ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ ಕಥೆ: ಜೀವನ ಸಂಗಾತಿ ಬಿಸ್ನೆಸ್‌ ಆರಂಭಿಸಿದ ಜೀವನ್‌; ಕೆಂಚನ ಅಟ್ಟಹಾಸಕ್ಕೆ ಬೆದರಿದ ದಿವಾನ್‌ ಕುಟುಂಬ

ಅಮೃತಧಾರೆ ಧಾರಾವಾಹಿ ಕಥೆ: ಜೀವನ ಸಂಗಾತಿ ಬಿಸ್ನೆಸ್‌ ಆರಂಭಿಸಿದ ಜೀವನ್‌; ಕೆಂಚನ ಅಟ್ಟಹಾಸಕ್ಕೆ ಬೆದರಿದ ದಿವಾನ್‌ ಕುಟುಂಬ

ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಗೌತಮ್‌ನ ಬೆಂಬಲ ಪಡೆದ ಜೀವನ್‌ "ಜೀವನ ಸಂಗಾತಿ" ಎಂಬ ಹೊಸ ಬಿಸ್ನೆಸ್‌ ಆರಂಭಿಸಲು ಮುಂದಾಗುತ್ತಾನೆ. ದಿವಾನ್‌ ಮನೆಗೆ ಬಂದ ಕೆಂಚಪ್ಪ ಎಂಬ ರೌಡಿ ಎಲ್ಲರನ್ನೂ ಬೆದರಿಸುತ್ತಾನೆ.

ಅಮೃತಧಾರೆ ಧಾರಾವಾಹಿ ಕಥೆ
ಅಮೃತಧಾರೆ ಧಾರಾವಾಹಿ ಕಥೆ

ಅಮೃತಧಾರೆ ಧಾರಾವಾಹಿ ಕಥೆ: ಆನಂದ್‌ ಮತ್ತು ಅಪರ್ಣ ಮನೆಯಲ್ಲಿ ಗೌತಮ್‌ ಕುರಿತು ಹೊಗಳುತ್ತ ಇರುತ್ತಾರೆ. ಅತ್ತಿಗೆ ತಮ್ಮ ಜೀವನ್‌ಗೆ ಹೊಸ ಕಂಪನಿ ಓಪನ್‌ ಮಾಡಿಕೊಟ್ಟು ಕೊನೆತನಕ ನೋಡಿಕೊಳ್ಳುವುದಾಗಿ ಹೇಳಿರುವ ಗೌತಮ್‌ ಕುರಿತು ಹೊಗಳುತ್ತ ಇದ್ದಾರೆ. ಇದಾದ ಬಳಿಕ ಅಪರ್ಣಾ ಭೂಮಿಕಾಳಿಗೆ ಕಾಲ್‌ ಮಾಡುತ್ತಾರೆ. "ಗೌತಮ್‌ನಂತಹ ಗಂಡನನ್ನು ಪಡೆಯಲು ನೀನು ನಿಜವಾಗಿಯೂ ತುಂಬಾ ಲಕ್ಕಿ" ಎಂದು ಅಪರ್ಣಾ ಹೊಗಳುತ್ತಾಳೆ."ಇಂತವರತ್ರ ಸತ್ಯ ಮುಚ್ಚಿಟ್ಟು ನಾನು ತಪ್ಪು ಮಾಡಿಬಿಟ್ಟೆ" ಎಂದು ಭೂಮಿಕಾ ಯೋಚಿಸುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಬೆಳಗ್ಗೆ ಡುಮ್ಮ ಸರ್‌ ಎದ್ದು ಟೇಬಲ್‌ ಪಕ್ಕದಲ್ಲಿದ್ದ ಕಾಫಿ ಕುಡಿತಾರೆ. ಕಾಫಿ ಕಪ್‌ ಕೆಳಗೆ ಸಾರಿ ಎಂದು ಬರೆದ ಬರಹ ಇರುತ್ತದೆ. ಈ ಕಡೆಯಲ್ಲಿ ಹೂವಿನ ಎಸಲುಗಳಲ್ಲಿಯೂ ಸಾರಿ ಎಂದು ಬರೆದಿರುತ್ತದೆ. ಇದಾದ ಬಳಿಕ ಆಗಮಿಸಿದ ಭೂಮಿಕಾ ಸಾರಿ ಕೇಳುತ್ತಾರೆ. "ನಮಗೆ ಇಷ್ಟವಾದವರಲ್ಲಿ ಎಷ್ಟು ಸಾರಿ ಕೇಳಿದರೂ ತಪ್ಪಾಗದು" ಎನ್ನುತ್ತಾರೆ. ಇದಾದ ಬಳಿಕ ಗೌತಮ್‌ಗೆ ಕಾಲ್‌ ಬರುತ್ತದೆ. ಆನಂದ್‌ ಕೂಡ ಕಾಲ್‌ ಮಾಡುತ್ತಾನೆ. ಆತನೂ ಸಾರಿ ಕೇಳುತ್ತಾನೆ. "ನೀನೂ ಬೇರೆಯಲ್ಲ ಅತ್ತಿಗೆ ಬೇರೆಯಲ್ಲ" ಎಂದು ಆನಂದ್‌ ಹೇಳುತ್ತಾನೆ. "ನೀನು ಸಾರಿ ಹೇಳಿಲ್ಲ ಅನ್ನೋದಕ್ಕಿಂತ ಬೆಳಗ್ಗೆ ಬೆಳಗ್ಗೆ ಓವರ್‌ ಆಕ್ಟಿಂಗ್‌ ಮಾಡಬೇಡ" ಎಂದು ಆನಂದ್‌ ಹೇಳುತ್ತಾನೆ. ಸ್ನೇಹಿತರ ಹುಸಿಕೋಪದ ಮಾತುಗಳು ಇರುತ್ತವೆ. ಇದಾದ ಬಳಿಕ ಆನಂದ್‌ರದ್ದು ತಪ್ಪಿಲ್ಲ ಎಂದು ಭೂಮಿಕಾ ಹೇಳುತ್ತಾಳೆ.

ಇದಾದ ಬಳಿಕ ಆನಂದ್‌ ಗೌತಮ್‌ ಮನೆಗೆ ಬರುತ್ತಾನೆ. ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾನೆ. ಆನಂದ್‌ ಮತ್ತು ಅಪರ್ಣ ಮನೆಯಲ್ಲಿ ಗೌತಮ್‌ ಕುರಿತು ಹೊಗಳುತ್ತ ಇರುತ್ತಾರೆ. ಅತ್ತಿಗೆ ತಮ್ಮ ಜೀವನ್‌ಗೆ ಹೊಸ ಕಂಪನಿ ಓಪನ್‌ ಮಾಡಿಕೊಟ್ಟು ಕೊನೆತನಕ ನೋಡಿಕೊಳ್ಳುವುದಾಗಿ ಹೇಳಿರುವ ಗೌತಮ್‌ ಕುರಿತು ಹೊಗಳುತ್ತ ಇದ್ದಾರೆ. ಇದಾದ ಬಳಿಕ ಅಪರ್ಣಾ ಭೂಮಿಕಾಳಿಗೆ ಕಾಲ್‌ ಮಾಡುತ್ತಾರೆ. "ಗೌತಮ್‌ನಂತಹ ಗಂಡನನ್ನು ಪಡೆಯಲು ನೀನು ನಿಜವಾಗಿಯೂ ತುಂಬಾ ಲಕ್ಕಿ" ಎಂದು ಅಪರ್ಣಾ ಹೊಗಳುತ್ತಾಳೆ."ಇಂತವರತ್ರ ಸತ್ಯ ಮುಚ್ಚಿಟ್ಟು ನಾನು ತಪ್ಪು ಮಾಡಿಬಿಟ್ಟೆ" ಎಂದು ಭೂಮಿಕಾ ಯೋಚಿಸುತ್ತಾಳೆ.

ಬೆಳಗ್ಗೆ ಡುಮ್ಮ ಸರ್‌ ಎದ್ದು ಟೇಬಲ್‌ ಪಕ್ಕದಲ್ಲಿದ್ದ ಕಾಫಿ ಕುಡಿತಾರೆ. ಕಾಫಿ ಕಪ್‌ ಕೆಳಗೆ ಸಾರಿ ಎಂದು ಬರೆದ ಬರಹ ಇರುತ್ತದೆ. ಈ ಕಡೆಯಲ್ಲಿ ಹೂವಿನ ಎಸಲುಗಳಲ್ಲಿಯೂ ಸಾರಿ ಎಂದು ಬರೆದಿರುತ್ತದೆ. ಇದಾದ ಬಳಿಕ ಆಗಮಿಸಿದ ಭೂಮಿಕಾ ಸಾರಿ ಕೇಳುತ್ತಾರೆ. "ನಮಗೆ ಇಷ್ಟವಾದವರಲ್ಲಿ ಎಷ್ಟು ಸಾರಿ ಕೇಳಿದರೂ ತಪ್ಪಾಗದು" ಎನ್ನುತ್ತಾರೆ. ಇದಾದ ಬಳಿಕ ಗೌತಮ್‌ಗೆ ಕಾಲ್‌ ಬರುತ್ತದೆ. ಆನಂದ್‌ ಕೂಡ ಕಾಲ್‌ ಮಾಡುತ್ತಾನೆ. ಆತನೂ ಸಾರಿ ಕೇಳುತ್ತಾನೆ. "ನೀನೂ ಬೇರೆಯಲ್ಲ ಅತ್ತಿಗೆ ಬೇರೆಯಲ್ಲ" ಎಂದು ಆನಂದ್‌ ಹೇಳುತ್ತಾನೆ. "ನೀನು ಸಾರಿ ಹೇಳಿಲ್ಲ ಅನ್ನೋದಕ್ಕಿಂತ ಬೆಳಗ್ಗೆ ಬೆಳಗ್ಗೆ ಓವರ್‌ ಆಕ್ಟಿಂಗ್‌ ಮಾಡಬೇಡ" ಎಂದು ಆನಂದ್‌ ಹೇಳುತ್ತಾನೆ. ಸ್ನೇಹಿತರ ಹುಸಿಕೋಪದ ಮಾತುಗಳು ಇರುತ್ತವೆ. ಇದಾದ ಬಳಿಕ ಆನಂದ್‌ರದ್ದು ತಪ್ಪಿಲ್ಲ ಎಂದು ಭೂಮಿಕಾ ಹೇಳುತ್ತಾಳೆ.

ಇದಾದ ಬಳಿಕ ಆನಂದ್‌ ಮನೆಗೆ ಬರುತ್ತಾನೆ. "ಚಿಕ್ಕಮಗಳೂರಿನ ಜಮೀನಿನಲ್ಲಿ ಒಂದಿಷ್ಟು ತೊಂದರೆ ಉಂಟಾಗಿದೆ. ಎಸ್ಟೇಟ್‌ನ ಮ್ಯಾನೇಜರ್‌ ಆಗಿದ್ದ ಕೆಂಚಪ್ಪ ಫೋರ್ಜರಿ ಡಾಕ್ಯುಮೆಂಟ್‌ ಎಲ್ಲಾ ತಯಾರಿಸಿಕೊಂಡು ಆ ಪ್ರಾಪರ್ಟಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ಅದು ನನ್ನ ಗಮನಕ್ಕೆ ಬಂದು ತಕ್ಷಣ ಅದನ್ನು ತಡೆದೆ. ಈ ವಿಷಯ ನಿನಗೆ ಹೇಳೋಣ ಅಂದುಕೊಂಡೆ. ನಿನಗೆ ಯಾಕೆ ತಲೆಬಿಸಿ ಎಂದು ಹೇಳಲಿಲ್ಲ. ನಾನೇ ಅದನ್ನು ಕ್ಲಿಯರ್‌ ಮಾಡಿಬಿಟ್ಟೆ. ಈಗ ಮತ್ತೆ ತಲೆಹರಟೆ ಶುರು ಮಾಡಿದ್ದಾನಂತೆ. ನೀನು ಯಾರು ಎಂದು ಗೊತ್ತು, ಆದರೂ ಆತ ಹೀಗೆ ಮಾಡುತ್ತಾನೆ ಅಂದರೆ ಅವನಿಗೆ ಯಾರಾದರೂ ಪವರ್‌ಫುಲ್‌ ವ್ಯಕ್ತಿಗಳು ನೆರವಾಗುತ್ತ ಇರಬಹುದು. ಮೊದಲೇ ಅವನು ತಲೆಹರಟೆ. ಯಾವುದೋ ಕೊಲೆ ಕೇಸಲ್ಲಿ ಇನ್ವಾಲ್‌ ಆಗಿದ್ದಾನೆ" ಎಂದು ಆ ಕೆಂಚಪ್ಪನ ಕುರಿತು ಆನಂದ್‌ ಮಾಹಿತಿ ನೀಡುತ್ತಾನೆ. ಗೌತಮ್‌ ಕೂಡ ಗಂಭೀರವಾಗಿ ಯೋಚಿಸುತ್ತಾನೆ.

ಜೀವನ್‌ ತನ್ನ ಮನೆಯವರ ಮುಂದೆ ಪ್ರಸಂಟೇಷನ್‌ ಆರಂಭಿಸುತ್ತಿದ್ದಾನೆ. ಆತ ಜೀವನ ಸಂಗಾತಿ ಎಂಬ ಕಂಪನಿ ಆರಂಭಿಸುವ ಕುರಿತು ಮಾತನಾಡುತ್ತಿದ್ದಾನೆ. ಈ ಮೂಲಕ ಮ್ಯಾಟ್ರಿಮೋನಿ ಕಂಪನಿ ಆರಂಭಿಸುವ ಕುರಿತು ಮಾತನಾಡುತ್ತಾನೆ. ನಿಮ್ಮ ಸಂಗಾತಿಗಾಗಿ ನಮ್ಮ ಜೀವನ ಸಂಗಾತಿ ಎನ್ನುತ್ತಾನೆ. ಈ ಮೂಲಕ ಬಿಸ್ನೆಸ್‌ ಕುರಿತು ಮಾಹಿತಿ ನೀಡುತ್ತಾನೆ. ಎಲ್ಲರೂ ಖುಷಿಯಾಗುತ್ತಾರೆ. "ಡೇಟಿಂಗ್‌ ಆಪ್‌ ಮಾಡ್ತಿಯಾ ಅಂದುಕೊಂಡರೆ ಮ್ಯಾಟ್ರಿಮೋನಿ ಆಪ್‌ ಮಾಡ್ತಾ ಇದ್ದೀಯಾ" ಎಂದು ಅಪ್ಪಿ ಕಾಲೆಳೆಯುತ್ತಾಳೆ. ಒಂದಿಷ್ಟು ಬಿಸ್ನೆಸ್‌ ಮಾತುಕತೆ ನಡೆಯುತ್ತದೆ.

ರೌಡಿ ಕೆಂಚ ಎಂಟ್ರಿ

ಕೆಂಚ ಎಂಬಾತ ಚಿಕ್ಕಮಗಳೂರಿನಿಂದ ಗೌತಮ್‌ ದಿವಾನ್‌ ಮನೆಗೆ ಬಂದಿದ್ದಾನೆ. ಆತನ ಜತೆ ಆತನ ಗ್ಯಾಂಗ್‌ ಕೂಡ ಇದೆ. ಮನೆಯೊಳಗೆ ಬಂದ ಆತ ಅಜ್ಜಮ್ಮನಿಗೆ ನಮಸ್ಕರಿಸುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಶಕುಂತಲಾ ಮತ್ತು ಆಕೆಯ ಸಹೋದರ, ಜೈದೇವ್‌ ಮತ್ತು ಮಲ್ಲಿ, ಅಶ್ವಿನಿಯೂ ಬರುತ್ತಾರೆ "ಏನೋ ನಿನ್ನ ಮೇಲೆ ದೂರು ಬಂದಿದೆ. ಬಹಳ ದೊಡ್ಡ ಗೋಲ್‌ಮಾಲ್‌ ಮಾಡಿದೆಯಂತೆ. ನಮಗೆ ಸೇರಬೇಕಾದ 60 ಎಕರೆ ಜಮೀನನ್ನು ನಿನ್ನ ಹೆಸರಿಗೆ ಕಬಲಿಸಬೇಕು ಎಂದುಕೊಂಡಿದ್ದೀಯ. ಅನ್ನ ಹಾಕಿದ ಮನೆಗೆ ಕನ್ನ ಹಾಕ್ತಿಯಾ. ಇದನ್ನ ನಮ್ಮ ಹತ್ರ ಇಟ್ಟುಕೊಳ್ಳಬೇಡ. ಮರ್ಯಾದೆಯಿಂದ ಸುಮ್ಮನೆ ಇದ್ದು ಬಿಡು" ಎಂದು ಅಜ್ಜಮ್ಮ ವಾರ್ನ್‌ ಮಾಡುತ್ತಾರೆ. "ಅದು ನಮ್ಮ ಯುಜಮಾನ್ರು ಗಳಿಸಿದ ಆಸ್ತಿ. ನಮ್ಮ ಮೂಲ ಆಸ್ತಿ. ಆ ಕಾಫಿ ಎಸ್ಟೇಟ್‌ನಿಂದ ನಾವು ಇವತ್ತು ಈ ಲೆವೆಲ್‌ಗೆ ಬಂದದ್ದು" ಎಂದು ಅಜ್ಜಮ್ಮ ಹೇಳುತ್ತಾರೆ. 

ಇದಕ್ಕೆ ಕೆಂಚ ತನ್ನದೇ ಶೈಲಿಯಲ್ಲಿ ಉತ್ತರ ನೀಡುತ್ತಾನೆ. "ಆದರೆ ಆ ಜಾಗ ನೀವು ಒತ್ತುವರಿಯಿಂದ ಮಾಡಿಕೊಂಡದ್ದು. ನೀವು ಒತ್ತುವರಿ ಮಾಡಿಕೊಂಡ ಜಮೀನಿನಲ್ಲಿ ನಾವು ವಸಿ ಒತ್ತುವರಿ ಮಾಡಿಕೊಂಡರೆ ತಪ್ಪೇನು" ಎಂದು ಕೆಂಚ ಕೇಳುತ್ತಾನೆ. "ಯಾವುದೋ ಒತ್ತುವರಿ ಜಾಗ, ನನ್ನ ಗಂಡ ಬೆವರು ಸುರಿಸಿ ಸಂಪಾದಿಸಿ ತೆಗೆದುಕೊಂಡ ಜಾಗವದು. ಮಾತನಾಡುವ ಮೊದಲು ಯಾರ ಜತೆ, ಎಲ್ಲಿ ಮಾತನಾಡುತ್ತಿ ಎನ್ನುವ ಕುರಿತು ಯೋಚಿಸು" ಎಂದು ಅಜ್ಜಮ್ಮ ಹೇಳಿದಾಗ "ಅಷ್ಟೊಂದು ಜಮೀನು ಇಟ್ಟುಕೊಂಡು ಏನು ಮಾಡ್ತಿರಾ? ನಾನೂ ಬಡವ, ನನಗೂ ವಸಿ ಕೊಡಿ. ನಿಮ್ಮಂಗೆ ನಾವೂ ಶ್ರೀಮಂತರಾಗುವುದು ಬೇಡ್ವ" ಎಂದು ಕೆಂಚ ಹೇಳುತ್ತಾನೆ.

ಜೈದೇವ್‌ ಕತ್ತಿಗೆ ಕತ್ತಿ ಹಿಡಿದ ಕೆಂಪ

"ನಮ್ಮ ಎಸ್ಟೇಟ್‌ನಲ್ಲಿ ಕೆಲಸ ಮಾಡುವವರು ಎಂದು ಅಜ್ಜಿ ಮರ್ಯಾದೆ ಕೊಟ್ಟು ಮಾತನಾಡಿದರೆ ಹೀಗೆ ಮಾತನಾಡುತ್ತಿಯಾ?" ಎಂದು ಜೈದೇವ್‌ ಜೋರಾಗಿ ಕೇಳುತ್ತಾನೆ.. ಆ ಸಮಯದಲ್ಲಿ ಕೆಂಚ ತನ್ನ ಕೈಯಲ್ಲಿದ್ದ ಗೋಣಿಯನ್ನು ಬಿಚ್ಚುತ್ತಾನೆ. ಅದರೊಳಗಿನಿಂದ ಕತ್ತಿಗಳು ಕೆಳಕ್ಕೆ ಬೀಳುತ್ತವೆ. ಆ ಕತ್ತಿಯನ್ನು ಹಿಡಿದುಕೊಂಡು ಜೈದೇವ್‌ ಕತ್ತಿಗೆ ಹಿಡಿಯುತ್ತಾನೆ. ಈ ಮೂಲಕ ನಾನು ಏನು ಬೇಕಾದರೂ ಮಾಡಲು ಸೈ ಎನ್ನುತ್ತಾನೆ. ಅಲ್ಲಿ ಭೂಮಿಕಾ ಕೂಡ ಇರುತ್ತಾಳೆ. ಇವನ ಅವತಾರ ನೋಡಿ ಆಕೆಯೂ ಬೆಚ್ಚಿ ಬೀಳುತ್ತಾಳೆ. "ನನ್ನ ದಾರಿಗೆ ಯಾರಾದರೂ ಅಡ್ಡಬಂದರೆ ತಲೆಗಳು ಉರುಳುತ್ತವೆ" ಎಂದು ಎಚ್ಚರಿಸಿ ಹೋಗುತ್ತಾನೆ ಕೆಂಚಪ್ಪ. "ಈ ವಿಷಯ ನಮ್ಮ ಗೌತಮ್‌ಗೆ ಗೊತ್ತಾಗಬಾರದು" ಎಂದು ಅಜ್ಜಿಯು ಭೂಮಿಕಾಳಿಂದ ಭಾಷೆ ತೆಗೆದುಕೊಳ್ಳುತ್ತಾಳೆ. ಸೀರಿಯಲ್‌ ಮುಂದುವರೆಯುತ್ತದೆ.

IPL_Entry_Point