ಅಮೃತಧಾರೆ ಸೀರಿಯಲ್‌: ಆನಂದ್‌ಗೆ ಅಪಘಾತ ಮಾಡಿದ್ದು ಜೈದೇವ್‌ ಎಂಬ ಗುಮಾನಿ ಅಪರ್ಣಾಳಿಗೆ ಬಂತು, ದಿಯಾಳ ಮನಸ್ಸಲ್ಲೂ ಅನುಮಾನದ ಹುಳ-televison news bhoomika hears partha and apekshas argument amruthadhaare serial today episode pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಸೀರಿಯಲ್‌: ಆನಂದ್‌ಗೆ ಅಪಘಾತ ಮಾಡಿದ್ದು ಜೈದೇವ್‌ ಎಂಬ ಗುಮಾನಿ ಅಪರ್ಣಾಳಿಗೆ ಬಂತು, ದಿಯಾಳ ಮನಸ್ಸಲ್ಲೂ ಅನುಮಾನದ ಹುಳ

ಅಮೃತಧಾರೆ ಸೀರಿಯಲ್‌: ಆನಂದ್‌ಗೆ ಅಪಘಾತ ಮಾಡಿದ್ದು ಜೈದೇವ್‌ ಎಂಬ ಗುಮಾನಿ ಅಪರ್ಣಾಳಿಗೆ ಬಂತು, ದಿಯಾಳ ಮನಸ್ಸಲ್ಲೂ ಅನುಮಾನದ ಹುಳ

Amruthadhaare Serial: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ನಾನಾ ಬೆಳವಣಿಗೆಗಳು ಆಗಿವೆ. ಒಂದೆಡೆ ಅಪೇಕ್ಷಾ ಮತ್ತು ಪಾರ್ಥರ ಜಗಳವನ್ನು ಭೂಮಿಕಾ ನೋಡಿದ್ದಾಳೆ. ಇನ್ನೊಂದೆಡೆ ಆನಂದ್‌ಗೆ ಅಪಘಾತ ಮಾಡಿದ್ದು ಜೈದೇವ್‌ ಎಂಬ ಗುಮಾನಿ ಅಪರ್ಣಾಳಿಗೆ ಬಂದಿದೆ.

ಅಮೃತಧಾರೆ ಸೀರಿಯಲ್‌
ಅಮೃತಧಾರೆ ಸೀರಿಯಲ್‌

ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ: ಆನಂದ್‌ ಆಫೀಸ್‌ ಹತ್ತಿರ ಬಂದಿದ್ದಾನೆ. ಅಲ್ಲಿಗೆ ಗೌತಮ್‌ ಬಂದಿದ್ದಾರೆ. ಒಂದಿಷ್ಟು ಕಾಳಜಿಯ ಮಾತುಗಳನ್ನು ಆಡುತ್ತಾರೆ ಗೌತಮ್‌. "ನಿನ್ನ ಹತ್ರ ಮಾತನಾಡದೆ ಬೇಜಾರಾಗಿತ್ತು. ಅದಕ್ಕೆ ಹೇಳದೇ ಕೇಳದೇ ಬಂದೆ" ಎಂದು ಹೇಳುತ್ತಾನೆ. ಜೈದೇವ್‌ ವಿಷಯ ಏನಾಯ್ತು ಎಂದು ಆನಂದ್‌ ಕೇಳುತ್ತಾನೆ. "ಆತನಿಗೆ ತಿಳಿಸಿದ್ದೇನೆ. ತಮ್ಮನಾಗೋ ಸೆಂಟಿಮೆಂಟ್‌ ಅಡ್ಡಿಯಾಗಿದೆ. ಪ್ರೀತಿ ಅನ್ನೋದು ಕಲ್ಲು ಮನಸ್ಸನ್ನು ಕರಗುತ್ತದೆ. ಅವನನ್ನು ಆಫೀಸ್‌ಗೆ ಬರಬೇಡ ಎಂದಿದ್ದೇನೆ. ಇದರಿಂದ ಆತ ಬದಲಾಗಬಹುದು. ಬದಲಾಗದೆ ಇದ್ದರೆ ನೋಡೋಣ" ಎಂದು ಗೌತಮ್‌ ದಿವಾನ್‌ ಹೇಳುತ್ತಾನೆ.

ಅಪೇಕ್ಷಾ ಮತ್ತು ಪಾರ್ಥ ಜಗಳ

"ಅಪೇಕ್ಷಾ ಏನು ಸಮಸ್ಯೆ. ನನ್ನನ್ನು ಏಕೆ ಬ್ಲೇಮ್‌ ಮಾಡ್ತಾ ಇದ್ದೀರಿ" ಎಂದು ಪಾರ್ಥ ಕೇಳುತ್ತಾನೆ. "ನನ್ನ ಸ್ಥಾನದಲ್ಲಿ ನಿಂತು ನೋಡಿ. ನೀವು ಮೊದಲಿನಂತೆ ಇದ್ದೀರ" ಎಂದೆಲ್ಲ ಜೋರಾಗಿ ಅಪೇಕ್ಷಾ ಕೇಳುತ್ತಾಳೆ. ಆ ಸಮಯದಲ್ಲಿ ಹೊರಗಡೆ ಹಾದು ಹೋಗುವ ಭೂಮಿಕಾಗೆ ಇವರ ಜಗಳ ಕೇಳಿಸುತ್ತದೆ. "ಮನೆಯಲ್ಲಿ ಎಲ್ಲರ ಜತೆ ಚೆನ್ನಾಗಿ ಇದ್ದೀರಿ. ನನ್ನ ಜತೆ ಚೆನ್ನಾಗಿಲ್ಲ. ನನ್ನ ಜತೆ ಜಾಲಿಯಾಗಿ ಇರಲು ನಿಮಗೆ ಏನಾಗಿದೆ" ಎನ್ನುತ್ತಾಳೆ. "ಮೊದಲಿದ್ದ ಪಾರ್ಥನೇ ಬೇರೆ. ಈಗಿನ ಪಾರ್ಥನೇ ಬೇರೆ. ನಾನು ಪ್ರೀತಿ ಮಾಡಿದ ಪಾರ್ಥ ನೀವಲ್ಲ" ಎಂದು ಅಪೇಕ್ಷಾ ಬೇಸರದಿಂದ ಹೇಳುತ್ತಾಳೆ. ಈ ಮಾತುಗಳು ಭೂಮಿಕಾ ಕಿವಿಗೆ ಬೀಳುತ್ತದೆ. "ನಿಮ್ಮಲ್ಲಿ ಏನೂ ಮಾತನಾಡಿದ್ರು ಯೂಸ್‌ಲೆಸ್‌. ನನ್ನನ್ನು ಬ್ಲೇಮ್‌ ಮಾಡಬೇಡಿ. ನಾನು ಚೇಂಜ್‌ ಆಗಿದ್ದೀನಿ ಅಂತ ಹೇಳಬೇಡಿ. ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ. ಎಷ್ಟು ಚೇಂಜ್‌ ಆಗಿದ್ದೀರಾ? ನೀವು ನಿಮ್ಮ ಬಿಹೇವಿಯರ್‌, ನಿಮ್ಮ ಬಾಡಿ ಲಾಂಗ್ವೇಜ್‌ ಎಲ್ಲವೂ ಚೇಂಜ್‌ ಆಗಿದೆ. ಒಟ್ಟಿನಲ್ಲಿ ನೀವೇ ಚೇಂಜ್‌ ಆಗಿ ಹೋಗಿದ್ದೀರ" ಎಂದು ಪಾರ್ಥ ಕೋಪದಲ್ಲಿ ಹೇಳುತ್ತಾನೆ. ಇದನ್ನು ಕೇಳಿ ಭೂಮಿಕಾ ಮರೆಯಿಂದ ಆಚೆ ಹೋಗುತ್ತಾರೆ. ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಭೂಮಿಕಾಗೆ ಅರ್ಥ ಆಗಿದೆ.

ಮಲ್ಲಿ ಸೇವೆಯಲ್ಲಿ ಜೈದೇವ್‌

ಇನ್ನೊಂದೆಡೆ ಜೈದೇವ್‌ ಮಲ್ಲಿಯ ಕಾಲು ಒತ್ತುತ್ತಿದ್ದಾನೆ. ಇದನ್ನು ನೋಡಿ ಮಲ್ಲಿಯ ಹೃದಯ ತುಂಬಿಬರುತ್ತದೆ. "ನಾನಂದ್ರೆ ನಿಮಗೆ ಇಷ್ಟೊಂದು ಇಷ್ಟನಾ" ಎಂದು ಮಲ್ಲಿ ಕೇಳುತ್ತಾಳೆ. "ಇವಳ ಕಾಲು ಹಿಸುಕುವುದಕ್ಕಿಂತ ಕತ್ತು ಹಿಸುಕಿದರೆ ಚೆನ್ನಾಗಿತ್ತು" ಎಂದು ಯೋಚಿಸುತ್ತಾನೆ. ಇದೇ ಸಮಯದಲ್ಲಿ ಮಲ್ಲಿ ವಾಮಿಟ್‌ ಮಾಡುತ್ತಾಳೆ. ಈ ಸಮಯದಲ್ಲಿ ನಾನೇ ಕ್ಲೀನ್‌ ಮಾಡಿ ಫ್ಯಾಮಿಲಿ ಸ್ಟಾರ್‌ ಆಗ್ತಿನಿ ಎಂದುಕೊಳ್ಳುತ್ತಾನೆ. ಬಟ್‌ ಎತ್ತಿಕೊಂಡು ಕ್ಲೀನ್‌ ಮಾಡುತ್ತಾನೆ.

ಮತ್ತೊಂದೆಡೆ ದಿಯಾ ಚಡಪಡಿಸುತ್ತಾಳೆ. ಗೆಳೆತಿಯ ಜತೆ ಮಾತನಾಡುತ್ತಾ ಇದ್ದಾಳೆ. "ನನ್ನ ಬಾಯ್‌ ಫ್ರೆಂಡ್‌ ಯಾಕೋ ಸುದ್ದಿ ಇಲ್ಲ. ಅವರು ಚೇಂಜ್‌ ಆಗಿರಬಹುದು ಅನಿಸುತ್ತದೆ" ಎಂದು ದಿಯಾ ಹೇಳುತ್ತಾಳೆ. ಅದಕ್ಕೆ ಅವಳ ಗೆಳತಿ "ಇದು ಯೂಸ್‌ ಆಂಡ್‌ ಥ್ರೋ ಆಗಿರಬಹುದು. ಮಾರುಕಟ್ಟೆಯಲ್ಲಿ ಹೊಸತು ಬಂದಾಗ ಹಳೆಯದನ್ನು ಪಕ್ಕಕ್ಕೆ ಇಡುತ್ತಾರೆ ಅಲ್ವ" ಎನ್ನುತ್ತಾಳೆ. ಇದನ್ನು ಕೇಳಿ ದಿಯಾಳ ಆತಂಕ ಇನ್ನಷ್ಟು ಹೆಚ್ಚುತ್ತದೆ. "ನನ್ನ ಜಯ್‌ ಹಾಗೇ ಮಾಡೋದಿಲ್ಲ" ಎನ್ನುತ್ತಾಳೆ. "ಮೋಸ ಹೋಗುವ ತನಕ ಮೋಸ ಹೋದದ್ದು ಗೊತ್ತಾಗುವುದಿಲ್ಲ" ಎನ್ನುತ್ತಾಳೆ ಗೆಳತಿ.

ಪಾರ್ಥ ಮತ್ತು ಅಪೇಕ್ಷಾ ಮಾತನಾಡುತ್ತಾರೆ. ಜಗಳ ಮುಗಿದ ಬಳಿಕ ಕ್ಷಮಾಪಣೆ ಕೇಳುತ್ತಾನೆ ಪಾರ್ಥ. "ನೀವು ಸ್ವಾರಿ ಕೇಳಿದ್ರೆ ನಾನು ಬದಲಾಗ್ತಿನಿ. ನನ್ನ ಮಾತು, ನನ್ನ ಬಾಡಿ ಲ್ಯಾಂಗ್ವೇಜ್‌ ಅಷ್ಟೊಂದು ಚೇಂಜ್‌ ಆಗಿದ್ದೇಯಾ. ನಾನು ಕೆಟ್ಟವಳಾಗಿದ್ದೇನ" ಎಂದು ಅಳು ಮುಂದುವರೆಸುತ್ತಾಳೆ. "ಮದುವೆ ಆದ ಬಳಿಕ ಎಲ್ಲರೂ ನನ್ನನ್ನು ನೋಡುವ ರೀತಿಯೇ ಬದಲಾಗಿದೆ. ನಾನೋಬ್ಲೆ ಇದ್ದೀನಿ ಅಂತ ನೀನೂ ಮರೆತುಬಿಟ್ಟಿರುವೆ. ನೀವೂ ನನ್ನನ್ನು ಎಲ್ಲರಂತೆ ನೋಡ್ತಾ ಇದ್ದೀರಿ" ಎಂದು ಅಪೇಕ್ಷಾ ಹೇಳುತ್ತಾಳೆ. ಒಂದಿಷ್ಟು ಕಿರುಚಾಟದ ಮಾತು ಮುಂದುವರೆಯುತ್ತದೆ. ಪಾರ್ಥ ಸಮಧಾನ ಮಾಡಲು ಯತ್ನಿಸುತ್ತಾನೆ.

ಭೂಮಿಕಾ ಶಕುಂತಲಾದೇವಿಯನ್ನು ಭೇಟಿಯಾಗುತ್ತಾಳೆ. "ಅಪ್ಪಿ ಮತ್ತು ಪಾರ್ಥರ ನಡುವೆ ಏನೋ ಪ್ರಾಬ್ಲಂ ಆಗಿದೆ ಅನಿಸುತ್ತದೆ. ಅವರನ್ನು ಸ್ವಲ್ಪ ನೋಡಿಕೊಳ್ಳಿ" ಎಂದು ಶಕುಂತಲಾದೇವಿ ಹೇಳುತ್ತಾಳೆ. "ನೀನೇ ಹೇಳಬಹುದು ಅಲ್ವಾ" ಎಂದಾಗ "ಅಪ್ಪಿ ನನ್ನ ಬಳಿ ಸ್ವಲ್ಪ ಬೇಜಾರು ಮಾಡಿಕೊಂಡಿದ್ದಾಳೆ" ಎಂದು ಹೇಳುತ್ತಾಳೆ. "ನಾನು ಏನೇ ಹೇಳಿದ್ರೂ ಅವಳು ಕೇಳಲು ರೆಡಿಯಿಲ್ಲ. ಅದಕ್ಕೆ ನೀವೇ ಹೇಳಿ" ಎನ್ನುತ್ತಾಳೆ. "ರೂಂನ ಹತ್ರ ಅವರ ಜಗಳ ಮಾಡಿದ್ದು ಕೇಳಿಸ್ತು" ಎಂದಾಗ "ಕದ್ದು ಕೇಳಿಸ್ಕೊಂಡ್ಯ. ನೀನ್ಯಾಕೆ ಹಾಗೇ ಮಾಡಿದೆ" ಎಂದು ಶಕುಂತಲಾ ಜೋರಾಗಿ ಹೇಳುತ್ತಾರೆ. "ಈ ವಿಚಾರನ ಇಲ್ಲಿಗೇ ಮುಗಿಸಿಬಿಡು. ಸೀರಿಯಸ್‌ ಆದ್ರೆ ಅವರೇ ಬಂದು ನನ್ನಲ್ಲಿ ಹೇಳಿಕೊಳ್ಳುತ್ತಾರೆ" ಎನ್ನುತ್ತಾರೆ. "ಅಂತೂ ಇವಳ ಮಾತು ಎಲ್ಲೂ ನಡೆಯೊಲ್ಲ ಅಂತ ಆಯ್ತು" ಎಂದುಕೊಳ್ಳುತ್ತಾರೆ ಶಕುಂತಲಾ.

ಮಲ್ಲಿಗೆ ಹಸಿವಾಗಿದೆ. ಹಾಲು ಕಾಯಿಸಿಕೊಂಡು ಬರ್ತಿನಿ ಎಂದಾಗ ಜೈದೇವ್‌ಗೆ ದಿಯಾಳ ಕಾಲ್‌ ಬರುತ್ತದೆ. ನಾನೇ ಹಾಲು ಕಾಯಿಸಿಕೊಂಡು ಬರ್ತಿನಿ ಎಂದು ಹೊರಗೆ ಹೋಗುತ್ತಾನೆ. ದಿಯಾಳ ಜತೆ ಮಾತನಾಡಲು ಹೊರಗೆ ಹೋಗುತ್ತಾನೆ

ಇನ್ನೊಂದೆಡೆ ಆನಂದ್‌ ಚಿಂತೆ ಮಾಡ್ತಾ ಇದ್ದಾನೆ. ಆಗ ಅಲ್ಲಿಗೆ ಅಪರ್ಣಾ ಬರುತ್ತಾಳೆ. ಒಂದಿಷ್ಟು ಮಾತುಕತೆ ನಡೆಯುತ್ತದೆ. ಏನು ಚಿಂತೆ ಹೇಳು ಎಂದು ಆಣೆ ಮಾಡಿಸಿಕೊಳ್ಳುತ್ತಾಳೆ. ಅನಿವಾರ್ಯವಾಗಿ ತನ್ನ ಮನಸ್ಸಲ್ಲಿರುವ ದುಃಖವನ್ನು ಹೇಳುತ್ತಾನೆ. ಜೈದೇವ್‌ನ ಕಥೆ ಹೇಳುತ್ತಾನೆ. "ಇದಕ್ಕೆಲ್ಲ ಕಾರಣ ಜೈದೇವಾ?" ಎಂದು ಅಚ್ಚರಿಯಿಂದ ಕೇಳುತ್ತಾಳೆ. ಗೌತಮ್‌ಗೆ ಈ ವಿಚಾರ ಹೇಳಿದ್ದೇನೆ. ಮುಂದೆನಾಗುತ್ತದೆ ಎಂದು ಟೆನ್ಷನ್‌ ಆಗಿದೆ ಎನ್ನುತ್ತಾನೆ. "ಆನಂದ್‌ ನೀನು ಇಷ್ಟೆಲ್ಲ ಹೇಳಿದ ಮೇಲೆ ನನಗೆ ಏನು ಅನಿಸ್ತಾ ಇದೆ ಗೊತ್ತಾ? ನಿನಗೆ ಇಷ್ಟೆಲ್ಲ ಆಗಲು ಆ ಜೈದೇವ್‌ ಯಾಕೆ ಕಾರಣ ಆಗಿರಬಾರದು?ʼ ಎಂದು ಸಂದೇಹದಿಂದ ಕೇಳುತ್ತಾಳೆ ಅಪರ್ಣಾ. "ನಾಳೆನೇ ಆ ಕೆಲಸಕ್ಕೆ ರಿಸೈನ್‌ ಮಾಡು. ಅವರ ಸಹವಾಸನೇ ಬೇಡ ನಮಗೆ" ಎನ್ನುತ್ತಾಳೆ. "ನಾನು ಅಲ್ಲಿ ಕೆಲಸ ಮಾಡೋದು ನನ್ನ ಗೆಳೆಯನಿಗಾಗಿ" ಎಂದೆಲ್ಲ ಹೇಳುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)