Annayya Serial: ಅಣ್ಣಯ್ಯ ಸೀರಿಯಲ್‌ನ ಮಾರಿಗುಡಿ ಶಿವುಗೆ ಕರೆಂಟ್ ಶಾಕ್, ಬಾಯಿಗೆ ಬಾಯಿಟ್ಟು ಉಸಿರು ನೀಡಿದ ಪಾರ್ವತಿ
Annayya Kannada Serial: ಝೀ ಕನ್ನಡ ವಾಹಿನಿಯ ಅಣ್ಣಯ್ಯ ಸೀರಿಯಲ್‌ನ ಇಂದಿನ ಎಪಿಸೋಡ್‌ನಲ್ಲಿ ಶಿವು ಮತ್ತು ಪಾರ್ವತಿಯ ಪ್ರೀತಿ ಇನ್ನೊಂದು ಲೆವೆಲ್‌ಗೆ ಹೋಗಿದೆ. ಕರೆಂಟ್ ಶಾಕ್ ಹೊಡೆದು ಬಿದ್ದ ಮಾರಿಗುಡಿ ಶಿವುನ ಬಾಯಿಗೆ ಬಾಯಿಟ್ಟು ಉಸಿರು ನೀಡಿದ್ದಾಳೆ ಪಾರ್ವತಿ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಝೀ ಕನ್ನಡ ವಾಹಿನಿಯು ಅಣ್ಣಯ್ಯ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಇಂದು ಮದುವೆ ಕಾರ್ಯಕ್ರಮದಲ್ಲಿ ಎಲ್ಲರೂ ಬಿಝಿ ಇದ್ದಾರೆ. ಅಣ್ಣಯ್ಯ ಮತ್ತು ಪಾರ್ವತಿಯೂ ವಿವಿಧ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಸಮಯದಲ್ಲಿ ಶಿವು ಮತ್ತು ಪಾರ್ವತಿಯ ತುಟಿಗೆ ತುಟಿ ಸೇರುವ ಸಂದರ್ಭವೊಂದು ಬೇರೆ ರೀತಿಯಲ್ಲಿ ಬಂದಿದೆ. ವೀರಭದ್ರ ಮತ್ತು ಆತನ ಮನೆಯವರು, ಶಿವು ಮತ್ತು ಆತನ ತಂಗಿಯರು ಎಲ್ಲರೂ ದೇವಾಲಯಕ್ಕೆ ಆಗಮಿಸಿದ್ದಾರೆ. ಮದುವೆ ವಾತಾವರಣವಿದೆ. ಈ ಸಮಯದಲ್ಲಿ ಕಾರಿನಿಂದ ಇಳಿದ ಪಾರ್ವತಿಯನ್ನು ಶಿವು ಪ್ರೀತಿಯಿಂದ ನೋಡುತ್ತಾನೆ.
ಶಿವು ಮತ್ತು ಪಾರ್ವತಿಯನ್ನು ಗಂಡಹೆಂಡತಿ ರೀತಿ ಕಲ್ಪಿಸಿಕೊಂಡು ಶಿವನ ತಂಗಿಯರು ಖುಷಿಪಡುತ್ತಾರೆ. ರಾಧಾ ಕೃಷ್ಣ ರೀತಿ ಕಾಣಿಸ್ತಾರೆ ಎಂದುಕೊಳ್ಳುತ್ತಾರೆ. ಆಕೆ ತಮ್ಮ ಮನೆಗೆ ಅತ್ತಿಗೆಯಾಗಿ ಬರೋದನ್ನು ಕಲ್ಪಿಸಿಕಕೊಳ್ಳುತ್ತಾರೆ. ಅಳಿಯಂದಿರು ಯಾರನ್ನೋ ಹುಡುಕ್ತಾ ಇರುವ ಹಾಗೆ ಇದೆ ಎಂದು ವೀರಭದ್ರ ಕೇಳುತ್ತಾನೆ. ಪಾರ್ವತಿ ಒಳಗೆ ಇದ್ದಾಳೆ ಎಂದಾಗ ಪಾರ್ವತಿಯ ಸಹೋದರ ಮತ್ತು ಅಳಿಯಂದಿರು ನೋಡಲು ಹೋಗುತ್ತಾರೆ. ಆ ಸಮಯದಲ್ಲಿ ಒಂದು ಘಟನೆ ನಡೆಯುತ್ತದೆ.
ಅಲ್ಲಿ ಪಾರ್ವತಿ ದೇವರ ಪ್ರಸಾದವನ್ನು ಶಿವನ ಹಣೆಗೆ ಇಡುತ್ತ ಇರುತ್ತಾಳೆ. ಇದನ್ನು ನೋಡಿ ಆಕೆಯ ಅಣ್ಣ ಕೋಪಗೊಳ್ಳುತ್ತಾನೆ. ಅತ್ತಿಗೆ ಕಣ್ಣಲ್ಲಿ ಈಗಲೂ ನಿನ್ನ ಮೇಲೆ ಪ್ರೀತಿ ಕಾಣ್ತಾ ಇದೆ ಕಣೋ ಎಂದು ಶಿವುನ ಸುತ್ತಲಿನವರು ಹೇಳುತ್ತಾರೆ. ಈ ಸಂದರ್ಭದಲ್ಲಿ ಪಾರ್ವತಿ ಸ್ವಿಚ್ ಬೋರ್ಡ್ ಪ್ಲಗ್‌ಗೆ ಚಾರ್ಜರ್ ಹಾಕಲು ಪ್ರಯತ್ನಿಸುತ್ತಾ ಇರುತ್ತಾಳೆ. ಆ ಸಮಯದಲ್ಲಿ ಶಿವುಗೆ ಇತರರು "ಅತ್ತಿಗೆ ಕಷ್ಟಪಡ್ತಾ ಇದ್ದಾರೆ. ಹೆಲ್ಪ್ ಮಾಡು" ಎನ್ನುತ್ತಾರೆ. ಶಿವು ಕೂಡ ಸಹಾಯ ಮಾಡಲು ಓಡೋಡಿ ಬರುತ್ತಾನೆ.
"ಪಾರು ನಾನಿರುವಾಗ ನೀನ್ಯಾಕೆ ಇಷ್ಟು ಕಷ್ಟಪಡ್ತಾ ಇದ್ದಿಯಾ" ಎಂದು ಪ್ಲಗ್‌ಗೆ ಚಾರ್ಜರ್ ಸಿಲುಕಿಸಲು ನೆರವಾಗಲು ಶಿವು ಮುಂದಾಗುತ್ತಾನೆ. ಆ ಹಳೆಯ ಸ್ವಿಚ್ ಬೋರ್ಡ್‌ಗೆ ಆತನ ಬೆರಳು ತಾಗಿ ಶಾಕ್ ಹೊಡೆಯುತ್ತದೆ. ಆ ಶಾಕ್‌ಗೆ ಶಿವು ದೂರಕ್ಕೆ ಎಸೆದಂತೆ ಬಿದ್ದು ಸ್ಮೃತಿ ತಪ್ಪುತ್ತಾನೆ. ಕರೆಂಟ್ ಪ್ಲಗ್‌ನ ಶಾಕ್ ಅಷ್ಟೊಂದು ಭಯಂಕರವಾಗಿರುತ್ತದೆಯೇ ಎಂದು ಯೋಚಿಸುವಂತೆ ಇಲ್ಲ. ಬಟ್ ಶಿವುಗೆ ಶಾಕ್ ತಗುಲಿ ದೂರಕ್ಕೆ ಬೀಳುತ್ತಾನೆ.
ಶಿವುಗೆ ಉಸಿರಾದ ಪಾರು
ಶಾಕ್‌ಗೆ ಒಳಗಾಗಿ ಶಿವು ಬಿದ್ದಾಗ ಅಣ್ಣ, ಭಾವ ಎಂದು ಎಲ್ಲರೂ ಸುತ್ತಲೂ ನೆರೆಯುತ್ತಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಪಾರ್ವತಿ ಓಡೋಡಿ ಬರುತ್ತಾಳೆ. ಶಿವುನ ಎಚ್ಚರಗೊಳಿಸಲು ಯತ್ನಿಸಲು ಪ್ರಯತ್ನಿಸುತ್ತಾಳೆ. ಶಿವು ಉಸಿರಾಡ್ತಾನ ಎಂದು ನೋಡಲು ಎದೆಗೆ ಕಿವಿಯಿಟ್ಟು ನೋಡುತ್ತಾಳೆ. ಇದನ್ನು ದೂರದಲ್ಲಿ ನೋಡುತ್ತಿರುವ ವೀರಭದ್ರ ಕೋಪಗೊಳ್ಳುತ್ತಾನೆ. ಆಕೆಯ ಅಣ್ಣನೂ ಕೋಪದಿಂದ ನೋಡುತ್ತಾನೆ. ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಶಿವನ ಬಾಯಿಗೆ ಬಾಯಿಟ್ಟು ಉಸಿರು ನೀಡುತ್ತಾಳೆ. ಪಾರ್ವತಿಯ ಅಪ್ಪ ಮತ್ತು ಅಣ್ಣನ ಮುಖದಲ್ಲಿ ಆಕ್ರೋಶ ಮೂಡುತ್ತದೆ. ಜೀ ಕನ್ನಡ ವಾಹಿನಿಯ ಪ್ರಮೋದಲ್ಲಿ ಇಷ್ಟು ವಿಚಾರಗಳು ಕಾಣಿಸಿವೆ. ರಕ್ಷಾ ಬಂಧನ ದಿನದಂದು ಅಣ್ಣಯ್ಯ ಸೀರಿಯಲ್‌ನಲ್ಲಿ ಈ ವಿಚಾರ ಪ್ರಮುಖ ಹೈಲೈಟ್ ಆಗಿರುವ ಸೂಚನೆಯಿದೆ.
ಹೊಸದಾಗಿ ಆರಂಭವಾದ ಅಣ್ಣಯ್ಯ ಸೀರಿಯಲ್ ಒಳ್ಳೆಯ ಸಿನಿಮಾದಂತೆ ಭರ್ಜರಿಯಾಗಿ ಆರಂಭವಾಗಿದೆ. ಒಂದೊಳ್ಳೆಯ ಕಥೆ, ಅಣ್ಣ ತಂಗಿಯರ ಬಾಂಧವ್ಯ, ಪ್ರೀತಿಪ್ರೇಮ, ಆಸ್ತಿ ಅಂತಸ್ತಿನ ಗತ್ತು ಇತ್ಯಾದಿಗಳನ್ನು ತೋರಿಸಿದೆ. ಇದೇ ಸಮಯದಲ್ಲಿ ಶಿವು ಮತ್ತು ಪಾರು ನಡುವಿನ ಪ್ರೀತಿ ಆರಂಭದಲ್ಲಿಯೇ ಗಾಢವಾಗುತ್ತಿದೆ.
ವಿಭಾಗ