ಸಂಗೀತಾ ಶೃಂಗೇರಿ ಸತಿಯಾಗಿ ನನ್ನ ಜತೆ ನಟಿಸಿದ್ರು, ಆದ್ರೆ ಬಿಗ್‌ಬಾಸ್‌ನಲ್ಲಿ ಮಾತ್ರ...; ಬಿಬಿಕೆ 3ನೇ ರನ್ನರ್‌ಅಪ್ ವಿನಯ್ ಗೌಡ ಮನದ ಮಾತು
Bigg Boss Kannada Vinay Gowda Interview: ಬಿಗ್‌ಬಾಸ್ ಸೀಸನ್ 10ರ ಮೂರನೇ ರನ್ನರ್ ಅಪ್ ವಿನಯ್ ಗೌಡ ಅವರು ದೊಡ್ಮನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಸಂಗೀತಾ ಶೃಂಗೇರಿ ಜತೆಗಿನ ಒಡನಾಟದ ಕುರಿತು ಹೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮನೆಯಲ್ಲಿ ಅಗ್ರೆಸಿವ್ ಆಗಿ ಆಡಿದ ಕುರಿತೂ ಮುಕ್ತವಾಗಿ ಮಾತನಾಡಿದ್ದಾರೆ.
ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ ಮೂರನೇ ರನ್ನರ್ ಅಪ್ ವಿನಯ್ ಗೌಡ ದೊಡ್ಮನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮೂರನೇ ರನ್ನರ್ ಅಪ್ ಈಗಿ ವಿನಯ್ ಗೌಡ ಹೊರಹೊಮ್ಮಿದ್ದಾರೆ. ನೇರಮಾತು, ಏಟಿಗೆ ಎದುರೇಟು, ನಿಷ್ಠುರ ನಡತೆಯಿಂದಲೇ ಅಭಿಮಾನಿಗಳನ್ನು ಸಂಪಾದಿಸಿರುವ ವಿನಯ್ ಮನೆಯಿಂದ ಹೊರಬಂದ ಕೂಡಲೇ ಜಿಯೊಸಿನಿಮಾಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ (Bigg Boss Kannada Vinay Gowda Interview) ನೀಡಿದ್ದಾರೆ.
ವೋಟ್ ಮಾಡಿದ ಜನರಿಗೆ ಥ್ಯಾಂಕ್ಸ್
‘ಹಾಯ್ ಹಲೊ ನಮಸ್ಕಾರ… ನಾನು ನಿಮ್ಮ ಪ್ರೀತಿಯ ವಿನಯ್ ಗೌಡ. ಬಿಗ್‌ಬಾಸ್ ಮನೆಯಿಂದ ನೂರನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದೀನಿ. ಚೆನ್ನಾಗಿ ಅನಿಸುತ್ತಿದೆ ಎಂದು ಖಂಡಿತ ಹೇಳಕ್ಕೆ ಸಾಧ್ಯವಿಲ್ಲ. ಯಾಕೆಂದರೆ ನಾನು ಕನಿಷ್ಠ ಟಾಪ್ 3ನಲ್ಲಿ ಇರುತ್ತೇನೆ ಎಂದುಕೊಂಡಿದ್ದೆ. ಆದರೆ ನಮ್ಮ ಜನರೇ ವೋಟ್ ಮಾಡಿರುವುದು. ಇಲ್ಲಿತನಕ ಇಟ್ಟುಕೊಂಡಿರುವುದಕ್ಕೆ ಅವರಿಗೆ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತೀನಿ. ಅಲ್ಲಿ ಗೆಲ್ಲದಿದ್ದರೂ ಪರವಾಗಿಲ್ಲ. ಇಲ್ಲಿದ್ದು ಸಾಕಷ್ಟು ಜನರ ಹೃದಯವನ್ನು ಗೆದ್ದಿದೀನಿ ಎಂದು ವಿನಯ್ ಹೇಳಿದ್ದಾರೆ.
ಇಲ್ಲಿದ್ದು ಛಾಂಪಿಯನ್ ಷಿಪ್ ತಗೊಳೊಬದ್ಲು. ಪೀಪಲ್ಸ್ ಛಾಂಪಿಯನ್ ಅಂತ ಹೇಳುವುದಕ್ಕೆ ತುಂಬ ತುಂಬ ಖುಷಿಯಾಗುತ್ತದೆ. ಯಾಕೆಂದರೆ ಹೊರಗಡೆ ಜನರು ತುಂಬ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಕೇಳಿದ್ದೀನಿ. ಹೊರಗೆ ಹೋಗಿ ಜನರ ಸ್ಪಂದನವನ್ನು ಅನುಭವಿಸಲು ಕಾಯುತ್ತಿದ್ದೇನೆ ಎಂದು ವಿನಯ್ ಗೌಡ ಹೇಳಿದ್ದಾರೆ.
ಮನೆಯೊಳಗೆ ಅಗ್ರೆಸಿವ್ ಆಗಿದ್ದೆ ಏಕೆಂದರೆ...
"ಹೌದು, ಮನೆಯೊಳಗೆ ಅಗ್ರೆಸಿವ್ ಆಗಿ ಆಡುತ್ತಿದ್ದೆ. ಆದರೆ ಅದು ಬೇಕು ಬೇಕಂತ ಮಾಡಿದ್ದಲ್ಲ. ಆ ಮೊಮೆಂಟ್‌ಗೆ ಆ ಟಾಸ್ಕ್‌ಗೆ ಏನು ಬೇಕಾಗಿತ್ತೋ ಅದನ್ನು ಮಾಡಿದ್ದೀನಿ. ಮತ್ತೆ ಡೇ ಒನ್‌ನಿಂದ ಬಿಗ್‌ಬಾಸ್ ಸ್ಟಾರ್ಟ್ ಆಯ್ತು ಅಂದ್ರೆ ಈ ಹಿಂದೆ ಇದ್ದ ಹಾಗೆಯೇ ಇರ್ತೀನಿ. ಹಾಗಾಗಿ ನಾನು ನಡೆದುಕೊಂಡ ರೀತಿಗೆ ಯಾವ ರಿಗ್ರೆಟ್ಸ್ ಕೂಡ ಇಲ್ಲ. ನನ್ನ ಆಟ, ನನ್ನ ತನವನ್ನು ನಾನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕೊನೆಯ ದಿನಗಳಲ್ಲಿ ಸೋಬರ್ ಆಗಿ ಆಡಿದ್ದು ಯಾಕೆ ಅಂದ್ರೆ ಅಂಥ ಟಾಸ್ಕ್‌ಗಳೇ ಇರ್ಲಿಲ್ಲ. ಕೊನೆಯ ದಿನಗಳಲ್ಲಿ ಎಲ್ಲರೂ ಖುಷಿಯಾಗಿ ಇರೋಣ ಎಂದುಕೊಂಡು ಹಾಗೆ ಇದ್ದೆ ಎಂದರು.
ಮೊದಮೊದಲು ಮನೆಯೊಳಗೆ ಹೋದಾಗ ಬಹಳಷ್ಟು ಜನರು ಇದ್ದರು. ಎರಡು ಗುಂಪು ಆಯ್ತು. ಅದನ್ನು ಗುಂಪು ಎಂದು ಯಾಕೆ ಕರೆದರು ಎಂದು ನನಗೆ ಗೊತ್ತಾಗಲಿಲ್ಲ. ಯಾರೂ ಅಲ್ಲಿ ಹೋಗಿ ಗುಂಪು ಮಾಡಿಕೊಳ್ಳಬೇಕು ಎಂದು ಅಂದುಕೊಂಡು ಹೋಗುವುದಿಲ್ಲ. ಒಂದು ಥರ ಮೈಂಡ್‌ಸೆಟ್ ಇರುವವರು ಒಂದು ಕಡೆ ಇರ್ತಾರೆ. ಇನ್ನೊಂದು ಥರ ಮೈಂಡ್‌ಸೆಟ್ ಇರುವವರು ಇನ್ನೊಂದು ಕಡೆ ಇರ್ತಾರೆ. ಹಾಗಾಗಿ, ನನ್ನ ಜೊತೆ ಯಾರು ಯಾರು ವೈಬ್ ಆಗ್ತಿದ್ರೋ ಅವರೆಲ್ಲರೂ ಜೊತೆಗೆ ಸೇರಲು ಶುರುಮಾಡಿದರು. ನನ್ನ ಜೊತೆಯಲ್ಲಿ ಯಾರು ಯಾರೆಲ್ಲ ವೈಬ್ ಆಗುವುದಿಲ್ಲವೋ, ಅಫ್‌ಕೋರ್ಸ್ ಮತ್ತು ಆಬಿಯಸ್ಲಿ ನನ್ನ ಜೊತೆಯಲ್ಲಿ ಇರುವವರಿಗೂ ವೈಬ್ ಆಗುವುದಿಲ್ಲ. ಅವರು ಸಪರೇಟ್ ಆಗುವುದಕ್ಕೆ ಶುರುವಾದ್ರು. ಆ ಬಾಂಡಿಂಗ್, ವೈಬ್ ಇದ್ದಿದ್ದಕ್ಕೇ ಇಷ್ಟು ದಿನಗಳ ಜರ್ನಿಯಲ್ಲಿ ನನ್ನ ಜೊತೆಗೇ ಇದ್ದಿದ್ದು, ನನ್ನ ಸಪೋರ್ಟ್ ಮಾಡುತ್ತಿದ್ದದ್ದು. ಬ್ಯಾಡ್‌ಲಕ್ ನನ್ನ ಜೊತೆಗೆ ಇರುವವರೇ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಹೊರಗೆ ಹೋದರು. ಆದರೆ ನಾವು ಮನೆಯೊಳಗಿದ್ದರೂ ಹೊರಗಿದ್ದರೂ ನಾವು ಫ್ರೆಂಡ್ಸ್ ಆಗಿಯೇ ಇದ್ದೆವು. ಆದರೆ ಆ ಇನ್ನೊಂದು ಗುಂಪು ಅಲ್ಲೇ ಕಿತ್ತಾಡ್ಕೊಂಡು, ಹೊಡೆದಾಟ್ಕೊಂಡು, ಪರಚಾಡ್ಕೊಂಡು ಸಪರೇಟ್ ಸಪರೇಟ್ ಆಗಿಬಿಟ್ಟರು. ಹೊರಗೆ ಬಂದ್ಮೇಲೆ ಇನ್ನು ಏನೇನು ಆಗ್ತಾನೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಸಂಗೀತಾ ಶೃಂಗೇರಿ ಬಗ್ಗೆ ವಿನಯ್ ಗೌಡ ಮಾತು
ಸಂಗೀತಾ ವಿಷಯ ತಗೊಂಡ್ರೆ ಸಂಗೀತಾ ಪಾರ್ವತಿಯಾಗಿ, ಸತಿಯಾಗಿ ನನ್ನ ಜೊತೆಗೆ ನಟಿಸಿದ್ದಳು. ಇಲ್ಲಿ ಬಂದಾಗ, ಮೊದಲ ವಾರದ ನಾಮಿನೇಷನ್‌ನಲ್ಲಿ ಅವ್ರು ನನ್ನ ಫ್ರೆಂಡ್ಸು, ಹಾಗಾಗಿ ನಾಮಿನೇಟ್ ಮಾಡ್ಬಾರ್ದು ಅಂತ ಇರ್ಲಿಲ್ಲ. ನಾನು ಇಲ್ಲಿಗೆ ಗೇಮ್ ಆಡೋದಿಕ್ಕೆ ಬಂದಿದ್ದೆ. ಅವರು ಮಾಡಿರುವ ತಪ್ಪುಗಳಿಗೆ ನಾಮಿನೇಟ್ ಮಾಡಿದೆ. ಫ್ರೆಂಡ್ಸ್, ಗೊತ್ತಿರೋರು, ಬಿಟ್ಟುಬಿಡೋಣ ಅಂತ ಅಂದುಕೊಳ್ಳಲಿಲ್ಲ. ಅವರಿಬ್ಬರೂ ತಪ್ಪು ಮಾಡಿದ್ರು, ನಾನು ಹೇಳಿದ ಮೇಲೂ ತಪ್ ಮಾಡಿದ್ರು, ನಾಮಿನೇಟ್ ಮಾಡಿದೆ. ಅದರಿಂದ ಅವರು ನನ್ನ ಬಗ್ಗೆ ನಕಾರಾತ್ಮಕವಾಗಿ ತಿಳಿದುಕೊಂಡರು. ಗೊತ್ತಿರೋರನ್ನೇ ನಾಮಿನೇಟ್ ಮಾಡ್ತಾನೆ. ಫ್ರೆಂಡ್ಸ್‌ನೇ ನಾಮಿನೇಟ್ ಮಾಡ್ತಾನೆ ಎಂದುಕೊಂಡರು ಎಂದು ವಿನಯ್ ಗೌಡ ಹೇಳಿದ್ದಾರೆ.
ವಿಭಾಗ