Anubandha awards 2024: ಜನ ಮೆಚ್ಚಿದ ಕಾಮಿಡಿಯನ್‌ ಯಾರು? ಚಂದ್ರಪ್ರಭಾನಿಂದ ವಿನೋದ್ ಗೊಬ್ಬರಗಾಲ ತನಕ, ನಿಮ್ಮ ಆಯ್ಕೆ ಯಾರು?-televison news colors kannada anubandha awards 2024 who is janamechida comediyan manthare shakuni pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Anubandha Awards 2024: ಜನ ಮೆಚ್ಚಿದ ಕಾಮಿಡಿಯನ್‌ ಯಾರು? ಚಂದ್ರಪ್ರಭಾನಿಂದ ವಿನೋದ್ ಗೊಬ್ಬರಗಾಲ ತನಕ, ನಿಮ್ಮ ಆಯ್ಕೆ ಯಾರು?

Anubandha awards 2024: ಜನ ಮೆಚ್ಚಿದ ಕಾಮಿಡಿಯನ್‌ ಯಾರು? ಚಂದ್ರಪ್ರಭಾನಿಂದ ವಿನೋದ್ ಗೊಬ್ಬರಗಾಲ ತನಕ, ನಿಮ್ಮ ಆಯ್ಕೆ ಯಾರು?

Colors Kannada Anubandha Awards 2024: ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್‌ 2024 ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿದೆ. ಈ ಬಾರಿ ಜನಮೆಚ್ಚಿದ ಕಾಮಿಡಿಯನ್‌ ಪ್ರಶಸ್ತಿಯನ್ನು ಯಾರು ಪಡೆಯಬಹುದು? ಚಂದ್ರಪ್ರಭಾನಿಂದ ವಿನೋದ್ ಗೊಬ್ಬರಗಾಲ ತನಕ ಹಲವು ಹಾಸ್ಯಗಾರರಲ್ಲಿ ನಿಮಗೆ ಯಾರು ಅಚ್ಚುಮೆಚ್ಚು.

Anubandha awards 2024: ಜನ ಮೆಚ್ಚಿದ ಕಾಮಿಡಿಯನ್‌ಗೆ ಮತ ಚಲಾಯಿಸಿ
Anubandha awards 2024: ಜನ ಮೆಚ್ಚಿದ ಕಾಮಿಡಿಯನ್‌ಗೆ ಮತ ಚಲಾಯಿಸಿ

Anubandha Awards 2024: ಕಲರ್ಸ್‌ ಕನ್ನಡ ವಾಹಿನಿಯ ಬಹುನಿರೀಕ್ಷಿತ ಅನುಬಂಧ ಅವಾರ್ಡ್‌ 2024ಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಆಗಸ್ಟ್‌ 30 ಮತ್ತು ಸೆಪ್ಟೆಂಬರ್‌ 1ರಂದು ಜನಮೆಚ್ಚಿದ ಪ್ರಶಸ್ತಿಗಳು ಘೋಷಣೆಯಾಗಿವೆ. ಕಿರುತೆರೆ ಪ್ರೇಕ್ಷಕರಿಗೆ ತಮ್ಮ ನೆಚ್ಚಿನ ಕಲಾವಿದರಿಗೆ ಮತ ಚಲಾಯಿಸುವ ಅದ್ಭುತ ಅವಕಾಶವೂ ದೊರಕಿದೆ. ಆಸಕ್ತರು ತಮ್ಮ ನೆಚ್ಚಿನ ತಾರೆಯರಿಗೆ, ಜನಮೆಚ್ಚಿದ ಕಲಾವಿದರಿಗೆ ಜಿಯೋ ಸಿನಿಮಾ ಆಪ್‌ ಮೂಲಕ ಅನುಬಂಧ ಅವಾರ್ಡ್‌ 2024ಕ್ಕೆ ಮತ ಚಲಾಯಿಸಬಹುದು. ಒಬ್ಬರು ವಿವಿಧ ವಿಭಾಗಗಳಲ್ಲಿರುವ ಎಲ್ಲಾ ಕಲಾವಿದರಲ್ಲಿ ತಮಗ್ಯಾರು ಅಚ್ಚುಮೆಚ್ಚೋ ಅವರಿಗೆ ಮತ ಚಲಾಯಿಸಬಹುದು. ಕಲಾವಿದರು ಮಾತ್ರವಲ್ಲದೆ ತಮ್ಮ ನೆಚ್ಚಿನ ತಂತ್ರಜ್ಞರಿಗೂ ಓಟ್‌ ಮಾಡಬಹುದು.

ಪ್ರತಿವರ್ಷ ಕಲರ್ಸ್‌ ಕನ್ನಡ ತಮ್ಮ ಕಿರುತೆರೆಯ ಸೀರಿಯಲ್‌, ರಿಯಾಲಿಟಿ ಶೋ ಅಥವಾ ಇತರೆ ಕಾರ್ಯಕ್ರಮಗಳ ನಟಿಯರು, ನಟರು, ತಂತ್ರಜ್ಞರಿಗೆ ಜನಮೆಚ್ಚಿದ ಪ್ರಶಸ್ತಿ ನೀಡುತ್ತದೆ. ಈ ಪ್ರಶಸ್ತಿ ಪಡೆಯುವುದು ಕಲರ್ಸ್‌ ಕನ್ನಡದಲ್ಲಿ ಕೆಲಸ ಮಾಡುವವರ ಪ್ರಮುಖ ಕನಸು ಆಗಿರುತ್ತದೆ. ಕಿರುತೆರೆ ಪ್ರೇಕ್ಷಕರು ನೀಡುವ ಮತವು ಈ ಪ್ರಶಸ್ತಿ ಪಡೆಯಲು ನೆರವಾಗುತ್ತದೆ. ಈಗಾಗಲೇ ಮತ ಚಲಾವಣೆ ಆರಂಭವಾಗಿದೆ.

ಅನುಬಂಧ ಅವಾರ್ಡ್‌ ಜನಮೆಚ್ಚಿದ ಹಾಸ್ಯ ಕಲಾವಿದ ಯಾರು?

ಚಂದ್ರಪ್ರಭ, ಚಿಲ್ಲರ್‌ ಮಂಜ, ಹುಲಿ ಕಾರ್ತಿಕ್‌, ಮಂಜು ಪಾವಗಡ, ರಾಘವೇಂದ್ರ, ಶಿವು, ತುಕಾಲಿ ಸಂತೋಷ್‌ ಮತತು ವಿನೋದ ಗೊಬ್ಬರಗಾಲ ತನಕ ನಿಮ್ಮ ನೆಚ್ಚಿನ ಹಾಸ್ಯ ಕಲಾವಿದರು ಯಾರು ಎಂದು ಆಯ್ಕೆ ಮಾಡಬಹುದು.

ಜನಮೆಚ್ಚಿದ ಮನರಂಜಕರು

ದಿವ್ಯ, ಪ್ರಿಯಾಂಕ, ಮಾನಸ ಜಿ, ಮಾನಸ ಸಂತೋಷ್‌, ಅಪೂರ್ವ ಮತ್ತು ಶಿಲ್ಪಾರಲ್ಲಿ ಜನಮೆಚ್ಚಿದ ಎಂಟರ್‌ಟೇನರ್‌ ಫಿಮೇಲ್‌ ಅವಾರ್ಡ್‌ಗೆ ಸೂಕ್ತವೆನಿಸಿದವರಿಗೆ ನೀವು ಮತ ಚಲಾಯಿಸಬಹುದು.

ಇದೇ ವಿಭಾಗದ ಪುರುಷ ಕಲಾವಿದರಲ್ಲಿ ಅರ್ಜುನ್‌, ಲೋಕೇಶ್‌, ಕರಿ ಬಸವ, ಪ್ರಶಾಂತ್‌, ಡ್ರೋಣ್‌ ಪ್ರತಾಪ್‌, ಕಾರ್ತಿಕ್‌ ಮತ್ತು ವಿನಯ್‌ರಲ್ಲಿ ನಿಮಗೆ ಇಷ್ಟವಾದ ಕಲಾವಿದರಿಗೆ ಮತ ಚಲಾಯಿಸಬಹುದು.

ಜನಮೆಚ್ಚಿದ ಜೋಡಿ ಯಾರು?

ಭಾಗ್ಯ-ತಾಂಡವ್‌, ಲಕ್ಷ್ಮಿ ವೈಷ್ಣವ್‌, ರಚನಾ-ಜೀವ, ಶ್ರೀಗೌರಿ-ಅಪ್ಪು,ಚಾರು- ರಾಮಚಾರಿ, ಸಾಹಿತ್ಯ- ಕರ್ಣ, ಆರಾಧನಾ- ಸುಶಾಂತ್‌, ಸುಮನಾ- ತೀರ್ಥರಲ್ಲಿ ಬೆಸ್ಟ್‌ ಜೋಡಿ ಯಾರೆಂದು ನೀವು ಮತ ಚಲಾಯಿಸಬಹುದು.

ಇದೇ ರೀತಿ, ಜನಮೆಚ್ಚಿದ ಮಂಥರೆ, ಜನಮೆಚ್ಚಿದ ಶಕುನಿ, ಜನ ಮೆಚ್ಚಿದ ಸ್ಟೈಲ್‌ ಐಕಾನ್‌ ಹೀಗೆ ವಿವಿಧ ವಿಭಾಗಗಳು ಇದ್ದು, ನಿಮಗೆ ಸೂಕ್ತರೆನಿಸಿದವರಿಗೆ ಓಟ್‌ ಮಾಡಬಹುದು.

ಆಗಸ್ಟ್‌ 30 ಮತ್ತು ಸೆಪ್ಟೆಂಬರ್‌ 1ರಂದು ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಕಾರ್ಯಕ್ರಮ ನಡೆಯಲಿದೆ.