Ninagagi Serial: ದಿವ್ಯ ಉರುಡುಗ ಈಗ ಸೂಪರ್‌ಸ್ಟಾರ್ ರಚ್ಚು, ಜನರ ಪ್ರೀತಿ ಸಿಕ್ಕರೂ ಅಮ್ಮನ ಪ್ರೀತಿಯಿಲ್ಲ, ನಿನಗಾಗಿ ಹೊಸ ಧಾರಾವಾಹಿ
Colors Kannada Ninagagi Serial: ಬಿಗ್‌ಬಾಸ್ ಕನ್ನಡ ಸೀಸನ್ 8-9ರಲ್ಲಿ ಭಾಗವಹಿಸಿದ್ದ ದಿವ್ಯ ಉರುಡುಗ ಮುಖ್ಯಪಾತ್ರದಲ್ಲಿ ನಟಿಸಲಿರುವ "ನಿನಗಾಗಿ" ಸೀರಿಯಲ್ ಸದ್ಯದಲ್ಲಿಯೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 8-9ರಲ್ಲಿ ಭಾಗವಹಿಸಿದ್ದ ದಿವ್ಯ ಉರುಡುಗ ಇದೀಗ ಕಲರ್ಸ್ ವಾಹಿನಿಯ ಮುಂದಿನ ಸೀರಿಯಲ್ "ನಿನಗಾಗಿ" ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಸೀರಿಯಲ್‌ನ ಪ್ರಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ತಾಯಿಯ ಮಮತೆ ವಂಚಿತ ಸೂಪರ್ ಸ್ಟಾರ್ ನಟಿಯ ಕಥೆಯನ್ನು ಈ ಸೀರಿಯಲ್ ಹೊಂದಿರುವಂತೆ ಕಾಣುತ್ತಿದೆ. ಯುಗಾದಿ ಹಬ್ಬದ ಸಮಯದಲ್ಲಿ ನಿನಗಾಗಿ ಸೀರಿಯಲ್‌ನ ಪ್ರಮೋ ಬಿಡುಗಡೆ ಮಾಡಲಾಗಿತ್ತು. ಈ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ರಚ್ಚು ಪಾತ್ರದಲ್ಲಿ ದಿವ್ಯ ಉರುಡುಗ ಕಾಣಿಸಿಕೊಳ್ಳಲಿದ್ದಾರೆ.
ದಿವ್ಯ ಉರುಡುಗ ಈಗ ಸೂಪರ್‌ಸ್ಟಾರ್ ರಚ್ಚು
ನಿನಗಾಗಿ ಸೀರಿಯಲ್‌ನ ಪ್ರಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಪ್ರಮೋದ ಆರಂಭದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನಟಿ ಚೈತ್ರಾ ಜೆ ಆಚಾರ್ ಟಿವಿ ವರದಿಗಾರ್ತಿಯಾಗಿ ಮಾಹಿತಿ ನೀಡುವಂತಹ ಸೀನ್ ಇದೆ. "ಬ್ಯಾಕ್ ಟು ಬ್ಯಾಕ್ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿರುವ ಸೂಪರ್ ಸ್ಟಾರ್ ರಚ್ಚು ಎಂಬ ಹೀರೋಯಿನ್‌ನ ನೋಡಲು ಜನರು ಕಾಯುತ್ತಿದ್ದಾರೆ" ಎಂದು ಚೈತ್ರಾ ಜೆ ಆಚಾರ್ ಹೇಳುತ್ತಿದ್ದಾರೆ. ಆ ಸಮಯದಲ್ಲಿ ದಿವ್ಯ ಉರುಡುಗ ನೆರೆದಿರುವ ಅಪಾರ ಜನಸ್ತೋಮದ ಕಡೆಗೆ ನೋಡಿ ಕೈ ಬೀಸುತ್ತಾರೆ. ಪಕ್ಕದಲ್ಲಿ ಆಕೆಯ ತಾಯಿ ಇದ್ದಾರೆ.
ತಕ್ಷಣ ರಚ್ಚುಗೆ ತನ್ನ ಪಕ್ಕದಲ್ಲಿ ನಿಂತಿರುವ ತಾಯಿ ಪ್ರೀತಿಯಿಂದ "ರಚ್ಚು" ಎಂದು ಕೆನ್ನೆ ಹಿಂಡುತ್ತಿರುವಂತೆ ನೆನಪಾಗುತ್ತದೆ. ವಾಸ್ತವಕ್ಕೆ ಬಂದಾಗ ಅಲ್ಲಿ ಕಠೋರ ಮುಖದ ತಾಯಿ ಇರುತ್ತದೆ. ಈ ಜನರೆಲ್ಲ ಯಾಕೆ ಇಷ್ಟೊಂದು ನನ್ನನ್ನು ಪ್ರೀತಿಸುತ್ತಾರೆ ಎಂದು ಸೂಪರ್ ಸ್ಟಾರ್ ರಚ್ಚು ಕೇಳುತ್ತಾರೆ. "ಅದೆಲ್ಲ ನನಗೆ ಗೊತ್ತಿಲ್ಲ. ಮೂರು ಸಿನಿಮಾಗಳಿಗೆ ಕಾಲ್ ಶೀಟ್ ಕೊಟ್ಟಿದ್ದೇನೆ. ಪುರುಷೋತ್ತಿಲ್ಲ" ಎಂದು ಮಗಳನ್ನು ಸಿನಿಮಾಕ್ಕೆ ದುಡಿಸುವ ಕುರಿತು ಮಾತ್ರ ಆಲೋಚಿಸುವಂತೆ ತಾಯಿ ಕಠೋರವಾಗಿ ಮಾತನಾಡುತ್ತಾರೆ. ತಾಯಿಯ ಪ್ರೀತಿಗಾಗಿ ಹಾತೋರೆಯುವ ಮಗಳಂತೆ ದುಃಖದ ಮುಖ ಕಾಣಿಸುತ್ತದೆ. ಒಟ್ಟಾರೆ, ಇದು ತಾಯಿಯ ಪ್ರೀತಿಗಾಗಿ ಹಂಬಲಿಸುವ ಸೂಪರ್ ಸ್ಟಾರ್ ರಚ್ಚು ಕಥೆಯಾಗಿರಲಿದೆ. ಸದ್ಯ ಪ್ರಮೋದಲ್ಲಿ ಇಷ್ಟು ವಿವರ ಮಾತ್ರ ಇದೆ.
ನಿನಗಾಗಿ ಸೀರಿಯಲ್ ಯಾವಾಗ ಆರಂಭ?
ಸದ್ಯ ಕಲರ್ಸ್ ಕನ್ನಡ ವಾಹಿನಿಯು ನಿನಗಾಗಿ ಸೀರಿಯಲ್ ಅನ್ನು ಯಾವಾಗ ಆರಂಭಿಸಲಿದೆ ಎಂಬ ವಿವರ ನೀಡಿಲ್ಲ. ಸದ್ಯದಲ್ಲಿಯೇ ಈ ಸೀರಿಯಲ್ ಆರಂಭವಾಗುವ ಸೂಚನೆ ಇದೆ. ಆದರೆ, ಈ ಸೀರಿಯಲ್ ಆರಂಭವಾಗಬೇಕಾದರೆ ಕಲರ್ಸ್ ಕನ್ನಡದ ಸೀರಿಯಲ್ ಸ್ಲಾಟ್‌ಗಳಲ್ಲಿ ಯಾವುದಾದರೂ ಖಾಲಿಯಾಗಬೇಕು. ಸದ್ಯ ಯಾವ ಸೀರಿಯಲ್ ಮುಗಿಯಲಿದೆ ಎಂದು ಪ್ರೇಕ್ಷಕರು ಯೋಚಿಸುವಂತಾಗಿದೆ. ಕಲರ್ಸ್ ಕನ್ನಡದಲ್ಲಿ ಚುಕ್ಕಿತಾರೆ ಎಂಬ ಸೀರಿಯಲ್ ಇತ್ತೀಚೆಗೆ ಆರಂಭವಾಗಿದೆ. ಉಳಿದಂತೆ ಕೆಂಡಸಂಪಿಗೆ, ಭಾಗ್ಯಲಕ್ಷ್ಮಿ, ಲಕ್ಷ್ಮಿ ಬಾರಮ್ಮ, ಬೃಂದಾವನ, ಶ್ರೀಗೌರಿ, ರಾಮಾಚಾರಿ ಸೀರಿಯಲ್‌ಗಳು ಇವೆ. ಕರಿಮಣಿ, ಅಂತರಪಟ ಸೀರಿಯಲ್‌ಗಳಿವೆ. ಶಾಂತಂ ಪಾಪಂ ಕಾರ್ಯಕ್ರಮವೂ ಪ್ರಸಾರವಾಗುತ್ತಿದೆ. ಹೊಸ ಸೀರಿಯಲ್ ಯಾವ ಸಮಯದಲ್ಲಿ ಪ್ರಸಾರವಾಗಲಿದೆ? ಇವುಗಳಲ್ಲಿ ಯಾವ ಸೀರಿಯಲ್ ಕೊನೆಗೊಳ್ಳಲಿದೆ ಎಂಬ ಸಂದೇಹ ವೀಕ್ಷಕರಲ್ಲಿದೆ.
ನಿನಗಾಗಿ ಸೀರಿಯಲ್ ಪ್ರಮೋ
ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ನಟನೆಯ ಅರ್ಧಂಬರ್ದ ಪ್ರೇಮಕಥೆ ಕಳೆದ ವರ್ಷ ಡಿಸೆಮಬರ್‌ನಲ್ಲಿ ಬಿಡುಗಡೆಯಾಗಿತ್ತು. ದಿವ್ಯಾ ಮತ್ತು ಅರವಿಂದ್ ಜೊತೆಗೆ ರ‍್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ವಿಭಾಗ