ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಶಕುಂತಲಾ ಕೈಗೆ ಸಿಗ್ತು ಚಿನ್ನ ಗಿರವಿಗಿಟ್ಟ ಚೀಟಿ; ಭೂಮಿಕಾ-ಗೌತಮ್‌ ನಡುವೆ ಬಿರುಕು ಮೂಡಿಸಲು ಸಿಗ್ತು ಅಸ್ತ್ರ

Amruthadhaare: ಶಕುಂತಲಾ ಕೈಗೆ ಸಿಗ್ತು ಚಿನ್ನ ಗಿರವಿಗಿಟ್ಟ ಚೀಟಿ; ಭೂಮಿಕಾ-ಗೌತಮ್‌ ನಡುವೆ ಬಿರುಕು ಮೂಡಿಸಲು ಸಿಗ್ತು ಅಸ್ತ್ರ

Amruthadhaare Serial Yesterday episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿಯ ಭಾನುವಾರದ ಸಂಚಿಕೆಯಲ್ಲಿ ಮಹತ್ವದ ಘಟನೆ ಎಂಬಂತೆ ಭೂಮಿಕಾ ಚಿನ್ನ ಗಿರವಿಗಿಟ್ಟ ಚೀಟಿ ಶಕುಂತಲಾದೇವಿ ಕೈ ಸೇರಿದೆ. ಇದನ್ನು ಗೌತಮ್‌ಗೆ ನೀಡಿ ಅವರ ಸಂಸಾರದಲ್ಲಿ ಹುಳಿ ಹಿಂಡಲು ಶಕುಂತಲಾದೇವಿ ಪ್ಲ್ಯಾನ್‌ ಮಾಡಿದ್ದಾರೆ.

Amruthadhaare: ಶಕುಂತಲಾ ಕೈಗೆ ಸಿಗ್ತು ಭೂಮಿಕಾ ಚಿನ್ನ ಗಿರವಿಗಿಟ್ಟ ಚೀಟಿ
Amruthadhaare: ಶಕುಂತಲಾ ಕೈಗೆ ಸಿಗ್ತು ಭೂಮಿಕಾ ಚಿನ್ನ ಗಿರವಿಗಿಟ್ಟ ಚೀಟಿ

Amruthadhaare Serial Yesterday episode: ಅಮೃತಧಾರೆ ಸೀರಿಯಲ್‌ನಲ್ಲಿ ಆಫೀಸ್‌ನಲ್ಲಿರುವ ಭೂಮಿಕಾಳಿಗೆ ಗೌತಮ್‌ ಕಾಲ್‌ ಮಾಡುತ್ತಾನೆ. ಇಷ್ಟು ದಿನ ಭೂಮಿಕಾ ಗೌತಮ್‌ಗೆ ಕಾಲ್‌ ಮಾಡ್ತ ಇದ್ರು. ಇದೀಗ ಗೌತಮ್‌ ಭೂಮಿಕಾಳಿಗೆ ಕಾಲ್‌ ಮಾಡಿದ್ದಾರೆ. ಇದಾದ ಬಳಿಕ ಆನಂದ್‌ ಗೌತಮ್‌ ಕಾಲೆಳೆಯುತ್ತಾನೆ. ಹೆಂಡತಿಯ ಕುರಿತು ಕಾಳಜಿ ವಹಿಸುವ ಗೌತಮ್‌ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾನೆ. ಇದಾದ ಬಳಿಕ ಭೂಮಿಕಾ ಮತ್ತೆ ಕಾಲ್‌ ಮಾಡ್ತಾರೆ. ಹೀಗೆ, ಗೌತಮ್‌ ಮತ್ತು ಭೂಮಿಕಾರ ನಡುವೆ ಫೋನ್‌ ಮಾತುಕತೆ ಹೆಚ್ಚುತ್ತದೆ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದೆಡೆ ಪಾರ್ಥ ಗಂಭೀರವಾಗಿ ಯೋಚನೆ ಮಾಡುತ್ತ ಇರುತ್ತಾನೆ. ಅಪೇಕ್ಷಾಳ ಕಾಲ್‌ ಬಂದಾಗ "ಹೇಳಿ" ಎನ್ನುತ್ತಾನೆ. "ಮೊದಲಿದ್ದ ಹಾಗೆ ಇಲ್ಲ" ಎಂದು ಅಪೇಕ್ಷಾ ಹೇಳುತ್ತಾಳೆ. "ನನಗೆ ಕ್ಲಾರಿಟಿ ಬೇಕು, ಏಕೆ ಹೀಗೆ ಇದ್ದೀರಿ" ಎಂದು ಕೇಳುತ್ತಾಳೆ. "ಏನೋ ಕೆಲಸ ಇತ್ತು. ಬಿಝಿಯಾಗಿದ್ದೀನಿ" ಎಂದು ಹೇಳುತ್ತಾನೆ. "ನಿಜ ಹೇಳಿ ನೀವು ಅವಾಯ್ಡ್‌ ಮಾಡ್ತಾ ಇದ್ದೀರಿ. ಏಕೆ ಹೀಗೆ?" ಎಂದು ಕೇಳುತ್ತಾಳೆ. "ಲೈಫ್‌ನಲ್ಲಿ ಏನಾದ್ರೂ ಮಾಡಬೇಕು, ಅದಕ್ಕೆ ಸೀರಿಯಸ್‌ ಆಗಿದ್ದೀನಿ" ಎನ್ನುತ್ತಾನೆ. "ನಾನು ಜೀವನದಲ್ಲಿ ಏನೆಲ್ಲ ಅನುಭವಿಸಿದ್ದೀನಿ. ಎಲ್ಲಾ ನೋಡಿದ್ದೀನಿ. ಪ್ರೀತಿ ವಿಷಯದಲ್ಲಿ ಏನಾದರೂ ಆದ್ರೆ ನಾನು ನಿಜವಾಗಿಯೂ ಸುಮ್ಮನಿರೋಲ್ಲ" ಎನ್ನುತ್ತಾಳೆ.

ಶಕುಂತಲಾದೇವಿ ತುಂಬಾ ಆಳವಾಗಿ ಯೋಚನೆ ಮಾಡ್ತಾ ಇದ್ದಾಳೆ. ಭೂಮಿಕಾ ನನಗೆ ದಿನಾದಿನಾ ದೊಡ್ಡ ತಲೆ ನೋವು ಆಗ್ತಾ ಇದ್ದಾಳೆ ಎನ್ನುತ್ತಾಳೆ. "ಅವಳು ಕೆಲಸಕ್ಕೆ ಹೋಗ್ತಾ ಇದ್ದಾಳೆ. ಅವಳ ಆ ಡಿಸಿಷನ್‌ ಹಿಂದೆ ಕಾರಣ ಏನು? ಏನೋ ಪ್ರಾಬ್ಲಂನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ" ಎಂದು ಶಕುಂತಲಾ ತನ್ನ ಸಹೋದರಲ್ಲಿ ಹೇಳುತ್ತಾಳೆ. "ಅವಳು ಮುಚ್ಚಿಟ್ಟ ರಹಸ್ಯ ತಿಳಿದುಕೊಳ್ಳಬೇಕು" ಎನ್ನುತ್ತಾಳೆ. "ಆ ಸಮಸ್ಯೆಯನ್ನು ತಿಳಿದು ಗೌತಮ್‌ಗೆ ಹೇಳಬೇಕು" ಎನ್ನುತ್ತಾಳೆ. "ಈಗಾಗಲೇ ಲೇಡಿ ಡಿಟೆಕ್ಟಿವ್‌ ಬುಕ್‌ ಮಾಡಿದ್ದೇವೆ. ಅವರಿಗೆ ತಿಳಿಸು" ಎನ್ನುತ್ತಾನೆ ಅಣ್ಣ. "ಬೇಡ, ನಾವೇ ಕಂಡುಕೊಳ್ಳಬೇಕು" ಎನ್ನುತ್ತಾಳೆ.

ಭೂಮಿಕಾ ಜೀವನ್‌ನ ಭೇಟಿಯಾಗುತ್ತಾಳೆ. ಜೀವನ್‌ನಲ್ಲಿ ರೆಸ್ಯೂಮೆ ತರಲು ಹೇಳಿರುತ್ತಾಳೆ. ಆಕೆಯ ಗೊತ್ತಿದ್ದವರಿಗೆ ರೆಸ್ಯೂಂ ಕೊಡಲು ಈ ರೀತಿ ಮಾಡುತ್ತಾಳೆ. ಆನಂದ್‌ಗೆ ವಿಷಯ ಹೇಳು ಎನ್ನುತ್ತಾಳೆ. "ಬೇಡ ಅವರಿಗೆ ಗೊತ್ತಾಗೋದು" ಎನ್ನುತ್ತಾನೆ. "ಸೋಲು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯ ಹೇಳಿಕೊಡುವುದಿಲ್ಲ. ಸೋಲು ನಮಗೆ ಗೆಲುವನ್ನು ತಂದುಕೊಡುತ್ತದೆ" ಎಂದೆಲ್ಲ ಜೀವನ್‌ಗೆ ಭರವಸೆ ತುಂಬುತ್ತಾಳೆ ಅಕ್ಕ.

ಇನ್ನೊಂದೆಡೆ ಶಕುಂತಲಾದೇವಿ ಭೂಮಿಕಾ ರೂಂನಲ್ಲಿ ಹುಡುಕಾಟ ನಡೆಸುತ್ತಾಳೆ. ಏನಾದರೂ ಸಾಕ್ಷಿ ಸಿಗಬಹುದು ಎಂದು ಹುಡುಕುತ್ತಾರೆ. ಹೀಗೆ ಹುಡುಕುವಾಗ ಬಂಗಾರ ಅಡವಿಟ್ಟ ರಸೀದಿ ಸಿಗುತ್ತದೆ. "ಒಡವೆ ಅಡವಿಟ್ಟ ಚೀಟಿ" ನೋಡಿ ಖುಷಿಪಡುತ್ತಾಳೆ. "150 ಗ್ರಾಂ ಚಿನ್ನ ಅಡವಿಟ್ಟು 5 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾಳೆ" ಎಂದು ತಿಳಿಯುತ್ತಾರೆ. "ತವರು ಮನೆಯಿಂದ ತಂದ ಚಿನ್ನ ಅಡವಿಟ್ಟಿದ್ದಾಳೆ" ಎಂದು ತಿಳಿದುಕೊಳ್ಳುತ್ತಾರೆ. "ಈ ಒಂದು ಸಾಕ್ಷಿ ಸಾಕು, ಅವರಿಬ್ಬರನ್ನು ದೂರ ಮಾಡಲು" ಎಂದುಕೊಳ್ಳುತ್ತಾರೆ.

ಅಪೇಕ್ಷಾ ನೇರವಾಗಿ ಪಾರ್ಥನ ಮನೆಗೆ ಬರುತ್ತಾಳೆ. ಮೊದಲು ಮಲ್ಲಿ ಸಿಗುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಪಾರ್ಥ ಬರುತ್ತಾನೆ. ಅಕ್ಕ ಕೆಲಸಕ್ಕೆ ಹೋದ ವಿಚಾರ ತಿಳಿಯುತ್ತದೆ. ಈಕೆ ಬಂದಿರುವುದನ್ನು ಪಾರ್ಥ ನೋಡುತ್ತಾನೆ. ಬಳಿಕ ಪಾರ್ಥ ನೇರವಾಗಿ ಮಾತನಾಡುತ್ತಾನೆ. "ಯಾಕೆ ಬಂದ್ರಿ" ಎಂದು ಕೇಳುತ್ತಾನೆ. "ಫೋನ್‌ ರಿಸೀವ್‌ ಮಾಡೋಲ್ಲ. ಅದಕ್ಕೆ ಬಂದೆ" ಎನ್ನುತ್ತಾಳೆ. "ಎಲ್ಲಾ ನೇರವಾಗಿ ಹೇಳಿ" ಎನ್ನುತ್ತಾಳೆ. ಮಲ್ಲಿ ಇರುವ ಕಾರಣ ಬಳಿಕ ಹೆಚ್ಚು ಮಾತನಾಡಲು ಆಗುವುದಿಲ್ಲ. ಆಕೆ ಮನೆಯಿಂದ ಹೋಗುತ್ತಾಳೆ.

ಗೌತಮ್‌ ನೇರವಾಗಿ ಕೋಚಿಂಗ್‌ ಇನ್‌ಸ್ಟಿಟ್ಯೂಷನ್‌ ಹತ್ರ ಪಿಕಪ್‌ಗೆ ಬರುತ್ತಾನೆ. ಇವರನ್ನು ನೋಡಿ ಇನ್‌ಸ್ಟಿಟ್ಯೂಷನ್‌ನ ಹುಡುಗಿಯರು "ನಾನು ಇವರನ್ನೇ ಮದುವೆಯಾಗಬೇಕಿತ್ತು" ಎಂದು ಹೇಳುತ್ತಾರೆ. ಬಳಿಕ ಭೂಮಿಕಾ ಮತ್ತು ಗೌತಮ್‌ ಈ ವಿಚಾರ ಡಿಸ್ಕಸ್‌ ಮಾಡುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

IPL_Entry_Point