Bigg boss Kannada 11: ಸೆ 28ರಿಂದ ಬಿಗ್‌ಬಾಸ್‌ ಆರಂಭ, ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ, ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳ ದರ್ಬಾರ್‌-televison news bigg boss kannada season 11 starting date 2024 contestants list kiccha sudeep hosting confirm pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಸೆ 28ರಿಂದ ಬಿಗ್‌ಬಾಸ್‌ ಆರಂಭ, ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ, ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳ ದರ್ಬಾರ್‌

Bigg boss Kannada 11: ಸೆ 28ರಿಂದ ಬಿಗ್‌ಬಾಸ್‌ ಆರಂಭ, ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ, ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳ ದರ್ಬಾರ್‌

Bigg boss kannada season 11 starting date 2024: ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಕಲರ್ಸ್‌ ಕನ್ನಡದಲ್ಲಿ ಈ ಬಾರಿಯ ಬಿಗ್‌ಬಾಸ್‌ ಸೀಸನ್‌ 11 ಸೆಪ್ಟೆಂಬರ್‌ 28ರಿಂದ ಆರಂಭವಾಗಲಿದೆ. ಈ ಬಾರಿ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ ಸ್ಟಾರ್‌ಗಳ ಜತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ದಂಡೇ ಇರಲಿದೆ.

Bigg boss Kannada season 11: ಸೆಪ್ಟೆಂಬರ್‌ 28ರಿಂದ ಬಿಗ್‌ಬಾಸ್‌ ಆರಂಭ
Bigg boss Kannada season 11: ಸೆಪ್ಟೆಂಬರ್‌ 28ರಿಂದ ಬಿಗ್‌ಬಾಸ್‌ ಆರಂಭ

Bigg boss kannada season 11 starting date 2024: ಕಿರುತೆರೆ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಆರಂಭ ದಿನಾಂಕದ ಕುರಿತು ಅಪ್‌ಡೇಟ್‌ ಬಂದಿದೆ. ಇದೇ ಸೆಪ್ಟೆಂಬರ್‌ 28ರಿಂದ ದೊಡ್ಮನೆ ಆಟ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಕಲರ್ಸ್‌ ಕನ್ನಡದಲ್ಲಿ ಈ ಬಾರಿಯ ಬಿಗ್‌ಬಾಸ್‌ ಸೀಸನ್‌ 11 ಸೆಪ್ಟೆಂಬರ್‌ 28ರಿಂದ ಆರಂಭವಾಗಲಿದ್ದು, ಈ ಬಾರಿ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ ಸ್ಟಾರ್‌ಗಳ ಜತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ದಂಡೇ ಇರಲಿದೆ. ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಬಿಬಿಕೆ 11 ಈ ಬಾರಿ ನಡೆಯಲಿದೆ. ಈ ಮೂಲಕ ಕಿಚ್ಚ ಸುದೀಪ್‌ ಈ ಬಾರಿ ಹೋಸ್ಟ್‌ ಮಾಡೋದಿಲ್ಲ ಎಂಬ ವದಂತಿಗೆ ತೆರೆಬಿದ್ದಿದೆ. ಇದೇ ಸಮಮಯದಲ್ಲಿ ಬಿಗ್‌ಬಾಸ್‌ ಪ್ರಮೋ ಶೂಟಿಂಗ್‌ ಮುಗಿದಿದೆ. ಸೆಪ್ಟೆಂಬರ್‌ 23ರಂದು ಬಿಗ್‌ಬಾಸ್‌ ಕನ್ನಡ ಪ್ರಮೋ ಪ್ರಸಾರಗೊಳ್ಳಲಿದೆ. ಅದೇ ದಿನ ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯೂ ನಡೆಯಲಿದೆ. ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಯಾವೆಲ್ಲ ಸ್ಪರ್ಧಿಗಳು (bigg boss kannada season 11 contestants) ಭಾಗವಹಿಸಲಿದ್ದಾರೆ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ. ಈಗಾಗಲೇ ಹಲವು ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ. ಕಿರುತೆರೆ ನಟ ತ್ರಿವಿಕ್ರಮ್ 11ನೇ ಬಿಗ್‌ಬಾಸ್‌ ಕನ್ನಡದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.

ಬಿಗ್‌ಬಾಸ್‌ ಕನ್ನಡ ಆರಂಭ- ಎರಡು ಸೀರಿಯಲ್‌ಗಳು ಅಂತ್ಯ

ವರದಿಗಳ ಪ್ರಕಾರ ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಸ್ಥಳಾವಕಾಶ ಮಾಡಿಕೊಡುವ ಅನಿವಾರ್ಯತೆಯಿಂದ ಕಲರ್ಸ್‌ ಕನ್ನಡದ ಎರಡು ಸೀರಿಯಲ್‌ಗಳು ಕೊನೆಗೊಳ್ಳಲಿವೆ. ಅಂತರಪಟ ಮತ್ತು ಕೆಂಡಸಂಪಿಗೆ ಸೀರಿಯಲ್‌ಗಳು ಮುಕ್ತಾಯಗೊಳ್ಳಲಿವೆ ಎಂದು ವರದಿಗಳು ತಿಳಿಸಿವೆ. ಅಂತರಪಟ ಸೀರಿಯಲ್‌ ಕಳೆದ ವರ್ಷದಿಂದ ಉತ್ತಮವಾಗಿ ಪ್ರಸಾರವಾಗುತ್ತಿದೆ. ಆದರೆ, ಟಿಆರ್‌ಪಿ ಅಥವಾ ಇತರೆ ಮಾನದಂಡಗಳ ಆಧಾರದಲ್ಲಿ ಈ ಸೀರಿಯಲ್‌ ಕಥೆ ಮುಕ್ತಾಯಗೊಳಿಸಲಾಗುತ್ತಿದೆ. ಈಗಾಗಲೇ ಕೆಂಡಸಂಪಿಗೆ ಸೀರಿಯಲ್‌ ಕೊನೆಯ ಹಂತಕ್ಕೆ ಬಂದಿದೆ. ಎರಡು ವರ್ಷದಿಂದ ಪ್ರಸಾರವಾಗುತ್ತಿರುವ ಈ ಸೀರಿಯಲ್‌ ಸದ್ಯದಲ್ಲಿಯೇ "ದಿ ಎಂಡ್‌" ಆಗಲಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಸಂಭಾವ್ಯ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸ್ಪರ್ಧಿಸುವ ಸ್ಪರ್ಧಿಗಳು ಯಾರು ಎಂಬ ವಿವರ ಸೆಪ್ಟೆಂಬರ್‌ 28ರಂದು ಗೊತ್ತಾಗಲಿದೆ. ಹೀಗಿದ್ದರೂ ಹಲವು ಸಂಭಾವ್ಯ ಹೆಸರುಗಳು ಓಡಾಡುತ್ತಿವೆ. ಹಾಸ್ಯ ನಟ ರಾಘವೇಂದ್ರ, ನಟ ತ್ರಿವಿಕರಮ್‌, ತುಕಾಲಿ ಸಂತು ಹೆಂಡತಿ ಮಾನಸ, ಇವರ ಜತೆ ಹಲವು ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯನ್ಸರ್‌ಗಳು ಬಾರಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂದು ಗಾಳಿಸುದ್ದಿಗಳು ಹರಿದಾಡುತ್ತಿವೆ.

ಸೆಪ್ಟೆಂಬರ್‌ 28ರಿಂದ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಕಾರ್ಯಕ್ರಮವನ್ನು ಕಲರ್ಸ್‌ ಕನ್ನಡ ಟಿವಿ ಚಾನೆಲ್‌ ಅಥವಾ ಜಿಯೋ ಸಿನಿಮಾ ಒಟಿಟಿ ಆಪ್‌ನಲ್ಲಿ ವೀಕ್ಷಿಸಬಹುದು. ಸೆಪ್ಟೆಂಬರ್‌ 23ರಂದು ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಬಿಬಿಕೆ 11 ಕುರಿತು ಕಿಚ್ಚ ಸುದೀಪ್‌ ಸಾಕಷ್ಟು ಮಾಹಿತಿ ನೀಡುವ ನಿರೀಕ್ಷೆಗಳಿವೆ.

mysore-dasara_Entry_Point