ಗೆಳತಿ ದೆಸೆಯಿಂದ ಬಚಾವಾದ ಮಲ್ಲಿ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌; ಜೈದೇವ್-‌ ದಿಯಾ ಅಕ್ರಮ ಸಂಬಂಧ ಬಹಿರಂಗ ಸನ್ನಿಹಿತ?- ಅಮೃತಧಾರೆ ಧಾರಾವಾಹಿ-televison news amruthadhare serial today episode malli regains consciousness shifted to home jaidev diya relationship ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಗೆಳತಿ ದೆಸೆಯಿಂದ ಬಚಾವಾದ ಮಲ್ಲಿ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌; ಜೈದೇವ್-‌ ದಿಯಾ ಅಕ್ರಮ ಸಂಬಂಧ ಬಹಿರಂಗ ಸನ್ನಿಹಿತ?- ಅಮೃತಧಾರೆ ಧಾರಾವಾಹಿ

ಗೆಳತಿ ದೆಸೆಯಿಂದ ಬಚಾವಾದ ಮಲ್ಲಿ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌; ಜೈದೇವ್-‌ ದಿಯಾ ಅಕ್ರಮ ಸಂಬಂಧ ಬಹಿರಂಗ ಸನ್ನಿಹಿತ?- ಅಮೃತಧಾರೆ ಧಾರಾವಾಹಿ

Amruthadhare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಮಲ್ಲಿಗೆ ಪ್ರಜ್ಞೆ ಬಂದಿದೆ. ಈಕೆ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌ ಆಗಿದ್ದಾಳೆ. ಮಗುವನ್ನು ಕಳೆದುಕೊಂಡ ದುಃಖದಲ್ಲಿರುವ ಮಲ್ಲಿಗೆ ಜೈದೇವ್‌ ಮತ್ತು ದಿಯಾಳ ಸಂಬಂಧ ನೆನಪಿಗೆ ಬಂದಿದೆ.

ಗೆಳತಿ ದೆಸೆಯಿಂದ ಬಚಾವಾದ ಮಲ್ಲಿ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌ - ಅಮೃತಧಾರೆ ಸೀರಿಯಲ್‌ ಸ್ಟೋರಿ
ಗೆಳತಿ ದೆಸೆಯಿಂದ ಬಚಾವಾದ ಮಲ್ಲಿ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌ - ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಎಲ್ಲರೂ ಆಸ್ಪತ್ರೆಯಲ್ಲಿದ್ದಾರೆ. ಮಲ್ಲಿಗೆ ಆಪರೇಷನ್‌ ಮಾಡುವ ಕುರಿತು ಜೈದೇವ್‌ ನಾಟಕ ಮುಂದುವರೆಯುತ್ತದೆ. "ಫಿಫ್ಟಿ ಫಿಫ್ಟಿ ಚಾನ್ಸ್‌ ದೊರಕಿದರೆ ಆಪರೇಷನ್‌ ಮಾಡೋದು ಬೇಡ. ಮಲ್ಲಿ ನನ್ನ ಕಣ್ಣ ಮುಂದೆ ಇದ್ರೆ ಸಾಕು" ಎಂದು ಜೈದೇವ್‌ ಹೇಳುತ್ತಾನೆ. "ಆಪರೇಷನ್‌ ಅವಾಯ್ಡ್‌ ಮಾಡಲು ಆಗುತ್ತಾ" ಎಂದು ಗೌತಮ್‌ ಕೇಳುತ್ತಾರೆ. ಅದಕ್ಕೆ ನಿಮ್ಮ ಇಂದುಮತಿ ಡಾಕ್ಟರ್‌ನ ಒಮ್ಮೆ ಕರೆಸಿ, ಒಮ್ಮೆ ಡಿಸ್ಕಷನ್‌ ಮಾಡಿ ನಿರ್ಧಾರ ತೆಗೆದುಕೊಳ್ಳೋಣ" ಎಂದು ಡಾಕ್ಟರ್‌ ಹೇಳುತ್ತಾರೆ. ಇನ್ನೊಂದೆಡೆ ಆನಂದ್‌ ಮತ್ತು ಅಪರ್ಣಾ ಮಲ್ಲಿ ಆಪರೇಷನ್‌ ಸಕ್ಸಸ್‌ ಆಗಲಿ ಎಂದು ತುಪ್ಪದ ದೀಪ ಹಚ್ಚುತ್ತಾರೆ.

ಜೈದೇವ್‌ ತುಂಬಾ ಖುಷಿಯಾಗಿ ನರ್ಸ್‌ ಮುಂದೆ ಬರುತ್ತಾನೆ. ಯಾಕೆ ಸರ್‌ ಇಷ್ಟು ಖುಷಿಯಾಗಿದ್ದೀರ. ನಿಮ್ಮ ಹೆಂಡತಿ ಹೋಗಿಬಿಟ್ರ ಎಂದು ಕೇಳುತ್ತಾಳೆ. "ಡಾಕ್ಟರ್‌ ಮಲ್ಲಿಗೆ ಟಿಕೆಟ್‌ ತೆಗೆದುಕೊಳ್ಳುತ್ತಿದ್ದಾರೆ" ಎಂದು ಖುಷಿಯಿಂದ ಆಪರೇಷನ್‌ ಸಂಗತಿ ಹೇಳುತ್ತಾನೆ. ಆಪರೇಷನ್‌ ವಿಷಯದಲ್ಲಿ ನರ್ಸ್‌ ಹೇಗೆ ಇರಬೇಕೆಂದು ಜೈದೇವ್‌ ಟಿಪ್ಸ್‌ ನೀಡುತ್ತಾನೆ. ಇದೇ ಸಮಯದಲ್ಲಿ ದೂರದಲ್ಲಿದ್ದ ಮಲ್ಲಿ ಗೆಳತಿ ನರ್ಸ್‌ಗೆ ಈ ಮಾತು ಕೇಳಿಸುತ್ತದೆ. "ಫಿಫ್ಟಿ ಫಿಫ್ಟಿ ಪರ್ಸೆಂಟ್‌ನಲ್ಲಿರುವ ಬಾಡಿ ಹಂಡ್ರೆಂಡ್‌ ಪರ್ಸೆಂಟ್‌ ಶವವಾಗಬೇಕು" ಎಂದು ಜೈದೇವ್‌ ಹೇಳುವುದನ್ನು ಕೇಳಿ ಮಲ್ಲಿ ಫ್ರೆಂಡ್‌ಗೆ ಅಚ್ಚರಿಯಾಗುತ್ತದೆ. ಈ ಮೂಲಕ ಆಸ್ಪತ್ರೆಯಲ್ಲಿ ಜೈದೇವ್‌ ಮತ್ತು ಸಿಸ್ಟರ್‌ ಮಾಡುವ ಕುತಂತ್ರ ತಿಳಿದುಕೊಳ್ಳುತ್ತಾಳೆ. ಮಲ್ಲಿ ಫ್ರೆಂಡ್‌ ಅಲ್ಲಿಂದ ಹೋಗುತ್ತಾಳೆ. ಈ ಸಮಯದಲ್ಲಿ ಜೈದೇವ್‌ "ನಿಮ್ಮನ್ನು ಸಿಸ್ಟರ್‌ ಎಂದು ಹೇಳಲು ಬೇಜಾರಾಗುತ್ತದೆ" ಎಂದೆಲ್ಲ ಹೇಳುತ್ತಾನೆ. ಅದಕ್ಕೆ ತಕ್ಕಂತೆ ಸಿಸ್ಟರ್‌ "ಹೋಗಿ ಸರ್‌, ನೀವು ಒಮ್ಮೊಮ್ಮೆ ನಾಟಿಯಾಗಿ ಬಿಡ್ತಿರಾ" ಎನ್ನುತ್ತಾಳೆ. ಈ ಮೂಲಕ ಈಕೆಯನ್ನೂ ತನ್ನ ಬಲೆಗೆ ಬೀಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ನಾವಿಬ್ಬರು ಹೋದ ಜನ್ಮದಲ್ಲಿ ಕ್ರೈಮ್‌ ಪಾಟ್ನರ್‌ ಆಗಿದ್ದೇವೆ ಎನಿಸುತ್ತೇವೆ, ಈಗ ಕೊನೆಯದಾಗಿ ಡೋಸ್‌ ನೀಡಿ. ಅವಳು ಆಪರೇಷನ್‌ ತನಕ ಎಚ್ಚರವಾಗೋದು ಬೇಡ ಎನ್ನುತ್ತಾನೆ.

ಇಂದುಮತಿ ಡಾಕ್ಟರ್‌ ಮತ್ತು ಆಸ್ಪತ್ರೆ ಡಾಕ್ಟರ್‌ ಇಬ್ಬರೂ ಚರ್ಚಿಸುತ್ತಿದ್ದಾರೆ. "ಗೌತಮ್‌ ಅವರೇ ಡಾಕ್ಟರ್‌ ಸಜೆಸ್ಟ್‌ ಮಾಡಿದ್ದು ಸರಿಯಾಗಿಯೇ ಇದೆ. ಮಲ್ಲಿಯವರಿಗೆ ಆಪರೇಷನ್‌ ಮಾಡೋದು ಉತ್ತಮ. ಮಲ್ಲಿಗೆ ಪ್ರಜ್ಞೆ ಬರುವ ಯಾವುದೇ ಚಾನ್ಸ್‌ ಇಲ್ಲ" ಎಂದು ಇಂದುಮತಿ ಹೇಳುತ್ತಾರೆ. ಇದಾದ ಬಳಿಕ ಜೈದೇವ್‌ ಮತ್ತು ಇತರರು ಆಪರೇಷನ್‌ಗೆ ಒಪ್ಪುತ್ತಾರೆ. ಈ ಸಮಯದಲ್ಲಿ ಜೈದೇವ್‌ನ ಭಾವುಕ ನಾಟಕೀಯ ಮಾತುಗಳು ಇರುತ್ತವೆ.

ಮಲ್ಲಿಗೆ ಪ್ರಜ್ಞೆ ಬಂತು

ಮಲ್ಲಿಯನ್ನು ವೈದ್ಯರು ಟೆಸ್ಟ್‌ ಮಾಡುತ್ತಿದ್ದಾರೆ. ರಿಪೋರ್ಟ್‌ ಚೆಕ್‌ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಅಲ್ಲಿ ಮಲ್ಲಿ ಗೆಳತಿಯೂ ಇದ್ದಾರೆ. ಇನ್ನೊಂದೆಡೆ ಸ್ಟ್ರೆಚರ್‌ ತೆಗೆದುಕೊಂಡು ಹೋಗುವವರನ್ನು ನೋಡುತ್ತ ಮನದಲ್ಲಿ ಜೈದೇವ್‌ "ಬರುವಾಗ ಮಲ್ಲಿ ಬಾಡಿ ಎತ್ತಿಕೊಂಡು ಬನ್ನಿ" ಎನ್ನುತ್ತಾನೆ. ಆನಂದ್‌ ಮತ್ತು ಅಪರ್ಣಾ ತನ್ನ ಮನೆಯಲ್ಲಿ ತುಪ್ಪದ ದೀಪ ಹಚ್ಚುತ್ತಿದ್ದಾರೆ. ಇದೇ ಸಮಯದಲ್ಲಿ ಡಾಕ್ಟರ್‌ ಬನ್ನಿ ಈಕೆಯನ್ನು ಆಪರೇಷನ್‌ ಥಿಯೇಟರ್‌ಗೆ ಶಿಫ್ಟ್‌ ಮಾಡೋಣ ಎನ್ನುತ್ತಾರೆ. ಆಕೆಯ ಹತ್ತಿರ ಬಂದಾಗ ಮಿಸುಕಾಟದ ಅನುಭವವಾಗುತ್ತದೆ. ಮಲ್ಲಿಗೆ ಎಚ್ಚರವಾಗಿದೆ. ನಿಧಾನವಾಗಿ ಕೈಬೆರಳು ಆಡಿಸುತ್ತಿದ್ದಾಳೆ. ಇದನ್ನು ನೋಡಿ ಇಂದುಮತಿ ಡಾಕ್ಟರ್‌ ಖುಷಿಯಾಗಿದ್ದಾರೆ. ಒಂದ್ನಿಮಿಷ, ಮಲ್ಲಿಗೆ ಎಚ್ಚರ ಬಂದಿದೆ ಎಂದು ಡಾಕ್ಟರ್‌ ಹೇಳಿದಾಗ ಮಲ್ಲಿ ಗೆಳತಿ ನರ್ಸ್‌ ಮತ್ತು ಇತರರು ಖುಷಿಯಾಗುತ್ತಾರೆ.

"ಪ್ರಜ್ಞೆ ಬರಲು ಹೇಗೆ ಸಾಧ್ಯ, ನಾನು ಮತ್ತಿನ ಇಂಜೆಕ್ಷನ್‌ ಕೊಟ್ಟಿದ್ದೇನಲ್ವ" ಎಂದು ಸಿಸ್ಟರ್‌ ಯೋಚಿಸುತ್ತಾಳೆ. ಇದೇ ಸಮಯದಲ್ಲಿ ಮಲ್ಲಿ ಗೆಳತಿ ನರ್ಸ್‌ ಮುಖದಲ್ಲಿ ನಗು ಮೂಡುತ್ತದೆ. ಆಕೆಯೇ ಮತ್ತಿನ ಔಷಧವನ್ನು ಬದಲಿಸಿ ಇಟ್ಟಿರುತ್ತಾಳೆ. ಈ ಮೂಲಕ ಆಸ್ಪತ್ರೆಯಲ್ಲಿರುವ ತನ್ನ ಗೆಳತಿಯನ್ನು ರಕ್ಷಿಸಿದ್ದಾಳೆ.

ಖಾಲಿ ಸ್ಟ್ರೆಚರ್‌ ವಾಪಸ್‌ ಕೊಂಡೊಯ್ಯುವುದನ್ನು ನೋಡಿದಾಗ ಜೈದೇವ್‌ಗೆ ಅಚ್ಚರಿಯಾಗುತ್ತದೆ . ಆಗ ಅಲ್ಲಿಗೆ ಬಂದ ಡಾಕ್ಟರ್‌ ಮಲ್ಲಿಗೆ ಪ್ರಜ್ಞೆ ಬಂದ ವಿಚಾರ ತಿಳಿಸುತ್ತಾರೆ. "ಕಂಗ್ರಾಟ್ಸ್‌, ಮಲ್ಲಿಗೆ ಪ್ರಜ್ಞೆ ಬಂತು. ಇದು ಮಿರಾಕಲ್‌" ಎಂದು ಇಂದುಮತಿ ಡಾಕ್ಟರ್‌ ಹೇಳುತ್ತಾರೆ. ಭೂಮಿಕಾ ಮತ್ತು ಗೌತಮ್‌ ಖುಷಿಯಿಂದ ಮಲ್ಲಿಯನ್ನು ನೋಡಲು ಓಡುತ್ತಾರೆ. ಜೈದೇವ್‌ಗೆ ಟೆನ್ಷನ್‌ ಆಗಿದ್ರೂ ತೋರಿಸುವಂತೆ ಇಲ್ಲ. ಎಚ್ಚರಗೊಂಡ ಮಲ್ಲಿಯನ್ನು ಭೂಮಿಕಾ ಅಪ್ಪಿಕೊಳ್ಳುತ್ತಾರೆ. ಆಕೆಯೂ ಅಕ್ಕೋರೆ ಎಂದು ಅಳುತ್ತಾಳೆ. ಒಂದಿಷ್ಟು ಭಾವುಕ ಮಾತುಗಳು ನಡೆಯುತ್ತವೆ. ಈ ಸಮಯದಲ್ಲಿ ತನ್ನ ಅಕ್ಕಪಕ್ಕ ಮಲ್ಲಿ ನೋಡುತ್ತಾಳೆ. ಅವಳು ಮಗುವನ್ನು ಹುಡುಕುತ್ತಿದ್ದಾಳೆ. ಅಕ್ಕೋರೆ ನನ್ನ ಮಗು ಎಲ್ಲಿ ಎಂದು ಕೇಳಿದಾಗ ಎಲ್ಲರಿಗೂ ದುಃಖವಾಗುತ್ತದೆ. "ನನ್ನ ಮಗು ಎಲ್ಲಿ ಅಕ್ಕೋರೆ, ನನ್ನ ಮಗುಗೇ ಏನೂ ಆಗಿಲ್ಲ ತಾನೇ" ಎಂದೆಲ್ಲ ಕೇಳುತ್ತಾಳೆ. ಭೂಮಿಕಾಳಿಗೆ ಅಳು ಬರುತ್ತದೆ. ಗೌತಮ್‌ ಕಣ್ಣಲ್ಲೂ ಕಣ್ಣೀರು ಬರುತ್ತದೆ.

ಸ್ವಲ್ಪ ಹೊತ್ತಾದ ಬಳಿಕ ಅವಳಿಗೆ ಜೈದೇವ್‌ ಕಾಣಿಸುತ್ತಾನೆ. ಮಲ್ಲಿ ಸಮಧಾನ ಮಾಡ್ಕೋ ಎಂದು ಜೈದೇವ್‌ ಹೇಳುತ್ತಾನೆ. ಜೈದೇವ್‌ನ ಟೆನ್ಷನ್‌ನಿಂದ ನೋಡುತ್ತಾಳೆ ಮಲ್ಲಿ. ಅವಳ ಕಣ್ಣೆದುರಿಗೆ ಜೈದೇವ್‌ ದಿಯಾಳ ಜತೆ ಇದ್ದ ದೃಶ್ಯ ಮೂಡುತ್ತದೆ. ತನ್ನ ಕಣ್ಣೇದುರೇ ದಿಯಾಳಿಗೆ ಮುತ್ತು ಕೊಟ್ಟ ದೃಶ್ಯ ಕಾಣಿಸುತ್ತದೆ. ಇದೇ ಸಮಯದಲ್ಲಿ ಭೂಮಿಕಾ ಹೇಳಿದ್ದ ಬುದ್ದಿಮಾತು, ತಾನು ಎದುರುಮಾತನಾಡಿದ್ದ ಘಟನೆಗಳು ನೆನಪಿಗೆ ಬರುತ್ತವೆ. ಆಕೆಗೆ ದುಃಖ ತಡೆಯಲಾಗುತ್ತಿಲ್ಲ.

ಮಲ್ಲಿ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌

ಇನ್ನೊಂದೆಡೆ ಮನೆಹಾಳ ಮಾವ ತನ್ನ ಅಕ್ಕ ಶಕುಂತಲಾದೇವಿಯ ಬಳಿ ಬರುತ್ತಾನೆ. "ಮಲ್ಲಿ ಜೀವಂತ ಶವದಂತೆ ಮಲಗಿದ್ದಾಳೆ. ಆಪರೇಷನ್‌ ನಡೆಯಲಿದೆ" ಎಂದು ತಿಳಿಸುತ್ತಾನೆ. ಆತನಿಗೆ ಮಲ್ಲಿಗೆ ಎಚ್ಚರವಾದ ಸಂಗತಿ ತಿಳಿದಿರುವುದಿಲ್ಲ. "ಅವರೆಲ್ಲ ಮನೆಗೆ ಬಂದಾಗ ನಾವು ದುಃಖದ ಮುಖವಾಡ ಹಾಕುತ್ತ ಇರಬೇಕು" ಎಂದು ಹೇಳುತ್ತಾನೆ. ಆಗ ಶಕುಂತಲಾದೇವಿ "ಅದರ ಅವಶ್ಯಕತೆ ಇಲ್ಲ" ಎನ್ನುತ್ತಾರೆ. ಹೊರಗಿನಿಂದ ಮಲ್ಲಿಯನ್ನು ಕರೆದುಕೊಂಡು ಎಲ್ಲರೂ ಮನೆಗೆ ಬರುತ್ತಾರೆ. ಈ ಮೂಲಕ ಲೊಕೆಷನ್‌ ಆಸ್ಪತ್ರೆಯಿಂದ ಮನೆಗೆ ಶಿಫ್ಟ್‌ ಆಗಿದೆ.

ಮನೆ ಬಾಗಿಲಿಗೆ ಬಂದ ಮಲ್ಲಿಗೆ ಆರತಿ ಮಾಡುವಂತೆ ಅಜ್ಜಿ ಹೇಳುತ್ತಾರೆ. "ನನಗೆ ಇದೆಲ್ಲ ಯಾಕೆ ಅಜ್ಜಿ, ಮಗುವಿನ ಬಗ್ಗೆ ನನಗಿಂತ ನಿಮಗೆ ಹೆಚ್ಚು ಆಸೆ ಇತ್ತು. ಎಲ್ಲರಿಗೂ ನಿರಾಸೆ ಮಾಡಿದ್ದೇನೆ. ನನಗೆ ಆರತಿ ಎಲ್ಲ ಬೇಡ" ಎನ್ನುತ್ತಾಳೆ ಮಲ್ಲಿ. "ಮಗು ಬಗ್ಗೆ ಆಸೆ ಇದ್ದದ್ದು ನಿಜ, ಆದರೆ ಅದಕ್ಕಿಂತ ಮುಖ್ಯವಾಗಿ ನೀನು ಹುಷಾರಾಗಿ ಬರಬೇಕಾದದ್ದು ಮುಖ್ಯ. ಈ ಮನೆ ಸೊಸೆ ನೀನು, ಈ ಮನೆ ಸ್ವತ್ತು. ಹೀಗೆ ಆಗಿರುವುದಕ್ಕೆ ನೀನು ಬೇಜಾರು ಮಾಡಬೇಡ. ಹಣೆಬರಹಕ್ಕೆ ಹೊಣೆ ಯಾರು" ಎಂದು ಅಜ್ಜಮ್ಮ ಹೇಳಿದಾಗ ಎಲ್ಲರೂ ಭಾವುಕರಾಗುತ್ತಾರೆ. ಇದಾದ ಬಳಿಕ ಅಪೇಕ್ಷಾಳ ಬಳಿ ಆರತಿ ತರಲು ಹೇಳುತ್ತಾರೆ. ಅಪೇಕ್ಷಾ ಆರತಿ ತರುತ್ತಾಳೆ. ಭೂಮಿಕಾಳನ್ನು ಅಜ್ಜಮ್ಮ ಕರೆಯುತ್ತಾರೆ. ಭೂಮಿಕಾ ಮತ್ತು ಅಪೇಕ್ಷಾ ಆರತಿ ಮಾಡುತ್ತಾರೆ. ಇದಾದ ಬಳಿಕ ಭೂಮಿಕಾ ಮಲ್ಲಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. "ಮಲ್ಲಿ ಮಗುವನ್ನು ಕಳೆದುಕೊಂಡ ನೋವಿನಲ್ಲಿ ಇದ್ದಾಳೆ. ಅವಳು ಆ ನೋವಿನಿಂದ ಆಚೆಗೆ ಬರಬೇಕು. ಅದು ನಮ್ಮೆಲ್ಲರ ಕರ್ತವ್ಯ. ಅವಳಿಗೆ ಪಾಸಿಟಿವಿಟಿ ತುಂಬಲು ಪ್ರಯತ್ನಿಸಿ. ಅನುಕಂಪ ತೋರಿಸುವ ಬದಲು ಧೈರ್ಯ ತುಂಬೋಣ" ಎಂದು ಗೌತಮ್‌ ಎಲ್ಲರಿಗೂ ಹೇಳುತ್ತಾರೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

mysore-dasara_Entry_Point