Amruthadhaare Serial: ನವದಂಪತಿಗೆ ಸಿಗಲಿಲ್ಲ ಸದಾಶಿವ, ಅಜ್ಜಮ್ಮನ ಆಶೀರ್ವಾದ; ರೌಡಿಯ ಬಾಯಿಬಿಡಿಸಲು ಆನಂದನ ಪ್ರಯತ್ನ
Amruthadhaare serial Yesterday Episode: ಮದುವೆಯಾದ್ರೆ ಎಲ್ಲಾ ಸರಿಯಾಗಿಬಿಡುತ್ತದೆ ಎಂದುಕೊಂಡ ಪಾರ್ಥ ಮತ್ತು ಅಪೇಕ್ಷಾಗೆ ಈಗ ರಿಯಾಲಿಟಿ ಅನುಭವವಾಗುತ್ತಿದೆ. ಅಜ್ಜಮ್ಮ ಮತ್ತು ಸದಾಶಿವನ ಆಶೀರ್ವಾದ ದೊರಕುವುದಿಲ್ಲ. ಎಲ್ಲಾ ನಾನೇ ಮಾಡಿದ್ದು ಎಂದ ಗೌತಮ್ ನವದಂಪತಿಗೆ ಬೆಂಬಲವಾಗಿ ನಿಲ್ಲುತ್ತಾನೆ.
Amruthadhaare serial Yesterday Episode: ಅಪೇಕ್ಷಾ ಮತ್ತು ಪಾರ್ಥನ ಮದುವೆಯಾಗಿದೆ. ಈ ಸಮಯದಲ್ಲಿ ಗೌತಮ್ ಈ ಮದುವೆ ತಾನೇ ಮಾಡಿಸಿದ್ದು ಎಂಬ ಜವಾಬ್ದಾರಿ ಹೊರುತ್ತಾನೆ. ಇದನ್ನು ಪಾರ್ಥ ಮತ್ತು ಅಪೇಕ್ಷಾರಿಗೆ ತಿಳಿಸುತ್ತಾನೆ. ಇದಾದ ಬಳಿಕ ಅಪೇಕ್ಷಾನ ಮನೆಗೆ ಬರುತ್ತಾರೆ. ಸದಾಶಿವ, ಮಂದಾಕಿನಿ ಸೇರಿದಂತೆ ಮನೆಯವರೆಲ್ಲರೂ ಬೆಚ್ಚಿ ಬೀಳುತ್ತಾರೆ. ಈ ಸಮಯದಲ್ಲಿ ಇವರಿಬ್ಬರ ಕುರಿತು ಗೌತಮ್ ಮಾತನಾಡುತ್ತಾರೆ. "ಇವರಿಬ್ಬರನ್ನು ದೂರ ಮಾಡಿದ್ರೆ ಅವರಿಗೆ ಕಡೆತನಕ ಇದು ಕಾಡ್ತಾ ಇತ್ತು. ಅದಕ್ಕೆ ನಾನೇ ಇವರನ್ನು ಮುಂದೆ ನಿಂತು ಮದುವೆ ಮಾಡಿಸಿದೆ. ದಯವಿಟ್ಟು ಇವರಿಬ್ಬರಿಗೂ ಏನೂ ಹೇಳಬೇಡಿ. ಇವರಿಬ್ಬರ ಕುರಿತು ನಾನು ಕ್ಷಮೆ ಕೇಳ್ತಿನಿ" ಎಂದು ಗೌತಮ್ ಹೇಳುತ್ತಾರೆ. "ಇಷ್ಟೆಲ್ಲ ನಡೆಯುತ್ತ ಇರಬೇಕಾದರೆ ನನಗ್ಯಾಕೆ ಒಂದು ಮಾತು ಹೇಳಿಲ್ಲ. ಯಾಕೆ ಹೀಗೆ ಮಾಡಿದ್ರೆ ಅಳಿಯಂದ್ರೆ" ಎಂದು ಸದಾಶಿವ ಅಳಲು ತೋಡಿಕೊಳ್ಳುತ್ತಾರೆ. "ಮೊದಲ ಬಾರಿ ನನಗೂ ನಿಮ್ಮ ಮೇಲೆ ಕೋಪ ಬರ್ತಿದೆ. ಯಾಕೆ ಹೀಗೆ ಮಾಡಿದೆ ಅಣ್ಣಾ" ಎಂದು ಮಹಿಮಾ ಕೂಡ ಹೇಳುತ್ತಾಳೆ. ಗೌತಮ್‌ಗೆ ಶಕುಂತಲಾದೇವಿ "ಅವರಿಬ್ಬರಿಗೆ ನೀನೇ ದಿಕ್ಕು" ಎಂದದ್ದು ನೆನಪಿಗೆ ಬರುತ್ತದೆ. ಮೌನಕ್ಕೆ ಜಾರುತ್ತಾರೆ.
ರೌಡಿ ಬಾಯಿಬಿಡಿಸಲು ಆನಂದ ಪ್ರಯತ್ನ
ಇನ್ನೊಂದೆಡೆ ಜೈದೇವ್ ಕೋಪದಲ್ಲಿದ್ದಾನೆ. ರೌಡಿಗಳ ಜತೆ ಮಾತನಾಡುತ್ತ ಇರುತ್ತಾರೆ. ರೌಡಿಗಳನ್ನೆಲ್ಲ ಸಿಟಿಯಿಂದ ಹೊರಗೆ ಹೋಗಲು ಜೈದೇವ್ ತಿಳಿಸುತ್ತಾನೆ. ಈ ಸಂದರ್ಭದಲ್ಲಿ ರೌಡಿಗಳಿಗೆ ತಮ್ಮ ತಂಡದಲ್ಲಿ ಲೋಕಿ ಎಂಬಾತ ಇಲ್ಲದೆ ಇರುವುದು ತಿಳಿಯುತ್ತದೆ. ಎಲ್ಲರೂ ಲೋಕಿ ಎಲ್ಲಿ ಎಂದು ಹುಡುಕುತ್ತಾರೆ. ಲೋಕಿಗೆ ಆನಂದ್ ಹೊಡೆಯುತ್ತ ಇರುತ್ತಾನೆ. ಆ ಸಮಯದಲ್ಲಿ ಲೋಕಿಗೆ ಫೋನ್ ಬರುತ್ತದೆ. ಆನಂದ್ ರಿಸೀವ್ ಮಾಡಿ "ಯಾರೋ ನಿನ್ನ ಬಾಸ್" ಎಂದು ಕೇಳುತ್ತಾನೆ. ಆನಂದ್‌ಗೆ ವಿಷಯ ಗೊತ್ತಾಗಿದೆ ಎಂದು ತಿಳಿದು ಜೈದೇವ್ ಭಯಪಡುತ್ತಾನೆ. "ಏನಾಗಬಾರದು ಎಂದುಕೊಂಡ್ನೋ ಅದೇ ಆಗುತ್ತದೆ" ಎಂದು ಜೈದೇವ್ ಬೇಸರದಲ್ಲಿದ್ದಾನೆ.
ಕ್ಷಮಿಸದ ಸದಾಶಿವ
ಗೌತಮ್ ಕ್ಷಮಾಪಣೆ ಕೇಳುತ್ತಾನೆ. "ಮಾವ ನನ್ನಿಂದ ತಪ್ಪಾಗಿದೆ. ಇದರಿಂದ ನಿಮಗೆ ಬೇಜಾರಾಗಿದೆ ಎಂದು ಗೊತ್ತು. ಈ ಮಕ್ಕಳಿಗೆ ಆಶೀರ್ವಾದ ಮಾಡಿ" ಎಂದು ಗೌತಮ್ ಕೇಳುತ್ತಾರೆ. "ಮಾಡಿದ್ದೇಲ್ಲ ಮಾಡಿಯಾಯ್ತು ಅಲ್ವ. ಇನ್ನೇನು ಆಶೀರ್ವಾದ" ಎನ್ನುತ್ತಾರೆ ಸದಾಶಿವ. ಅವರಿಬ್ಬರು ಕಾಲಿಗೆ ಬಿದ್ದು ನಮಸ್ಕಾರ ಮಾಡಲು ಮುಂದಾದಗ "ಮನಸ್ಸಲ್ಲಿ ಬೇಸರ ಇಟ್ಕೊಂಡು ಆಶೀರ್ವಾದ ಮಾಡಿದ್ರೆ ಅದು ಶಾಪ ಆಗುತ್ತದೆ. ಇನ್ನು ನಿಮ್ಮ ಜೀವನ ನಿಮ್ಮದು. ಯಾವುದೇ ಕಾರಣಕ್ಕೆ ಇದು ನನಗೆ ಒಪ್ಪಿಗೆ ಇಲ್ಲ" ಎಂದು ಸದಾಶಿವ ಹೇಳಿ ಹೋಗುತ್ತಾರೆ. ಮಂದಾಕಿನಿ ದಂಪತಿಗೆ ಆಶೀರ್ವಾದ ಮಾಡುತ್ತಾರೆ.
ಅಲ್ಲಿಂದ ಗೌತಮ್ ತನ್ನ ಮನೆಗೆ ಬರುತ್ತಾರೆ. ಈ ಮಧು ಮಕ್ಕಳನ್ನು ನೋಡಿ ಮನೆಯವರು ಅಚ್ಚರಿಯಾಗುತ್ತಾರೆ. ಶಕುಂತಲಾಗೆ ಖುಷಿಯಾಗುತ್ತದೆ. ಭೂಮಿಕಾಗೆ ಟೆನ್ಷನ್ ಆಗುತ್ತದೆ. ಆದರೆ, ಇದನ್ನು ಅಜ್ಜಮ್ಮ ಸಹಿಸುವುದಿಲ್ಲ. "ಈ ರೀತಿ ಮಾಡುವ ಮುನ್ನ ನಿಮಗೆ ನಿಮ್ಮ ಮನೆಯವರು, ಯಾರ ನೆನಪು ಆಗಿಲ್ವ. ನಿಮ್ಮ ಅಪ್ಪನ ಮರ್ಯಾದೆ ತೆಗೆದ್ರಲ್ವ. ನಮ್ಮವರ ಕುರಿತೂ ಯೋಚಿಸಬೇಕು. ನಿಮ್ಮ ಮುಖ ನೋಡಲು ಹೇಸಿಯಾಗುತ್ತದೆ. ನೋಡಿದ್ಯ ಶಕುಂತಲಾ, ಮಕ್ಕಳನ್ನು ಸರಿಯಾಗಿ ಬೆಳೆಸಬೇಕು ಎಂದು ಇದಕ್ಕೆ ಹೇಳೋದು" ಎಂದು ಅಜ್ಜಮ್ಮ ಬೈತಾರೆ. "ಆಗ ಜೈದೇವ್, ಈಗ ಇವನು. ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯುತ್ತಿಲ್ಲ. ಇದನ್ನೆಲ್ಲ ನೋಡಲು ನಾನು ಬದುಕಿರುವೆ" ಎಂದೆಲ್ಲ ಹೇಳುತ್ತಾರೆ. "ಅಜ್ಜಿ ಇವರಿಬ್ಬರಿಗೆ ಏನೂ ಹೇಳಬೇಡಿ. ಈ ಮದುವೆ ನಾನೇ ಮಾಡಿಸಿದ್ದು" ಎಂದು ಗೌತಮ್ ಹೇಳುತ್ತಾರೆ. ಇದನ್ನು ಕೇಳಿ ಭೂಮಿಕಾ, ಅಜ್ಜಮ್ಮ ಸೇರಿದಂತೆ ಎಲ್ಲರಿಗೂ ಅಚ್ಚರಿಯಾಗುತ್ತದೆ. "ಇಷ್ಟು ಜವಾಬ್ದಾರಿ ಇರುವವನು ಯಾಕೆ ಇಂತಹ ಕೆಲಸ ಮಾಡಿದೆ?" ಎಂದು ಅಜ್ಜಮ್ಮ ಕೇಳುತ್ತಾರೆ.
ಮನೆ ತುಂಬಿಸಿಕೊಳ್ಳದ ಅಜ್ಜಮ್ಮ
"ಆಗಿದ್ದು ಆಗೋಯ್ತು. ಇನ್ನು ಯಾಕೆ ಬೈಯೋದು. ಅವರನ್ನು ಮನೆ ತುಂಬಿಸೋಣ" ಎಂದು ಶಕುಂತಲಾದೇವಿ ಹೇಳುತ್ತಾರೆ. "ನಿನ್ನಿಂದಾಗಿ ಮಕ್ಕಳು ಹಾಳಾಗಿದ್ದಾರೆ. ಇಂತವರನ್ನು ಮನೆ ತುಂಬಿಸಬೇಕಾ. ಪಾರ್ಥ ನೀನು ತುಂಬಾ ಒಳ್ಳೆಯವನು. ನನ್ನ ನಂಬಿಕೆ ಸುಳ್ಳು ಮಾಡಿದೆ. ಇವನಿಗೆ ಬುದ್ಧಿ ಇಲ್ಲ. ಅಪೇಕ್ಷಾ ನಿನಗೆ ಬುದ್ಧಿ ಇಲ್ವ. ನಿನ್ನ ಹೆತ್ತವರಿಗೆ ಹೇಗೆ ಮುಖ ತೋರಿಸ್ತಿಯ. ನಿನ್ನನ್ನು ಇಷ್ಟು ದಿನ ಕಷ್ಟಪಟ್ಟು ಸಾಕಿ ಬೆಳೆಸಿದವರಿಗೆ ಏನು ಉತ್ತರ ಕೊಡ್ತಿಯ" ಎಂದು ಅಜ್ಜಮ್ಮ ಕೇಳುತ್ತಾರೆ. "ಆಗಿದ್ದು ಆಗೋಯ್ತು. ಅವರಿಗೆ ಆಶೀರ್ವಾದ ಮಾಡಿ ಒಳಗೆ ಕರೆಸಿಕೊಳ್ಳಿ" ಎಂದು ಗೌತಮ್ ಕೇಳುತ್ತಾರೆ. "ಅದು ಮಾತ್ರ ಸಾಧ್ಯವಿಲ್ಲ" ಎಂದು ಅಜ್ಜಮ್ಮ ಅಬ್ಬರಿಸುತ್ತಾರೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)