ಕನ್ನಡ ಸುದ್ದಿ  /  ಮನರಂಜನೆ  /  ಜಮೀನಿಗೆ ರೌಡಿಗಳ ಕಾಟ; ಕತ್ತಿ ಝಳಪಿಸಿದ ಕೆಂಚ; ಅದೇ ಎಸ್ಟೇಟ್‌ಗೆ ಭೂಮಿ-ಗೌತಮ್‌ರನ್ನ ಹನಿಮೂನ್‌ಗೆ ಕಳುಹಿಸಿದ ಶಕುಂತಲಾ- ಅಮೃತಧಾರೆ ಇಂದಿನ ಕಥೆ

ಜಮೀನಿಗೆ ರೌಡಿಗಳ ಕಾಟ; ಕತ್ತಿ ಝಳಪಿಸಿದ ಕೆಂಚ; ಅದೇ ಎಸ್ಟೇಟ್‌ಗೆ ಭೂಮಿ-ಗೌತಮ್‌ರನ್ನ ಹನಿಮೂನ್‌ಗೆ ಕಳುಹಿಸಿದ ಶಕುಂತಲಾ- ಅಮೃತಧಾರೆ ಇಂದಿನ ಕಥೆ

Amruthadhaare Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಹೊಸದೊಂದು ಟ್ವಿಸ್ಟ್‌ ಬಂದಿದೆ. ಅಜ್ಜಮ್ಮನ ಜಮೀನಿಗೆ ಕೆಂಚನೆಂಬ ರೌಡಿಯ ಉಪಟಳ ಶುರುವಾಗಿದೆ. ತೊಂದರೆ ಇರುವ ಆ ಎಸ್ಟೇಟ್‌ಗೆ ಗೌತಮ್‌ ಮತ್ತು ಭೂಮಿಕಾರನ್ನು ಹನಿಮೂನ್‌ಗೆ ಕಳುಹಿಸುವ ಯೋಜನೆಯಲ್ಲಿದ್ದಾರೆ ಶಕುಂತಲಾ.

ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ
ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

ಅಮೃತಧಾರೆ ಧಾರಾವಾಹಿ ಕಥೆ: ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಹೊಸ ಪ್ರಮೋಗಳನ್ನು ಬಿಡುಗಡೆ ಮಾಡಿದೆ. ಭೂಮಿಕಾ-ಗೌತಮ್‌ ಲವ್‌ ಸ್ಟೋರಿ ಮತ್ತು ಶಕುಂತಲಾ ಕಿತಾಪತಿಗೆ ಸೀಮಿತವಾಗಿದ್ದ ಈ ಸೀರಿಯಲ್‌ನಲ್ಲಿ ಇದೀಗ ರೌಡಿಯೊಬ್ಬನ ಎಂಟ್ರಿ ಆಗಿದೆ. ಕೆಂಚನೆಂಬ ರೌಡಿ ಅಜ್ಜಮ್ಮನ ಊರಿನ 60 ಎಕರೆ ಭೂಮಿ ಕಬಳಿಸುವ ಯತ್ನ ಮಾಡಿದ್ದಾನೆ. ಈತ ನೇರವಾಗಿ ಗೌತಮ್‌ ದಿವಾನ್‌ ಮನೆಗೆ ಬಂದು ಅಜ್ಜಮ್ಮ, ಜೈದೇವ್‌, ಶಕುಂತಲಾ ಮುಂದೆ ಕತ್ತಿ ಎತ್ತಿ ಎಚ್ಚರಿಕೆ ನೀಡುತ್ತಾನೆ. ಕೆಂಚನ ವಿಷಯ ಗೌತಮ್‌ಗೂ ಆನಂದ್‌ ತಿಳಿಸಿದ್ದಾನೆ. ಇದೇ ಸ್ಥಳಕ್ಕೆ ಗೌತಮ್‌ ಮತ್ತು ಭೂಮಿಕಾರನ್ನು ಹನಿಮೂನ್‌ಗೆ ಕಳುಹಿಸಲು ಶಕುಂತಲಾ ಪ್ಲ್ಯಾನ್‌ ಮಾಡುತ್ತಾನೆ. ಈ ಮೂಲಕ ಇವರಿಬ್ಬರಿಗೆ ಶಕುಂತಲಾದೇವಿ ಕೆಟ್ಟದ್ದನ್ನು ಬಯಸಿದರೂ ಇದರಿಂದ ಒಳಿತೇ ಆಗಲಿದೆ ಎಂದುಕೊಂಡಿದ್ದಾರೆ ಪ್ರೇಕ್ಷಕರು.

ಟ್ರೆಂಡಿಂಗ್​ ಸುದ್ದಿ

ಆನಂದ್‌ಗೆ ದೊರಕಿದೆ ಅಪಾಯದ ಸುಳಿವು

"ಚಿಕ್ಕಮಗಳೂರಿನ ಆಸ್ತಿಯಲ್ಲಿ ಒಂದಿಷ್ಟು ತೊಂದರೆ ಉಂಟಾಗಿದೆ. ಎಸ್ಟೇಟ್‌ನ ಮ್ಯಾನೇಜರ್‌ ಆಗಿದ್ದ ಕೆಂಚಯ್ಯ ಎಂಬಾತ ಫೋರ್ಜರಿ ಡಾಕ್ಯುಮೆಂಟ್‌ ಎಲ್ಲಾ ತಯಾರಿಸಿಕೊಂಡು ಆ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ಅದು ನನ್ನ ಗಮನಕ್ಕೆ ಬಂದು ತಕ್ಷಣ ಅದನ್ನು ತಡೆದೆ" ಎಂದು ಆನಂದ್‌ ಗೌತಮ್‌ಗೆ ತಿಳಿಸುತ್ತಾನೆ. ಈ ವಿಷಯ ನಿನಗೆ ಹೇಳೋಣ ಅಂದುಕೊಂಡೆ. ನಿನಗೆ ಯಾಕೆ ತಲೆಬಿಸಿ ಎಂದು ಹೇಳಲಿಲ್ಲ. ನಾನೇ ಅದನ್ನು ಕ್ಲಿಯರ್‌ ಮಾಡಿಬಿಟ್ಟೆ. ಈಗ ಮತ್ತೆ ತಲೆಹರಟೆ ಶುರು ಮಾಡಿದ್ದಾನಂತೆ ಎಂದು ಆನಂದ್‌ ಹೇಳುತ್ತಾನೆ. "ನೀನು ಯಾರು ಎಂದು ಗೊತ್ತು, ಆದರೂ ಆತ ಹೀಗೆ ಮಾಡುತ್ತಾನೆ ಅಂದರೆ ಅವನಿಗೆ ಯಾರಾದರೂ ಪವರ್‌ಫುಲ್‌ ವ್ಯಕ್ತಿಗಳು ನೆರವಾಗುತ್ತ ಇರಬಹುದು" ಎಂದು ಆನಂದ್‌ ಹೇಳುತ್ತಾನೆ. "ಮೊದಲೇ ಅವನು ತಲೆಹರಟೆ. ಯಾವುದೋ ಕೊಲೆ ಕೇಸಲ್ಲಿ ಇನ್ವಾಲ್‌ ಆಗಿದ್ದಾನೆ" ಎಂದು ಆ ಕೆಂಚಪ್ಪನ ಕುರಿತು ಮಾಹಿತಿ ನೀಡುತ್ತಾನೆ.

ಗೌತಮ್‌ ದಿವಾನ್‌ ಮನೆಗೆ ಬಂದ ಕೆಂಚ

ಮನೆಯಲ್ಲಿ ಅಜ್ಜಿ ಕುಳಿತಿರುವಾಗ ಸೆಕ್ಯುರಿಟಿ ಫೋನ್‌ ಮಾಡುತ್ತಾರೆ. ಯಾರೋ ಕೆಂಚಪ್ಪ ಎಂಬಾತ ಚಿಕ್ಕಮಗಳೂರಿನಿಂದ ಬಂದಿದ್ದಾನೆ ಎಂದು ಮಾಹಿತಿ ನೀಡುತ್ತಾರೆ.

"ಯಾರೂ ಕೆಂಚ ಬಂದಿದ್ದಾನ, ಕಳುಹಿಸು" ಎಂದು ಅಜ್ಜಿ ಹೇಳುತ್ತಾರೆ. ಹೀಗೆ ಮನೆಯೊಳಗೆ ಕೆಂಚ ಮತ್ತು ರೌಡಿ ಗ್ಯಾಂಗ್‌ ಬರುತ್ತದೆ. ಮನೆಯೊಳಗೆ ಬಂದ ಆತ ಅಜ್ಜಿಗೆ ನಮಸ್ಕರಿಸುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಶಕುಂತಲಾದೇವಿ ಮತ್ತು ಮನೆಹಾಳ ಮಾವನೂ ಬರುತ್ತಾರೆ. ಜೈದೇವ್‌ ಮತ್ತು ಮಲ್ಲಿ, ಅಶ್ವಿನಿಯೂ ಬರುತ್ತಾರೆ "ಏನೋ ನಿನ್ನ ಮೇಲೆ ದೂರು ಬಂದಿದೆ" ಎಂದು ಅಜ್ಜಮ್ಮ ಕೇಳುತ್ತಾರೆ. "ಬಹಳ ದೊಡ್ಡ ಗೋಲ್‌ಮಾಲ್‌ ಮಾಡಿದೆಯಂತೆ. ನಮಗೆ ಸೇರಬೇಕಾದ 60 ಎಕರೆ ಜಮೀನನ್ನು ನಿನ್ನ ಹೆಸರಿಗೆ ಕಬಲಿಸಬೇಕು ಎಂದು ಮಾಡಿದೆಯಂತೆ. ಅನ್ನ ಹಾಕಿದ ಮನೆಗೆ ಕನ್ನ ಹಾಕಲು ನೋಡ್ತಾ ಇದ್ದಿಯಂತೆ" ಎಂದು ಅಜ್ಜಮ್ಮ ಹೇಳುತ್ತಾರೆ. "ಇದನ್ನ ನಮ್ಮ ಹತ್ರ ಇಟ್ಟುಕೊಳ್ಳಬೇಡ. ಮರ್ಯಾದೆಯಿಂದ ಸುಮ್ಮನೆ ಇದ್ದು ಬಿಡು" ಎಂದು ಅಜ್ಜಮ್ಮ ವಾರ್ನ್‌ ಮಾಡುತ್ತಾರೆ. "ಅದು ನಮ್ಮ ಯುಜಮಾನ್ರು ಗಳಿಸಿದ ಆಸ್ತಿ. ನಮ್ಮ ಮೂಲ ಆಸ್ತಿ. ಆ ಕಾಫಿ ಎಸ್ಟೇಟ್‌ನಿಂದ ನಾವು ಇವತ್ತು ಈ ಲೆವೆಲ್‌ಗೆ ಬಂದದ್ದು" ಎಂದು ಹೇಳುತ್ತಾರೆ.

ಕತ್ತಿ ಝಳಪಿಸಿದ ಕೆಂಚ

"ಆದರೆ ಆ ಜಾಗ ನೀವು ಒತ್ತುವರಿಯಿಂದ ಮಾಡಿಕೊಂಡದ್ದು" ಎಂದು ಕೆಂಚ ಹೇಳುತ್ತಾನೆ. "ನೀವು ಒತ್ತುವರಿ ಮಾಡಿಕೊಂಡ ಜಮೀನಿನಲ್ಲಿ ನಾವು ವಸಿ ಒತ್ತುವರಿ ಮಾಡಿಕೊಂಡರೆ ತಪ್ಪೇನು" ಎಂದು ಕೆಂಚ ಕೇಳುತ್ತಾನೆ. "ಯಾವುದೋ ಒತ್ತುವರಿ ಜಾಗ, ನನ್ನ ಗಂಡ ಬೆವರು ಸುರಿಸಿ ಸಂಪಾದಿಸಿ ತೆಗೆದುಕೊಂಡ ಜಾಗವದು. ಮಾತನಾಡುವ ಮೊದಲು ಯಾರ ಜತೆ, ಎಲ್ಲಿ ಮಾತನಾಡುತ್ತಿ ಎನ್ನುವ ಕುರಿತು ಯೋಚಿಸು" ಎಂದು ಅಜ್ಜಮ್ಮ ಹೇಳುತ್ತಾರೆ. "ಅಷ್ಟೊಂದು ಜಮೀನು ಇಟ್ಟುಕೊಂಡು ಏನು ಮಾಡ್ತಿರಾ? ನಾನೂ ಬಡವ, ನನಗೂ ವಸಿ ಕೊಡಿ. ನಿಮ್ಮಂಗೆ ನಾವೂ ಶ್ರೀಮಂತರಾಗುವುದು ಬೇಡ್ವ" ಎಂದು ಹೇಳುತ್ತಾನೆ.

"ನಮ್ಮ ಎಸ್ಟೇಟ್‌ನಲ್ಲಿ ಕೆಲಸ ಮಾಡುವವರು ಎಂದು ಅಜ್ಜಿ ಮರ್ಯಾದೆ ಕೊಟ್ಟು ಮಾತನಾಡಿದರೆ ಹೀಗೆ ಮಾತನಾಡುತ್ತಿಯಾ?" ಎಂದು ಜೈದೇವ್‌ ಕೇಳುತ್ತಾನೆ. ಆ ಸಮಯದಲ್ಲಿ ಕೆಂಚ ತನ್ನ ಕೈಯಲ್ಲಿದ್ದ ಗೋಣಿಯನ್ನು ಬಿಚ್ಚುತ್ತಾನೆ. ಅದರೊಳಗಿನಿಂದ ಕತ್ತಿಗಳು ಕೆಳಕ್ಕೆ ಬೀಳುತ್ತವೆ. ಇನ್ನೊಂದು ಪ್ರಮೋದಲ್ಲಿ ಇದೇ ಕತ್ತಿ ಹಿಡಿದು ಆ ಮನೆಯವರನ್ನು ಬೆದರಿಸುವ ದೃಶ್ಯವಿದೆ. ಇದೇ ಚಿಕ್ಕಮಗಳೂರು ಎಸ್ಟೇಟ್‌ಗೆ ಶಕುಂತಲಾ ಭೂಮಿಕಾ ಮತ್ತು ಗೌತಮ್‌ನನ್ನು ಹನಿಮೂನ್‌ಗೆ ಕಳುಹಿಸುವ ಕುರಿತೂ ಯೋಜಿಸಿದ್ದಾರೆ. ಇವರಿಬ್ಬರಿಗೆ ನೀವು ಏನೂ ಅಪಾಯ ಮಾಡಲು ಪ್ರಯತ್ನಿಸಿದರೂ ಅವರು ಇನ್ನಷ್ಟು ಕ್ಲೋಸ್‌ ಆಗುತ್ತಾರೆ ಎಂದು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point