ಜೈದೇವ್‌ ಕುತಂತ್ರಕ್ಕೆ ಆಸ್ಪತ್ರೆಯಲ್ಲಿರುವ ಮಲ್ಲಿಯ ಗೆಳತಿ ನರ್ಸ್‌ ಬ್ರೇಕ್‌ ಹಾಕ್ತಾಳ? ಅಮೃತಧಾರೆ ಧಾರಾವಾಹಿಯ ಗುರುವಾರದ ಕಥೆ-televison news amruthadhare serial today episode malli in hospital the arrival of a new doctor worries jaydev pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ ಕುತಂತ್ರಕ್ಕೆ ಆಸ್ಪತ್ರೆಯಲ್ಲಿರುವ ಮಲ್ಲಿಯ ಗೆಳತಿ ನರ್ಸ್‌ ಬ್ರೇಕ್‌ ಹಾಕ್ತಾಳ? ಅಮೃತಧಾರೆ ಧಾರಾವಾಹಿಯ ಗುರುವಾರದ ಕಥೆ

ಜೈದೇವ್‌ ಕುತಂತ್ರಕ್ಕೆ ಆಸ್ಪತ್ರೆಯಲ್ಲಿರುವ ಮಲ್ಲಿಯ ಗೆಳತಿ ನರ್ಸ್‌ ಬ್ರೇಕ್‌ ಹಾಕ್ತಾಳ? ಅಮೃತಧಾರೆ ಧಾರಾವಾಹಿಯ ಗುರುವಾರದ ಕಥೆ

Amruthadhare Serial Today Episode: ಮಲ್ಲಿಯ ಆರೋಗ್ಯದ ಕುರಿತು ಸೆಕೆಂಡ್‌ ಒಪಿನಿಯನ್‌ ಪಡೆಯಲು ಡಾಕ್ಟರ್‌ ಇಂದುಮತಿ ಬಂದಿರುವುದು ಜೈದೇವ್‌ಗೆ ಆತಂಕ ತರುತ್ತದೆ. ಇನ್ನೊಂದೆಡೆ ಮಲ್ಲಿಯ ಗೆಳತಿಯೊಬ್ಬಳು ನರ್ಸ್‌ ಆಗಿ ಅದೇ ಆಸ್ಪತ್ರೆಯಲ್ಲಿದ್ದಾಳೆ. ಇದು ಮಲ್ಲಿ ಬದುಕಿಗೆ ನೆರವಾಗುವ ಸೂಚನೆ.

ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ
ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ

Amruthadhare Serial Today Episode: ಆಸ್ಪತ್ರೆಯಲ್ಲಿ ಇರುವ ಗೌತಮ್‌ಗೆ ಆನಂದ್‌ ಕರೆ ಮಾಡುತ್ತಾನೆ. ಮಲ್ಲಿ ವಿಚಾರ ಬೇಸರದಲ್ಲಿ ಮಾತನಾಡುತ್ತಾರೆ. ಮಲ್ಲಿಗೆ ಹೀಗೆ ಆಗಿರುವುದಕ್ಕೆ, ಮಗು ಕಳೆದುಕೊಂಡಿರುವುದಕ್ಕೆ ದುಃಖದಲ್ಲಿ ಗೌತಮ್‌ ಮಾತನಾಡುತ್ತಾರೆ. ಭೂಮಿಕಾಳ ಮುಂದೆ ಜೈದೇವ್‌ ಕೋಪದಲ್ಲಿ ಕುಳಿತಿದ್ದಾನೆ. ಭೂಮಿಕಾಳನ್ನು ಆಸ್ಪತ್ರೆಯಿಂದ ಸಾಗ ಹಾಕಲು ಪ್ರಯತ್ನಿಸಿದ್ದು ವಿಫಲವಾಗುತ್ತದೆ. ಭೂಮಿಕಾಳ ಮುಂದೆ ಮಲ್ಲಿಯ ಆರೋಗ್ಯದ ಕುರಿತು ಕಾಳಜಿಯ ಮಾತನಾಡುತ್ತಾನೆ. ಮಲ್ಲಿಗೆ ಡೋಸ್‌ ಕೊಟ್ಟಿರುವ ಕಾರಣ ಆಕೆ ಎದ್ದೇಳುವುದಿಲ್ಲ ಎಂದು ಆತನಿಗೆ ಗೊತ್ತು. ಇದೇ ಸಮಯದಲ್ಲಿ ನರ್ಸ್‌ ಮಲ್ಲಿಗೆ ಡೋಸ್‌ ಕೊಟ್ಟಿರುತ್ತಾರೆ. ಇದೇ ಸಮಯದಲ್ಲಿ ಆಸ್ಪತ್ರೆಗೆ ಹೋಗಬಯಸಿದ್ದ ಪಾರ್ಥನ ಮನಸ್ಸು ಬದಲಾಯಿಸಿ ಅಪೇಕ್ಷಾ ಸುತ್ತಾಡಲು ಹೊರಗೆ ಹೊರಟಿದ್ದಾರೆ. ಮಲ್ಲಿ ಆಸ್ಪತ್ರೆಯಲ್ಲಿದ್ದಾಗ ಹೊರಗೆ ಸುತ್ತಾಡುವ ಮನಸ್ಸು ಅಪೇಕ್ಷಾಳಿಗೆ.

ಮಲ್ಲಿಯನ್ನು ಡಾಕ್ಟರ್‌ ಚೆಕ್‌ ಮಾಡುತ್ತಿದ್ದಾರೆ. ಪ್ರಜ್ಞೆ ಬಂತಾ ಎಂದು ನರ್ಸ್‌ ಬಳಿಯಲ್ಲಿ ಡಾಕ್ಟರ್‌ ಕೇಳುತ್ತಾರೆ. ಇಲ್ಲ ಎನ್ನುತ್ತಾಳೆ. "ಮಲ್ಲಿಯ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಆಪರೇಷನ್‌ ಮಾಡಬೇಕಾಗುತ್ತದೆ" ಎಂದು ಡಾಕ್ಟರ್‌ ಜೈದೇವ್‌ ಮತ್ತು ಭೂಮಿಕಾಗೆ ತಿಳಿಸುತ್ತಾರೆ. ಜೈದೇವ್‌ ಗೋಳಿನ ನಾಟಕ ಮುಂದುವರೆಸುತ್ತಾನೆ. ಮಲ್ಲಿಗೆ ಆಪರೇಷನ್‌ ಮಾಡಬೇಕಾಗಬಹುದು ಎಂದು ಗೌತಮ್‌ಗೆ ಡಾಕ್ಟರ್‌ ಹೇಳಿರುವ ವಿಚಾರವನ್ನು ಭೂಮಿಕಾ ಹೇಳುತ್ತಾರೆ. "ನನಗೆ ಭಯವಾಗುತ್ತದೆ, ನೀವೂ ಆಸ್ಪತ್ರೆಗೆ ಬನ್ನಿ" ಎಂದು ಭೂಮಿಕಾ ಹೇಳಿದಾಗ ಆಸ್ಪತ್ರೆಗೆ ಬರಲು ಗೌತಮ್‌ ಒಪ್ಪುತ್ತಾರೆ.

ಆನಂದ್‌ ಮತ್ತು ಅಪರ್ಣಾ ಮನೆಯಲ್ಲಿ ಮಾತನಾಡುತ್ತಿದ್ದಾರೆ. "ಅಪೇಕ್ಷಾ ಮೊದಲಿನಂತೆ ಇಲ್ಲ. ತುಂಬಾ ಬದಲಾಗಿದ್ದಾಳೆ" ಎಂದು ಅಪರ್ಣಾ ಹೇಳುತ್ತಾಳೆ. "ಮೊನ್ನೆ ಸೀಮಂತದ ದಿನ ಭೂಮಿಕಾ ಜತೆ ಇರುತ್ತಿರಲಿಲ್ಲ. ತುಂಬಾ ಡಿಸ್ಟೆನ್ಸ್‌ ಮೇಂಟೆನ್‌ ಮಾಡುತ್ತಿದ್ದಳು" ಎಂದು ಹೇಳುತ್ತಾಳೆ. "ಅವಳು ಅತ್ತಿಗೆ ಜತೆ ಇರಲಿಲ್ಲ ಎಂದುಕೊಂಡರೆ ಅವರಿಬ್ಬರು ಸರಿ ಇಲ್ಲ ಎಂದರ್ಥವೇ" ಎಂದು ಆನಂದ್‌ ಹೇಳುತ್ತಾನೆ. "ನನಗೆ ಅವಳ ಮುಖ ನೋಡಿದರೆ ಗೊತ್ತಾಗುತ್ತದೆ. ಅಪೇಕ್ಷಾ ಮಲ್ಲಿಯನ್ನೂ ನೋಡಲು ಹೋಗಿಲ್ಲ" ಎಂದು ಹೇಳುತ್ತಾಳೆ. ಒಂದಿಷ್ಟು ಮಾತುಕತೆ ನಡೆಯುತ್ತದೆ.

ಇದೇ ಸಮಯದಲ್ಲಿ ಗೌತಮ್‌ ಇಂದುಮತಿ ಎಂಬ ಪರಿಣಿತ ವೈದ್ಯರನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತಾರೆ. ಇದನ್ನು ನೋಡಿ ಜೈದೇವ್‌ಗೆ ಆತಂಕವಾಗುತ್ತದೆ. "ಸೆಕೆಂಡ್‌ ಒಪಿನಿಯನ್‌ಗೆ ಇವರು ಒಮ್ಮೆ ಮಲ್ಲಿಯನ್ನು ಚೆಕ್‌ ಮಾಡಬಹುದೇ" ಎಂದು ಕೇಳುತ್ತಾರೆ. ನರ್ಸ್‌ಗೆ ಟೆನ್ಷನ್‌ ಆಗುತ್ತದೆ. ಆ ಆಸ್ಪತ್ರೆಯ ಡಾಕ್ಟರ್‌ ಓಕೆ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಇಂದುಮತಿ ಡಾಕ್ಟರ್‌ ಬಂದು ಮಲ್ಲಿಯನ್ನು ಟೆಸ್ಟ್‌ ಮಾಡುತ್ತಾರೆ. ಜೈದೇವ್‌ನ ಆತಂಕ ಹೆಚ್ಚುತ್ತದೆ. ಇದಾದ ಬಳಿಕ ಡಾಕ್ಟರ್‌ ಬಂದು ಗೌತಮ್‌ಗೆ ವಿಚಾರ ತಿಳಿಸುತ್ತಾರೆ. "ಈ ಆಸ್ಪತ್ರೆಯಲ್ಲಿ ಸರಿಯಾದ ಟ್ರೀಟ್‌ಮೆಂಟ್‌ ನೀಡ್ತಾ ಇದ್ದಾರೆ. ಆದರೂ ಅವರಿಗೆ ಇನ್ನೂ ಯಾಕೆ ಪ್ರಜ್ಞೆ ಬಂದಿಲ್ಲ ಎಂದು ಅರ್ಥ ಆಗುತ್ತಿಲ್ಲ. ಇಟ್‌ ಲುಕ್‌ ಸ್ಟ್ರೇಂಜ್‌. ಇವತ್ತು ಒಂದು ದಿನ ನೋಡೋಣ. ಪ್ರಜ್ಞೆ ಬಂದಿಲ್ಲ ಅಂದ್ರೆ ಇವರು ಹೇಳಿದಂತೆ ಆಪರೇಷನ್‌ ಮಾಡಬೇಕಾಗುತ್ತದೆ" ಎಂದು ಇಂದುಮತಿ ಡಾಕ್ಟರ್‌ ಹೇಳುತ್ತಾರೆ.

ಇದಾದ ಬಳಿಕ ಜೈದೇವ್‌ ನರ್ಸ್‌ನ ಭೇಟಿಯಾಗುತ್ತಾರೆ. "ನೀವು ಕೊಟ್ಟ ಮೆಡಿಸಿನ್‌ನನ್ನು ಯಾವ ಡಾಕ್ಟರ್‌ಗೆ ಪತ್ತೆ ಹಚ್ಚಲು ಸಾಧ್ಯ ಇಲ್ಲ ಅಲ್ವಾ. ಎಲ್ಲಾದರೂ ಗೊತ್ತಾದ್ರೆ ಜೈಲಲ್ಲಿ ಮೊದಲು ನೀವು ಇರ್ತಿರಿ, ನಂತರ ನಾನಿರ್ತಿನಿ" ಎಂದು ಕೇಳುತ್ತಾನೆ. "ನೀವು ಏನೂ ಹೆದರಬೇಡಿ, ಪೋಸ್ಟ್‌ ಮಾರ್ಟಮ್‌ನಲ್ಲೂ ಗೊತ್ತಾಗದ ಹಾಗೆ ಔಷಧ ಕೊಡ್ತಾ ಇದ್ದೀನಿ" ಎಂದು ಹೇಳುತ್ತಾಳೆ. ಖುಷಿಯಿಂದ ಸಿಸ್ಟರ್‌ಗೆ ಒಂದಿಷ್ಟು ಹಣ ಕೊಡುತ್ತಾನೆ.

ಪಾರ್ಕ್‌ನಲ್ಲಿ ಸುತ್ತಾಡುವ ಸಮಯದಲ್ಲಿ ಪಾರ್ಥನಿಗೆ ಭೂಮಿಕಾ ಕಾಲ್‌ ಮಾಡುತ್ತಾರೆ. ಯಾಕೆ ಆಸ್ಪತ್ರೆಗೆ ಬಂದಿಲ್ಲ ಎಂದು ಕೇಳುತ್ತಾರೆ. ಅಪೇಕ್ಷಾಗೆ ತಲೆ ನೋವು ಇತ್ತು ಎನ್ನುತ್ತಾನೆ. ಇದಾದ ಬಳಿಕ ಅಪೇಕ್ಷಾಳ ಬಳಿ ಪಾರ್ಥ ಬೇಸರ ತೋಡುತ್ತಾನೆ. "ನೀವು ಈ ನಡುವೆ ನನ್ನ ಮಾತೇ ಕೇಳುವುದಿಲ್ಲ. ಆಸ್ಪತ್ರೆಗೆ ಹೋಗಬೇಕಿತ್ತು" ಎಂದು ಹೇಳುತ್ತಾನೆ.

ಶಕುಂತಲಾದೇವಿ ಖುಷಿಯಲ್ಲಿದ್ದಾರೆ. ಮಲ್ಲಿಗೆ ಆಪರೇಷನ್‌ ಮಾಡ್ತಾರೆ, ಉಳಿಯೋದು ಕಷ್ಟ ಎಂಬ ಸುದ್ದಿ ಕೇಳಿ ಅವರಿಗೆ ಸಂತೋಷವಾಗಿದೆ. ಮಲ್ಲಿ ಸತ್ತರೆ ಜೈದೇವ್‌ಗೆ ಇನ್ನೊಂದು ಮದುವೆ ಮಾಡ್ತಿನಿ ಎನ್ನುತ್ತಾಳೆ.

ಮಲ್ಲಿಯ ಗೆಳತಿಯೊಬ್ಬಳು ಈ ಆಸ್ಪತ್ರೆಯ ನರ್ಸ್‌!

ಡಾಕ್ಟರ್‌ ಮಲ್ಲಿಯನ್ನು ಟೆಸ್ಟ್‌ ಮಾಡುತ್ತಿದ್ದಾರೆ. ಆಗ ಅಲ್ಲಿ ಹೊಸ ನರ್ಸ್‌ ಇದ್ದಾರೆ. ಮಲ್ಲಿಯನ್ನು ನೋಡಿ "ಮಲ್ಲಿ" ಎನ್ನುತ್ತಾಳೆ. ಇವಳು ನಿನಗೆ ಗೊತ್ತಾ ಎಂದು ಡಾಕ್ಟರ್‌ ಕೇಳುತ್ತಾರೆ. "ಹೌದು ಡಾಕ್ಟರ್‌, ಇವಳು ನನ್ನ ಫ್ರೆಂಡ್‌" ಎನ್ನುತ್ತಾಳೆ. ಡಾಕ್ಟರ್‌ ಮಲ್ಲಿಗೆ ಆದ ಸ್ಥಿತಿಯ ಬಗ್ಗೆ ಹೇಳುತ್ತಾರೆ. "ಆಪರೇಷನ್‌ ಮಾಡಿದ್ರೂ ಬದುಕುವ ಚಾನ್ಸ್‌ ಫಿಫ್ಟಿ ಫಿಫ್ಟಿ" ಎನ್ನುತ್ತಾರೆ. ಇದಾದ ಬಳಿಕ ಗೌತಮ್‌ಗೆ ಡಾಕ್ಟರ್‌ "ಮಲ್ಲಿಗೆ ಇಂಪ್ರೂವ್‌ಮೆಂಟ್‌ ಇಲ್ಲ. ಆಪರೇಷನ್‌ ಮಾಡಬೇಕಾಗುತ್ತದೆ" ಎಂದು ಹೇಳುತ್ತಾರೆ. ಎಲ್ಲರಿಗೂ ಆತಂಕವಾಗುತ್ತದೆ. "ಬೇಡ ಡಾಕ್ಟರ್‌, ನಾವು ವೇಯ್ಟ್‌ ಮಾಡ್ತಿವಿ. ಅವಸರಕ್ಕೆ ಬಿದ್ದು ಆಪರೇಷನ್‌ ಮಾಡೋದು ಬೇಡ" ಎಂದು ಗೌತಮ್‌ ಹೇಳುತ್ತಾರೆ. "ಈಗ ಹೀಗೆ ಹೇಳ್ತಿರಿ. ಆಮೇಲೆ ನಿಮಗೂ ಅವರನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ. ಛಾನ್ಸ್‌ ತೆಗೆದುಕೊಳ್ಳುವುದು ಉತ್ತಮ. ಬದುಕುವ ಛಾನ್ಸ್‌ ಫಿಫ್ಟಿ ಪರ್ಸೆಂಟ್‌ ಇದೆ ಅಲ್ವಾ ಯೋಚನೆ ಮಾಡಿ" ಎಂದು ಡಾಕ್ಟರ್‌ ಹೇಳುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

mysore-dasara_Entry_Point