Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಮಹಿಳಾ ದಿನ; ನನ್ನ ಸರಿಸಮಾನಾಗಿ ಮಲ್ಲಿ ಕುಳಿತುಕೊಳ್ಳಬಾರದು ಅನ್ತಾರೆ ಶಕುಂತಲಾದೇವಿ-televison news amruthadhaare serial yesterday episode womens day celebration bhumika malli mandakini shakuntaladevi pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಮಹಿಳಾ ದಿನ; ನನ್ನ ಸರಿಸಮಾನಾಗಿ ಮಲ್ಲಿ ಕುಳಿತುಕೊಳ್ಳಬಾರದು ಅನ್ತಾರೆ ಶಕುಂತಲಾದೇವಿ

Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಮಹಿಳಾ ದಿನ; ನನ್ನ ಸರಿಸಮಾನಾಗಿ ಮಲ್ಲಿ ಕುಳಿತುಕೊಳ್ಳಬಾರದು ಅನ್ತಾರೆ ಶಕುಂತಲಾದೇವಿ

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿಯೇ ಮಹಿಳಾ ದಿನದ ಸಂಭ್ರಮ ಆರಂಭವಾಗಿದೆ. ಮಹಿಳೆಯರಿಗೆ ಉಡುಗೊರೆ, ಶುಭಾಶಯ ತಿಳಿಸಿಯಾಗಿದೆ. ಇದೇ ಸಮಯದಲ್ಲಿ ಪಾರ್ಥನಿಗೆ ಭೂಮಿಕಾ ಒಂದಿಷ್ಟು "ಪ್ರೀತಿಯ" ಸಲಹೆ ನೀಡಿದ್ದಾರೆ.

Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಮಹಿಳಾ ದಿನ ಆಚರಣೆ
Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಮಹಿಳಾ ದಿನ ಆಚರಣೆ

ಅಪೇಕ್ಷಾ ಪಾರ್ಥನಿಗೆ ಫೋನ್‌ ಮಾಡಿ "ಅಕ್ಕನಿಗೆ ನಾನು ಐಸ್‌ಕ್ರೀಂ ತಿಂದ ವಿಷಯ ಗೊತ್ತ ಸಂಗತಿ ತಿಳಿದಿದೆ. ಇನ್ನು ಮುಂದೆ ಹುಷಾರಾಗಿರಬೇಕು" ಎಂದು ಹೇಳುತ್ತಿರುವಾಗ ಭೂಮಿಕಾ ಆಗಮಿಸುತ್ತಾಳೆ. ಬಳಿಕ ಭೂಮಿಕಾ ಮತ್ತು ಪಾರ್ಥ ಮಾತನಾಡುತ್ತಾರೆ. "ಲೈಫ್‌ ಎಷ್ಟು ಅನ್‌ಪ್ರಿಡೆಕ್ಟೆಬಲ್‌" ಎಂದು ಭೂಮಿಕಾ ಹೇಳುತ್ತಾಳೆ. "ನನ್ನ ಫ್ರೆಂಡ್‌ ಒಬ್ಬಳು ಮದುವೆಯಾಗಬೇಕಿದ್ದ ಮದುವೆಯೇ ಮುರಿದುಬಿತ್ತು. ಆ ಹುಡುಗಿ ಮದುವೆಯಾಗಬೇಕಿದ್ದ ಗಂಡಿನ ತಮ್ಮನನ್ನೇ ಪ್ರೀತಿಸ್ತಾ ಇದ್ಲು" ಎಂದು ಭೂಮಿಕಾ ಪರೋಕ್ಷವಾಗಿ ಪಾರ್ಥನಿಗೆ ಕಥೆ ಹೇಳುತ್ತಾಳೆ. ಅದಕ್ಕೆ ಯಾಕೆ ಟೆನ್ಷನ್‌ ಆಗಬೇಕು, ಹುಡುಗಿಗೆ ಪ್ರೀತಿಸಿದ ಹುಡುಗ ಸಿಗ್ತಾನಲ್ವ ಎಂದು ಪಾರ್ಥ ಹೇಳುತ್ತಾನೆ. "ಆದ್ರೆ ತೊಂದರೆ ಬೇರೆ. ಆ ಪ್ರೀತಿಸಿದ ಹುಡುಗ ಆ ಹುಡುಗಿ ಮನೆಗೆ ಹೋಗಿ ನನಗೆ ಮದುವೆ ಮಾಡಿಕೊಡಿ ಎಂದು ಕೇಳಿದರೂ ಆ ಮನೆಯವರು ಒಪ್ತಾನೇ ಇಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ಅವರಂತೂ ನಮಗೆ ನಿಮ್ಮ ಸಹವಾಸನೇ ಬೇಡ. ಆದ್ರೂ ಆ ಹುಡುಗನದ್ದು ಏನೂ ತಪ್ಪೇ ಇಲ್ಲ. ಅವರ ಅಣ್ಣ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸ್ತಾ ಇದ್ದಾನೆ" ಎಂದೆಲ್ಲ ಭೂಮಿಕಾ ಹೇಳುತ್ತಾರೆ. ಈಗ ಹೇಳಿ ಪಾರ್ಥ ಅವ್ರೆ ಅವ್ರು ಏನು ಮಾಡಬೇಕು. ಮತ್ತೊಮ್ಮೆ ಪ್ರೀತಿನ ಕಳೆದುಕೊಳ್ಳಬೇಕಾ ಎಂದು ಪ್ರಶ್ನಿಸುತ್ತಾರೆ.

"ಪ್ರೀತಿ ಮಾಡಿದರೆ ಸಾಲದು. ಪ್ರೀತಿನ ಹೇಗೆ ಪಡೆದುಕೊಳ್ಳಬೇಕು ಎಂದು ತಿಳಿದಿರಬೇಕು" ಎಂದು ಭೂಮಿಕಾ ಹೇಳುತ್ತಾರೆ. "ಅತ್ತಿಗೆ ಅವರು ಲವ್‌ ಕುರಿತು ಮನೆಯವರಿಗೆ ಹೇಳಲು ಪ್ರಯತ್ನಿಸಿರಬಹುದು. ಆದರೆ, ಹೇಳಲು ಆಗದೆ ಇರಬಹುದು. ಲೈಫ್‌ ಈಸ್‌ ಅನ್‌ಪ್ರಿಡೆಕ್ಟಬಲ್‌. ಯಾವ ಮೊಮೆಂಟ್‌ನಲ್ಲಿ ಏನು ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ ಅಲ್ವ" ಎಂದು ಪಾರ್ಥ ಹೇಳುತ್ತಾನೆ. "ಆದ್ರೆ ನಂಗೆ ಅವರಿಬ್ಬರದೇ ಚಿಂತೆ ಆಗಿದೆ" ಎನ್ನುತ್ತಾರೆ ಭೂಮಿಕಾ. "ಇದು ಎರಡು ಕುಟುಂಬದ ಮರ್ಯಾದೆ ಪ್ರಶ್ನೆ ಆಗಿರುವುದರಿಂದ ಇವರಿಬ್ಬರು ಇದನ್ನು ನಾಜೂಕಾಗಿ ಮಾಡಬೇಕು. ಎಲ್ಲವೂ ಸರಿಯಾಗುತ್ತದೆ" ಎಂದೆಲ್ಲ ಧೈರ್ಯತುಂಬುವ ಮಾತುಗಳನ್ನು ಭೂಮಿಕಾ ಆಡುತ್ತಾರೆ. ಭೂಮಿಕಾ ಹೋದ ಬಳಿಕ "ಅತ್ತಿಗೆ ಹೇಳಿದ್ದು ಕರೆಕ್ಟ್‌ ಆಗಿಯೇ ಇದೆ" ಎಂದು ಪಾರ್ಥ ಯೋಚಿಸುತ್ತಾನೆ.

ಮಹಿಳಾ ದಿನದ ಉಡುಗೊರೆ

ಗೌತಮ್‌ ಮತ್ತು ಭೂಮಿಕಾ ನಡುವೆ ಮಾತುಕತೆ ನಡೆಯುತ್ತದೆ. ನಾಳೆ ನನ್ನ ಆಫೀಸ್‌ಗೆ ಬರಬೇಕು, ಇವೆಂಟ್‌ ಇದೆ ಬನ್ನಿ ಅಂತಾರೆ. ಇನ್ನೊಂದೆಡೆ ಅಪೇಕ್ಷಾ ಮನೆಯಲ್ಲಿ ಮಂದಾಕಿಣಿಗೆ ಎಲ್ಲರೂ ಗಿಫ್ಟ್‌ ನೀಡಿ ಮಹಿಳಾ ದಿನದ ಶುಭಾಶಯ ಹೇಳುತ್ತಾರೆ. ಮಹಿಮಾ ಮತ್ತು ಅಪೇಕ್ಷಾ "ನಾವಿನ್ನೂ ಯೂತ್‌" ಎನ್ನುತ್ತಾರೆ. ಎಲ್ಲರೂ ಮಂದಾಕಿಣಿಯನ್ನು ಹೊಗಳುತ್ತಾರೆ. ಇನ್ನೊಂದೆಡೆ ಭೂಮಿಕಾ ಎದ್ದೇಳೋದನ್ನು ಗೌತಮ್‌ ಕಾಯ್ತಾ ಇರ್ತಾರೆ. ಹೂಬೊಕೆ ಇರುತ್ತದೆ ಕೈಯಲ್ಲಿ. ಎದ್ದ ಭೂಮಿಕಾ ಗೌತಮ್‌ನನ್ನು ನೋಡಿ ಭಯಪಡುತ್ತಾಳೆ. ಎದ್ದ ಭೂಮಿಕಾಳಿಗೆ ದೊಡ್ಡ ಹೂವಿನ ಬೊಕೆ ನೀಡುತ್ತಾರೆ ಗೌತಮ್‌. ಒಂದಿಷ್ಟು ಖುಷಿಯ ಮಾತುಕತೆ ನಡೆಯುತ್ತದೆ.

ಪಾರ್ಥ ಅಪೇಕ್ಷಾಗೆ ಕಾಲ್‌ ಮಾಡುತ್ತಾನೆ. ಒಂದಿಷ್ಟು ಪ್ರೀತಿಯ ಮಾತು ನಡೆಯುತ್ತದೆ. ಮಹಿಳಾ ದಿನದ ಶುಭಾಷಯ ಹೇಳುತ್ತಾನೆ. "ನಾನೂ ವುಮೆನಾ? ಹೆಂಗ್ಸ? ನನಗೆ ವಯಸ್ಸಾಯ್ತ?" ಎಂದೆಲ್ಲ ಅಪೇಕ್ಷಾ ಜಗಳ ಮಾಡುತ್ತಾಳೆ. ಇನ್ನೊಂದೆಡೆ ಗೌತಮ್‌ ಮನೆಯಲ್ಲಿ ಕೇಕ್‌ ಇರುತ್ತದೆ. ಮಹಿಳಾ ದಿನದ ಆಚರಣೆ ಇರುತ್ತದೆ. ಗೌತಮ್‌ ಭೂಮಿಕಾಳಿಗೆ ಕೇಕ್‌ ತಿನ್ನಿಸ್ತಾರೆ. ಶಕುಂತಲಾದೇವಿಗೂ ನೀಡ್ತಾನೆ. ಜೈದೇವ್‌ ನಿನ್ನ ಹೆಂಡ್ತಿಗೆ ಕೇಕ್‌ ತಿನ್ನಿಸು ಎಂದು ಅಜ್ಜಿ ಹೇಳಿದಾಗ ಸೀರಿಯಲ್‌ ಹಿನ್ನೆಲೆ ಧ್ವನಿ ಬದಲಾಗುತ್ತದೆ. ಜೈದೇವ್‌ ಕೂಡ ಕೇಕ್‌ ತುಂಡನ್ನು ಮಲ್ಲಿ ಬಾಯಿಗೆ ಹಾಕುತ್ತಾನೆ. ಇದಾದ ಬಳಿಕ ಜೈದೇವ್‌ಗೆ ಕೇಕ್‌ ತಿನ್ನಿಸುವಂತೆ ಭೂಮಿಕಾ ಕೇಕ್‌ ಪೀಸ್‌ ನೀಡ್ತಾರೆ. ಜೈದೇವ್‌ ಅವ್ರೇ ಮಲ್ಲಿ ಕೈ ಎಳೆದುಕೊಂಡು ಕೇಕ್‌ ಬಾಯಿಗೆ ಹಾಕಿಸಿಕೊಳ್ತಾರೆ. ಬಳಿಕ ಆನಂದ್‌ ಬರುತ್ತಾನೆ. ಪ್ರತಿವರ್ಷ ವುಮೆನ್ಸ್‌ ಡೇ ಆಫೀಸ್‌ನಲ್ಲಿ ಮಾಡ್ತಾ ಇದ್ವಿ, ಈ ವರ್ಷ ಮನೆಯಲ್ಲಿಯೇ ಮಾಡೋಣ ಎಂದುಕೊಂಡೆವು ಎಂದು ಹೇಳುತ್ತಾರೆ.

ಮರುದಿನ ಮಲ್ಲಿ ಮತ್ತು ಭೂಮಿಕಾ ಮಾತನಾಡುತ್ತಾರೆ. ಹೆಣ್ಣಿನ ಮಹತ್ವದ ಮಾತುಕತೆ ನಡೆಯುತ್ತದೆ. ಮಹಿಳಾ ದಿನದಂತಹ ಆಚರಣೆಯ ಅಗತ್ಯದ ಕುರಿತು ಮಾತನಾಡುತ್ತಾರೆ. "ಹೆಣ್ಮಕ್ಕಳು ಇಂಪಾರ್ಟೆಂಟ್‌. ಅವ್ರಿಗೆ ಗೌರವ ನೀಡಿ. ಅವರನ್ನ ಮೂಲೆಗುಂಪು ಮಾಡಬೇಡಿ" ಎಂದೆಲ್ಲ ಸಂದೇಶದ ಡೈಲಾಗ್‌ಗಳು ನಡೆಯುತ್ತವೆ. ಅಲ್ಲಿಂದ ಹೊರಗಡೆ ಇರುವ ಸೆಲೆಬ್ರೆಷನ್‌ಗೆ ಶಿಫ್ಟ್‌ ಆಗ್ತಾರೆ. ಮಲ್ಲಿಯೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುದ್ದಿಯನ್ನು ಶಕುಂತಲಾದೇವಿಗೆ ಅಣ್ಣ ತಿಳಿಸ್ತಾರೆ. ಮಲ್ಲಿಯನ್ನು ಫಂಕ್ಷನ್‌ಗೆ ಕರೆದುಕೊಂಡು ಬಂದ್ರೆ ಆಫೀಸ್‌ ಎಂಪ್ಲಾಯ್‌ಗಳ ಮುಂದೆ ನಿಮ್ಮ ಮರ್ಯಾದೆ ಹೋಗುತ್ತದೆ ಎಂದು ಮಾತನಾಡುತ್ತಾರೆ. "ಭೂಮಿಕಾಳನ್ನು ಸೈಲೆಂಟ್‌ ಮಾಡಲೇಬೇಕು. ನನಗೆ ಸರಿಸಮಾನಾಗಿ ಮಲ್ಲಿಯನ್ನು ಕುಳಿತುಕೊಳ್ಳಲು ಬಿಡಲೇಬಾರದು" ಎಂದು ಶಕುಂತಲಾದೇವಿಯ ಸ್ವಗತದೊಂದಿಗೆ ಸೀರಿಯಲ್‌ ಮುಂದುವರೆಯುತ್ತದೆ. ಇಂದಿನ ಸಂಚಿಕೆಯಲ್ಲಿ ಮಹಿಳಾ ದಿನ ಅಮೃತಧಾರೆಯಲ್ಲಿ ಗ್ರ್ಯಾಂಡ್‌ ಆಗಿ ನಡೆಯುವ ಸೂಚನೆ ದೊರಕಿದೆ.

mysore-dasara_Entry_Point