Abdu Rozik: ಆಹಾ ಅಬ್ದು ರೋಝಿಕ್‌ಗೆ ಮದುವೆಯಂತೆ; ಬಿಗ್‌ಬಾಸ್‌ 16 ಸ್ಪರ್ಧಿಯ ಹೈಟ್‌ ಎಷ್ಟು, ಮದ್ವೆ ಆಗೋ ಹುಡುಗಿ ಯಾರು? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಮನರಂಜನೆ  /  Abdu Rozik: ಆಹಾ ಅಬ್ದು ರೋಝಿಕ್‌ಗೆ ಮದುವೆಯಂತೆ; ಬಿಗ್‌ಬಾಸ್‌ 16 ಸ್ಪರ್ಧಿಯ ಹೈಟ್‌ ಎಷ್ಟು, ಮದ್ವೆ ಆಗೋ ಹುಡುಗಿ ಯಾರು? ಇಲ್ಲಿದೆ ವಿವರ

Abdu Rozik: ಆಹಾ ಅಬ್ದು ರೋಝಿಕ್‌ಗೆ ಮದುವೆಯಂತೆ; ಬಿಗ್‌ಬಾಸ್‌ 16 ಸ್ಪರ್ಧಿಯ ಹೈಟ್‌ ಎಷ್ಟು, ಮದ್ವೆ ಆಗೋ ಹುಡುಗಿ ಯಾರು? ಇಲ್ಲಿದೆ ವಿವರ

Abdu Rozik Marriage: ಬಿಗ್‌ಬಾಸ್‌ 16 ಸ್ಪರ್ಧಿಯಾಗಿದ್ದ ತಜಕಿಸ್ತಾನ ಮೂಲದ ಅಬ್ದು ರೋಝಿಕ್‌ ಇದೇ ಜುಲೈ 7ರಂದು ಅಮಿರಾ ಎಂಬ ಯುವತಿಯನ್ನು ವಿವಾಹವಾಗಲಿದ್ದಾರೆ. ಈ ಖುಷಿಯ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ 16 ಸ್ಪರ್ಧಿ ಅಬ್ದು ರೋಝಿಕ್‌ಗೆ ಜುಲೈ 7ರಂದು ಮದುವೆ
ಬಿಗ್‌ಬಾಸ್‌ 16 ಸ್ಪರ್ಧಿ ಅಬ್ದು ರೋಝಿಕ್‌ಗೆ ಜುಲೈ 7ರಂದು ಮದುವೆ

ಬೆಂಗಳೂರು: ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ ಹುಡುಗಿ ಜತೆ ವಿವಾಹವಾಗುತ್ತಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ತನ್ನ ಮದುವೆ ನಿಶ್ಚಿತಾರ್ಥದ ಉಂಗುರವನ್ನೂ ತೋರಿಸಿದ್ದಾರೆ. ಬಿಳಿ ಅಂಗಿ, ಕಪ್ಪು ಬ್ಲೇಜರ್‌ ಮತ್ತು ಅದಕ್ಕೆ ಮ್ಯಾಚಿಂಗ್‌ ಆಗುವ ಪ್ಯಾಂಟ್‌ ಧರಿಸಿ ಕ್ಯಾಮೆರಾದ ಮುಂದೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಪ್ರೀತಿಗೆ ಬಿದ್ದೆ ಎಂದ ಅಬ್ದು

"ಗೆಳೆಯರೇ ನನಗೆ ಈಗ 20 ವರ್ಷ ಎಂದು ನಿಮಗೆ ತಿಳಿದಿದೆ. ನನ್ನನ್ನು ಗೌರವದಿಂದ ಕಾಣುವ, ನನ್ನನ್ನು ತುಂಬಾ ಪ್ರೀತಿಸುವ ಹುಡುಗಿಯನ್ನು ಪ್ರೀತಿಸಬೇಕೆಂದು ಕನಸು ಕಂಡಿದ್ದೆ. ಇದೀಗ ಆ ಹುಡುಗಿ ನನಗೆ ದೊರಕಿದ್ದಾಳೆ. ಆಕೆ ನನ್ನನ್ನು ತುಂಬಾ ಗೌರವಿಸುತ್ತಾಳೆ. ನನ್ನನ್ನು ತುಂಬಾ ಲವ್‌ ಮಾಡ್ತಾಳೆ. ನನಗೆ ತುಂಬಾ ಖುಷಿಯಾಗಿದೆ" ಎಂದು ಹೇಳಿದ ಅಬ್ದು ಉಂಗುರದ ಪೆಟ್ಟಿಗೆಯೊಳಗಿನ ಉಂಗುರ ತೋರಿಸಿದ್ದಾರೆ.

ಜುಲೈ 7ರಂದು ಅಬ್ದು ಮದುವೆ

ಅಬ್ದು ಈ ವಿಡಿಯೋಗೆ ಹೀಗೆ ಕ್ಯಾಪ್ಷನ್‌ ಬರೆದಿದ್ದಾರೆ. "ನನ್ನ ಜೀವನದಲ್ಲಿ ಇಂತಹ ಸುಂದರವಾದ ದಿನ ಇಷ್ಟು ಬೇಗ ಬರುತ್ತದೆ ಎಂದು ಭಾವಿಸಿರಲಿಲ್ಲ. ಜುಲೈ 7ರಂದು ನನ್ನ ಮದುವೆ, ಈ ದಿನ ನೆನಪಿಟ್ಟುಕೊಳ್ಳಿ" ಎಂದು ಅವರು ಬರೆದುಕೊಂಡಿದ್ದಾರೆ. "ನಾನು ಎಷ್ಟು ಖುಷಿಗೊಂಡಿದ್ದೇನೆ ಎಂದು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಲವ್‌, ಮ್ಯಾರೇಜ್‌, ಎಂಗೇಜ್‌ಮೆಂಟ್‌, ಲೈಫ್‌, ವೆಡ್ಡಿಂಗ್‌, ರೋಮಾನ್ಸ್‌, ಜೀವನ ಸಂಗಾತಿ" ಎಂದೆಲ್ಲ ಬರೆದುಕೊಂಡಿದ್ದಾರೆ.

ಖುಷಿಪಟ್ಟ ಸೆಲೆಬ್ರಿಟಿಗಳು

ಅಬ್ದು ಪೋಸ್ಟ್‌ಗೆ ಸಾಕಷ್ಟು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. "ಅದ್ಭುತ ಸುದ್ದಿ, ಸಹೋದರ, ನಿನ್ನ ಜೀವನದಲ್ಲಿ ಸದಾ ಸಂತೋಷ ತುಂಬಿರಲಿ" ಎಂದು ಎಆರ್‌ ರೆಹಮಾನ್‌ ಕಾಮೆಂಟ್‌ ಮಾಡಿದ್ದಾರೆ. "ಅಭಿನಂದನೆಗಳು ಸಹೋದರ" ಎಂದು ಕಿಲಿ ಪೌಲ್‌ ಮತ್ತು ರಾಜಿವ್‌ ಅಡಾತಿಯಾ ಬರೆದಿದ್ದಾರೆ. ಸಾಕಷ್ಟು ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಅಬ್ದು ಮದುವೆಯಾಗುವ ಹುಡುಗಿ ಯಾರು?

ಈ ಹಿಂದೆ ಖಲೀಜಾ ಟೈಮ್ಸ್‌ ಅಬ್ದು ಮದುವೆ ಕುರಿತು ಅಪ್‌ಡೇಟ್‌ ನೀಡಿತ್ತು. "ಅಬ್ದು ಅವರು 19 ವರ್ಷ ವಯಸ್ಸಿನ ಅಮಿರಾ ಎಂಬ ಶಾರ್ಜಾದ ಎಮಿರೇಟ್‌ ಹುಡುಗಿಯನ್ನು ವಿವಾಹವಾಗಲಿದ್ದಾನೆ. ಅಮಿರಾಳನ್ನು ಅಬ್ದು ಅವರು ಕಸಿಪ್ರಿಯಾನಿ ಡೊಲ್ಸಿ ಎಂಬ ದುಬೈ ಮಾಲ್‌ನಲ್ಲಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಭೇಟಿಯಾಗಿದ್ದರು" ಎಂದು ಖಲೀಜಾ ಟೈಮ್ಸ್‌ ವರದಿ ಮಾಡಿದೆ.

ದುಬೈನಲ್ಲಿ ಜುಲೈ 7ರಂದು ಅಬ್ದು ಮತ್ತು ಅಮಿರಾರ ವಿವಾಹ ನಡೆಯಲಿದೆ. ಮದುವೆ ನಡೆಯುವ ಸ್ಥಳದ ಕುರಿತು ಹೆಚ್ಚಿನ ವಿವರ ಲಭ್ಯವಿಲ್ಲ. ಅಬ್ದು ಅವರ ಮ್ಯಾನೇಜ್‌ಮೆಂಟ್‌ ಕಂಪನಿಯಾದ ಇಂಟರ್‌ನ್ಯಾಷನಲ್‌ ಫೈಟಿಂಗ್‌ ಚಾಂಪಿಯನ್‌ಶಿಪ್‌ ಮ್ಯಾನೇಜ್‌ಮೆಂಟ್‌ ಈ ಕುರಿತು ಖಚಿತಪಡಿಸಿದೆ.

ಯಾರಿದು ಅಬ್ದು?

ಅಬ್ದು ತಜಕಿಸ್ತಾನದ ಜನಪ್ರಿಯ ಸಂಗೀತಗಾರ. ಬಿಗ್‌ಬಾಸ್‌ 16ನಲ್ಲಿ ಭಾಗವಹಿಸಿದ ಬಳಿಕ ಇವರ ಜನಪ್ರಿಯತೆ ಹೆಚ್ಚಾಯಿತು. ತನ್ನ ಹಿಂದಿನ ವೃತ್ತಿಪರ ತೊಂದರೆಯ ಕಾರಣದಿಂದ ಅಬ್ದು ಬೇಗನೇ ಬಿಗ್‌ಬಾಸ್‌ನಿಂದ ಹೊರಕ್ಕೆ ಹೋದರು. ಇವರು ಬುರ್ಗಿರ್‌ ಮೀಮ್ಸ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದರು. ಇವರು ಮುಂಬೈನಲ್ಲಿ ಬುರ್ಗಿರ್‌ ಹೆಸರಿನ ರೆಸ್ಟೂರೆಂಟ್‌ ಹೊಂದಿದ್ದಾರೆ.

ಅಬ್ದು ರೋಝಿಕ್‌ ಎತ್ತರ ಎಷ್ಟು?

ಅಬ್ದು ರೋಝಿಕ್‌ ವಯಸ್ಸು 20. ಬೆಳವಣಿಗೆಯ ಹಾರ್ಮೋನ್‌ ಕೊರತೆಯಿಂದಾಗಿ ಇವರು ಮಗುವಿನಂತೆ ಕಾಣಿಸುತ್ತಾರೆ. ಇವರು 94 ಸೆಂಟಿಮೀಟರ್‌ ಎತ್ತರವಿದ್ದಾರೆ.

ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Whats_app_banner