ಕನ್ನಡ ಸುದ್ದಿ  /  ಮನರಂಜನೆ  /  Bigg Boss Ott: ಬಿಗ್‌ಬಾಸ್‌ ಒಟಿಟಿ ಸೀಸನ್‌ 3 ಈ ಜೂನ್‌ನಲ್ಲಿ ಆರಂಭ; ದೊಡ್ಮನೆ ಜಗಳ ನೋಡಲು ವೀಕ್ಷಕರಲ್ಲಿ ಹೆಚ್ಚಾಗಿದೆ ಕಾತರ

Bigg Boss OTT: ಬಿಗ್‌ಬಾಸ್‌ ಒಟಿಟಿ ಸೀಸನ್‌ 3 ಈ ಜೂನ್‌ನಲ್ಲಿ ಆರಂಭ; ದೊಡ್ಮನೆ ಜಗಳ ನೋಡಲು ವೀಕ್ಷಕರಲ್ಲಿ ಹೆಚ್ಚಾಗಿದೆ ಕಾತರ

Bigg Boss OTT Season 3: ಸಲ್ಮಾನ್‌ ಖಾನ್‌ ನಿರೂಪಣೆಯಲ್ಲಿ ಬಿಗ್‌ಬಾಸ್‌ ಒಟಿಟಿ ಸೀಸನ್‌ 3 ಇದೇ ಜೂನ್‌ ತಿಂಗಳಿನಿಂದ ಆರಂಭವಾಗಲಿದೆ. ಈ ಕುರಿತು ಜಿಯೋ ಸಿನಿಮಾ ಹೊಸ ಅಪ್‌ಡೇಟ್‌ ನೋಡಿದೆ. ಒಟಿಟಿಯಲ್ಲಿ ಬಿಗ್‌ಬಾಸ್‌ ನೋಡಲು ಪ್ರೇಕ್ಷಕರಲ್ಲಿ ಕಾತರ ಹೆಚ್ಚಾಗಿದೆ.

Bigg Boss OTT: ಬಿಗ್‌ಬಾಸ್‌ ಒಟಿಟಿ ಸೀಸನ್‌ 3 ಈ ಜೂನ್‌ನಲ್ಲಿ ಆರಂಭ
Bigg Boss OTT: ಬಿಗ್‌ಬಾಸ್‌ ಒಟಿಟಿ ಸೀಸನ್‌ 3 ಈ ಜೂನ್‌ನಲ್ಲಿ ಆರಂಭ

Bigg Boss OTT Season 3: ಬಿಗ್‌ಬಾಸ್‌ ಒಟಿಟಿ ಸೀಸನ್‌ 3 ಯಾವಾಗ ಆರಂಭವಾಗಲಿದೆ ಎಂಬ ಪ್ರೇಕ್ಷಕರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಬಿಗ್‌ಬಾಸ್‌ ಒಟಿಟಿ ಆರಂಭವಾಗುತ್ತ? ಬಿಗ್‌ಬಾಸ್‌ ಒಟಿಟಿ ನಡೆಯುವುದಿಲ್ಲವಂತೆ, ಬಿಗ್‌ಬಾಸ್‌ ಒಟಿಟಿ ಯಾವಾಗ ಆರಂಭವಾಗುತ್ತದೆ ಇತ್ಯಾದಿ ಕಳೆದ ಹಲವು ದಿನಗಳಿಂದ ಊಹಾಪೋಹಗಳು ಎದ್ದಿತ್ತು. ಇದೀಗ ಜಿಯೋ ಸಿನಿಮಾ "ಬಿಗ್‌ಬಾಸ್‌ ಒಟಿಟಿ ಸೀಸನ್‌ 3 ಜೂನ್‌ ತಿಂಗಳಲ್ಲಿ ಆರಂಭವಾಗಲಿದೆ" ಎಂದು ಅಧಿಕೃತವಾಗಿ ಪ್ರಕಟಿಸಿದೆ. ದೊಡ್ಮನೆಯೊಳಗಿನ ಆಟವನ್ನು ಒಟಿಟಿಯಲ್ಲಿ ಕಣ್ತುಂಬಿಕೊಳ್ಳಲು ಬಯಸುವವರು ಈ ಪ್ರಕಟಣೆಯಿಂದ ಖುಷಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಿಗ್ ಬಾಸ್ ಒಟಿಟಿ ಸೀಸನ್ 3 ಪ್ರಕಟಣೆ

ಇಂದು (ಬುಧವಾರ) ಜಿಯೋ ಸಿನೆಮಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ನಿಮಿಷದ ಪ್ರಕಟಣೆಯ ಪ್ರೋಮೋವನ್ನು ಬಿಡುಗಡೆ ಮಾಡಿದೆ, ಅಲ್ಲಿ ಬಿಗ್ ಬಾಸ್ ಒಟಿಟಿ ಮುಂದಿನ ತಿಂಗಳು ಜೂನ್‌ನಲ್ಲಿ ಆರಂಭವಾಗಲಿದ ಎಂದು ತಿಳಿಸಿದೆ. ಜೂನ್‌ನಲ್ಲಿ ಯಾವ ದಿನಾಂಕದಿಂದ ಆರಂಭವಾಗಲಿದೆ ಎಂಬ ಮಾಹಿತಿಯನ್ನು ನೀಡಿಲ್ಲ.

ಈ ಪ್ರಮೋದಲ್ಲಿ ಏನಿದೆ?

ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ನೂತನ ಪ್ರಮೋದಲ್ಲಿ ಎಲ್ವಿಶ್ ಯಾದವ್ ಅವರ ಜಗಳಗಳಿಂದ ಹಿಡಿದು ಶೆಹನಾಜ್ ಗಿಲ್ ಅವರ 'ಕುಟ್ಟಾ ಟಾಮಿ' ಸಂಭಾಷಣೆಯವರೆಗೆ ಅನೇಕ ವರ್ಷಗಳ ಬಿಗ್‌ಬಾಸ್‌ನಲ್ಲಿ ನಡೆದ ಪ್ರಮುಖ ಸನ್ನಿವೇಶಗಳ ಚಿತ್ರಣವಿದೆ. ದೊಡ್ಮನೆಯೊಳಗೆ ನಡೆದ ಹಲವು ಜಗಳಗಳು, ವಾದ ವಿವಾದಗಳು, ಮಿಸ್‌ ಮಾಡದೆ ನೋಡಬೇಕಾದ ಕ್ಷಣಗಳ ಚಿತ್ರಣವನ್ನು ಪ್ರಮೋದಲ್ಲಿ ನೀಡಲಾಗಿದೆ. ಬಿಗ್ ಬಾಸ್ ಒಟಿಟಿ ಕಾ ಅಗ್ಲಾ ಸೀಸನ್ ದೇಖ್ ಕರ್ ಬಾಕಿ ಸಬ್ ಭೂಲ್ ಜಾಗೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನೀವು ಈ ವೈರಲ್‌ ಕ್ಷಣಗಳನ್ನು ಮರೆತುಬಿಡುವಿರಿ. ಏಕೆಂದರೆ, ಈ ಋತುವಿನ ಬಿಗ್‌ಬಾಸ್‌ ಇನ್ನೂ ವಿಶೇಷವಾಗಿರುತ್ತದೆ ಎಂದು ಪ್ರಮೋದಲ್ಲಿ ತಿಳಿಸಲಾಗಿದೆ.

ಬಿಗ್‌ಬಾಸ್‌ ನೋಡಲು ಹೆಚ್ಚಾದ ಕಾತರ

ಜಿಯೋ ಸಿನಿಮಾ ಹೊರಡಿಸಿರುವ ಪ್ರಕಟಣೆ ಅಭಿಮಾನಿಗಳಿಗೆ ಖುಷಿ ತಂದಿದೆ. "ಒಟಿಟಿ ಬಿಗ್‌ಬಾಸ್‌ ನೋಡಲು ಕಾಯುತ್ತಿದ್ದೇವೆ" "ಇನ್ನಷ್ಟು ದಿನ ಕಾಯಲು ಸಾಧ್ಯವಿಲ್ಲ" "ಜೂನ್‌ ತಿಂಗಳು ಬೇಗನೇ ಬರಲಿ" ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಇನ್ನಷ್ಟು ವಿವರ

ಕಳೆದ ತಿಂಗಳು ಎಂಡೆಮೋಲ್ ಶೈನ್ ಇಂಡಿಯಾವು ಸಲ್ಮಾನ್ ಖಾನ್ ಮುಂಬರುವ ಸೀಸನ್ ಅನ್ನು ಘೋಷಿಸುವ ಗ್ರಾಫಿಕ್ ಪೋಸ್ಟರ್ ಅನ್ನು ಹಂಚಿಕೊಂಡಿತ್ತು. "ಮನರಂಜನೆ ಮತ್ತು ನಾಟಕಕ್ಕೆ ಸಿದ್ಧರಿದ್ದೀರಾ? ನೀವು ಬಿಗ್‌ಬಾಸ್‌ ಸೀಸನ್‌ 3ಯಲ್ಲಿ ನಿರೂಪಕರಾಗಿ ಯಾರನ್ನು ನೋಡಲು ಬಯಸುತ್ತಿದ್ದೀರಾ? ಎಂಬುದನ್ನು ಕಾಮೆಂಟ್‌ ಮಾಡಿ" ಎಂದು ತಿಳಿಸಲಾಗಿತ್ತು. ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್‌ ಖಾನ್‌ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಹೊರಗೆ ಗುಂಡು ಹಾರಿಸಿದ ಘಟನೆ ನಡೆದ ಸಂದರ್ಭದಲ್ಲಿಈ ಪ್ರಕಟಣೆ ಹೊರಡಿಸಲಾಗಿತ್ತು.

ಬಿಗ್‌ಬಾಸ್‌ ಟಿವಿ ಶೋನ ಮುಂದುವರೆದ ಭಾಗವಾಗಿ ಒಟಿಟಿ ಸೀಸನ್‌ ಆರಂಭವಾಗಿತ್ತು. ಮೊದಲ ಸೀಸನ್‌ ವೂಟ್‌ನಲ್ಲಿ ಪ್ರಸಾರವಾಗಿತ್ತು. ಇದನ್ನು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಆಯೋಜಿಸಿದ್ದರು. ಒಟಿಟಿ 2ರ ನಿರೂಪಕರಾಗಿ ಕರಣ್‌ ಬದಲಿಗೆ ಸಲ್ಮಾನ್‌ ಖಾನ್‌ ಕಾರ್ಯಕ್ರಮ ನಡೆಸಿಕೊಟ್ಟರು. ಬಿಗ್‌ಬಾಸ್‌ ಒಟಿಟಿ 2ರಲ್ಲಿ ಮುನಾವರ್‌ ಫಾರುಕಿ ಗೆಲುವು ಪಡೆದಿದ್ದರು.

ಟಿ20 ವರ್ಲ್ಡ್‌ಕಪ್ 2024