Serial News: ಭೂಮಿಗೆ ಬಂದ ಭಗವಂತ ಧಾರಾವಾಹಿಗೆ 200 ಸಂಚಿಕೆಯ ಸಂಭ್ರಮ; ಕಿರುತೆರೆ ವೀಕ್ಷಕರ ಮನಗೆದ್ದ ಸೀರಿಯಲ್‌
ಕನ್ನಡ ಸುದ್ದಿ  /  ಮನರಂಜನೆ  /  Serial News: ಭೂಮಿಗೆ ಬಂದ ಭಗವಂತ ಧಾರಾವಾಹಿಗೆ 200 ಸಂಚಿಕೆಯ ಸಂಭ್ರಮ; ಕಿರುತೆರೆ ವೀಕ್ಷಕರ ಮನಗೆದ್ದ ಸೀರಿಯಲ್‌

Serial News: ಭೂಮಿಗೆ ಬಂದ ಭಗವಂತ ಧಾರಾವಾಹಿಗೆ 200 ಸಂಚಿಕೆಯ ಸಂಭ್ರಮ; ಕಿರುತೆರೆ ವೀಕ್ಷಕರ ಮನಗೆದ್ದ ಸೀರಿಯಲ್‌

Bhoomige Banda Bhagavantha Kannada Serial: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿ ಇದೀಗ 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂಭ್ರಮದಲ್ಲಿದೆ. ಈ ಕುರಿತ ವಿವರ ಇಲ್ಲಿದೆ.

Serial News: ಭೂಮಿಗೆ ಬಂದ ಭಗವಂತ ಧಾರಾವಾಹಿಗೆ 200 ಸಂಚಿಕೆಯ ಸಂಭ್ರಮ
Serial News: ಭೂಮಿಗೆ ಬಂದ ಭಗವಂತ ಧಾರಾವಾಹಿಗೆ 200 ಸಂಚಿಕೆಯ ಸಂಭ್ರಮ

ಬೆಂಗಳೂರು: ತಾಂಡವ ಪ್ರೊಡಕ್ಷನ್ ನಿರ್ಮಾಣದ, ಆರೂರು ಜಗದೀಶ್ ಪ್ರಧಾನ ನಿರ್ದೇಶನದ, ಕುಮಾರ್ ಕೆರಗೋಡು ಸಂಚಿಕೆ ನಿರ್ದೇಶನದ ಭೂಮಿಗೆ ಬಂದ ಭಗವಂತ ಧಾರಾವಾಹಿ ಇದೀಗ 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜೀಕನ್ನಡ ವಾಹಿನಿಯಲ್ಲಿ ಈ ಸೀರಿಯಲ್‌ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದೆ.

ವಿಭಿನ್ನ , ವಿಶೇಷ ಮನರಂಜನಾ ಪ್ರಯೋಗಗಳಿಗೆ ಸದಾ ಮುಂಚೂಣಿಯಲ್ಲಿರುವ ಕನ್ನಡದ ನಂಬರ್ 1 ವಾಹಿನಿ ಜೀ ಕನ್ನಡ ಹೆಮ್ಮೆಯಿಂದ ಅರ್ಪಿಸಿದ ಧಾರಾವಾಹಿ ಭೂಮಿಗೆ ಬಂದ ಭಗವಂತ . ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ಮಧ್ಯಮ ವರ್ಗದ ಜನರ ಬದುಕಿನ ಕಥೆಗಳನ್ನು ಹೇಳುತ್ತಲೇ ಜೀವನದ ಮೌಲ್ಯಗಳನ್ನು ಭಗವಂತನ ಮೂಲಕ ನೋಡುಗರಿಗೆ ತಿಳಿಸುತ್ತ ಕಿರುತೆರೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಸೀರಿಯಲ್‌ ಟೀಮ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ಥಕ 200 ಸಂಚಿಕೆಗಳನ್ನು ಪೂರೈಸುತ್ತಿರುವ ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ತಾಂಡವ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ಹೊತ್ತಿದ್ದರೆ ಆರೂರು ಜಗದೀಶ್ ಪ್ರಧಾನ ನಿರ್ದೇಶಕರಾಗಿದ್ದಾರೆ ಮತ್ತು ಕುಮಾರ್ ಕೆರಗೋಡು ಸಂಚಿಕೆ ನಿರ್ದೇಶಕರಾಗಿದ್ದಾರೆ .

ಇನ್ನು ನಟ , ನಿರ್ದೇಶಕ ನವೀನ್ ಕೃಷ್ಣ , ನಟಿ ಕೃತ್ತಿಕಾ ರವೀಂದ್ರ , ಹಿರಿಯ ನಟರಾದ ಉಮೇಶ್ ಎಂ ಎಸ್ , ಭಗವಂತನ ಪಾತ್ರಧಾರಿಯಾಗಿ ಕಾರ್ತಿಕ್ ಸಾಮಗ , ಅಂಕಿತಾ ಜಯರಾಮ್ , ಅನುರಾಗ್ , ಶೋಧನ್ ಬಸ್ರೂರ್ , ಅಶ್ವಿನಿ ಸೇರಿದಂತೆ ಬಹುತಾರಾಗಣ ಈ ಧಾರಾವಾಹಿಯಲ್ಲಿದೆ. ಮತ್ತೊಂದು ವಿಶೇಷವೆಂದರೆ , ಇದು ಮಕ್ಕಳಿಂದ ವಯೋವೃದ್ಧರವರೆಗೂ ತಲುಪಿದ್ದು ಧಾರಾವಾಹಿಗೆ ಮತ್ತು ತಂಡಕ್ಕೆ ಹೆಮ್ಮೆಯ ಸಂಗತಿ ಎಂದು ಜೀವಾಹಿನಿ ಅಭಿಪ್ರಾಯಪಟ್ಟಿದೆ.

ಸೀರಿಯಲ್‌ ಕುರಿತು ವಿವಾದವೂ ಉಂಟಾಗಿತ್ತು

ಕಳೆದ ತಿಂಗಳು ಭೂಮಿಗೆ ಬಂದ ಭಗವಂತ ಸೀರಿಯಲ್‌ನ ದೃಶ್ಯವೊಂದಕ್ಕೆ ಕನ್ನಡಪರ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕನ್ನಡಪರ ಹೋರಾಟಗಾರರು ಕನ್ನಡದ ಬೋರ್ಡ್‌ ಹಾಕಿಲ್ಲ ಎಂಬ ಕಾರಣಕ್ಕೆ ಟೈಲರ್‌ ಒಬ್ಬನಿಗೆ ನಿಂದಿಸುವ ದೃಶ್ಯವಿತ್ತು. ಈ ದೃಶ್ಯಗಳ ಪ್ರೋಮೊ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಹಲವರು ಕೋಪಕ್ಕೆ ಕಾರಣವಾಗಿತ್ತು. ಕನ್ನಡಪರ ಹೋರಾಟಗಾರರನ್ನು ಗೂಂಡಗಳಂತೆ ಬಿಂಬಿಸಲಾಗಿದೆ ಎನ್ನುವುದು ಆಕ್ರೋಶಕ್ಕೆ ಕಾರಣವಾಗಿತ್ತು.

ಕನ್ನಡ ಹೋರಾಟಗಾರರನ್ನು ಅವಮಾನಿಸುವ ಭಗವಂತ ಭೂಮಿಗೆ ಬರೋದೇ ಬೇಡ. ಕನ್ನಡಕ್ಕಿಂತ ಮಿಗಿಲಾದ ಭಗವಂತನಿಲ್ಲ...ಕೂಡಲೇ ಕನ್ನಡಿಗರ ಕ್ಷಮೆ ಕೇಳಿ ಎಂದು ವಿಆರ್‌ ಕಾರ್ಪೆಂಟರ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಈ ಕುರಿತ ವರದಿ ಇಲ್ಲಿದೆ ಓದಿ

Whats_app_banner