Annayya Serial: ಶುರುವಾಯ್ತು ಶಿವಣ್ಣನಿಗೆ ಪ್ರೀತಿ, ಪಾರು ಗುಂಗಲ್ಲೇ ಕಳೆದೋದ ಅಣ್ಣಯ್ಯ, ಮಾವಯ್ಯನಿಗೆ ಬಂತು ಅನುಮಾನ-televison news annayya serial zee kannada today episode september 4 shivu paaru love story smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಶುರುವಾಯ್ತು ಶಿವಣ್ಣನಿಗೆ ಪ್ರೀತಿ, ಪಾರು ಗುಂಗಲ್ಲೇ ಕಳೆದೋದ ಅಣ್ಣಯ್ಯ, ಮಾವಯ್ಯನಿಗೆ ಬಂತು ಅನುಮಾನ

Annayya Serial: ಶುರುವಾಯ್ತು ಶಿವಣ್ಣನಿಗೆ ಪ್ರೀತಿ, ಪಾರು ಗುಂಗಲ್ಲೇ ಕಳೆದೋದ ಅಣ್ಣಯ್ಯ, ಮಾವಯ್ಯನಿಗೆ ಬಂತು ಅನುಮಾನ

Zee Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಜೊತೆ ಸೇರೋಕೆ ಶಿವು ಸಿದ್ಧವಾಗಿದ್ದಾನೆ. ಅವಳ ಮನಸಿನ ಭಾವನೆ ಈಗ ಅವನಿಗೆ ಅರ್ಥವಾಗಿದೆ. ಅವರಿಬ್ಬರ ನಡವಳಿಕೆ ಮಾವನಿಗೆ ಅನುಮಾನ ತರಿಸಿದೆ.

ಪಾರು, ಅಣ್ಣಯ್ಯ
ಪಾರು, ಅಣ್ಣಯ್ಯ (ಝೀ ಕನ್ನಡ)

ಪಾರು ತನ್ನ ಪ್ರೀತಿಯನ್ನು ಪರೋಕ್ಷವಾಗಿ ಶಿವು ಹತ್ತಿರ ಹೇಳಿಕೊಂಡಿದ್ದಾಳೆ. ಅದು ಶಿವುಗೂ ಅರ್ಥವಾಗಿದೆ. ತಾನು ತನ್ನ ಕೈಲಾದ ಮಟ್ಟಿಗೆ ಅವಳನ್ನು ಸೋಮೆ ಗೌಡನಿಂದ ಬಚಾವ್ ಮಾಡಬೇಕು. ಪಾರು ಆಸೆಯನ್ನು ಈಡೇರಿಸಲೇಬೇಕು ಎಂದು ಅವನು ಅಂದುಕೊಂಡು ಅವಳಿಗಾಗಿ ನಾನಾ ರೀತಿಯ ಸಾಹಸ ಮಾಡುತ್ತಿದ್ದಾನೆ. ಪಾರು ಮನೆಯಲ್ಲಿ ಸೋಮೆಗೌಡನ ಕುಟುಂಬ ಬಂದಿರುತ್ತದೆ. ಪಾರುವನ್ನು ಕಂಡು ಅವಳಿಗೆ ಸೋಮೆಗೌಡ ಕಾಟ ಕೊಡುತ್ತಾ ಇರುತ್ತಾನೆ. “ಅವನಿಂದ ನನ್ನನ್ನು ಹೇಗಾದರೂ ಮಾಡಿ ಬಚಾವ್ ಮಾಡು ಮಾವ” ಎಂದು ಪಾರು ಕೇಳಿಕೊಂಡಿರುತ್ತಾಳೆ. ಅದಕ್ಕೆ ಶಿವು ಏನು ಮಾಡಿದ್ದಾನೆ ನೋಡಿ.

ಅಣ್ಣಯ್ಯನ ಐಡಿಯಾ

ಶಿವು ಪಾರು ಮನೆಗೆ ಬಂದು ಒಂದು ಉಪಾಯ ಮಾಡಿದ್ದಾನೆ. ಆ ಉಪಯಾದಂತೆ ಅವನು ಮೆಟ್ಟಿಲ ಮೇಲೆ ಎಣ್ಣೆ ಚೆಲ್ಲಿದ್ದಾನೆ. “ನೀನು ಇಲ್ಲೇ ನಿಂತಿರು ಅವನು ನಿನ್ನನ್ನು ನೋಡುತ್ತಾ ಬರುತ್ತಾನೆ. ಆಗ ಕಾಲು ಜಾರಿ ಬೀಳುತ್ತಾನೆ” ಎಂಂದು ಹೇಳುತ್ತಾನೆ. ಆ ಮಾತನ್ನು ಕೇಳಿ ಇವಳಿಗೆ ಸಂತೋಷ ಆಗುತ್ತದೆ. “ಆಗ್ಲಿ ಮಾವ ನೀನು ಹೇಳ್ದಾಗೆ ಮಾಡ್ತೀನಿ” ಎಂದು ಅವಳು ಅಲ್ಲೇ ನಿಂತಿರುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಸೋಮೆಗೌಡ ಬರುತ್ತಾನೆ. ಬಂದು ಅವಳನ್ನೇ ನೋಡುತ್ತಾ ಹಲ್ಲುಗಿಂಜುತ್ತಾ ಮೆಟ್ಟಿಲಿನ ಮೇಲೆ ಕಾಲಿಡುತ್ತಾನೆ.

ಅವನು ಮೆಟ್ಟಿಲು ಹತ್ತುವ ಸಂದರ್ಭದಲ್ಲಿ ಪಾರು ಕೆಳಗಡೆ ನಿಂತು ನೋಡುತ್ತಾ ಇರುತ್ತಾಳೆ. ಅವಳನ್ನು ನೋಡುತ್ತಾ ಅವನು ಬಿದ್ದು ಬಿಡುತ್ತಾನೆ. ಆನಂತರದಲ್ಲಿ ಮನೆಯವರೆಲ್ಲ ಅಲ್ಲಿಗೆ ಅವನ ಕೂಗು ಕೇಳಿಸಿಕೊಂಡು ಓಡಿ ಬರುತ್ತಾರೆ. ಎಲ್ಲರೂ ಬರುವಷ್ಟರಲ್ಲಿ ಅವನು ನೆಲಕ್ಕೆ ಬಿದ್ದಿರುತ್ತಾನೆ.

ಅವನನ್ನು ಮನೆಯವರೆಲ್ಲ ಎತ್ತಿ ಸೋಫಾ ಮೇಲೆ ಕೂರಿಸುತ್ತಾರೆ. ಆಗ ಅವನ ಕತ್ತು ಉಳುಕಿದೆ ಹೇಗಾದರೂ ಮಾಡಿ ಅವನ ಕತ್ತಿನ ಉಳುಕನ್ನು ತೆಗೆಯಬೇಕು ಎಂದು ಎಲ್ಲರೂ ಆಲೋಚನೆ ಮಾಡುತ್ತ ಇರುವ ಸಂದರ್ಭದಲ್ಲಿ. “ನಾನು ಸರಿ ಮಾಡ್ತೀನಿ” ಎಂದು ಅಣ್ಣಯ್ಯ ಅಲ್ಲಿಗೆ ಬರ್ತಾನೆ. ನೋವಾಗುವಂತೆ ಅವನ ಕತ್ತನ್ನು ತಿರುಗಿಸಿ ಇಡ್ತಾನೆ. ಇದರಿಂದ ಸೋಮೆಗೌಡನಿಗೆ ತುಂಬಾ ನೋವಾಗುತ್ತದೆ. ಇತ್ತ ಪಾರು ಮತ್ತು ಶಿವು ನಗ್ತಾರೆ. ಇದನ್ನು ಸೋಮೆಗೌಡನ ಅಣ್ಣ ಗಮನಿಸುತ್ತಾನೆ.

“ಕಣ್ಣಿಗೆ ಕಸ ಬಿದ್ದ ಹಾಗೆ ಇವನು ಆಗಾಗ ಇಲ್ಲಿಗೆ ಬರೋದೆ ನನಗೆ ಸರಿ ಕಾಣಸ್ತಾ ಇಲ್ಲ. ಮೊದಲು ಇವನನ್ನು ದೂರ ಕಳ್ಸಿ" ಎಂದು ಹೇಳುತ್ತಾನೆ. ಆಗ ಪಾರು ತಂದೆ. ಏನು ಮಾಡ್ಬೇಕು. ಯಾರನ್ನ ಎಲ್ಲಿ ಇಡ್ಬೇಕು ಅಂತ ನನಗೆ ಗೊತ್ತಿದೆ ಎಂದು ಹೇಳಿ ಸುಮ್ಮನಾಗುತ್ತಾನೆ. ಇತ್ತ ರಶ್ಮಿ ಮತ್ತು ರಮ್ಯ ಅಣ್ಣ ಕೊಟ್ಟ ಹಣವನ್ನು ಮಾದೇ ಗೌಡರಿಗೆ ತಲುಪಿಸಲು ಹೋಗಿರ್ತಾರೆ. ಅಲ್ಲಿ ಕಜ್ಜಾಯ ಕೊಡ್ತಾರೆ. ಅದನ್ನು ಸಂಪೂರ್ಣವಾಗಿ ಗುಂಡಮ್ಮ ತಿಂದು ಬಿಡುತ್ತಾಳೆ. ಈಗ ಎಲ್ಲರೂ ಸೋಮೆಗೌಡರ ಮನೆಗೆ ಹೋಗಿದ್ದಾರೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.

ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.