Annayya TV Serial: ಪುಟ್ಟ ತಂಗಿಯ ಸಂಕಷ್ಟದ ಸಮಯದಲ್ಲಿ ಅಣ್ಣನಾಗಿ ಏನ್ ಮಾಡ್ತಾನೆ ಶಿವು? ಅಕ್ಕಂದಿರೇ ಇಲ್ಲದ ಹೊತ್ತಲ್ಲಿ ಇದೇನಾಯ್ತು ನೋಡಿ-televison news annayya serial kannada today episode september 6 shivu sentiment with sisters smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Tv Serial: ಪುಟ್ಟ ತಂಗಿಯ ಸಂಕಷ್ಟದ ಸಮಯದಲ್ಲಿ ಅಣ್ಣನಾಗಿ ಏನ್ ಮಾಡ್ತಾನೆ ಶಿವು? ಅಕ್ಕಂದಿರೇ ಇಲ್ಲದ ಹೊತ್ತಲ್ಲಿ ಇದೇನಾಯ್ತು ನೋಡಿ

Annayya TV Serial: ಪುಟ್ಟ ತಂಗಿಯ ಸಂಕಷ್ಟದ ಸಮಯದಲ್ಲಿ ಅಣ್ಣನಾಗಿ ಏನ್ ಮಾಡ್ತಾನೆ ಶಿವು? ಅಕ್ಕಂದಿರೇ ಇಲ್ಲದ ಹೊತ್ತಲ್ಲಿ ಇದೇನಾಯ್ತು ನೋಡಿ

Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಮಾಸ್ತಿಕೊಪ್ಪಲ ಉತ್ಸವ ನಡೆಯುತ್ತಿದೆ. ಎಲ್ಲರೂ ಜಾತ್ರೆಯಲ್ಲಿ ಸಂಭ್ರಮದಲ್ಲಿದ್ದರೆ ಶಿವು ಕಿರಿ ತಂಗಿಗೆ ಪರೀಕ್ಷೆ ಸಮಯ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (ಝೀ ಕನ್ನಡ)

ಜಾತ್ರೆಯಲ್ಲಿ ಎಲ್ಲರೂ ಕುಸ್ತಿ ನೋಡೋಕೆ ಹೋಗ್ತಾರೆ. ಆಗ ಸೀನ ಅದರಲ್ಲಿ ಗೆಲ್ತಾನೆ. ಗುಂಡಮ್ಮ ಮೊದಲಿಗೆ ಅವನನ್ನು ತುಂಬಾ ರೇಗಿಸುತ್ತಾಳೆ. ಆದರೆ ಅವನು ಶಿವಣ್ಣನ ಹತ್ತಿರ ಹೇಳಿ ಅವಳನ್ನು ಸುಮ್ಮನಾಗಿಸುತ್ತಾನೆ. ಆ ನಂತರ ಅವನು ಪಿಂಕಿ ಬರಬೇಕಿತ್ತು ನಾನು ಆಡುವ ಕುಸ್ತಿಯನ್ನು ಅವಳು ನೋಡಬೇಕಿತ್ತು ಎಂದು ಆಸೆ ಪಡುತ್ತಾ ಇರುತ್ತಾನೆ. ಆದರೆ ಅವಳು ಅಲ್ಲಿಗೆ ಬರುವಷ್ಟರಲ್ಲಿ ಕುಸ್ತಿ ಮುಗಿದಿರುತ್ತದೆ. ಕುಸ್ತಿ ಮುಗಿದು ಅವನಿಗೆ ಸನ್ಮಾನ ನಡೆಯುತ್ತಾ ಇರುತ್ತದೆ ಆಗ ಅವಳು ಬರುತ್ತಾಳೆ. ಅಂತು ಕೊನಡಗಾದರೂ ಬಂದಳಲ್ಲ ಎಂದು ಅವನಿಗೆ ಖುಷಿ ಆಗುತ್ತದೆ. ಇನ್ನು ಎಲ್ಲರೂ ಜಾತ್ರೆಯಲ್ಲಿ ನಾಟಕ ನೋಡುತ್ತಾ ಕುಳಿತಿರುತ್ತಾರೆ.

ಪಾರು, ಶಿವು ಕೂಡ ಅಲ್ಲಿ ಇರುತ್ತಾರೆ. ಶಿವು ಹಾಗೇ ತನ್ನ ಕಲ್ಪನಾ ಲೋಕಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಯಾರೋ ಬಂದು ನಾಟಕ ನಿಲ್ಲಿಸುತ್ತಾರೆ. ನಿಲ್ಲಿಸಿ ಈಗ ನಮ್ಮ ಊರಿನ ನಾಯಕ ನಾಗೇಗೌಡರಿಗೆ ಸನ್ಮಾನ ಎಂದು ಹೇಳಿ ಅವರಿಗೊಂದು ಸನ್ಮಾನ ನಡೆಯುತ್ತದೆ. ಅಷ್ಟೇ ಅಲ್ಲದೆ ನಂತರದಲ್ಲಿ ಅವರು ವೀರಭದ್ರೆ ಗೌಡರನ್ನೂ ಸಹ ವೇದಿಕೆ ಮೇಲೆ ಕರೆದು "ನಾವೀಗ ಸಂಬಂಧ ಬೆಳೆಸುತ್ತಾ ಇದ್ದೇವೆ. ಇವರ ಮನೆ ಮಗಳನ್ನು ನಮ್ಮ ಮನೆಗೆ ತಂದುಕೊಳ್ಳುತ್ತಾ ಇದ್ದೇವೆ" ಎಂದು ವೇದಿಕೆಯಲ್ಲಿ ಎಲ್ಲರ ಎದುರು ಹೇಳುತ್ತಾನೆ. ಅದು ಪಾರುಗೆ ಇಷ್ಟ ಆಗೋದಿಲ್ಲ. ನಂತರದಲ್ಲಿ ಮತ್ತೆ ನಾಟಕ ಆರಂಭ ಆಗುತ್ತದೆ.

ಆಗ ಶಿವು ತಾನೇ ದುಶ್ಯಂತನಾಗಿ ಭಾವಿಸುತ್ತಾನೆ ಹಾಗೇ ಪಾರುವನ್ನು ಶಕುಂತಲಾ ಆಗಿ ಕಲ್ಪಿಸಿಕೊಳ್ಳುತ್ತಾನೆ. ಈ ದೃಷ್ಯ ಪ್ರೇಕ್ಷಕರಿಗೆ ಮುದ ನೀಡಿದೆ. ಹಳ್ಳಿ ಸೊಗಡಿನ ನಾಟಕವನ್ನು ಮತ್ತೆ ಟಿವಿಯಲ್ಲೂ ನೋಡಲು ಸಿಕ್ಕಿದ್ದಕ್ಕೆ ಜನ ಮೆಚ್ಚಿಕೊಂಡಿದ್ದಾರೆ. ಅದಾದ ನಂತರ ಶಿವು ತಂಗಿಗೆ ಸಂಕಷ್ಟ ಎದುರಾಗಿದೆ. ನೀನು ಅತ್ತೆ ಮಗಳು ನಿನ್ನ ಮೇಲೆ ನನಗೆ ಸಂಪೂರ್ಣ ಹಕ್ಕಿದೆ. ನಿನ್ನ ಮೈಮುಟ್ಟೋದು ನಾನು ಮಾತ್ರ ಎಂದು ನಾಗೇಗೌಡನ ಇನ್ನೊಂದು ತಮ್ಮ ಹೇಳುತ್ತಾ ಅವಳನ್ನು ಕಾಡುತ್ತಾನೆ.

ಆಗ ಅವಳು ಕೂಗಿಕೊಂಡು ಅಣ್ಣನನ್ನು ಕರೆಯುತ್ತಾಳೆ. ನಂತರ ಅಣ್ಣ ಬಂದು ಅವಳನ್ನು ಕಾಪಾಡುತ್ತಾನೆ. ಇನ್ನು ಮಾರನೇ ದಿನ ಮತ್ತೆ ಎಲ್ಲರೂ ನವಮಿ ಹಬ್ಬಕ್ಕೆಂದು ಹೊರಟಿರುತ್ತಾರೆ. ಆದರೆ ಅವನ ಚಿಕ್ಕ ತಂಗಿಗೆ ಪರೀಕ್ಷೆ ಇರುತ್ತದೆ. ಆ ಕಾರಣಕ್ಕಾಗಿ ಅವಳು ಮನೆಯಲ್ಲೇ ಇರುತ್ತಾಳೆ. ಅಕ್ಕಂದಿರೆಲ್ಲ ಹೋದ ನಂತರ ಅವಳಿಗೆ ಹೊಟ್ಟೆ ನೋವು ಆರಂಭವಾಗುತ್ತದೆ. “ ಅಣ್ಣ ತುಂಬಾ ಹೊಟ್ಟೆ ನೊಯ್ತಾ ಇದೆ” ಎಂದು ಹೇಳುತ್ತಾಳೆ. ಆಗ ಇವನು ನಂಬೋದಿಲ್ಲ. ಪರೀಕ್ಷೆ ಇದೆ ಓದಬೇಕು ಎಂದು ನಾಟಕ ಮಾಡ್ತಾ ಇದ್ದಾಳೆ ಎಂದು ಅಂದುಕೊಳ್ಳುತ್ತಾನೆ. ಆದರೆ ನಿಜವಾಗಲೂ ಅದ ಹಾಗಾಗಿರೋದಿಲ್ಲ. ನಂತರ ಅವಳು “ ಇಲ್ಲ ಅಣ್ಣ ರಕ್ತ ಬರ್ತಾ ಇದೆ ” ಎಂದು ಹೇಳುತ್ತಾಳೆ. ಆಗ ಇವನಿಗೆ ಗಾಬರಿ ಆಗುತ್ತದೆ. ಏನು ಮಾಡಬೇಕು ಎಂದೇ ತಿಳಿಯುವುದಿಲ್ಲ. ಮುಂದೇನಾಯ್ತು ಎಂದು ಕಾದು ನೋಡಬೇಕಿದೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.