Amruthadhaare: ಆಸ್ಪತ್ರೆಯಿಂದ ಆನಂದ್‌ನ ಮನೆಗೆ ಕರೆದುಕೊಂಡು ಬಂದ್ರು ಗೌತಮ್‌; ಅಪೇಕ್ಷಾ ಮನಸ್ಸಲ್ಲಿ ಮತ್ತಷ್ಟು ವಿಷಬೀಜ ಬಿತ್ತಿದ ಶಕುಂತಲಾ-televison news amruthadhare serial episode 371 goutham brings patient anand to home shakuntala team unhappy pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಆಸ್ಪತ್ರೆಯಿಂದ ಆನಂದ್‌ನ ಮನೆಗೆ ಕರೆದುಕೊಂಡು ಬಂದ್ರು ಗೌತಮ್‌; ಅಪೇಕ್ಷಾ ಮನಸ್ಸಲ್ಲಿ ಮತ್ತಷ್ಟು ವಿಷಬೀಜ ಬಿತ್ತಿದ ಶಕುಂತಲಾ

Amruthadhaare: ಆಸ್ಪತ್ರೆಯಿಂದ ಆನಂದ್‌ನ ಮನೆಗೆ ಕರೆದುಕೊಂಡು ಬಂದ್ರು ಗೌತಮ್‌; ಅಪೇಕ್ಷಾ ಮನಸ್ಸಲ್ಲಿ ಮತ್ತಷ್ಟು ವಿಷಬೀಜ ಬಿತ್ತಿದ ಶಕುಂತಲಾ

Amruthadhare Serial Episode 371: ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಕೋಮದಲ್ಲಿರುವ ಆನಂದ್‌ನನ್ನು ಗೌತಮ್‌ ತನ್ನ ಮನೆಗೆ ಶಿಫ್ಟ್‌ ಮಾಡಿದ್ದಾನೆ. ಇನ್ನೊಂದೆಡೆ ಅಪೇಕ್ಷಾಳ ಮನಸ್ಸಲ್ಲಿ ಶಕುಂತಲಾದೇವಿ ಇನ್ನಷ್ಟು ವಿಷಬೀಜ ಬಿತ್ತುತ್ತಿದ್ದಾಳೆ. ಜೈದೇವ್‌ನ ಕ್ರಿಮಿನಲ್‌ ಪ್ಲಾನ್‌ ಮುಂದುವರೆದಿದೆ.

ಅಮೃತಧಾರೆ ಸೀರಿಯಲ್‌ ಎಪಿಸೋಡ್‌ 371
ಅಮೃತಧಾರೆ ಸೀರಿಯಲ್‌ ಎಪಿಸೋಡ್‌ 371

Amruthadhare Serial Yesterday Episode: ಆನಂದ್‌ ಆಸ್ಪತ್ರೆಯಲ್ಲಿದ್ದಾರೆ. ಅವರು ಮೊದಲಿನಂತೆ ಆಗುತ್ತಾರೆ ಎಂದು ಡಾಕ್ಟರ್‌ ಭರವಸೆ ನೀಡುತ್ತಾರೆ. ಇದನ್ನು ಕೇಳಿ ಗೌತಮ್‌ ತುಸು ನಿರಾಳವಾಗುತ್ತಾರೆ. ಇನ್ನೊಂದೆಡೆ ಶಕುಂತಲಾದೇವಿ ಅಪೇಕ್ಷಾಳ ತಲೆ ಹಾಳು ಮಾಡುತ್ತಿದ್ದಾಳೆ. "ನಮ್ಮನ್ನೆಲ್ಲ ಭೂಮಿಕಾ ತುಂಬಾ ನೆಗ್ಲೆಕ್ಟ್‌ ಮಾಡ್ತಾಳೆ" ಎಂದು ಶಕುಂತಲಾದೇವಿ ಹೇಳುತ್ತಾರೆ. "ನಿನ್ನ ಮದುವೆಯ ಸಂಭ್ರಮವನ್ನು ಎಂಜಾಯ್‌ ಮಾಡುವುದನ್ನು ಬಿಟ್ಟು ಆಸ್ಪತ್ರೆಯಲ್ಲಿದ್ದಾಳೆ. ನನ್ನ ನೋವು ಯಾರಿಗೂ ಅರ್ಥ ಆಗೋಲ್ಲ" ಎಂದಾಗ ಅಪೇಕ್ಷಾ "ನಾನಿದ್ದೀನಿ ನಿಮ್ಮ ಜತೆ, ನಾನು ನಿಮ್ಮನ್ನು ಬಿಟ್ಟು ಹೋಗೋಲ್ಲ" ಎಂದು ಭರವಸೆ ನೀಡುತ್ತಾಳೆ. ಇದೇ ಸಮಯದಲ್ಲಿ ಆನಂದ್‌ ಬಗ್ಗೆಯೂ ಕೆಟ್ಟದ್ದಾಗಿ ಮಾತನಾಡುತ್ತಾರೆ. "ಗೌತಮ್‌ ಜತೆ ಗೆಳೆತನ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಾನೆ" ಎಂದೆಲ್ಲ ಹೇಳುತ್ತಾರೆ. ಒಟ್ಟಾರೆ ಅಪೇಕ್ಷಾ ಮನಸಲ್ಲಿ ಸಾಕಷ್ಟು ವಿಷಬೀಜ ಬಿತ್ತುತ್ತಾಳೆ.

ಜೈದೇವ್‌ ಕೂಡ ಖುಷಿಯಲ್ಲಿದ್ದಾನೆ. ಆನಂದ್‌ಗೆ ಅಪಘಾತ ಮಾಡಿದ ಖುಷಿ ಅವನಲ್ಲಿದೆ. ಇದೇ ಸಮಯದಲ್ಲಿ ಮನೆಹಾಳ ಮಾವ "ಆನಂದ್‌ ಸತ್ತಿಲ್ಲ, ಕೋಮದಲ್ಲಿದ್ದಾನೆ ಅಷ್ಟೇ" ಎಂದು ಎಚ್ಚರಿಸುತ್ತಾನೆ. "ನನಗೆ ಭಯವಿಲ್ಲ ಮಾಮ್ಸ್‌, ನಾನು ಎಲ್ಲಾ ಮಾಡುವೆ" ಎಂದು ಹೇಳುತ್ತಾನೆ. ಒಟ್ಟಾರೆ ಆಸ್ಪತ್ರೆಯಲ್ಲಿರುವ ಆನಂದ್‌ಗೆ ತೊಂದರೆ ಮಾಡಲು ಪ್ರಯತ್ನಿಸುವ ಸೂಚನೆ ನೀಡಿದ್ದಾನೆ. "ಫಸ್ಟ್‌ ಅವನಿಗೆ ಎಚ್ಚರವಾಗಲಿ, ಮಿಕ್ಕಿದ್ದನ್ನು ಆಮೇಲೆ ನೋಡುವೆ" ಎನ್ನುತ್ತಾನೆ. ಇನ್ನೊಂದೆಡೆ ಅಪರ್ಣಾ ಸಾಕಷ್ಟು ಬೇಸರದಲ್ಲಿದ್ದಾಳೆ. ಆನಂದ್‌ ಮತ್ತು ಭೂಮಿಕಾ ಸಮಧಾನ ಮಾಡಲು ಯತ್ನಿಸುತ್ತಾನೆ. "ಇವರು ಬೇಗ ರಿಕವರಿ ಆಗಬೇಕಾದರೆ ಮನೆಯಲ್ಲಿಟ್ಟು ಟ್ರೀಟ್‌ಮೆಂಟ್‌ ಕೊಡೋದು ಒಳ್ಳೆಯದು. ಮನೆಯ ವಾತಾವರಣದಲ್ಲಿ ತನ್ನವರ ಜತೆ ಇರುವುದು ಒಳ್ಳೆಯದು" ಎಂದು ಡಾಕ್ಟರ್‌ ಹೇಳುತ್ತಾರೆ. "ನನಗೆ ಧೈರ್ಯ ಸಾಲುತ್ತಿಲ್ಲ" ಎಂದು ಗೌತಮ್‌ ಹೇಳುತ್ತಾರೆ. "ಏನೂ ಹೆದರಬೇಡಿ. ಧೈರ್ಯವಾಗಿ ನೋಡಿಕೊಳ್ಳಿ. ಪ್ರೀತಿ ವಾತ್ಸಲ್ಯಕ್ಕಿಂತ ಒಳ್ಳೆಯ ಮೆಡಿಸಿನ್‌ ಯಾವುದೂ ಇಲ್ಲ" ಎನ್ನುತ್ತಾರೆ ಡಾಕ್ಟರ್‌.

ಆನಂದ್‌ನ ಮನೆಗೆ ಕರೆದುಕೊಂಡು ಬಂದ್ರು ಗೌತಮ್‌

ಆನಂದ್‌ನನ್ನು ಮನೆಗೆ ಕರೆದುಕೊಂಡು ಬರುತ್ತಾನೆ ಗೌತಮ್‌. ಆನಂದ್‌ ಕೋಮಕ್ಕೆ ಹೋಗಿದ್ದು ನಾನು ಇಲ್ಲೇ ನೋಡಿಕೊಳ್ಳುವೆ ಎಂದು ಗೌತಮ್‌ ಹೇಳುತ್ತಾನೆ. "ಅವನು ನಮ್ಮ ಮನೆಯಲ್ಲಿ ಇರುವುದಕ್ಕಿಂತ ಅವನ ಮನೆಯಲ್ಲಿ ಇದ್ದರೆ ಹೋಮ್ಲಿ ಫೀಲ್‌ ಆಗಬಹುದು. ಲಾಜಿಕ್‌ ಪ್ರಕಾರ ಅದೇ ಸರಿ ಅಲ್ವಾ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಆನಂದ್‌ ಮತ್ತು ಅಪರ್ಣಾಗೆ ನಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ. ಅವನು ಇಲ್ಲಿದ್ದರೆ ಅವನನ್ನು ಚೆನ್ನಾಗಿ ನೋಡಿಕೊಳ್ಳಬಹುದು" ಎಂದು ಗೌತಮ್‌ ಹೇಳುತ್ತಾನೆ. "ಆನಂದ್‌ ಜತೆ ನಾನು ಇದ್ದರೆ ಮೆಡಿಸಿನ್‌ ವರ್ಕ್‌ ಆಗಬಹುದು" ಎಂದು ಹೇಳುತ್ತಾರೆ. ಬೇರೆ ಯಾರಿಗೂ ಏನೂ ಮಾತನಾಡಲು ಅವಕಾಶ ಇರುವುದಿಲ್ಲ. ಜೈದೇವ್‌, ಶಕುಂತಲಾ, ಮನೆಹಾಳ ಮಾವನ ಪ್ರಯತ್ನ ವಿಫಲವಾಗುತ್ತದೆ. "ಆನಂದ್‌ಗೆ ನಾವೆಲ್ಲ ಜತೆಗೆ ಇದ್ದೇವೆ ಎನ್ನುವ ಫೀಲ್‌ ನೀಡೋಣ. ಆತನ ಜತೆ ನಗುನಗುತ್ತಾ ಮಾತನಾಡುತ್ತ ಇರೋಣ" ಎಂದು ಹೇಳಿದ್ದಕ್ಕೆ ಎಲ್ಲರೂ ಒಪ್ಪುತ್ತಾರೆ.

ಇನ್ನೊಂದೆಡೆ ಜೈದೇವ್‌ನ ವಿಲನ್‌ ಮಾತುಗಳು ಮುಂದುವರೆಯುತ್ತದೆ. "ಅವನು ಈ ಜೆಡಿ ಮೇಲೆ ಕೈ ಮಾಡ್ತಾನೆ. ಸುಮ್ಮನೆ ಬಿಡ್ತಿನಾ. ಕೋಮಕ್ಕೆ ಹೋದವನು ಕೋಮದಲ್ಲೇ ಇರುತ್ತಾನೆ. ಅವನು ಇಷ್ಟು ದಿನ ಎಂಜಾಯ್‌ ಮಾಡುತ್ತಿದ್ದ ಪವರ್‌ ನನಗೆ ಬರುತ್ತದೆ" ಎಂದು ಹೇಳುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ. ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂಬ ಪ್ರಮೋ ಈ ಮುಂದಿನ ವಿಡಿಯೋದಲ್ಲಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)