನಲ್ ಆಗಿ ಮಾತನಾಡೋದು ಇದ್ರೆ ಮಾತನಾಡಿ ಎಂದು ಇಬ್ಬರನ್ನೂ ಕಳುಹಿಸುತ್ತಾರೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಇವರಿಬ್ಬರು ಮಾತನಾಡಿದರೆ ಪ್ರೀತಿ ವಿಷಯ ಹೇಳಿಕೊಂಡರೆ ಎಂದು ಮನೆಹಾಳ ಮಾವ ಸಂಶಯ ವ್ಯಕ್ತಪಡಿಸುತ್ತಾರೆ. ಪಾರ್ಥ ಈ ಪ್ರೀತಿ ವಿಷಯನ ಹುಡುಗಿಗೆ ಹೇಳೋದಿಲ್ಲ. ಅಣ್ಣ ಮದುವೆಯಾಗಬೇಕಿದ್ದ ಹುಡುಗಿನ ನಾನು ಮದುವೆಯಾಗಬೇಕು ಎಂದು ಕೇಳಲು ಅವನಿಗೆ ಆಗೋದಿಲ್ಲ. ಇನ್ನೊಂದೆಡೆ ಮಾವನ ಪರೀಕ್ಷೆ ಇದೆ ಎಂದೆಲ್ಲ ಶಕುಂತಲಾದೇವಿ ತನ ಮಾವನಿಗೆ ಹೇಳುತ್ತಾಳೆ. ಹುಡುಗಿ ಮತ್ತು ಹುಡುಗ ಮಾತನಾಡುತ್ತಿದ್ದಾರೆ. ನನಗೆ ನಿಮ್ಮ ಮನೆ ತುಂಬಾ ಇಷ್ಟ ಆಯ್ತು. ಮನೆಯವರು ಇಷ್ಟ ಆದ್ರು ಎನ್ನುತ್ತಾಳೆ. ದೂರದಿಂದ ನಿಂತು ಅಪೇಕ್ಷಾ ನೋಡುತ್ತ ಇರುತ್ತಾಳೆ. ಮಾತನಾಡಿ ವಾಪಸ್ ಬರುತ್ತಾರೆ. ಹುಡುಗಿಗೆ ಗಂಡು ಇಷ್ಟ ಎನ್ನುತ್ತಾಳೆ.
ಅಪೇಕ್ಷಾ ಒಂಟಿಯಾಗಿದ್ದಾಗ ಅಲ್ಲಿಗೆ ಶಕುಂತಲಾದೇವಿ ಮತ್ತು ಮಾವ ಬರುತ್ತಾರೆ. ಯಾಕೆ ಡಲ್ ಆಗಿದ್ದೀಯ. ಏನಾದರೂ ಪ್ರಾಬ್ಲಂ ಇದ್ರೆ ಹೇಳು ಎಂದು ಕೇಳುತ್ತಾಳೆ. ಏನಾದರೂ ಜಾಹೀರಾತು ಕಂಪನಿಯಲ್ಲಿ ಕೆಲಸ ಬೇಕಿದ್ದರೆ ಹೇಳು ಎನ್ನುತ್ತಾಳೆ. ನನಗೆ ಪರಿಚಯದ ಕಂಪನಿ ಇದೆ ಎನ್ನುತ್ತಾಳೆ. ಆಗ ರಮಾಕಾಂತ್ "ಅದು ಇಂಟರ್‌ನ್ಯಾಷನಲ್ ಕಂಪನಿ ಇವಳ ರೇಂಜ್‌ಗೆ ಸೂಟ್ ಆಗೋದಿಲ್ಲ" ಎಂದು ಅಣಕಿಸುತ್ತಾನೆ. ಇದೇ ಸಮಯದಲ್ಲಿ ಪಾರ್ಥನ ಹುಡುಗಿ ಹೇಗಿದ್ದಾಳೆ. ಜೋಡಿ ಹೇಗಿದೆ ಎಂದು ಅಭಿಪ್ರಾಯ ಕೇಳುತ್ತಾರೆ. ಸೀರಿಯಲ್ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ