ಬಿಗ್‌ಬಾಸ್‌ ಮನೆಯಲ್ಲಿ ಮುದ್ದುಗಿಳಿ ಇಶಾನಿ: ಇವರ ಹಿಪ್‌ಹಾಪ್‌ ಪಾಪ್‌ ವಿಡಿಯೋ ಇಲ್ಲಿದೆ ನೋಡಿ, ತಪ್ಪ್ಯಾವುದು ಸರಿ ಯಾವ್ದು ನೀನೇ ತಿಳ್ಕೋ ಮರಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಮನೆಯಲ್ಲಿ ಮುದ್ದುಗಿಳಿ ಇಶಾನಿ: ಇವರ ಹಿಪ್‌ಹಾಪ್‌ ಪಾಪ್‌ ವಿಡಿಯೋ ಇಲ್ಲಿದೆ ನೋಡಿ, ತಪ್ಪ್ಯಾವುದು ಸರಿ ಯಾವ್ದು ನೀನೇ ತಿಳ್ಕೋ ಮರಿ

ಬಿಗ್‌ಬಾಸ್‌ ಮನೆಯಲ್ಲಿ ಮುದ್ದುಗಿಳಿ ಇಶಾನಿ: ಇವರ ಹಿಪ್‌ಹಾಪ್‌ ಪಾಪ್‌ ವಿಡಿಯೋ ಇಲ್ಲಿದೆ ನೋಡಿ, ತಪ್ಪ್ಯಾವುದು ಸರಿ ಯಾವ್ದು ನೀನೇ ತಿಳ್ಕೋ ಮರಿ

Who is Rapper Eshani: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಗಳಲ್ಲಿ ರಾಪರ್‌ ಇಶಾನಿ ಅವರ ಪಾಪ್‌, ಹಿಪ್‌ಹಾಪ್‌, ರಾಪ್‌ ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿತ್ತಿದೆ. ಇಶಾನಿ ಅವರ ಬಗ್ಗೆ ತಿಳಿಯುತ್ತ ಅವರ ವಿಡಿಯೋಗಳನ್ನು ನೋಡೋಣ ಬನ್ನಿ.

ಬಿಗ್‌ಬಾಸ್‌ ಮನೆಯೊಳಗೆ ಮುದ್ದುಗಿಳಿ ಇಶಾನಿ: ಇವರ ರಾಪ್‌ ಹಿಪ್‌ಹಾಪ್‌ ಪಾಪ್‌ ವಿಡಿಯೋ ನೋಡಿ
ಬಿಗ್‌ಬಾಸ್‌ ಮನೆಯೊಳಗೆ ಮುದ್ದುಗಿಳಿ ಇಶಾನಿ: ಇವರ ರಾಪ್‌ ಹಿಪ್‌ಹಾಪ್‌ ಪಾಪ್‌ ವಿಡಿಯೋ ನೋಡಿ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಗಳಲ್ಲಿ ರಾಪರ್‌ ಇಶಾನಿ ಒಬ್ಬರು. ಇವರ ಕುರಿತು ಈಗ ಆನ್‌ಲೈನ್‌ನಲ್ಲಿ ಹುಡುಕಾಟ ಹೆಚ್ಚಾಗಿದೆ. ಇವರು ಏನು ಹಾಡಿದ್ದಾರೆ, ಎಲ್ಲಿದ್ದರೂ ಇಷ್ಟು ದಿನ ಎಂದೆಲ್ಲ ಜನರು ಹುಡುಕಾಡುತ್ತ ಇರಬಹುದು. ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ಇಶಾನಿ ತುಸು ಜನಪ್ರಿಯತೆ ಪಡೆದಿದ್ದಾರೆ. ಯೂಟ್ಯೂಬ್‌ ಚಾನೆಲ್‌ನಲ್ಲಿಯೂ ತಾನು ಹಾಡಿದ ಹಲವು ರಾಪರ್‌ ವಿಡಿಯೋಗಳನ್ನು ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಇವರ ಚಾನೆಲ್‌ ಸಬ್‌ಸ್ಕ್ರಿಬರ್ಸ್‌ ಸಂಖ್ಯೆ 1000ಕ್ಕಿಂತ ಕಡಿಮೆ ಇತ್ತು. ಈಗ ಇದು ಡಬಲ್‌ ಆಗಿದೆ. ಮುಂದಿನ ದಿನಗಳಲ್ಲಿ ಇವರು ಇನ್ನಷ್ಟು ಫೇಮಸ್‌ ಆಗುವ ಎಲ್ಲಾ ಸೂಚನೆಗಳು ಇವೆ. ರಾಪರ್‌ ಇಶಾನಿ ಪರಿಚಯ ಮತ್ತು ಅವರ ಹಾಡುಗಳ ವಿಡಿಯೋಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ರಾಪರ್‌ ಇಶಾನಿ ಅವರ ಮುದ್ದುಗಿಳಿ ಹಾಡು ಕೇಳಿ

ವಿದೇಶಗಳಲ್ಲಿ ಓದಿ ಬೆಳೆದ ಇಶಾನಿ ಅಚ್ಚ ಕನ್ನಡತಿ. ಕನ್ನಡ ತುಂಬಾ ಸೊಗಸಾಗಿ ಮಾತನಾಡುತ್ತಾರೆ. ಇವರು ಹುಟ್ಟಿದ್ದು ಮೈಸೂರಿನಲ್ಲಿ. ಬೆಂಗಳೂರು, ದುಬೈ ಮತ್ತು ಲಾಸ್‌ ಏಂಜಲೀಸ್‌ನಲ್ಲಿ ಬೆಳೆದ ಇವರು ರಾಪರ್‌ ಆಗಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.

ರೈಟ್‌ ಆರ್‌ ರಾಂಗ್‌: ತಪ್ಪು ಸರಿ ವಿಡಿಯೋ

ಕನ್ನಡ ಮಾತ್ರವಲ್ಲದೆ ಹಲವು ಇಂಗ್ಲಿಷ್‌ ಹಾಡುಗಳ ವಿಡಿಯೋವನ್ನೂ ಅವರು ತಮ್ಮ ಚಾನೆಲ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಅವರ ಸರಿ ತಪ್ಪು ರೈಟ್‌ ಆರ್‌ ರಾಂಗ್‌ ಎಂಬ ಇನ್ನೊಂದು ಕನ್ನಡ ವಿಡಿಯೋ ಈ ಕೆಳಗಿದೆ ನೋಡಿ. ಇಲ್ಲಿ ತಪ್ಪ್ಯಾವುದು ಸರಿ ಯಾವುದು ನೀನೇ ತಿಳ್ಕೊ ಮರಿ ಎಂಬ ಈ ಹಾಡು ಸಾಕಷ್ಟು ಜನರ ಗಮನ ಸೆಳೆದಿದೆ.

ಇಶಾನಿಗೆ ಸಂಗೀತ ಅಂದರೆ ಪಂಚಪ್ರಾಣ. ಪಾಪ್‌, ಹಿಪ್‌ಹಾಪ್‌, ರಾಪ್‌ ಸಂಗೀತವನ್ನು ತಮ್ಮದೇ ಶೈಲಿಯಲ್ಲಿ ಹಾಡುತ್ತಾರೆ. ಇವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಹತ್ತು ಹಲವು ವಿಡಿಯೋಗಳಿವೆ. ಇವರು ಈಗಾಗಲೇ 3 ಕನ್ನಡ ಆಲ್ಬಂ ಮಾಡಿದ್ದಾರ. ಇಂಗ್ಲಿಷ್‌ನಲ್ಲಿ 17 ಆಲ್ಬಂ ಮಾಡಿದ್ದಾರೆ.

ಇಶಾನಿ ಅವರ ಇಂಗ್ಲಿಷ್‌ ರಾಪ್‌ ಸಾಂಗ್‌ ಕೇಳಿ

ಬಿಗ್‌ಬಾಸ್‌ ಮನೆಗೆ ಈಶಾನಿ ಪ್ರವೇಶ

"ಮ್ಯೂಸಿಕ್‌ ಅಂದ್ರೆ ತುಂಬ ಇಷ್ಟ ಈ ಈಶಾನಿಗೆ. ಮೈಸೂರಿನಲ್ಲಿ ಹುಟ್ಟಿದ್ದು, ದುಬೈನಲ್ಲಿ ಬೆಳೆದಿದ್ದು. ಬಿಗ್‌ ಬಾಸ್‌ ಅಂದ್ರೆ ಮೊದಲಿಂದಲೂ ಇಶಾನಿಗೆ ಇಷ್ಟ. ಇದೀಗ ರ್ಯಾಪರ್‌ ಆಗಿಯೇ ಅವರು ಗುರುತಿಸಿಕೊಂಡಿದ್ದಾರೆ. ಇಶಾನಿಗೂ ಸಹ ಬಿಗ್‌ ವೇದಿಕೆ ಮೇಲೆ ಪಬ್ಲಿಕ್‌ ಕಡೆಯಿಂದ 80 ಪ್ಲಸ್‌ ವೋಟ್‌ ಸಿಕ್ಕಿದೆ. ಇದೇ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹಿಂದಿನ ವಿನ್ನರ್‌ ಮಂಜು ಪಾವಗಡ ಜತೆಗೂ ಒಂದಷ್ಟು ಹಾಸ್ಯ ಚಟಾಕಿ ಹಾರಿಸಿದ್ದಾರೆ ಇಶಾನಿ. ಕೊನೆಗೆ ಕಣ್ಣೀರು ಹಾಕುತ್ತಲೇ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದಾರೆ. ಮನೆ ಪ್ರವೇಶ ಪಡೆದು, ವೆಲ್‌ಕಮ್‌ ಡ್ರಿಂಕ್‌ ಅಂತ ಕಾಫಿ ಕೊಟ್ಟು ಸ್ವಾಗತಿಸಿದ್ದಾರೆ ಸ್ನೇಹಿತ್‌. ಸ್ನೇಹಿತ್‌ ಮತ್ತು ನಮ್ರತಾಗೂ ರ್ಯಾಪ್‌ ಹೇಳಿ ಮೋಡಿ ಮಾಡಿದ್ದಾರೆ ಇಶಾನಿ" ಎಂದು ಕಲರ್ಸ್‌ ಕನ್ನಡವು ಬಿಗ್‌ಬಾಸ್‌ಗೆ ಈಶಾನಿ ಎಂಟ್ರಿ ನೀಡಿದಾಗ ಮಾಹಿತಿ ನೀಡಿತ್ತು.

Whats_app_banner