ಕನ್ನಡ ಸುದ್ದಿ  /  ಮನರಂಜನೆ  /  ವರ್ಷದ ಹಿಂದೆ ಗೌತಮ್‌ ಫೋಟೋ ನೋಡಿ ಭೂಮಿಕಾ ಕೋಪಗೊಂಡಿದ್ರು; ಇಂದು ಅದೇ ಆಟೋದಲ್ಲಿ ಲವ್‌ ಸ್ಟೋರಿ- ಅಮೃತಧಾರೆಯಲ್ಲಿ ಮತ್ತೆ ಒಲವಧಾರೆ

ವರ್ಷದ ಹಿಂದೆ ಗೌತಮ್‌ ಫೋಟೋ ನೋಡಿ ಭೂಮಿಕಾ ಕೋಪಗೊಂಡಿದ್ರು; ಇಂದು ಅದೇ ಆಟೋದಲ್ಲಿ ಲವ್‌ ಸ್ಟೋರಿ- ಅಮೃತಧಾರೆಯಲ್ಲಿ ಮತ್ತೆ ಒಲವಧಾರೆ

Amruthadhaare serial: ಝೀ ಕನ್ನಡ ವಾಹಿನಿಯ ಅಮೃತಧಾರೆಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕ ಔಟಿಂಗ್‌ ಹೋಗಿದ್ದಾರೆ. ಮಧ್ಯಮ ವರ್ಗದವರಂತೆ ಆಟೋದಲ್ಲಿ ಸುತ್ತಾಡುತ್ತ, ಭೂಮಿಕಾ ಕಲಿತ ಶಾಲೆಗೆ ಎಲ್ಲ ಹೋಗಿ ಒಲವ ಅಮೃತಧಾರೆ ಸುರಿದಿದೆ.

ಅಮೃತಧಾರೆ ಸೀರಿಯಲ್‌ ಸ್ಟೋರಿ
ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday Episode: ಪಾರ್ಥ ಮತ್ತು ಅಪೇಕ್ಷಾ ಜತೆಗಿರುವುದನ್ನು ಅಶ್ವಿನಿ ನೋಡುತ್ತಾಳೆ. ಅಣ್ಣನ ಮದುವೆಯಾಗಿದ್ದವಳು ತಮ್ಮನ ಜತೆ ಲಲ್ಲೆ ಹೊಡೆಯುತ್ತ ಇದ್ದಾಳೆ. ಇವರಿಬ್ಬರು ಇಷ್ಟು ಕ್ಲೋಸ್‌ ಆಗಿದ್ದಾರೆ ಎಂದ್ರೆ ಏನೋ ನಡೀತಾ ಇದೆ. ಫಸ್ಟ್‌ ವಿಷಯ ಮಾಮ್‌ಗೆ ಹೇಳಬೇಕು ಎಂದು ಅಶ್ವಿನಿ ಮನೆಗೆ ಹೋಗುತ್ತಾಳೆ. ಅರುಣ್‌ ಮತ್ತು ಅಶ್ವಿನಿ ಮಾತನಾಡುತ್ತ ಇರುವಾಗ ಪಾರ್ಥ ಬರುತ್ತಾನೆ. ಎಲ್ಲಿ ಹೋಗಿದ್ದೆ ಎಂದಾಗ ಇಲ್ಲೇ ಫ್ರೆಂಡ್‌ನ ಮೀಟ್‌ ಆಗಲು ಎನ್ನುತ್ತಾನೆ. ಮನೆಗೆ ಕರೆದುಕೊಂಡು ಬರಬಹುದಾ ಎನ್ನುತ್ತಾನೆ. "ಪಾರ್ಥ ನಿನಗೆ ನೀನು ಮಾಡುತ್ತಿರುವುದು ತಪ್ಪು ಅನಿಸೋಲ್ವ. ಲೈಫ್‌ನಲ್ಲಿ ಸ್ವಲ್ಪ ಸೀರಿಯಸ್‌ ಆಗಿರು" ಎನ್ನುತ್ತಾಳೆ ಅಶ್ವಿನಿ.

ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್‌ ಹೊರಗಡೆ ಸುತ್ತಾಡಲು ಹೋಗುತ್ತಾರೆ. ಅಜ್ಜಮ್ಮ ಎದುರು ಸಿಕ್ಕಾಗ ಪಾರ್ಟಿಗೆ ಹೋಗುವ ವಿಚಾರ ತಿಳಿಸುತ್ತಾರೆ. ಅಜ್ಜಿಯೂ ಒಂದಿಷ್ಟು ಸಲಹೆ ನೀಡುತ್ತಾರೆ. ಇನ್ನೊಂದೆಡೆ ಶಕುಂತಲಾ ದೇವಿಯನ್ನು ಅಶ್ವಿನಿ ಭೇಟಿಯಾಗುತ್ತಾಳೆ. "ನಿನ್ನೆ ನೈಟ್‌ನಿಂದ ಒಂದು ವಿಷಯ ಹೇಳಲು ಕಾಯುತ್ತಿದ್ದೆ" ಎನ್ನುತ್ತಾಳೆ. ತುಂಬಾ ಸೀರಿಯಸ್‌ ವಿಷಯ ಎಂದು ಹೇಳುತ್ತಾಳೆ. ವಿಷಯ ನಿನಗೆ ಗೊತ್ತಾದರೆ ಶಾಕ್‌ ಆಗಿ ಬಿಡ್ತಿಯಾ ಎನ್ನುತ್ತಾಳೆ. "ಪಾರ್ಥ ಅಪೇಕ್ಷಾನ ಜತೆ ಓಡಾಡ್ತ ಇದ್ದಾನೆ" ಎನ್ನುತ್ತಾಳೆ. "ಇದಾ ವಿಷಯ, ನನಗೆ ಇದು ಯಾವತ್ತೋ ಗೊತ್ತಿದೆ" ಎನ್ನುತ್ತಾರೆ ಶಕುಂತಲಾ. ಇದನ್ನು ಕೇಳಿ ಅಶ್ವಿನಿಗೆ ಅಚ್ಚರಿಯಾಗುತ್ತದೆ.

ಅಶ್ವಿನಿ ಬ್ರೇಕಿಂಗ್‌ ನ್ಯೂಸ್‌

"ಅಣ್ಣನ ಮದುವೆಯಾಗಬೇಕಾದವಳು ತಮ್ಮನ ಜತೆ ಓಡಾಡ್ತ ಇದ್ದಾಳೆ. ಎಷ್ಟು ಚೀಪ್‌ ಬಿಹೇವಿಯರ್‌. ಈ ಕನೆಕ್ಷನ್‌ ತಪ್ಪಿಸಬೇಕು" ಎನ್ನುತ್ತಾಳೆ ಅಶ್ವಿನಿ. "ಸಮಧಾನವಾಗಿರು. ಈ ವಿಷಯ ನಮಗೆ ಗೊತ್ತು. ಈ ವಿಷಯ ನನಗೆ ಮೊದಲೇ ಗೊತ್ತಿತ್ತು" ಎನ್ನುತ್ತಾರೆ ಶಕುಂತಲಾ. "ನನಗೂ ಗೊತ್ತಿತ್ತು ಪುಟ್ಟ" ಎಂದು ಮನೆಹಾಳ ಮಾವ ಹೇಳುತ್ತಾರೆ. "ಯಾಕೆ ಸುಮ್ಮನಿದ್ದೀರಿ" ಎನ್ನುತ್ತಾಳೆ ಅಶ್ವಿನಿ. "ಏನು ಮಾಡಬೇಕು ಅದನ್ನು ಅವಾಗಲೇ ಮಾಡಬೇಕು. ಆ ಟೈಂ ಬರುವ ತನಕ ಕಾಯಬೇಕು. ಕಾದು ಹೊಡೆಯಬೇಕು" ಎನ್ನುತ್ತಾರೆ ಶಕುಂತಲಾ. "ಅವರಿಬ್ಬರನ್ನು ಕುರಿ ತರಹ ನೋಡ್ತಿನಿ. ಬಲಿ ಕುರಿ. ಈ ಕುರೀನಾ ನಾನೇ ಚೆನ್ನಾಗಿ ಬೆಳೆಯಲು ಬಿಡ್ತಾ ಇದ್ದೇನೆ. ಕುರಿ ಬಳೀತ ಇದ್ದಾಗ ಕಚಕ್‌ ಮಾಡ್ತಿನಿ" ಎನ್ನುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಭೂಮಿಕಾ ಗೌತಮ್‌ ಡೇಟಿಂಗ್‌

ಮನೆಯಲ್ಲಿ ಅಜ್ಜಮ್ಮನಿಗೆ ತಿಳಿಸಿ ಹೊರಹೋದ ಭೂಮಿಕಾ ಮತ್ತು ಗೌತಮ್‌ ರಿಕ್ಷಾದ ಮೂಲಕ ಬೆಂಗಳೂರಿನ ಉತ್ತರಹಳ್ಳಿಗೆ ತೆರಳಿದ್ದಾರೆ. ಆನ್‌ಲೈನ್‌ ರಿಕ್ಷಾ ಬುಕ್‌ ಮಾಡೋ ಬದಲು ರನ್ನಿಂಗ್‌ ರಿಕ್ಷಾದಲ್ಲಿ ಹೋದ್ರೆ ಲಾಭವಾಗುತ್ತದೆ ಎನ್ನುತ್ತಾರೆ. ರಿಕ್ಷಾದವನು ಇವರ ಗುರುತು ಹಿಡಿಯುತ್ತಾನೆ. ಒಂದು ವರ್ಷದ ಹಿಂದೆ ಮ್ಯಾಗಜಿನ್‌ನಲ್ಲಿ ಗೌತಮ್‌ ಮುಖ ನೋಡಿ ಭೂಮಿಕಾ ಕೋಪಗೊಂಡ ಸನ್ನಿವೇಶದ ನೆನಪು ರಿಕ್ಷಾದವನಿಗೆ ಇರುತ್ತದೆ. ಅವತ್ತು ಮ್ಯಾಗಜಿನ್‌ನಲ್ಲಿ ಇವರ ಫೋಟೋ ನೋಡಿದ್ದಕ್ಕೆ ಇಡೀ ಮ್ಯಾಗಜಿನ್‌ ಅನ್ನೇ ರಿಜೆಕ್ಟ್‌ ಮಾಡಿದ್ರಿ. ಇವತ್ತು ನೀವು ಹಸ್ಬೆಂಡ್‌ ವೈಪ್‌ ಆಗಿದ್ದೀರ ಎನ್ನುತ್ತಾನೆ. ಗೌತಮ್‌ ಅಚ್ಚರಿಯಿಂದ ನೋಡುತ್ತಾರೆ. ಯಾವಾಗಲೂ ಫ್ಲೈಟ್‌ನಲ್ಲಿ ಹೋಗುವವರು ಇಂದು ರಿಕ್ಷಾದಲ್ಲಿ ಹೋಗುವುದು "ಪ್ರೀತಿ ತಂದ ಬದಲಾವಣೆ" ಎಂದು ಆಟೋದವನು ಹೇಳುತ್ತಾನೆ. ಉತ್ತರಹಳ್ಳಿಯಲ್ಲಿ ತಾನು ಓದಿ ಬೆಳೆದ ಶಾಲೆಗೆ ಗೌತಮ್‌ರನ್ನು ಭೂಮಿಕಾ ಕರೆದುಕೊಂಡು ಹೋಗುತ್ತಾರೆ. ಇವರು ಮದುವೆಯಾದ ಬಳಿಕ ಡೇಟಿಂಗ್‌ ಮಾಡುತ್ತಾರೆ.

ಉತ್ತರಹಳ್ಳಿಯಲ್ಲಿ ತಾನು ಓದಿ ಬೆಳೆದ ಶಾಲೆಗೆ ಗೌತಮ್‌ರನ್ನು ಭೂಮಿಕಾ ಕರೆದುಕೊಂಡು ಹೋಗುತ್ತಾರೆ. ತನ್ನ ಕ್ಲಾಸ್‌ ರೂಂ ಎಲ್ಲಾ ತೋರಿಸುತ್ತಾರೆ. ಇವರು ಮದುವೆಯಾದ ಬಳಿಕ ಡೇಟಿಂಗ್‌ ಮಾಡುತ್ತಾರೆ. ಹಳೆಯ ನೆನಪಲ್ಲಿ ಒಂದಿಷ್ಟು ಹೊತ್ತು ಭೂಮಿಕಾ ಇರುತ್ತಾರೆ. ತನ್ನ ಬಾಲ್ಯದ ನೆನಪನ್ನು ಗೌತಮ್‌ಗೆ ತಿಳಿಸುತ್ತಾರೆ. ಗೌತಮ್‌ಗೂ ಖುಷಿಯಾಗುತ್ತದೆ. ಆ ಶಾಲೆಯಲ್ಲಿ ಮಕ್ಕಳ ಜತೆ ಗೌತಮ್‌ ಮತ್ತು ಭೂಮಿಕಾ ಕ್ರಿಕೆಟ್‌ ಆಡುತ್ತಾರೆ. ಭೂಮಿಕಾ ಬೌಲಿಂಗ್‌ ಮಾಡುವಾಗ ಲೈನ್‌ ಹೊಡೆದು ಗೌತಮ್‌ರನ್ನು ಕಕ್ಕಾಬಿಕ್ಕಿ ಮಾಡಿ ಔಟ್‌ ಮಾಡುತ್ತಾರೆ. ಒಟ್ಟಾರೆ ಇಬ್ಬರೂ ಸಾಕಷ್ಟು ಖುಷಿಯಾಗಿ ಕಾಲ ಕಳೆಯುತ್ತಾರೆ. ಇದಾದ ಬಳಿಕ ಬೀದಿಬದಿಯ ತಳ್ಳುವ ಗಾಡಿಯವನ ಬಳಿ ಬೇಯಿಸಿದ ಜೋಳ ತಿನ್ನುತ್ತಾರೆ. ಇದಾದ ಬಳಿಕ ಥಿಯೇಟರ್‌ಗೆ ಹೋಗಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡುತ್ತಾರೆ. 3 ಸಾವಿರ ರೂಪಾಯಿಗೆ ಒಳ್ಳೆಯ ಪಾರ್ಟಿ ನೀಡುತ್ತಾರೆ. ಈ ಪಾರ್ಟಿಯ ವಿಡಿಯೋ ಇಲ್ಲಿದೆ ನೋಡಿ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)