BBK 11 FAQs: ಬಿಗ್‌ಬಾಸ್‌ ಕನ್ನಡ 11ರ ಕುರಿತಾದ 11 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ; ಕಿಚ್ಚ ಸುದೀಪ್‌ ರಿಯಾಲಿಟಿ ಶೋಗೆ ದಿನಗಣನೆ-televison news bigg boss kannada season 11 faqs when start who host contestant list how to vote etc pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bbk 11 Faqs: ಬಿಗ್‌ಬಾಸ್‌ ಕನ್ನಡ 11ರ ಕುರಿತಾದ 11 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ; ಕಿಚ್ಚ ಸುದೀಪ್‌ ರಿಯಾಲಿಟಿ ಶೋಗೆ ದಿನಗಣನೆ

BBK 11 FAQs: ಬಿಗ್‌ಬಾಸ್‌ ಕನ್ನಡ 11ರ ಕುರಿತಾದ 11 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ; ಕಿಚ್ಚ ಸುದೀಪ್‌ ರಿಯಾಲಿಟಿ ಶೋಗೆ ದಿನಗಣನೆ

Bigg Boss Kannada Season 11 FAQs: ಕಲರ್ಸ್‌ ಕನ್ನಡದಲ್ಲಿ ಸೆಪ್ಟೆಂಬರ್‌ 3ನೇ ವಾರ ಆರಂಭವಾಗಲಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಕುರಿತು ನಿಮ್ಮಲ್ಲಿ ನಾನಾ ಪ್ರಶ್ನೆಗಳಿವೆಯೇ? ನಿಮ್ಮ 11 ಸಂದೇಹಗಳಿಗೆ ಉತ್ತರ ನೀಡುವ ಪ್ರಯತ್ನ ಇಲ್ಲಿದೆ.

BBK 11 FAQs: ಬಿಗ್‌ಬಾಸ್‌ ಕನ್ನಡ 11ರ ಕುರಿತಾದ 11 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
BBK 11 FAQs: ಬಿಗ್‌ಬಾಸ್‌ ಕನ್ನಡ 11ರ ಕುರಿತಾದ 11 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Bigg Boss Kannada Season 11 FAQs: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭವಾಗಲು ದಿನಗಣನೆ ಆರಂಭವಾಗಿದೆ. ಕನ್ನಡ ಕಿರುತೆರೆಯ ದೊಡ್ಡ ಹಬ್ಬವಾದ ಈ ರಿಯಾಲಿಟಿ ಶೋ ಕುರಿತು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಯಾರೆಲ್ಲ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಬಿಗ್‌ಬಾಸ್‌ ಕನ್ನಡ ಯಾವಾಗ ಆರಂಭವಾಗಲಿದೆ? ಈ ಬಾರಿ ಯಾವ ಸೀರಿಯಲ್‌ ಆಕ್ಟರ್‌ ಭಾಗಿಯಾಗಲಿದ್ದಾರೆ? ಯಾವ ಕಾಮಿಡಿಯನ್‌ ಭಾಗಿಯಾಗಲಿದ್ದಾರೆ. ಯಾವ ರೈತನಿಗೆ ಸ್ಪರ್ಧಿಸಲು ಅವಕಾಶ ದೊರಕಲಿದೆ? ಹೀಗೆ ಪ್ರೇಕ್ಷಕರಲ್ಲಿ ಸಾಕಷ್ಟು ಪ್ರಶ್ನೆಗಳು ಇರಬಹುದು. ಕಲರ್ಸ್‌ ಕನ್ನಡವು ಈ ಕಾರ್ಯಕ್ರಮದ ಕುರಿತು ಕೊನೆತನಕ ಗೌಪ್ಯತೆ ಕಾಪಾಡಿಕೊಳ್ಳುವ ಕಾರಣ ಕೆಲವು ಪ್ರಶ್ನೆಗಳಿಗೆ ಸದ್ಯ ಉತ್ತರ ದೊರಕದು. ಕಿಚ್ಚ ಸುದೀಪ್‌ ನಡೆಸಿಕೊಡುವ ಈ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಕುರಿತಾದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

1)ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಯಾವಾಗ ಆರಂಭವಾಗಲಿದೆ?

ಸೆಪ್ಟೆಂಬರ್‌ 3ನೇ ವಾರ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭವಾಗಲಿದೆ.

2)ಬಿಗ್‌ಬಾಸ್‌ ಕನ್ನಡ ಈ ಬಾರಿ ಯಾರು ಹೋಸ್ಟ್‌ ಮಾಡಲಿದ್ದಾರೆ?

ಈ ಬಾರಿ ಸುದೀಪ್‌ ಹೋಸ್ಟ್‌ ಮಾಡುತ್ತಿಲ್ಲ ಎಂಬ ವದಂತಿ ಇತ್ತು. ಆದರೆ, ಬಲ್ಲ ಮೂಲಗಳ ಪ್ರಕಾರ ಈ ಬಾರಿಯೂ ಕಿಚ್ಚ ಸುದೀಪ್‌ ದೊಡ್ಮನೆಗೆ ಬಾಸ್‌ ಆಗಿರಲಿದ್ದಾರೆ.

3)ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಗಳು ಯಾರು?

ಕಲರ್ಸ್‌ ಕನ್ನಡವು ಪ್ರತಿವರ್ಷವೂ ತನ್ನ ಸ್ಪರ್ಧಿಗಳ ಕುರಿತು ಗುಟ್ಟು ಬಿಟ್ಟುಕೊಡುವುದಿಲ್ಲ. ಈ ಬಾರಿಯೂ ಯಾರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಹೀಗಿದ್ದರೂ ಕೆಲವು ಹೆಸರುಗಳು ಓಡಾಡುತ್ತಿವೆ. ಯಾರೆಲ್ಲ ಪಾಲ್ಗೊಳ್ಳಬಹುದು ಎಂಬ ವಿವರ ಪಡೆಯಲು ಆಗಾಗ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.

4) ಬಿಗ್‌ಬಾಸ್‌ ಕನ್ನಡ ಸೀಸನ್‌ 11 ವೀಕ್ಷಣೆ ಹೇಗೆ?

ಕಲರ್ಸ್‌ ಕನ್ನಡ ಟಿವಿ ಚಾನೆಲ್‌ ಅಥವಾ ಜಿಯೋ ಸಿನಿಮಾ ಒಟಿಟಿ ಆಪ್‌ನಲ್ಲಿ ವೀಕ್ಷಿಸಬಹುದು.

5)ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಗಳಿಗೆ ನಾನು ಮತ ಚಲಾಯಿಸುವುದು ಹೇಗೆ?

ಮತ ಚಲಾಯಿಸಲು ಎರಡು ಆಯ್ಕೆಗಳು ಇವೆ. ಈ ಶೋ ಆರಂಭವಾದ ಬಳಿಕ ಚಾನೆಲ್‌ ನೀಡುವ ಸಂಖ್ಯೆಗೆ ಮಿಸ್‌ ಕಾಲ್‌ ನೀಡಬಹುದು. ಜಿಯೋ ಸಿನಿಮಾ ಆಪ್‌ನಲ್ಲಿ ಮತ ಚಲಾಯಿಸಲು ಅವಕಾಶವಿರುತ್ತದೆ.

6)ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ನಿಯಮಗಳೇನು?

ಈ ಬಾರಿಯ ನಿಯಮಗಳನ್ನು ಇನ್ನೂ ಪ್ರಕಟಿಸಿಲ್ಲ. ಆದರೆ, ಸಾಮಾನ್ಯವಾಗಿ ಪ್ರತಿವರ್ಷ ಒಂದೇ ರೀತಿಯ ನಿಯಮಗಳು ಇರುತ್ತವೆ. ಈ ವರ್ಷ ಹೊಸ ಆಟಗಳಿಗೆ ಹೊಸ ಬಗೆಯ ನಿಯಮಗಳು ಇರಬಹುದು.

7) ಬಿಗ್‌ಬಾಸ್‌ ಕನ್ನಡದಲ್ಲಿ ಗೆದ್ದವರಿಗೆ ಬಹುಮಾನವೆಷ್ಟು?

ಈ ಬಾರಿ ಬಿಗ್‌ಬಾಸ್‌ ಕಿರಿಟ ಗೆದ್ದವರಿಗೆ ಎಷ್ಟು ಮೊತ್ತ ಬಹುಮಾನ ದೊರಕಲಿದೆ ಎಂಬ ವಿವರ ಲಭ್ಯವಿಲ್ಲ. ಸಾಮಾನ್ಯವಾಗಿ ಸುಮಾರು 50 ಲಕ್ಷ ರೂಪಾಯಿ ಬಹುಮಾನ ಇರುತ್ತದೆ. ರನ್ನರ್‌ ಅಪ್‌ ಹಾಗೂ ಇತರರಿಗೂ ಒಂದಿಷ್ಟು ಲಕ್ಷ ದೊರಕುತ್ತದೆ. ಇದರೊಂದಿಗೆ ಸ್ಪಾನ್ಸರ್‌ಗಳು ನೀಡುವ ಕೊಡುಗೆಗಳೂ ಇರುತ್ತವೆ.

8)ನಾನು ಬಿಗ್‌ಬಾಸ್‌ ಕನ್ನಡದಲ್ಲಿ ಪಾಲ್ಗೊಳ್ಳಲು ಏನು ಮಾಡಬೇಕು?

ಬಿಗ್‌ಬಾಸ್‌ ಕನ್ನಡದಲ್ಲಿ ಪಾಲ್ಗೊಳ್ಳಲು ಮುಕ್ತ ಕರೆ ಅಥವಾ ಆಹ್ವಾನ ಇರುವುದಿಲ್ಲ. ಕಲರ್ಸ್‌ ಕನ್ನಡ ವಾಹಿನಿಯವರೇ ಒಂದಿಷ್ಟು ಜನರನ್ನು ಸಂಪರ್ಕಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೋರುತ್ತಾರೆ. ಕಿನ್ನರಿ ನಟಿ ಜ್ಯೋತಿ ಪೂರ್ವಜ್‌ಗೂ ಇದೇ ರೀತಿ ಆಹ್ವಾನ ಹೋಗಿತ್ತು. ನಾನು ಬಿಬಿಕೆ 11 ಆಫರ್‌ ನಿರಾಕರಿಸಿದ್ದೇನೆ ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಘೋಷಿಸಿದ್ದರು.

9)ಬಿಗ್‌ಬಾಸ್‌ ಕನ್ನಡದಲ್ಲಿ ಏನೆಲ್ಲ ಆಟ ಇರುತ್ತದೆ?

ಪ್ರತಿಬಾರಿಯೂ ಹೊಸಬಗೆಯ ಆಟಗಳು, ಸವಾಲುಗಳು ಆಟಗಾರರಿಗೆ ಇರುತ್ತದೆ. ಭಾವನಾತ್ಮಕ, ದೈಹಿಕ, ಸಾಮಾಜಿಕ ಸವಾಲುಗಳು ಎದುರಾಗುತ್ತವೆ.

10)ಬಿಗ್‌ಬಾಸ್‌ ಕನ್ನಡದಲ್ಲಿ ಪಾಲ್ಗೊಂಡವರಿಗೆ ಏನು ಪ್ರಯೋಜನ ದೊರಕುತ್ತದೆ?

ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ದೊರಕುತ್ತದೆ. ಭಾಗವಹಿಸಿದವರಿಗೂ ದಿನಕ್ಕೆ, ವಾರಕ್ಕೆ ಇಂತಿಷ್ಟು ಮೊತ್ತ ನಿಗದಿಯಾಗಿರುತ್ತದೆ. ಇದೇ ಸಮಯದಲ್ಲಿ ಇಂತಹ ಪ್ರಮುಖ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ದೊಡ್ಡಮಟ್ಟದ ಪ್ರಚಾರ ದೊರಕುತ್ತದೆ. ಮುಂದೆ ಅವರಿಗೆ ಸಿನಿಮಾ, ಸೀರಿಯಲ್‌ಗಳಲ್ಲಿ ಅವಕಾಶ ಹೆಚ್ಚುತ್ತದೆ. ಹೆಚ್ಚು ಜನರಿಗೆ ಸ್ಪರ್ಧಿಗಳ ಬಗ್ಗೆ ತಿಳಿಯುತ್ತದೆ.

11) ಬಿಗ್‌ಬಾಸ್‌ ಕನ್ನಡ ವೀಕ್ಷಣೆಯಿಂದ ಪ್ರೇಕ್ಷಕರಿಗೆ ಏನು ಪ್ರಯೋಜನವಾಗುತ್ತದೆ?

ಪ್ರಮುಖವಾಗಿ ಮನರಂಜನೆ ದೊರಕುತ್ತದೆ. ಒಂದು ಮನೆಯಲ್ಲಿ ಹೇಗಿರಬೇಕು? ಹೇಗಿರಬಾರದು ಎಂದು ತಿಳಿದುಕೊಳ್ಳಬಹುದು. ಒಳ್ಳೆಯ ಸ್ಪರ್ಧಿಗಳಿಂದ ಉತ್ತಮ ನಡವಳಿಕೆ ಕಲಿತುಕೊಳ್ಳಬಹುದು. ಬಿಗ್‌ಬಾಸ್‌ ಸಮಾಜದ ಮೇಲೆ ಪ್ರಭಾವ ಒಂದು ಅಧ್ಯಯನ ವಿಷಯ. ಇದರಿಂದ ಒಳಿತು, ಕೆಡುಕು ಇವೆ ಎಂದು ಚರ್ಚೆಗಳಾಗುತ್ತಿವೆ.