ಭೂಮಿಗೆ ಬಂದ ಭಗವಂತ ಧಾರಾವಾಹಿ ಮುಕ್ತಾಯ; ಮನಸ್ಸು ಭಾರವಾಗಿದೆ, ಭಾವುಕ ಪತ್ರ ಬರೆದ ಅಂಕಿತಾ ಜಯರಾಮ್‌-televison news bhoomige banda bhagavantha serial end actress ankitha jayaram write emotional note ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಭೂಮಿಗೆ ಬಂದ ಭಗವಂತ ಧಾರಾವಾಹಿ ಮುಕ್ತಾಯ; ಮನಸ್ಸು ಭಾರವಾಗಿದೆ, ಭಾವುಕ ಪತ್ರ ಬರೆದ ಅಂಕಿತಾ ಜಯರಾಮ್‌

ಭೂಮಿಗೆ ಬಂದ ಭಗವಂತ ಧಾರಾವಾಹಿ ಮುಕ್ತಾಯ; ಮನಸ್ಸು ಭಾರವಾಗಿದೆ, ಭಾವುಕ ಪತ್ರ ಬರೆದ ಅಂಕಿತಾ ಜಯರಾಮ್‌

Bhoomige banda bhagavantha Serial: ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಆರಂಭಗೊಂಡ "ಭೂಮಿಗೆ ಬಂದ ಭಗವಂತ" ಧಾರಾವಾಹಿ ನಿನ್ನೆ(ಆಗಸ್ಟ್‌ 4) ತನ್ನ ಕೊನೆಯ ಪ್ರದರ್ಶನ ನಡೆಸಿ ಮುಕ್ತಾಯಗೊಂಡಿದೆ. ಈ ಸಮಯದಲ್ಲಿ ಈ ಸೀರಿಯಲ್‌ನ ನಟಿ ಅಂಕಿತ ಜಯರಾಮ್‌ ಎಲ್ಲರಿಗೂ ಧನ್ಯವಾದ ತಿಳಿಸಿ ಸೋಷಿಯಲ್‌ ಮೀಡಿಯಾದಲ್ಲಿ ಭಾವುಕ ಪತ್ರ ಬರೆದಿದ್ದಾರೆ.

ಭೂಮಿಗೆ ಬಂದ ಭಗವಂತ ಧಾರಾವಾಹಿ ಮುಕ್ತಾಯ; ಮನಸ್ಸು ಭಾರವಾಗಿದೆ, ಭಾವುಕ ಪತ್ರ ಬರೆದ ಅಂಕಿತಾ ಜಯರಾಮ್‌
ಭೂಮಿಗೆ ಬಂದ ಭಗವಂತ ಧಾರಾವಾಹಿ ಮುಕ್ತಾಯ; ಮನಸ್ಸು ಭಾರವಾಗಿದೆ, ಭಾವುಕ ಪತ್ರ ಬರೆದ ಅಂಕಿತಾ ಜಯರಾಮ್‌

ಬೆಂಗಳೂರು: ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಆರಂಭಗೊಂಡ "ಭೂಮಿಗೆ ಬಂದ ಭಗವಂತ" ಧಾರಾವಾಹಿ ನಿನ್ನೆ(ಆಗಸ್ಟ್‌ 4) ತನ್ನ ಕೊನೆಯ ಪ್ರದರ್ಶನ ನಡೆಸಿ ಮುಕ್ತಾಯಗೊಂಡಿದೆ. ಈ ಸಮಯದಲ್ಲಿ ಈ ಸೀರಿಯಲ್‌ನ ನಟಿ ಅಂಕಿತ ಜಯರಾಮ್‌ ಎಲ್ಲರಿಗೂ ಧನ್ಯವಾದ ತಿಳಿಸಿ ಸೋಷಿಯಲ್‌ ಮೀಡಿಯಾದಲ್ಲಿ ಭಾವುಕ ಪತ್ರ ಬರೆದಿದ್ದಾರೆ. ಇದು ಹಿಂದಿಯ ನೀಲಿ ಛತ್ರಿ ವಾಲೆ ಸೀರಿಯಲ್‌ನ ರಿಮೇಕ್‌ ಆಗಿತ್ತು. ಈ ಸೀರಿಯಲ್‌ನಲ್ಲಿ ನವೀನ್‌ ಕೃಷ್ಣ, ಕಾರ್ತಿಕ್‌ ಸಾಮಗ್‌, ಕೃತಿಕಾ, ಅಂಕಿತಾ ಮುಂತಾದವರು ನಟಿಸಿದ್ದಾರೆ. ಈ ಸೀರಿಯಲ್‌ನಲ್ಲಿ ಅಂಕಿತಾ ಜಯರಾಮ್‌ ಅವರು ಪ್ರನೀತ್‌ ಪಾತ್ರದಲ್ಲಿ ನಟಿಸಿದ್ದರು. ಅಂದರೆ, ಶಿವಪ್ರಸಾದ್‌ ಮತ್ತು ಗಿರಿಜಾ ಮಗಳಾಗಿ ನಟಿಸಿದ್ದರು.

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಅಂಕಿತಾ ಜಯರಾಮ್‌ ಹೀಗೆ ಬರೆದಿದ್ದಾರೆ. ಇದೇ ಸಮಯದಲ್ಲಿ ಸೀರಿಯಲ್‌ ಸೆಟ್‌ನಲ್ಲಿ ವಿವಿಧ ಕಲಾವಿದರೊಂದಿಗಿನ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಅಂಕಿತಾ ಹೀಗೆ ಬರೆದಿದ್ದಾರೆ.

ಭಾವುಕ ಪತ್ರ ಬರೆದ ಅಂಕಿತಾ ಜಯರಾಮ್‌

" ಎಲ್ಲರಿಗೂ ನಮಸ್ಕಾರಗಳು. ಭೂಮಿಗೆ_ಬಂದ_ಭಗವಂತ ಧಾರಾವಾಹಿಯ ನಮ್ಮೆಲ್ಲರ ಪಯಣ ಆಗಸ್ಟ್ 3 ಮತ್ತು ನಾಳೆ 4 ನೇ ತಾರೀಖಿನ ಸಂಚಿಕೆಯೊಂದಿಗೆ ಕೊನೆಗೊಂಡಿದೆ. ಎಂದು ತಿಳಿಸಲು ಮನಸ್ಸು ಬಹಳ ಭಾರವಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಪ್ರತಿ ನಿತ್ಯ ನಡೆಯುವ ಘಟನೆಗಳನ್ನು ಆಧರಿಸಿ ತುಂಬಾ ಅಚ್ಚುಕಟ್ಟಾದ ನಿರೂಪಣೆಯೊಂದಿಗೆ ಭಗವಂತನ ಸಂದೇಶದೊಂದಿಗೆ ಎಲ್ಲರ ಮನ ಮನೆಗಳ ಮೆಚ್ಚಿನ ಧಾರಾವಾಹಿಯಾಗಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಪಡೆದ ಏಕೈಕ ಧಾರಾವಾಹಿ ಯೆಂದು ಹೆಸರು ಪಡೆದದ್ದು ಹೆಮ್ಮೆಯ ವಿಷಯವೆಂದು ಎಲ್ಲರಿಗೂ ತಿಳಿದಿದೆ" ಎಂದು ಅವರು ಹೇಳಿದ್ದಾರೆ.

"ಪ್ರಣೀತ ಎಂಬ ಪಾತ್ರಕ್ಕೆ ಹತ್ತಾರು ಮಕ್ಕಳ ಆಡಿಷನ್ ನಂತರದಲ್ಲೂ ಅಂತಿಮವಾಗಿ ಅಂಕಿತಾಈ ಪಾತ್ರಕ್ಕೆ ಸೂಕ್ತ ಎಂದು ಆಯ್ಕೆ ಮಾಡಿದ ನಿದೇ೯ಶಕರಾದ ಅರೂರು ಜಗದೀಶ್‌ ತುಂಬು ಹೃದಯದ ಧನ್ಯವಾದಗಳು. ಸಂಚಿಕೆಯ ಡೈರೆಕ್ಟಟ್ ಕುಮಾರ್‌ ಕೆರಗೋಡ್‌ ಸರ್ ಚಿತ್ರೀಕರಣದ ಪ್ರತಿಯೊಂದು ಹಂತದಲ್ಲೂ ನೀವು ನೀಡಿದ ಸಹಕಾರ ಶ್ಲಾಘನೀಯ. ಶಾಲೆಗೆ ತೊಂದರೆಯಾಗದಂತೆ, ಹೆಚ್ಚಿಗೆ ರಜಾ ದಿನಗಳಲ್ಲಿ ಚಿತ್ರೀಕರಣದ ಸಮಯವನ್ನು ಹೊಂದಿಸಿಕೊಂಡು ತುಂಬಾ ಅನಿವಾರ್ಯತೆಯ ಸಮಯದಲ್ಲಿ ಮಧ್ಯಾಹ್ನದ ನಂತರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ನೀವು ನೀಡಿದ ಸಹಕಾರಕ್ಕೆ ತುಂಬು ಹೃದಯದ ಧನ್ಯವಾದಗಳು" ಎಂದು ಅಂಕಿತಾ ಬರೆದಿದ್ದಾರೆ.

"ಅಣ್ಣಾವ್ರು ಮಾತಲ್ಲಿ ಹೇಳುವುದಾದರೆ ನಿಮಾ೯ಪಕರು ಕಲಾವಿದರ ಅನ್ನದಾತರು. ತಾಂಡವ ಪ್ರೊಡಕ್ಷನ್ ನ ನಿರ್ಮಾತೃ ತಾಂಡವ ರಾಮ್ ಈ ಧಾರಾವಾಹಿ ಮುಖಾಂತರ ಹತ್ತಾರು ಕಲಾವಿದರಿಗೆ ತಂತ್ರಜ್ಞರಿಗೆ ನಿಮ್ಮ ನಿರ್ಮಾಣದ ಈ ಧಾರಾವಾಹಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಅನ್ನದಾತರಿಗೆ ತುಂಬು ಹೃದಯದ ಧನ್ಯವಾದಗಳು. ಧಾರಾವಾಹಿಯ ನಾಯಕರಾದ ಪ್ರೀತಿಯ ನವೀನ್‌ ಕೃಷ್ಣ ಸರ್‌ ಸೆಟ್‌ನಲ್ಲಿ ಪ್ರತಿಯೊಂದು ಸಮಯದಲ್ಲೂ ನೀವು ತೋರಿದ ಪ್ರೀತಿ ಕಾಳಜಿ, ಹಾಗೂ ಅಂಕಿತಳ ಕೀಟಲೆಗಳನ್ನೆಲ್ಲ ಸಹಿಸಿಕೊಂಡ ನಿಮ್ಮ ಸಂಯಮಕ್ಕೆ ಶರಣು. ಬಹುಶಃ ನಿಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಸಲುಗೆಯಿಂದ ಮಾತನಾಡುತ್ತಿದ್ದ ಅಂಕಿತಗೆ ನೀವು ನೀಡಿದ ಪ್ರೀತಿಯೇ ಮುಖ್ಯ ಕಾರಣ. (ಕಡೆಯದಾಗಿ ನನಗೆ ಹೆಣ್ಣು ಮಗಳಿಲ್ಲ ವೆಂಬ ಕೊರಗನ್ನು ನಿಮ್ಮ ಮಗಳು ಅಂಕಿತ ನೀಗಿಸಿದ್ದಾಳೆಂಬ ನಿಮ್ಮ ಮಾತು ಕೇಳಿ ಹೃದಯ ತುಂಬಿ ಬಂತು. ನಿಮ್ಮ ಈ ಪ್ರೀತಿಗೆ ಸದಾ ಆಭಾರಿ" ಎಂದು ಅವರು ಬರೆದಿದ್ದಾರೆ.

ಭೂಮಿಗೆ ಬಂದ ಭಗವಂತದಲ್ಲಿ ನೀವೇ ಸಾಕ್ಷಾತ್‌ ಪರಮೇಶ್ವರ

"ಭೂಮಿಗೆ ಬಂದ ಭಗವಂತದ ನಮ್ಮ ಕಾರ್ತಿಕ್ ಸಮಾಗರವರು ಚಿತ್ರೀಕರಣದಲ್ಲಿ ಅಪರೂಪಕ್ಕೆ ಒಮ್ಮೆ ಭೇಟಿಯಾದ ಸಮಯದಲ್ಲೆಲ್ಲ ಪ್ರೀತಿಯಿಂದ ಕಂದಮ್ಮ ಅಂತ ಕರೆಯುತ್ತಾ ಬಾಯಿ ಸಿಹಿ ಮಾಡ್ಕೋ ಅಂತ ಕ್ಯಾಟ್ಬರಿ ಚಾಕಲೇಟ್ ನೀಡಿ ನೀವು ತೋರುತ್ತಿದ್ದ ನಿಷ್ಕಲ್ಮವಾದ ಮಗುವಿನ ಪ್ರೀತಿಗೆ ಹಾಗೂ ಭಗವಂತನ ಪಾತ್ರಕ್ಕೆ ನೀವು ನಿಮ್ಮದೇ ಆದ ಕೆಲವು ನಿಯಮ ನಿಷ್ಠೆಗಳನ್ನು ಅಳವಡಿಸಿಕೊಂಡು ಶಿವನ ಪಾತ್ರಕ್ಕೆ ಮತ್ತಷ್ಟು ಮೆರಗು ನೀಡಿದ್ದಿರಿ. ಅಭಿಮಾನಿಗಳ ಪಾಲಿಗೆ ನೀವು ಸಾಕ್ಷಾತ್ ಪರಮೇಶ್ವರ. ನಿಮ್ಮ ಜೊತೆಯಲ್ಲಿ ಅಭಿನಯಿಸುವ ಅವಕಾಶ ನೀಡಿದ ಶಿವನ ಪಾದಕ್ಕೆ ನಮೋ ನಮಃ" ಎಂದು ಹೇಳಿದ್ದಾರೆ.

"ಧಾರಾವಾಹಿಯ ನಾಯಕಿಯಾದ ಕೃತಿಕಾರವರು ತಮಗೆ ನೀಡಿದ ಪಾತ್ರದಲ್ಲಿ ಅತ್ಯಂತ ಸಹಜಾಭಿನಯವಾಗಿ ನಟಿಸಿ ಎಲ್ಲರ ಮನಗೆದ್ದು ,ಅಂಕಿತಳಿಗೆ ಗಿರಿಜಮ್ಮಳಾಗಿ ತಾಯಿಯ ಪ್ರೀತಿಯನ್ನು ತೋರಿ, ಧಾರಾವಾಹಿಯ ಪ್ರೇಕ್ಷಕರ ವರ್ಗ (ಅಮ್ಮ ಮಗಳ ರೀಲ್ಸ್ ನೋಡೋದೇ ತುಂಬಾ ಖುಷಿಯಾಗುತ್ತೆ ಅಂತ ಹೇಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ.) ಕೆಲವೊಮ್ಮೆ ಸರಿ ತಪ್ಪುಗಳ ಬಗ್ಗೆ ತಿಳಿ ಹೇಳುತ್ತಾ ' ಸದಾ ಕಾಲ ಪ್ರೀತಿ ತೋರಿ. ಕೆಲವು ಸಲಹೆ ಸೂಚನೆಗಳನ್ನು ನೀಡುತ್ತಿದ್ದನಿಮಗೆ ತುಂಬು ಹೃದಯದ ಧನ್ಯವಾದಗಳು ಸಿಸ್ಟರ್" ಎಂದು ಹೇಳಿದ್ದಾರೆ.

ನಿಜವಾದ ತಮ್ಮನಾದೆ ಸ್ಕಂದ

"ಧಾರಾವಾಹಿಯ ಹಿರಿಯ ಕಲಾವಿದರಾದ ಉಮೇಶ್ ಸರ್ ರವರು ಅಂಕಿತಗೆ ತಾತನಿಲ್ಲ ವೆಂಬ ಕೊರಗನ್ನು ನೀಗಿಸಿದ್ದ ನಿಮಗೆ ಶರಣು. ಚಿಕ್ಕಮ್ಮ ಚಿಕ್ಕಪ್ಪ ಪಾತ್ರದಾರಿಗಳಾದ ಅಶ್ವಿನಿಬಬ್ಲೂ ಹಾಗೂ ಶೋಧನ್ ಸರ್ ರವರಿಗೂ ತುಂಬು ಹೃದಯದ ಧನ್ಯವಾದಗಳು. ಧಾರಾವಾಹಿಯ ಪುಟ್ಟ ತಮ್ಮನ ಪಾತ್ರಧಾರಿ ಅನುರಾಗ್ (ಸ್ಕಂದ) ಹೊರಗಡೆ ಎಲ್ಲಾ ಅಂಕಿತಳಿಗೆ ನಿಜವಾದ ತಮ್ಮನೆಂದೇ ಭಾವಿಸುವಷ್ಟು ಅಂದರೆ (ಮಹಾಥ೯ ಜೊತೆಗಿದ್ದರೂ ಸಹ) ನಿನ್ನ ತಮ್ಮ ಎಲ್ಲಿ ಎಂದು ಎಲ್ಲರೂ ಕೇಳುವಷ್ಟರ ಮಟ್ಟಿಗೆ ನಿಮ್ಮ ಪ್ರೀತಿಯ ಬಾಂಧವ್ಯ ಮೂಡಿ ಬಂದಿದೆ. ನಿನ್ನ ಮುಂದಿನ ಭವಿಷ್ಯ ಉಜ್ಬಲವಾಗಿರಲಿ. ಪರದೆಯ ಮೇಲೆ ಚಂದವಾಗಿ ಕಾಣುವಂತೆ ಮಾಡಿದ ಮಾಡಿದ #ನಾಗೇಂದ್ರ ಸರ್ ಹಾಗೂ ಸಂಧ್ಯಾ ದಂಪತಿಗಳಿಗೂ ತುಂಬು ಹೃದಯದ ಧನ್ಯವಾದಗಳು. ಅಸೋಸಿಯೇಟ್ ಡೈರೆಕ್ಟರ್ಸ್‌ ಸೂರ್ಯ ರಾಕೇಶ್ ಶ್ರವಣ ಪ್ರತಿಯೊಬ್ಬರು ಪ್ರೀತಿಯಿಂದ ತಂಗ್ಯಮ್ಮ ಎಂದು ಕರೆಯುತ್ತಾ scene explain ಮಾಡುತ್ತಿದ್ದ ರೀತಿ ನಿಮ್ಮ ಆತ್ಮೀಯತೆಗೆ ಅಪರೂಪದ ತಂಡಕ್ಕೆ. ಪ್ರತಿಯೊಂದು ಕುಂದು ಕೊರತೆಗಳನ್ನು ನಿಭಾಯಿಸಿದ ಮ್ಯಾನೇಜರ್ ಮಂಜುನಾಥ್ ರವರಿಗೂ. ನಮ್ಮ ಚಾಲಕ ತಂಡದ ನಾಗರಾಜ್ ಸರ್ ನೀವು ತೋರಿದ ಪ್ರೀತಿಗೆ. ಪ್ರೊಡಕ್ಷನ್ ಡಿಪಾಟ್ ಮೆಂಟ್ ನ ಪ್ರವೀಣ್. ಮತ್ತು ಶಂಕರ್ ಹಾಗೂ ಮಮತ ರವರು ಅಚ್ಚುಕಟ್ಟಾಗಿ ಊಟ ಉಪಚಾರ ನೋಡಿಕೊಂಡ ನಿಮಗೆ ಧನ್ಯವಾದಗಳು ಎಂದು ಎಲ್ಲರಿಗೂ ನಮಸ್ಕಾರದ ಇಮೋಜಿ ಹಾಕಿದ್ದಾರೆ ಅಂಕಿತಾ.

ಕಡೆಯ ದಿನ ಒಟ್ಟಾಗಿ ನಿಮ್ಮನ್ನೆಲ್ಲನ್ನೆಲ್ಲ ಬಿಟ್ಟು ಬರುವಾಗ ಮನಸ್ಸು ನಮ್ಮವರನ್ನೆಲ್ಲ ಬಿಟ್ಟು ದೂರ ಹೋಗುತ್ತಿರುವ ಭಾವನೆಗಳಿಂದ ಭಾರವಾಗಿತ್ತು. ಝೀ ಕನ್ನಡ ಆಯೋಜಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಸಮಯಕ್ಕೆ ಸರಿಯಾಗಿ ಕರೆಸಿಕೊಂಡು, ಸೂಕ್ತವಾದ ವ್ಯವಸ್ಥೆಯೊಂದಿಗೆ ಎಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದ ಕ್ಲಸ್ಟರ್ ಹೆಡ್ ಆದಂತಹ ಪೃಥ್ವಿ ಸರ್ ರವರ ಕಾರ್ಯ ವೈಖರಿ ನಿಜಕ್ಕೂ ಶ್ಲಾಘನೀಯ. ಕಿರು ಪರದೆಯ ಮೇಲೆ ಅತ್ಯಂತ ಸುಂದರವಾಗಿ ಫ್ರೆಂಮ್ ಟು ಫ್ರೆಂ ಮ್ ಕಾಣುವಂತೆ ಮಾಡಿದ ನಮ್ಮ ಕ್ಯಾಮರಾಮ್ಯಾನ್ ಕಾಂತರಾಜು ಹಾಗೂ ರಘು ರವರಿಗೂ ತುಂಬು ಹೃದಯದ ಧನ್ಯವಾದಗಳು. ಅಪರೂಪಕ್ಕೆ ಭೇಟಿಯಾಗುತ್ತಿದ್ದ ಮೂಗೂರು ಸುಂದರ್ ಸರ್ . ಕಾತಿ೯ಕ್ ಜಯರಾಂ . ಪವನ್ ಸರ್ . ದೇಶಪಾಂಡೆ . ದಾನಪ್ಪ. ಚಕ್ರವತಿ೯, ಮಹೇಶ್ ಆಚಾರ್ಯ. ಸುಮತಿ ಹಾಗೂ ಅತಿಥಿ ಪಾತ್ರಧಾರಿಗಳಾಗಿ ಬಂದ ಎಲ್ಲ ಕಲಾವಿದರಿಗೂ ಪ್ರೀತಿಸಿ, ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು" ಎಂದು ಅಂಕಿತಾ ಎಲ್ಲರಿಗೂ ಪ್ರೀತಿಯ ಪತ್ರ ಬರೆದಿದ್ದಾಳೆ.