ಕನ್ನಡ ಸುದ್ದಿ  /  ಮನರಂಜನೆ  /  ಭೂಮಿಕಾ ಗೌತಮ್‌ಗೆ ಸೀತಾ ರಾಮ ಕಲ್ಯಾಣದ ಆಮಂತ್ರಣ; ಜೈಲಿಂದ ಬಿಡುಗಡೆಯಾದ ಕೆಂಚ, ಜೈದೇವ್‌ಗೆ ಟೆನ್ಷನ್‌- ಅಮೃತಧಾರೆ ಸೀರಿಯಲ್‌ ಸ್ಟೋರಿ

ಭೂಮಿಕಾ ಗೌತಮ್‌ಗೆ ಸೀತಾ ರಾಮ ಕಲ್ಯಾಣದ ಆಮಂತ್ರಣ; ಜೈಲಿಂದ ಬಿಡುಗಡೆಯಾದ ಕೆಂಚ, ಜೈದೇವ್‌ಗೆ ಟೆನ್ಷನ್‌- ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial: ಭೂಮಿಕಾ ಮತ್ತು ಗೌತಮ್‌ಗೆ ಮದುವೆ ಆಮಂತ್ರಣ ನೀಡಲು ಸೀತಾ ರಾಮ ಸೀರಿಯಲ್‌ನ ಸೀತಾ ಮತ್ತು ಸಿಹಿ ಬಂದಿದ್ದಾರೆ. ಈ ಮೂಲಕ ಸೀರಿಯಲ್‌ ಸೀರಿಯಲ್‌ಗಳ ನಡುವೆ ಒಲವಧಾರೆ ಸುರಿದಿದೆ. ಕೆಂಚ ಜೈಲಿನಿಂದ ಹೊರಬಂದಿರುವುದು ಜೈದೇವ್‌ನ ಟೆನ್ಷನ್‌ ಹೆಚ್ಚಿಸಿದೆ.

ಭೂಮಿಕಾ ಗೌತಮ್‌ಗೆ ಸೀತಾ ರಾಮ ಕಲ್ಯಾಣದ ಆಮಂತ್ರಣ
ಭೂಮಿಕಾ ಗೌತಮ್‌ಗೆ ಸೀತಾ ರಾಮ ಕಲ್ಯಾಣದ ಆಮಂತ್ರಣ

Amruthadhaare serial: ಜೈದೇವ್‌ಗೆ ರೌಡಿ ಕೆಂಚ ಕಾಲ್‌ ಮಾಡಿ ನನ್ನನ್ನು ಬಿಡಿಸುವಂತೆ ಹೇಳುತ್ತಾನೆ. ನೀವು ಬಿಡಿಸದೆ ಇದ್ದರೆ ನಾನು ಹೊರಗೆ ಬಾರದೆ ಇರ್ತೀನಾ? ಹೊರಗೆ ಬಂದ ಮೇಲೆ ನಿಮ್ಮನ್ನ ಸುಮ್ಮನೆ ಬಿಡ್ತಿನಾ? ಎಂದು ಅವಾಜ್‌ ಹಾಕುತ್ತಾನೆ. ಇದರಿಂದ ಜೈದೇವ್‌ಗೆ ಭಯವಾಗುತ್ತದೆ. "ಹೇಗಾದರೂ ನಿಮ್ಮ ಬಂಡವಾಳವನ್ನು ನಾನು ಬಯಲು ಮಾಡ್ತಿನಿ. ನಿಮಗೆ ಸಾಡೇಸಾತಿ ಶುರುವಾಯ್ತು" ಎಂದು ಭಯಪಡಿಸುತ್ತಾನೆ. "ಇದು ತುಂಬಾ ನಾಜೂಕಿನ ವಿಷಯ, ಎಚ್ಚರಿಕೆಯಿಂದ ಬಿಡಿಸಬೇಕು. ಆತ ಕೇಳಿದ್ದಷ್ಟು ಹಣ ನೀಡಿ ಜೈಲಿಂದ ಬಿಡಿಸು" ಎಂದು ಮನೆ ಹಾಳ ಮಾವ ಸಲಹೆ ನೀಡುತ್ತಾನೆ.

ಸೀತಾ ರಾಮ ಕಲ್ಯಾಣ

ಭೂಮಿಕಾಳ ಗೆಳತಿ ಸೀತಾ ಮತ್ತು ಸಿಹಿ ಮನೆಗೆ ಆಗಮಿಸುತ್ತಾರೆ. ಈ ಮೂಲಕ ಸೀತಾ ರಾಮ್‌ ಸೀರಿಯಲ್‌ ಅಮೃತಧಾರೆ ಸೀರಿಯಲ್‌ನೊಳಗೆ ಎಂಟ್ರಿ ನೀಡಿದೆ. "ನಾನು ತುಂಬಾ ಇಷ್ಟಪಡುವ ವ್ಯಕ್ತಿಗಳಲ್ಲಿ ನೀನೂ ಒಬ್ಬಳು" ಎಂದು ಸೀತಾ ಹೇಳುತ್ತಾಳೆ. ಒಟ್ಟಾರೆ ಮನೆಯಲ್ಲಿ ಸೀತಾ ಸಿಹಿ, ಭೂಮಿಕಾರ ಮಾತುಕತೆ ನಡೆಯುತ್ತದೆ. ಒಂದು ಗುಡ್‌ನ್ಯೂಸ್‌ ಕೊಡಲು ಬಂದಿದ್ದೇನೆ ಎನ್ನುತ್ತಾಳೆ ಸೀತಾ. ಆ ಸಮಯದಲ್ಲಿ ಅಲ್ಲಿಗೆ ಗೌತಮ್‌ ಕೂಡ ಬರುತ್ತಾನೆ. ಸೀತಾ ಮದುವೆ ಕಾಗದ ನೀಡಲು ಅಮೃತಧಾರೆ ಮನೆಗೆ ಬಂದಿರುತ್ತಾಳೆ. ನೀವಿಬ್ಬರೂ ಮದುವೆಗೆ ತಪ್ಪದೆ ಬರಬೇಕು ಎಂದು ಆಮಂತ್ರಣ ನೀಡುತ್ತಾಳೆ ಸೀತಾರಾಮ ಸೀರಿಯಲ್‌ನ ಸೀತೆ.

ಸೀತಾ ರಾಮ ಕಲ್ಯಾಣ ಆಮಂತ್ರಣ ಪತ್ರಿಕೆ ನೋಡಿ ಮದುವೆಯಾಗಲಿರುವ ಗಂಡು "ಸೀತಾ ರಾಮ್‌" ಎಂದು ಭೂಮಿಕಾ ತಿಳಿದುಕೊಳ್ಳುತ್ತಾಳೆ. ಜುಲೈ 1ರಂದು ಸೀತಾ ರಾಮ ಕಲ್ಯಾಣ ನಡೆಯಲಿದೆ. "ಇದೆಲ್ಲ ಯೋಚನೆ ಮಾಡಿದರೆ ಕನಸಾ ಎಂದೆನಿಸುತ್ತದೆ. ಎಲ್ಲೋ ಕಳೆದು ಹೋಗಿದ್ದೆ. ಈಗ ಮತ್ತೆ ಈ ರೀತಿಯಾಗಿದೆ" ಎಂದು ಸೀತಾ ಭಾವುಕಳಾಗಿ ತಿಳಿಸುತ್ತಾಳೆ. ಇದಾದ ಬಳಿಕ ಗೌತಮ್‌ ಪುಟಾಣಿ ಸಿಹಿಯನ್ನು ಉಪ್ಪು ಮೂಟೆ ಮಾಡಿ ಆಟ ಆಡಿಸುತ್ತಾನೆ. ಇದೇ ಸಮಯದಲ್ಲಿ ಭೂಮಿಕಾಳ ಬಳಿ "ನಿಮ್ಮ ಗುಡ್‌ ನ್ಯೂಸ್‌ ಯಾವಾಗ?" ಎಂದು ಸೀತೆ ಕೇಳುತ್ತಾಳೆ. ಹೀಗೆ ಇಬ್ಬರೂ ಸೀರಿಯಲ್‌ ಸ್ಟೋರಿಯಂತಹ ಬದುಕಿನ ಕಥೆಗಳನ್ನು ಹಂಚಿಕೊಳ್ಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಜೈದೇವ್‌ ಟೆನ್ಷನ್‌ನಲ್ಲಿದ್ದಾನೆ. ಕೆಂಚ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಯಾರೋ ಲೇಡಿ ಆತನನ್ನು ಬಿಡುಗಡೆ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಆ ಲೇಡಿ ಯಾರು ಎಂದು ಜೈದೇವ್‌ ಯೋಚನೆ ಮಾಡುತ್ತಿದ್ದಾನೆ. ಅಳಿಮಯ್ಯನಿಗೆ ಮನೆಹಾಳ ಮಾವ ಸಮಧಾನ ಮಾಡುತ್ತಾನೆ.

ಮನೆಯಲ್ಲಿ ಜೈದೇವ್‌ ಟೆನ್ಷನ್‌ನಲ್ಲಿ ಇರುತ್ತಾನೆ. ಆಗ ಮಲ್ಲಿ ಬರುತ್ತಾಳೆ. ಏನೆಂದು ಕೇಳಿದಾಗ ಕೋಪಗೊಳ್ಳುತ್ತಾನೆ. ಬಳಿಕ ಸಮಧಾನಗೊಂಡು ಆಕೆಯನ್ನು ಪ್ರೀತಿಯಿಂದ ಮಾತನಾಡುತ್ತಾನೆ. ಪಾನಕ ತರಲು ಮಲ್ಲಿ ಹೋದಾಗ ಜೈದೇವ್‌ಗೆ ಲವರ್‌ ಕಾಲ್‌ ಬರುತ್ತದೆ. ಆಕೆಯೊಂದಿಗೆ ಲಲ್ಲೆ ಹೊಡೆಯುತ್ತಾನೆ. "ನಿಮ್ಮ ಕಾಲ್‌ ಬಂದಾಗ ಮನದಲ್ಲಿ ಖುಷಿ, ಸಂತೋಷ ಎಲ್ಲಾ ಬಂತು. ನೀವು ಕಾಲ್‌ ಕಟ್‌ ಮಾಡ್ತಿನಿ ಎಂದಾಗ ಬೇಜಾರು ಆಗುತ್ತೆ" ಎನ್ನುತ್ತಾನೆ. ಈ ಮೂಲಕ ಮದುವೆಯಾಗಿದ್ದರೂ ಈಕೆಯ ಜತೆ ಸಂಬಂಧ ಬೆಳೆಸಲು ಮುಂದುವರೆಯುತ್ತಾನೆ. ಮಲ್ಲಿ ಪಾನಕ ತೆಗೆದುಕೊಂಡು ಬಂದಾಗ ಕಾಲ್‌ ಕಟ್‌ ಮಾಡುತ್ತಾನೆ.

ಗೌತಮ್‌ ಸಿಹಿಯ ಜತೆ ಆಟವಾಡುತ್ತ ಇರುತ್ತಾನೆ. ಇಲ್ಲಿ ಮನೆಯಲ್ಲಿ ಪುಟ್ಟ ಮಕ್ಕಳು ಇಲ್ಲ ಎಂದು ಸಿಹಿ ಹೇಳುತ್ತಾಳೆ. ಇನ್ನೊಂದು ವರ್ಷ ಕಳೆದು ಬಾ ಎಂದು ಗೌತಮ್‌ ಹೇಳುತ್ತಾನೆ. ಸೀತಾಗೆ ಮತ್ತೆ ಡೌಟ್‌ ಬರುತ್ತದೆ. ಭೂಮಿಕಾ ಏನೋ ಹೇಳಿ ತಪ್ಪಿಸುತ್ತಾಳೆ. ಸೀತಾ ಮತ್ತು ಸಿಹಿ ಮನೆಯಿಂದ ಹೊರಡುತ್ತಾರೆ. ಇವರು ಹೋದ ಬಳಿಕ ಮನೆಗೆ ಅಶ್ವಿನಿ ಪತಿ ಅಚ್ಚರಿಯ ಭೇಟಿ ನೀಡುತ್ತಾರೆ. ಹೀಗೆ ಮನೆಗೆ ಅರು ಕೂಡ ಎಂಟ್ರಿ ನೀಡಿದ್ದಾನೆ. ಶಕುಂತಲಾ ದೇವಿ ಈಗ ಅಡುಗೆ ಮನೆಗೆ ಎಂಟ್ರಿ ನೀಡಿದ್ದಾರೆ. ಮನೆಯ ಯುಜಮಾನಿಕೆ ದೊರಕಬೇಕೆಂದು ಅಡುಗೆಯ ನಾಟಕ ಆರಂಭಿಸಿದ್ದಾರೆ. ಆ ಸಮಯದಲ್ಲಿ ಅಜ್ಜಿ ಬಂದು "ಏನು ಶಕುಂತಲಾ ನೀನೇ ಅಡುಗೆ ಮಾಡ್ತಾ ಇದ್ದೀ" ಎನ್ನುತ್ತಾರೆ. "ಅಳಿಯಂದಿರು ಬಂದಿದ್ದಾರಲ್ವ, ಅದಕ್ಕೆ ನಾನೇ ಅಡುಗೆ ಮಾಡೋಣ ಅಂತ ಬಂದೆ" ಅನ್ತಾರೆ ಶಕುಂತಲಾ. "ಇದು ಮನೆಯ ಸಂಪ್ರದಾಯ. ಇದು ಮನೆಯ ಯುಜಮಾನಿಗೆ ಇರುವ ಲಕ್ಷಣ" ಎಂದು ಅಜ್ಜಿ ಹೇಳುತ್ತಾರೆ. "ನೀವು ಹಾಕಿಕೊಟ್ಟಿರುವ ದಾರಿಯಲ್ಲಿ ಹೋಗ್ತಾ ಇದ್ದೇನೆ" ಅಂತಾಳೆ ಶಕುಂತಲಾ. "ಕೆಲವೊಂದು ವಿಷಯಗಳಲ್ಲಿ ನನ್ನ ನಂತರ ನೀನೇ ಸರಿ ಅನಿಸುತ್ತದೆ" ಎಂದು ಅಜ್ಜಿ ಹೇಳುತ್ತಾರೆ. "ಹೊಡೆದಿಯಲ್ವ ಬಂಪರ್‌ ಲಾಟರಿ" ಎಂದು ಅಜ್ಜಿ ಆಚೆ ಹೋದ ಮೇಲೆ ರಮಾಕಾಂತ ಹೇಳುತ್ತಾರೆ. ಒಟ್ಟಾರೆ ಮುಂದಿನ ಪಟ್ಟ ನನಗೇ ಎಂದು ಶಕುಂತಲಾ ಕನಸು ಕಾಣುತ್ತ ಇರುತ್ತಾರೆ. ಸೀರಿಯಲ್‌ ಮುಂದುವರೆದಿದೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)