ಕರಿಮಣಿ ಸಾಹಿತ್ಯಳನ್ನು ಒಂದು ಪದದಲ್ಲಿ ನೀವು ಹೇಗೆ ವರ್ಣಿಸುವಿರಿ? ಅನುಬಂಧ ಅವಾರ್ಡ್ಸ್ 2024 ಪ್ರಶ್ನೆಗೆ ಫ್ಯಾನ್ಸ್‌ ಮಸ್ತ್‌ ಉತ್ತರ-televison news anubandha awards 2024 define kannada karimani serial sahitya spandana somanna fans answers pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕರಿಮಣಿ ಸಾಹಿತ್ಯಳನ್ನು ಒಂದು ಪದದಲ್ಲಿ ನೀವು ಹೇಗೆ ವರ್ಣಿಸುವಿರಿ? ಅನುಬಂಧ ಅವಾರ್ಡ್ಸ್ 2024 ಪ್ರಶ್ನೆಗೆ ಫ್ಯಾನ್ಸ್‌ ಮಸ್ತ್‌ ಉತ್ತರ

ಕರಿಮಣಿ ಸಾಹಿತ್ಯಳನ್ನು ಒಂದು ಪದದಲ್ಲಿ ನೀವು ಹೇಗೆ ವರ್ಣಿಸುವಿರಿ? ಅನುಬಂಧ ಅವಾರ್ಡ್ಸ್ 2024 ಪ್ರಶ್ನೆಗೆ ಫ್ಯಾನ್ಸ್‌ ಮಸ್ತ್‌ ಉತ್ತರ

Anubandha awards 2024: ಕಲರ್ಸ್‌ ಕನ್ನಡದ ಕರಿಮಣಿ ಧಾರಾವಾಹಿಯಲ್ಲಿ ನಟಿ ಸ್ಪಂದನಾ ಸೋಮಣ್ಣ "ಸಾಹಿತ್ಯಳಾಗಿ" ಫೇಮಸ್‌. ಈಕೆಯನ್ನು ಒಂದು ಪದದಲ್ಲಿ ವರ್ಣಿಸಿ ಎಂದು ಕಲರ್ಸ್‌ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದೆ. ಇದಕ್ಕೆ ಅಭಿಮಾನಿಗಳು ಥರೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಕರಿಮಣಿ ಸಾಹಿತ್ಯಳನ್ನು ಒಂದು ಪದದಲ್ಲಿ ನೀವು ಹೇಗೆ ವರ್ಣಿಸುವಿರಿ? ಅನುಬಂಧ ಅವಾರ್ಡ್ಸ್ 2024
ಕರಿಮಣಿ ಸಾಹಿತ್ಯಳನ್ನು ಒಂದು ಪದದಲ್ಲಿ ನೀವು ಹೇಗೆ ವರ್ಣಿಸುವಿರಿ? ಅನುಬಂಧ ಅವಾರ್ಡ್ಸ್ 2024

Anubandha awards 2024: ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ 2024ಕ್ಕೆ ದಿನಗಣನೆ ಆರಂಭವಾಗಿದೆ. ಕಲರ್ಸ್‌ ಕನ್ನಡದ ಕರಿಮಣಿ ಧಾರಾವಾಹಿಯಲ್ಲಿ ನಟಿ ಸ್ಪಂದನಾ ಸೋಮಣ್ಣ "ಸಾಹಿತ್ಯಾ"ಳಾಗಿ ಫೇಮಸ್‌. ಕಂಗೊಳಿಸುತ್ತಿರೋ 'ಕರಿಮಣಿ' ಸಾಹಿತ್ಯಾನ ಒಂದು ಪದದಲ್ಲಿ ವರ್ಣಿಸಿ ಎಂದು ಕಲರ್ಸ್‌ ಕನ್ನಡದ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಕೇಳಲಾಗಿತ್ತು. ಇದಕ್ಕೆ ಅಭಿಮಾನಿಗಳು ಮಜವಾದ ಉತ್ತರಗಳನ್ನು ನೀಡಿದ್ದಾರೆ. ಸ್ಪಂದನಾ ಸೋಮಣ್ಣ ಅಭಿಮಾನಿಗಳು ಸಾಹಿತ್ಯಳನ್ನು ಒಂದು ಪದದಲ್ಲಿ ವರ್ಣಿಸಲು ಪ್ರಯತ್ನಿಸಿದ್ದಾರೆ.

ಅನುಬಂಧ ಅವಾರ್ಡ್ಸ್ 2024 ಪ್ರಸಾರ ಸಮಯ

ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್ಸ್‌ 2024 ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಪ್ರೇಕ್ಷಕರು ತಮ್ಮ ನೆಚ್ಚಿನ ಕಲಾವಿದರಿಗೆ ಓಟ್‌ ಮಾಡಿದ್ದಾರೆ. ಅಂದಹಾಗೆ, ಇದೇ ಸೆಪ್ಟೆಂಬರ್‌ 20, 21 ಮತ್ತು 22 ಸಂಜೆ 7 ಗಂಟೆಗೆ ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಕಲರ್ಸ್‌ ಕನ್ನಡದ ಕಲಾವಿದರು, ತಂತ್ರಜ್ಞರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವ ಈ ವಾರ್ಷಿಕ ಹಬ್ಬದಲ್ಲಿ ಹಾಡು, ಕುಣಿತ, ಪ್ರಶಸ್ತಿ ವಿತರಣೆಗಳ ಮಸ್ತಿ ಇರಲಿದೆ.

ಕರಿಮಣಿ ಸಾಹಿತ್ಯಳನ್ನು ವರ್ಣಿಸಿ

ಅನುಬಂಧ ಅವಾರ್ಡ್ಸ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ ಕಲರ್ಸ್‌ ಕನ್ನಡವು ಸೋಷಿಯಲ್‌ ಮೀಡಿಯಾದಲ್ಲಿ ನಟಿ ಸ್ಪಂದನಾ ಸೋಮಣ್ಣ ಕುರಿತು ಪುಟ್ಟ ವಿಡಿಯೋ ಹಂಚಿಕೊಂಡಿದೆ. ಕಂಗೊಳಿಸುತ್ತಿರೋ 'ಕರಿಮಣಿ' ಸಾಹಿತ್ಯಾನ ಒಂದು ಪದದಲ್ಲಿ ವರ್ಣಿಸಿ! ಎಂಬ ಶೀರ್ಷಿಕೆಯನ್ನೂ ನೀಡಿದೆ. ಇದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಥರೇವಾರಿ ಕಾಮೆಂಟ್‌ ಮಾಡಿ ಸ್ಪಂದನಾ ಸೋಮಣ್ಣರನ್ನು ವರ್ಣಿಸಲು ಪ್ರಯತ್ನಿಸಿದ್ದಾರೆ. "ಭವಿಷ್ಯದ ಸ್ಯಾಂಡಲ್‌ವುಡ್‌ ಕ್ವೀನ್‌" "ಬ್ಯೂಟಿಫುಲ್‌" "ಅನುಬಂಧದ ಅಂದದ ಉಡುಗೆಯ ನಟಿ" "ನಮ್ಮ ಕ್ಯೂಟ್‌ ಸಾಹಿತ್ಯ" "ಪದಗಳೇ ಸಾಲದು ನಮ್ಮ ಸಾಹಿತ್ಯಳ ಅಂದವ ವರ್ಣಿಸಲು" "ಅದ್ಭುತ" "ಸುಂದರಿ" ಎಂದೆಲ್ಲ ಇನ್‌ಸ್ಟಾಗ್ರಾಂನಲ್ಲಿ ಫ್ಯಾನ್ಸ್‌ ವರ್ಣಿಸಿದ್ದಾರೆ. ಫೇಸ್‌ಬುಕ್‌ನಲ್ಲಿಯೂ ಈಕೆಯನ್ನು ವರ್ಣಿಸಲು ಫ್ಯಾನ್ಸ್‌ ಪ್ರಯತ್ನಿಸಿದ್ದಾರೆ. "ಚೆನ್ನಾಗಿಲ್ಲ- ಒಂದೇ ಪದ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಮೇಕಪ್‌ ಇಲ್ಲದೆ ಇದ್ದರೆ ಚಂದ" "ಸೂಪರ್‌" "ಬ್ಯೂಟಿಫುಲ್‌" "ಜಾರ್ಜಿಯಸ್‌" ಎಂದೆಲ್ಲ ಫ್ಯಾನ್ಸ್‌ ಕರಿಮಣಿ ಸಾಹಿತ್ಯಳನ್ನು ಒಂದೇ ಪದದಲ್ಲಿ ವರ್ಣಿಸಲು ಪ್ರಯತ್ನಿಸಿದ್ದಾರೆ.

ಸ್ಪಂದನಾ ಸೋಮಣ್ಣ ಬಗ್ಗೆ

ಕಲರ್ಸ್‌ ಕನ್ನಡದ ಕರಿಮಣಿ ಸೀರಿಯಲ್‌ ತನ್ನ ವಿಭಿನ್ನ ಕಥಾಹಂದರದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಈ ಸೀರಿಯಲ್‌ನಲ್ಲಿ ಸಾಹಿತ್ಯಾಳ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ ನಟಿಸಿದ್ದಾರೆ. ಅನಾಥ ಹುಡುಗಿ ಶ್ರೀಮಂತನ ಮದುವೆಯಾಗುವಂತಹ ಕಥೆಯನ್ನು ಹೊಂದಿದೆ. ನಾನು ಮತ್ತು ನನ್ನ ಕನಸು ಎಂಬ ಕನ್ನಡ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದರು. ಗೃಹಪ್ರವೇಶ ಸೀರಿಯಲ್‌ನಲ್ಲೂ ನಟಿಸಿದ್ದಾರೆ. ದಿಲ್‌ಖುಷ್‌ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ತೆಲುಗಿನ ನಚ್ಚಾವೆ ಎಂಬ ವೆಬ್‌ ಸರಣಿಯಲ್ಲಿ ನಟಿಸಿದ್ದಾರೆ. ಸುನ್‌ ಲೆ ನಾ ಎಂಬ ಹಿಂದಿ ಆಲ್ಬಂನಲ್ಲೂ ನಟಿಸಿದ್ದಾರೆ.

mysore-dasara_Entry_Point