Amruthadhaare: ಸದಾಶಿವ ಹಾಕಿದ ಷರತ್ತುಗಳನ್ನು ಈಡೇರಿಸಲು ಸಾಧ್ಯವೇ? ಪಾರ್ಥ ಹಾಗೇ ಬದುಕೋದುಂಟೆ? ಅಮೃತಧಾರೆಯಲ್ಲಿ ಪ್ರೀತಿಗೆ ಅಗ್ನಿಪರೀಕ್ಷೆ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಸದಾಶಿವ ಹಾಕಿದ ಷರತ್ತುಗಳನ್ನು ಈಡೇರಿಸಲು ಸಾಧ್ಯವೇ? ಪಾರ್ಥ ಹಾಗೇ ಬದುಕೋದುಂಟೆ? ಅಮೃತಧಾರೆಯಲ್ಲಿ ಪ್ರೀತಿಗೆ ಅಗ್ನಿಪರೀಕ್ಷೆ

Amruthadhaare: ಸದಾಶಿವ ಹಾಕಿದ ಷರತ್ತುಗಳನ್ನು ಈಡೇರಿಸಲು ಸಾಧ್ಯವೇ? ಪಾರ್ಥ ಹಾಗೇ ಬದುಕೋದುಂಟೆ? ಅಮೃತಧಾರೆಯಲ್ಲಿ ಪ್ರೀತಿಗೆ ಅಗ್ನಿಪರೀಕ್ಷೆ

Amruthadhaare serial Yesterday Episode: ಸಿನಿಮಾ ಶೈಲಿಯಲ್ಲಿ ಪಾರ್ಥನಿಗೆ ಸದಾಶಿವ ಷರತ್ತುಗಳನ್ನು ಹಾಕಿದ್ದಾರೆ. ಈ ಮೂಲಕ ಈತನ ಪ್ರೀತಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಒರಟ ವಿದ್ಯಾರ್ಥಿಗಳನ್ನು ಬದಲಾಯಿಸುವ ಟಾಸ್ಕ್‌ ನೀಡಿದ್ದಾರೆ. ಮಲ್ಲಿ ಹಣದ ಚಕ್‌ ನೀಡಿರುವುದರಿಂದ ಶಕುಂತಲಾಗೆ ಅವಮಾನವಾಗಿದೆ.

ಅಮೃತಧಾರೆಯಲ್ಲಿ ಪ್ರೀತಿಗೆ ಅಗ್ನಿಪರೀಕ್ಷೆ
ಅಮೃತಧಾರೆಯಲ್ಲಿ ಪ್ರೀತಿಗೆ ಅಗ್ನಿಪರೀಕ್ಷೆ

ಗೌತಮ್‌ ಅವರು ಭೂಮಿಕಾಳಿಗೆ ಫೋನ್‌ ಮಾಡಿ ನಾನು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ತಾ ಇದ್ದೇನೆ ಎನ್ನುತ್ತಾರೆ. ಇದೇ ಅಭಿಪ್ರಾಯವನ್ನು ಭೂಮಿಕಾ ಕೂಡ ಹೇಳುತ್ತಾಳೆ. ಒಂದಿಷ್ಟು ಪ್ರೀತಿ ಮಾತುಗಳು ನಡೆಯುತ್ತವೆ. ಗೌತಮ್‌ ಆಫೀಸ್‌ಗೆ ಹೊರಡುತ್ತಾರೆ. ಹೊರಡುವ ಮುನ್ನ ಐ ಲವ್‌ ಯು ಎಂದು ಹೇಳಲು ಮರೆಯುವುದಿಲ್ಲ. ಶಕುಂತಲಾ ದೇವಿ ಹಣಕ್ಕಾಗಿ ಕಾಯುತ್ತ ಇದ್ದಾರೆ. ಭೂಮಿಕಾ ಕಡೆಯಿಂದ ಏನೂ ಅಪ್‌ಡೇಟ್‌ ಇಲ್ಲ. ಆ ಸಮಯದಲ್ಲಿ ಮಲ್ಲಿ ಅಲ್ಲಿಗೆ ಬರುತ್ತಾಳೆ. ಅಕ್ಕಾ ಕೀ ನನ್ನ ಕೈಯಲ್ಲಿ ಕೊಟ್ಟಿದ್ದಾರೆ ಎಂದು ಹೇಳುತ್ತಾಳೆ.

ಮಲ್ಲಿಯ ಕೈಯಲ್ಲಿ ಮನೆಯ ಕೀ ಕೊಟ್ಟು ಜಾಣತನ ಮೆರೆದಿದ್ದಾಳೆ ಭೂಮಿಕಾ. ಇದು ಶಕುಂತಲಾದೇವಿಗೆ ದೊಡ್ಡ ಏಟು ನೀಡಿದಂತೆ ಆಗುತ್ತದೆ. ಮಲ್ಲಿ ಚೆಕ್‌ ತಂದು ಎಷ್ಟು ಅಮೌಂಟ್‌ ಎಂದು ಹೇಳುತ್ತಾಳೆ. 20 ಹಾಕು ಎನ್ನುತ್ತಾಳೆ. 20 ಲಕ್ಷನಾ ಎಂದು ಕೇಳುತ್ತಾಳೆ. ಯಾಕೆ ಎಂದು ಕೇಳಬೇಡ ಎಂದು ಕೇಳಬೇಡ ಎಂದಿದ್ದಾರೆ. ನಾನು ಕೇಳೋದಿಲ್ಲ ಎನ್ನುತ್ತಾಳೆ. 20 ಲಕ್ಷ ರೂಪಾಯಿ ಚೆಕ್‌ ಬರೆದುಕೊಡುತ್ತಾಳೆ. ಸೊಸೆಯಂದಿರ ಆಡಳಿತದಲ್ಲಿ ಶಕುಂತಲಾದೇವಿಗೆ ಇನ್‌ಸಲ್ಟ್‌ ಆಗ್ತಾ ಇದೆ. ನಾನಿಲ್ವ ಕೀ ನನ್ನಲ್ಲಿ ಕೊಡಬಹುದಿತ್ತಲ್ವ ಎಂದುಕೊಳ್ಳುತ್ತಾಳೆ. ಅವಳು ಅಲ್ಲಿಗೆ ಹೋಗಿ ಕೆಲಸದವಳ ಕೈಯಲ್ಲಿ ಚೆಕ್‌ ಕೊಡಿಸ್ತಾಳೆ. ಎಷ್ಟು ಅವಮಾನ ಆಗ್ತಾ ಇದೆ, ಎಷ್ಟು ಸಂಕಟ ಆಗ್ತಾ ಇದೆ ಎಂದು ರೋಧಿಸುತ್ತಾಳೆ.

ಪಾರ್ಥನ ಪ್ರೀತಿಗೆ ಒಪ್ಪದ ಸದಾಶಿವ

ಪಾರ್ಥ ಮತ್ತು ಅಪ್ಪಿಯಲ್ಲಿ ಸದಾಶಿವ ಮಾತನಾಡುತ್ತಾರೆ. ಯಾರಿಗೆ ಆಗಲಿ ಜವಾಬ್ದಾರಿ ಇರಬೇಕು. ತನ್ನ ಕಾಲಮೇಲೆ ತಾನು ನಿಂತಿರಬೇಕು. ಆಗಲೇ ಈ ಪ್ರೀತಿಗೀತಿಗೆ ಕೈ ಹಾಕಬೇಕು ಎನ್ನುತ್ತಾನೆ. "ಪ್ರೀತಿಸಲು ನಿನಗೆ ಏನು ಅರ್ಹತೆ ಇದೆ. ನೀನು ಸ್ವಂತವಾಗಿ ಏನು ಮಾಡಿದ್ದಿ. ನಿನ್ನ ಭವಿಷ್ಯದ ಬಗ್ಗೆ ಏನು ಆಲೋಚನೆ ಮಾಡಿದ್ದೀ. ಫಾರಿನ್‌ಗೆ ಹೋಗಿ ಓದಿಕೊಂಡು ಬಂದೆ. ಬಂದಮೇಲೆ ಏನು ಮಾಡಿದಿ ಎಂದು ಗೊತ್ತಿಲ್ಲ. ಅಪೇಕ್ಷಾ ಜತೆ ಸುತ್ತಾಡಿದ್ದು ಮಾತ್ರ ಎಂದು ಸದಾಶಿವ ಹೇಳುತ್ತಾರೆ. "ಅಪೇಕ್ಷಾರನ್ನ ನಾನು ತುಂಬಾ ಪ್ರೀತಿಸ್ತೀನಿ. ನನ್ನ ಪ್ರೀತಿನ ಅರ್ಥ ಮಾಡಿಕೊಳ್ಳಿ" ಎನ್ನುತ್ತಾನೆ. "ಸುಮಾರು ಒಂದು ವರ್ಷದಿಂದ ನಿನಗೆ ಅವಳ ಪರಿಚಯ. ನಾನು 20 ವರ್ಷದಿಂದ ಅವಳನ್ನು ಸಾಕಿ ಬೆಳೆಸಿದ್ದೀನಿ. ಪ್ರೀತಿ ಎಂದರೆ ಏನು ಅಂತ ನನಗೆ ಗೊತ್ತು" ಎಂದು ಸದಾಶಿವ ಹೇಳುತ್ತಾನೆ.

"ಇದು ಟೈಂಪಾಸ್‌ಗೆ ಮಾಡಿದ ಪ್ರೀತಿ ಅಲ್ಲ. ಒಬ್ಬರನ್ನೊಬ್ಬರನ್ನು ಬಿಟ್ಟಿರಲು ಸಾಧ್ಯವಿಲ್ಲ" ಎಂದೆಲ್ಲ ಪಾರ್ಥ ಬೇಡಿಕೊಳ್ಳುತ್ತಾನೆ. "ನೀನು ಜವಾಬ್ದಾರಿ ಇರುವ ವ್ಯಕ್ತಿ ಎಂದು ನನಗೆ ಅನಿಸೋದಿಲ್ಲ. ನನ್ನ ಅಳಿಯಂದಿರ ಮುಖ ನೋಡಿ ನಾನು ಮಗಳನ್ನು ಕೊಡಲು ರೆಡಿ ಇಲ್ಲ. ನಾವು ಕೊಟ್ಟರೂ ನೀನು ಅವಳನ್ನು ಚೆನ್ನಾಗಿ ನೋಡಿಕೊಳ್ತಿ ಎಂದು ಏನು ಗ್ಯಾರಂಟಿ" ಎಂದು ಹೇಳುತ್ತಾನೆ. "ನನ್ನನ್ನು ನಾನು ಪ್ರೂಫ್‌ ಮಾಡಲು ಒಂದಿಷ್ಟು ಸಮಯ ಕೊಡಿ" ಎನ್ನುತ್ತಾನೆ. "ಓದು ಮುಗಿಸಿ ಎಷ್ಟು ಸಮಯ ಆಯ್ತು. ನೀನು ಯೋಗ್ಯ ಅಂತನೇ ನನಗೆ ಅನಿಸ್ತಾ ಇಲ್ಲ. ಯಾರಿಂದ ಹೇಳಿಸಿದ್ರೂ ಅಷ್ಟೇ. ನನ್ನ ಮಗಳನ್ನು ನಿನಗೆ ಒಪ್ಪಿಸೋದಿಲ್ಲ. ಇದನ್ನ ಇಲ್ಲಿಗೆ ಬಿಟ್ಟುಬಿಡಿ" ಎಂದು ಸದಾಶಿವ ಖಡಾಖಂಡಿತವಾಗಿ ಹೇಳುತ್ತಾರೆ.

ಜೈದೇವ್‌ ಲವ್ವಿಡುವ್ವಿ

ನನಗೆ ಕಾಸ್ಟ್ಲಿ ಕಾರು ಇಷ್ಟ ಎಂದು ಜೈದೇವ್‌ಗೆ ದಿವ್ಯ ಹೇಳುತ್ತಾಳೆ. ನನಗೆ ನೀವೇ ಕಾಸ್ಟ್ಲಿ ಕಾರು ಕೊಡಿಸೋದಲ್ವ ಎನ್ನುತ್ತಾಳೆ. "ಪೆಟ್ರೋಲ್‌ ಹಾಕಲು ದುಡ್ಡಿಲ್ಲ. ಇವಳಿಗೆ ಕಾರು ತರೋದೆಲ್ಲಿ. ಸರಿಯಾಗಿ ತಗಲ್ಕೊಂಡೆ" ಎಂದುಕೊಳ್ಳುತ್ತಾನೆ. "ಇವತ್ತು ಬಿಝಿ ಇದ್ದೀನಿ. ಇನ್ನೊಮ್ಮೆ ನೋಡೋಣʼ ಎಂದು ಹೇಗೋ ತಪ್ಪಿಸಿಕೊಳ್ಳುತ್ತಾನೆ.

ಆನಂದ್‌ ಗೌತಮ್‌ನನ್ನು ಭೇಟಿಯಾಗುತ್ತಾನೆ. ಗೌತಮ್‌ ಬೇಜರಲ್ಲಿ ಇರುತ್ತಾನೆ. ಭೂಮಿಕಾ ಮನೆಯಲ್ಲಿ ಇಲ್ಲದೆ ಬೇಸರವಾಗಿದೆ. ಮನೆಯಲ್ಲಿ ಆಕೆ ಇಲ್ಲದೆ ಬಿಕೋ, ಆಫೀಸ್‌ಗೆ ಬಂದರೂ ಟೈಂಪಾಸ್‌ ಆಗುತ್ತಿಲ್ಲ. ಭೂಮಿಕಾಳ ನೆನಪಲ್ಲಿ ಇದ್ದಾನೆ. ಆನಂದ್‌ ಮತ್ತು ಗೌತಮ್‌ ಈ ವಿಚಾರದ ಕುರಿತು ತುಂಬಾ ಮಾತನಾಡುತ್ತಾರೆ.

ಪಾರ್ಥನ ಪ್ರೀತಿಗೆ ಅಗ್ನಿಪರೀಕ್ಷೆ

ನನ್ನನ್ನು ಅಪೇಕ್ಷಾಳಿಂದ ದೂರ ಮಾಡಬೇಡಿ. ನಾನು ಅಪೇಕ್ಷಾಳನ್ನು ತುಂಬಾ ಪ್ರೀತಿಸ್ತೀನಿ. ನೀವು ಏನೂ ಹೇಳಿದ್ರೂ ಕೇಳ್ತಿನಿ. ನೀವು ಹೇಳಿದ ಹಾಗೆ ಮಾಡ್ತಿನಿ ಎಂದು ಪಾರ್ಥ ಹೇಳುತ್ತಾನೆ. "ನಾನು ಏನೂ ಹೇಳಿದ್ರೂ ಮಾಡ್ತಿಯ" ಎನ್ನುತ್ತಾರೆ ಸದಾಶಿವ. "ನಾನು ಒಂದು ಕೆಲಸ ಹೇಳ್ತಿನಿ. ಅದನ್ನು ನೀನು ಮಾಡಬೇಕು. ನಾನು ರಿಟೈರ್ಡ್‌ ಆದ ಬಳಿಕ ಒಂದಿಷ್ಟು ಬಡ ಮಕ್ಕಳಿಗೆ ಪಾಠ ಮಾಡ್ತೀನಿ. ಅವರಲ್ಲಿ ನಾಲ್ಕು ತುಂಬಾ ಒರಟ ಮಕ್ಕಳಿದ್ದಾರೆ. ಅವರನ್ನು ರಿಪೇರಿ ಮಾಡಬೇಕು. ಅವರಿಗೆ ಜವಾಬ್ದಾರಿ ಬರುವ ಹಾಗೇ ಮಾಡಬೇಕು" ಎನ್ನುತ್ತಾರೆ ಸದಾಶಿವ. ಅದಕ್ಕೆ ಕಂಡಿಷನ್‌ ಇದೆ. ಈ ಕೆಲಸವನ್ನು ನೀನು ಯಾರ ಪ್ರಭಾವ ಇಲ್ಲದೇ ಪ್ರಾಮಾಣಿಕವಾಗಿ ಮಾಡಬೇಕು. ನೀನು ಸಿಂಪಲ್‌ ಆಗಿರಬೇಕು. ನೀನು ಅವರ ರೀತಿ ಇರಬೇಕು. ಅವರಲ್ಲಿ ಒಬ್ಬರಾಗಿ ಇರಬೇಕು. ನಿನ್ನ ಶ್ರೀಮಂತಿಕೆ ತೋರಿಸಬಾರದು. ಅವರು ಯಾವ ನೀರು ಕುಡಿಯುತ್ತಾರೋ ಅದನ್ನೇ ನೀನು ಕುಡಿಯಬೇಕು. ದುಬಾರಿ ಐಟಂ ಎಲ್ಲಾ ನಿಷಿದ್ಧ" ಎಂದು ತೆಲುಗು ಸಿನಿಮಾವೊಂದರ ಕಥೆಯಂತೆ ರೂಲ್ಸ್‌ ಹೇಳುತ್ತಾರೆ ಸದಾಶಿವ.