BBK 10: ಬಿಗ್‌ಬಾಸ್‌ ಕನ್ನಡ ಈ ವಾರದ ಎಲಿಮಿನೇಷನ್‌; 4 ವಾರದಲ್ಲಿ ರಕ್ಷಕ್‌ ಬುಲೆಟ್‌ ಹೊರನಡೆಯಲು ಕಾರಣವಾದ 4 ಅಂಶಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bbk 10: ಬಿಗ್‌ಬಾಸ್‌ ಕನ್ನಡ ಈ ವಾರದ ಎಲಿಮಿನೇಷನ್‌; 4 ವಾರದಲ್ಲಿ ರಕ್ಷಕ್‌ ಬುಲೆಟ್‌ ಹೊರನಡೆಯಲು ಕಾರಣವಾದ 4 ಅಂಶಗಳು

BBK 10: ಬಿಗ್‌ಬಾಸ್‌ ಕನ್ನಡ ಈ ವಾರದ ಎಲಿಮಿನೇಷನ್‌; 4 ವಾರದಲ್ಲಿ ರಕ್ಷಕ್‌ ಬುಲೆಟ್‌ ಹೊರನಡೆಯಲು ಕಾರಣವಾದ 4 ಅಂಶಗಳು

  • Bigg Boss Kannada 10 Elimination: ಬಿಗ್‌ಬಾಸ್‌ ಮನೆಯಲ್ಲಿ ಈ ವಾರದ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ. ಬುಲೆಟ್‌ ಪ್ರಕಾಶ್‌ ಅವರು ಮನೆಯಿಂದ ಹೊರನಡೆದಿದ್ದಾರೆ. ಲೈಟ್‌ ಆನ್‌-ಆಫ್‌ ಎಲಿಮಿನೇಷನ್‌ ಪ್ರಕ್ರಿಯೆಯಲ್ಲಿ ಅಂತಿಮವಾಗಿ ವಿನಯ್‌ ಮೇಲೆ ಬೆಳಕು ಬಿದ್ದಿದೆ. ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಅವರು ಎಲಿಮಿನೇಟ್‌ ಆಗಿದ್ದಾರೆ.

ಈ ವಾರ ಮನೆಯಿಂದ ಹೊರಹೋಗಲು ವರ್ತೂರು ಸಂತೋಷ್‌, ವಿನಯ್‌ ಗೌಡ, ಮೈಕಲ್‌ ಅಜಯ್‌, ಕಾರ್ತಿಕ್‌, ಸಿರಿ, ರಕ್ಷಕ್‌, ತುಕಾಲಿ ಸಂತೋಷ್‌, ತನಿಷಾ, ಸ್ನೇಹಿತ್‌ ಗೌಡ ನಾಮಿನೇಟ್‌ ಆಗಿದ್ದರು. 
icon

(1 / 8)

ಮೈಕಲ್‌ ಅಜಯ್‌, ತನಿಷಾ ಕುಪ್ಪಂಡ ಅವರು ರಕ್ಷಕ್‌ ಬುಲೆಟ್‌ ಅವರನ್ನು ನಾಮಿನೆಟ್‌ ಮಾಡಿದ್ದರು. ಭಾನುವಾರದ ಸಂಚಿಕೆಯಲ್ಲಿ ವಿನಯ್‌ ಮತ್ತು ರಕ್ಷಕ್‌ ಇವರಿಬ್ಬರಲ್ಲಿ ಅಂತಿಮವಾಗಿ ರಕ್ಷಕ್‌ ಅವರು ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ವಿನಯ್‌ ಸೇಫ್‌ ಆಗಿದ್ದಾರೆ.
icon

(2 / 8)

ಬಿಗ್‌ಬಾಸ್‌ ಮನೆಗೆ ಪ್ರವೇಶಿಸಿದ ಅತ್ಯಂತ ಕಿರಿಯ ಸ್ಪರ್ಧಿ ರಕ್ಷಕ್‌ ಅವರು ಹೊರನಡೆಯಲು ಹಲವು ಕಾರಣಗಳು ಇವೆ. ಅವುಗಳಲ್ಲಿ ಕೆಲವು ಕಾರಣಗಳನ್ನು ಈ ಮುಂದಿನಂತೆ ಪಟ್ಟಿ ಮಾಡಬಹುದು.
icon

(3 / 8)

ಮೊದಲನೆಯದಾಗಿ ಬಿಗ್‌ಬಾಸ್‌ ಮನೆಯೊಳಗೆ ಈಗ 25 ದಿನ ಕಳೆದಿದ್ದು, ಸ್ಪರ್ಧೆ ಪ್ರಬಲವಾಗಿದೆ. ನಾಮಿನೇಷನ್‌ ಅಂತಿಮ ಹಂತದಲ್ಲಿ ರಕ್ಷಕ್‌ಗೆ ಹೋಲಿಸಿದರೆ ವಿನಯ್‌ ಹೆಚ್ಚು ಬಲಿಷ್ಠ ಸ್ಪರ್ಧಿಯಾಗಿ ಕಾಣಿಸಿದ್ದಾರೆ. 
icon

(4 / 8)

ಮನೆಯೊಳಗೆ ರಕ್ಷಕ್‌ ಹೆಚ್ಚು ಅಗ್ರೆಸಿವ್‌ ಆಗಿರಲಿಲ್ಲ. ಈ ಹಿಂದೆ ರಕ್ಷಕ್‌ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದರು. ಆತನ ವರ್ತನೆ ಕುರಿತು ಕೆಲವರಿಗೆ ಬೇರೆಯದ್ದೇ ಕಲ್ಪನೆಯಿತ್ತು. ಆದರೆ, ಬಿಗ್‌ಬಾಸ್‌ ಮನೆಯೊಳಗೆ ರಕ್ಷಕ್‌ ಒಳ್ಳೆಯ ಹುಡುಗನಂತೆ ಕಾಣಿಸಿದ್ದ. ಇದರಿಂದ ಕೆಲವು ಕಡೆ ಸೈಲೆಂಟ್‌ ಆಗಿಯೂ ಇದ್ದ. ಮನೆಯ ಹೊರಗೆ ಇರೋ ರಕ್ಷಕ್‌ ಬೇರೆ, ಒಳಗೆ ಇರೋ ರಕ್ಷಕ್‌ ಬೇರೆ ಎಂದು ಜನರು ಅರ್ಥಮಾಡಿಕೊಂಡಿದ್ದರು.
icon

(5 / 8)

ಗುಂಪುಗಾರಿಕೆಯೂ ರಕ್ಷಕ್‌ಗೆ ಮುಳುವಾಗಿರಬಹುದು ಎನ್ನಲಾಗುತ್ತಿದೆ. ಆರಂಭದಿಂದಲೂ ರಕ್ಷಕ್‌ ತುಕಾಲಿ ಸಂತೋಷ್‌, ವರ್ತೂರು ಸಂತೋಷ್‌ ಜತೆಗಿದ್ದರು. ಇತರರ ಜತೆ ಆರಂಭದಲ್ಲಿ ಹೆಚ್ಚು ಬೆರೆತಿರಲಿಲ್ಲ. 
icon

(6 / 8)

ಈ ಬಾರಿಯ ಬಿಗ್‌ಬಾಸ್‌ ಕನ್ನಡವು ಒಂದಿಷ್ಟು ಬೇರೆಯದ್ದೇ ಆದ ರೀತಿಯಲ್ಲಿ ಕಾಣಿಸಿಕೊಂಡಿದೆ. ಮೊದಲ ವಾರದಿಂದಲೇ ಆಟ ಆಡಿ ಇಲ್ಲ ಉಳಿಯೋದಿಲ್ಲ ಎನ್ನುವ ರೀತಿಯಲ್ಲಿ ಇತ್ತು. ಹೀಗಾಗಿ, ಪ್ರತಿಯೊಬ್ಬರೂ ಕೃತಕವಾಗಿಯಾದರೂ ಆಟವಾಡುವ ಪರಿಸ್ಥಿತಿ ಇತ್ತು. ಇಂತಹ ಆಟ ಆಡದೆ ಇದ್ದದ್ದು ರಕ್ಷಕ್‌ ಸೋಲಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.  
icon

(7 / 8)

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ 25ನೇ ದಿನದಲ್ಲಿ ಬಿಗ್‌ಬಾಸ್‌ ಮನೆಯಿಂದ ರಕ್ಷಕ್‌ ಹೊರನಡೆದಿರುವುದು ನಮ್ರತಾ ಗೌಡ, ವರ್ತೂರು ಸಂತೋಷ್, ವಿನಯ್, ತುಕಾಲಿ ಸಂತು ಸೇರಿದಂತೆ ಸಾಕಷ್ಟು ಜನರು ಬೇಸರ ವ್ಯಕ್ತಪಡಿಸಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು