ಆನಂದ್‌ಗೆ ಆಕ್ಸಿಡೆಂಟ್ ಮಾಡಿಸಿದ ಜೈದೇವ್; ಗೌತಮ್‌ಗೆ ನಿಜ ಹೇಳದೇ ತಪ್ಪು ಮಾಡಿದ ಗೆಳೆಯನ ಪ್ರಾಣಕ್ಕೆ ಸಂಚಕಾರ- ಅಮೃತಧಾರೆ ಇಂದಿನ ಸಂಚಿಕೆ
Amruthadhare Serial Today Episode: ಪಾರ್ಥ ಮತ್ತು ಅಪೇಕ್ಷಾರನ್ನು ಸಾಯಿಸಲು ಜೈದೇವ್ ಪ್ರಯತ್ನಿಸಿದ ಸತ್ಯ ತಿಳಿದ ಆನಂದ್‌ನ ಪ್ರಾಣಕ್ಕೆ ಈಗ ಸಂಚಕಾರ ಬಂದಿದೆ. ಈ ಸತ್ಯವನ್ನು ಗೌತಮ್‌ಗೆ ತಿಳಿಸದೆ ಜೈದೇವ್‌ಗೆ ಎಚ್ಚರಿಸಿದ ಆನಂದ್‌ಗೆ ಅಪಘಾತವಾಗಿದೆ. ಈ ಆಕ್ಸಿಡೆಂಟ್ ಮಾಡಿಸಿದ್ದು ಜೈದೇವ್.
Amruthadhare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಏನಾಗಲಿದೆ ಎಂಬ ಸುಳಿವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರಮೋ ನೀಡಿದೆ. ನಿನ್ನೆಯ ಎಪಿಸೋಡ್‌ನಲ್ಲಿ ಆನಂದ್‌ಗೆ ಜೈದೇವ್‌ನ ನಿಜವಾದ ಗುಣ ತಿಳಿದಿತ್ತು. ಆತನೇ ಪಾರ್ಥ ಮತ್ತು ಅಪೇಕ್ಷಾರನ್ನು ಕೊಲೆ ಮಾಡಲು ಸಂಚು ರೂಪಿಸಿದ ಸತ್ಯ ತಿಳಿದುಹೋಗಿತ್ತು. ಈ ವಿಷಯವನ್ನು ನೇರವಾಗಿ ಗೌತಮ್‌ಗೆ ಹೇಳದೆ ಜೈದೇವ್‌ಗೆ ಹೇಳಿ ತಪ್ಪು ಮಾಡಿದ್ದರು ಆನಂದ್. ಗೌತಮ್‌ಗೆ ಈ ವಿಚಾರ ತಿಳಿದರೆ ಗೆಳೆಯ ಎದೆ ಒಡೆದು ಸಾಯಬಹುದು ಎಂಬ ಆತಂಕದಿಂದ ಆನಂದ್ ಈ ರೀತಿ ಮಾಡಿದ್ದರು. ಇದೀಗ ಈ ನಡೆ ಆನಂದ್ ಪ್ರಾಣಕ್ಕೆ ಸಂಚಕಾರ ತರುವ ಲೆವೆಲ್‌ಗೆ ಬಂದಿದೆ.
ಅಯ್ಯೋ, ಆನಂದ್‌ಗೆ ಏನಾಯ್ತು?
ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರಮೋದಲ್ಲಿ ಜೈದೇವ್ ಕೈವಾಡದಿಂದ ಆನಂದ್‌ಗೆ ಅಪಘಾತವಾದ ತುಣುಕಿದೆ. ಮನೆಹಾಳ ಮಾವನಿಗೆ ಆನಂದ್‌ಗೆ ನನ್ನ ವಿಷಯ ಗೊತ್ತಾಗಿದೆ ಎಂದು ಜೈದೇವ್ ಹೇಳುತ್ತಾನೆ. ಈ ವಿಷಯವನ್ನು ಆನಂದ್ ಗೌತಮ್‌ಗೆ ಹೇಳಬಹುದು. ಅಲ್ಲಿಗೆ ನಿನ್ನ ಕಥೆ ಫಿನಿಶ್ ಎಂದು ಮಾವ ಹೇಳುತ್ತಾರೆ. ಅದಕ್ಕೆ ಜೈದೇವ್ "ಅದಕ್ಕೆ ಈಗಾಗಲೇ ಆನಂದ್ ಮುಗಿಸಲು ಏರ್ಪಾಡು ಮಾಡಿದ್ದೇನೆ" ಎನ್ನುತ್ತಾನೆ. ಅದೇ ಸಮಯದಲ್ಲಿ ಆನಂದ್ ಮನೆಯಿಂದ ಹೊರಕ್ಕೆ ಬಂದಿದ್ದಾನೆ. ತನ್ನ ಮಡದಿ ಅಪರ್ಣಾಗೆ ಟಾಟಾ ಮಾಡುತ್ತ ಹೊರಡುವಾಗ ಮೆಟಾಡೋರ್ ವಾಹನ ಬಂದು ಆನಂದ್‌ಗೆ ಡಿಕ್ಕಿ ಹೊಡೆದಿದೆ. ಆನಂದ್ ರಸ್ತೆಯಲ್ಲಿ ಬಿದ್ದಿದ್ದಾನೆ.
ನೆಟ್ಟಿಗರ ಪ್ರತಿಕ್ರಿಯೆ
ಸಾಕಷ್ಟು ಸೋಷಿಯಲ್ ಮೀಡಿಯಾ ಬಳಕೆದಾರರು ಈ ಪ್ರಮೋಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಮಗೆ ಗೊತ್ತಿತ್ತು ಹೀಗೆಯೇ ಆಗುತ್ತದೆ ಎಂದು. ಆನಂದ್ ಸತ್ಯವನ್ನ ಗೌತಮ್‌ಗೆ ಹೇಳದೆ ಜೈದೇವ್‌ಗೆ ಹೇಳುವ ಮೂಲಕವೇ ಆಪತ್ತು ತನ್ನ ಮೇಲೆ ಎಳೆದುಕೊಂಡಿದ್ದಾನೆ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಇನ್ನು ಏನಾಗುತ್ತದೆ ಗೊತ್ತ? ಆನಂದ್‌ಗೆ ಕೆಲವು ದಿನಗಳ ನೆನಪಿನ ಶಕ್ತಿ ಹೋಗುತ್ತದೆ. ನನ್ನಿಂದಲೇ ಇದೆಲ್ಲ ಆದದ್ದು ಎಂದು ಗೌತಮ್ ಕಣ್ಣೀರು ಹಾಕುತ್ತಾನೆ" ಎಂದೆಲ್ಲ ನೆಟ್ಟಿಗರು ಭವಿಷ್ಯ ನುಡಿದಿದ್ದಾರೆ. "ಆನಂದ್ ಮತ್ತು ಗೌತಮ್ ಜೋಡಿ ನೋಡಲು ಚೆನ್ನಾಗಿರುತ್ತದೆ. ಆನಂದ್ ಪಾತ್ರವನ್ನು ಹೀಗೆಲ್ಲ ಮಾಡಬೇಡಿ" ಎಂದು ಕೆಲವರು ಕೇಳಿಕೊಂಡಿದ್ದಾರೆ. "ಎಲ್ಲಾ ಸೀರಿಯಲ್‌ಗಳ ಹಣೆಬರಹವೇ ಇಷ್ಟು" ಎಂಬ ಅಭಿಪ್ರಾಯಗಳೂ ಬಂದಿವೆ.
ಜೈದೇವ್‌ಗೆ ಏಕೆ ಆನಂದ್ ಮೇಲೆ ದ್ವೇಷ?
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ಗೆ ನೆಗೆಟಿವ್ ಶೇಡ್‌ನ ಪಾತ್ರ. ಆತನ ಕೈಯಿಂದ ನಿರ್ದೇಶಕರು ಸಾಧ್ಯವಿರುವ ಎಲ್ಲಾ ಅಪರಾಧಗಳನ್ನು ಮಾಡಿಸುತ್ತಿದ್ದಾರೆ! ಅಪೇಕ್ಷಾ ಮತ್ತು ಪಾರ್ಥ ಮದುವೆಯಾಗುವುದು ಜೈದೇವ್‌ಗೆ ಇಷ್ಟವಿರಲಿಲ್ಲ. ಇದೇ ಕಾರಣದಿಂದ ಅಪೇಕ್ಷಾನ ಸಾಯಿಸಲು ರೌಡಿಗಳನ್ನು ಬಿಟ್ಟಿದ್ದ. ಈ ಸಮಯದಲ್ಲಿ ಪಾರ್ಥ ಒಳ್ಳೆ ಹೀರೋ ರೀತಿ ಫೈಟ್ ಮಾಡಿ ರೌಡಿಗಳಿಂದ ಪಾರಾಗಿದ್ದ. ಆ ಸಂದರ್ಭದಲ್ಲಿ ಸಮರಕ್ಕೆ ಜೈದೇವ್ ಎಂಟ್ರಿ ನೀಡಿದ್ದ. ಇಬ್ಬರನ್ನೂ ಸಾಯಿಸುವೆ ಎಂದು ತನ್ನ ತಮ್ಮನನ್ನೇ ಸಾಯಿಸಲು ಮುಂದಾಗಿದ್ದ. ಈ ಸಮಯದಲ್ಲಿ ಗೌತಮ್ ಎಂಟ್ರಿಯಾಗಿ ಪಾರ್ಥ ಮತ್ತು ಅಪೇಕ್ಷಾ ಬಚಾವ್ ಆಗಿದ್ದರು. ಬಳಿಕ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ಈ ರೌಡಿಗಳಲ್ಲಿ ಒಬ್ಬಾತ ಗೌತಮ್ ಕೈಗೆ ಸಿಕ್ಕಿಬಿದ್ದಿದ್ದ. ಆತನನ್ನು ಆನಂದ್ ಬಾಯಿಬಿಡಿಸಿದಾಗ ಸತ್ಯ ಹೊರಬಂದಿತ್ತು. ಈ ಎಲ್ಲಾ ಘಟನೆಗಳಿಗೆ ಜೈದೇವ್ ಕಾರಣ ಎಂಬ ವಿಚಾರ ಗೊತ್ತಾಗಿತ್ತು. ಆದರೆ, ಈ ವಿಚಾರವನ್ನು ಗೌತಮ್‌ಗೆ ಹೇಳುವ ಧೈರ್ಯ ಆನಂದ್‌ಗೆ ಇರಲಿಲ್ಲ. ಜೈದೇವ್‌ನನ್ನು ಕರೆದು ಬುದ್ದಿ ಹೇಳಿದ್ದ. ಜೈದೇವ್‌ನ ಕಪಾಳಕ್ಕೆ ಹೊಡೆದು ಎಚ್ಚರಿಕೆ ನೀಡಿದ್ದರು ಆನಂದ್.
ಆನಂದ್ ಹೇಳಿದ ಸ್ಥಳಕ್ಕೆ ಜೈದೇವ್ ಬರುತ್ತಾನೆ. ಎದುರು ನಿಂತ ಜೈದೇವ್‌ಗೆ "ನಿನ್ನತ್ರ ಒಂದು ಪ್ರಮುಖ ವಿಷಯ ಮಾತನಾಡಬೇಕಿತ್ತು" ಎಂದು ಕೆನ್ನೆಗೆ ಚಟೀರ್ ಎಂದು ಹೊಡೆಯುತ್ತಾನೆ. "ಅಮಾಯಕನ ರೀತಿ ಪೋಸ್ ನೀಡ್ತಾ ಇದ್ದೀಯ. ನಿನ್ನ ಬಗ್ಗೆ ಎಲ್ಲಾ ತಿಳಿದುಕೊಂಡು ಬಂದಿದ್ದೇನೆ" ಎಂದು ಅಬ್ಬರಿಸುತ್ತಾನೆ. "ಸ್ವಲ್ಪವಾದರೂ ಮನುಷ್ಯತ್ವ ಬೇಡ್ವ. ಹುಡುಗಾಟ ಆಡ್ತಾ ಇದ್ದೀಯ. ನಿನ್ನ ಅಣ್ಣ ಬೆಟ್ಟದ್ದಷ್ಟು ಜೀವ ಇಟ್ಟುಕೊಂಡಿದ್ದಾನೆ. ಪಾರ್ಥ ಮತ್ತು ಅಪೇಕ್ಷಾರನ್ನು ಸುಪಾರಿ ಕೊಟ್ಟು ಕೊಲ್ಲಲು ಹೊರಟಿದ್ದೀಯಲ್ವ. ನಿನಗೆ ಹೇಗೆ ಮನಸ್ಸು ಬಂತು?" ಎಂದು ಕೇಳಿದಾಗ ಜೈದೇವ್‌ಗೆ ಶಾಕ್ ಆಗುತ್ತದೆ. "ಕೊಲ್ಲೋ ಕೈಗಿಂತ ಕಾಯೋ ಕೈಗೆ ಪವರ್ ಜಾಸ್ತಿ. ಅದು ಒಂದಲ್ಲ ರೀತಿ ನಮ್ಮನ್ನು ಕಾಡುತ್ತದೆ" ಎಂದು ಆನಂದ್ ಹೇಳುತ್ತಾನೆ. ಲೋಕಿನೇ ಬಾಯಿಬಿಟ್ಟ ವಿಚಾರ ಜೈದೇವ್‌ಗೆ ತಿಳಿಯುತ್ತದೆ. ಈ ವಿಷಯ ಬಿಗ್‌ಬ್ರದರ್‌ಗೆ ಗೊತ್ತಿಲ್ಲ ಕಣೋ. ಅವನು ಎದೆ ಹೊಡೆದು ಸಾಯ್ತಾನೆ. ಆದರೆ, ಇದೇ ರೀತಿ ಮುಂದುವರೆದ್ರೆ ಒಂದಲ್ಲ ಒಂದು ದಿನ ಹೇಳ್ತಿನಿ ಎಂದು ಎಚ್ಚರಿಕೆ ನೀಡುತ್ತಾನೆ. ಇದೀಗ ಆನಂದ್‌ನನ್ನೇ ಮುಗಿಸಲು ಜೈದೇವ್ ಮುಂದಾಗಿದ್ದಾನೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)