Saviruchi: ಕಲರ್ಸ್‌ ಕನ್ನಡ ಸವಿರುಚಿಯಲ್ಲಿ ರಕ್ಷಕ್‌ ಬುಲೆಟ್‌ ಅಡುಗೆ, ಬುಲೆಟ್‌ ಸ್ಪೆಷಲ್‌ ಚಿಕನ್‌ ಫ್ರೈ ರೆಸಿಪಿ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Saviruchi: ಕಲರ್ಸ್‌ ಕನ್ನಡ ಸವಿರುಚಿಯಲ್ಲಿ ರಕ್ಷಕ್‌ ಬುಲೆಟ್‌ ಅಡುಗೆ, ಬುಲೆಟ್‌ ಸ್ಪೆಷಲ್‌ ಚಿಕನ್‌ ಫ್ರೈ ರೆಸಿಪಿ ಇಲ್ಲಿದೆ ನೋಡಿ

Saviruchi: ಕಲರ್ಸ್‌ ಕನ್ನಡ ಸವಿರುಚಿಯಲ್ಲಿ ರಕ್ಷಕ್‌ ಬುಲೆಟ್‌ ಅಡುಗೆ, ಬುಲೆಟ್‌ ಸ್ಪೆಷಲ್‌ ಚಿಕನ್‌ ಫ್ರೈ ರೆಸಿಪಿ ಇಲ್ಲಿದೆ ನೋಡಿ

How to Make Chicken fry: ಅರ್ಧಗಂಟೆಯೊಳಗೆ ಚಿಕನ್‌ ಫ್ರೈ ರೆಸಿಪಿ ಮಾಡಲು ಬಯಸುವವರು ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ಅವರ ವಿಶೇಷ ರೆಸಿಪಿ ಟ್ರೈ ಮಾಡಬಹುದು. ಕಲರ್ಸ್‌ ಕನ್ನಡ ವಾಹಿನಿಯ ಸವಿರುಚಿ ಕಾರ್ಯಕ್ರಮದ ಈ ರೆಸಿಪಿ ಇಲ್ಲಿದೆ.

ಕಲರ್ಸ್‌ ಕನ್ನಡ ಸವಿರುಚಿಯಲ್ಲಿ ರಕ್ಷಕ್‌ ಬುಲೆಟ್‌ ಅಡುಗೆ
ಕಲರ್ಸ್‌ ಕನ್ನಡ ಸವಿರುಚಿಯಲ್ಲಿ ರಕ್ಷಕ್‌ ಬುಲೆಟ್‌ ಅಡುಗೆ

Chicken fry Recipe: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸವಿರುಚಿ ಕಾರ್ಯಕ್ರಮವು ಅಡುಗೆ ಪ್ರಿಯರ ಅಚ್ಚುಮೆಚ್ಚಿನ ಕಾರ್ಯಕ್ರಮ. ಈ ಸವಿರುಚಿ ನೋಡಿಕೊಂಡು ಮನೆಯಲ್ಲಿ ಹೊಸಬಗೆಯ ಅಡುಗೆ ಮಾಡುವವರು ಸಾಕಷ್ಟು ಜನರಿದ್ದಾರೆ. ನಾನ್‌ವೆಜ್‌ ಪ್ರಿಯರಿಗೆ ಈ ಬಾರಿ ರಕ್ಷಕ್‌ ಬುಲೆಟ್‌ ಅವರು ಸ್ಪೆಷಲ್‌ ಚಿಕನ್‌ ರೆಸಿಪಿ ಹೇಳಿಕೊಟ್ಟಿದ್ದಾರೆ. ಈ ರೆಸಿಪಿ ಹೇಗೆ ಮಾಡೋದು ಎಂದು ನೋಡೋಣ.

ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ಅವರು ಬಿಗ್‌ಬಾಸ್‌ ಕನ್ನಡದಲ್ಲಿ ಭಾಗವಹಿಸಿದ ಬಳಿಕ ವಿವಿಧ ಟಿವಿ ಕಾರ್ಯಕ್ರಮಗಳಲ್ಲಿ ಆಕ್ಟಿವ್‌ ಆಗಿದ್ದಾರೆ. ಇದೀಗ ಇವರು ಕಲರ್ಸ್‌ ಕನ್ನಡ ವಾಹಿನಿಯ ಅಡುಗೆ ಕಾರ್ಯಕ್ರಮ ಸವಿರುಚಿಯಲ್ಲಿ ಭಾಗವಹಿಸಿದ್ದಾರೆ. ವೀಕ್ಷಕರಿಗೆ ವಿಶೇಷ ಚಿಕನ್‌ ರೆಸಿಪಿ ಹೇಳಿಕೊಟ್ಟಿದ್ದಾರೆ. ಸವಿರುಚಿ ಕಾರ್ಯಕ್ರಮದಲ್ಲಿ ಬುಲೆಟ್‌ ಸ್ಪೆಷಲ್‌ ಚಿಕನ್‌ ಫ್ರೈ ಮಾಡಿದ್ದಾರೆ.

ಬುಲೆಟ್‌ ಸ್ಪೆಷಲ್‌ ಚಿಕನ್‌ ಫ್ರೈ ರೆಸಿಪಿ: ಬೇಕಾಗುವ ಸಾಮಾಗ್ರಿಗಳು

  • ಚಿಕನ್‌ ಅರ್ಧಕೆಜಿ
  • ಅರ್ಧಚಮಚ ಧನಿಯಾ
  • ಐದು ಕರಿಮೆಣಸು
  • ಏಳು ಗುಂಟೂರು ಮೆಣಸಿನಕಾಯಿ
  • ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್‌
  • ಅರ್ಧ ಚಮಚ ಜೀರಿಗೆ ಪುಡಿ
  • ಅರ್ಧ ಚಮಚ ಗರಂ ಮಸಾಲೆ
  • ಅರ್ಧಚಮಚ ಖಾರದ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು
  • ಮೂರು ಪೀಸ್‌ ಬೆಣ್ಣೆ
  • ಹೆಚ್ಚಿದ ಒಂದು ಟೊಮೆಟೊ
  • ನಾಲ್ಕು ಹಸಿಮೆಣಸಿನ ಕಾಯಿ

ಇದನ್ನೂ ಓದಿ: ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು

ಚಿಕನ್‌ ಫ್ರೈ ಮಾಡುವ ವಿಧಾನ

  1. ಮೊದಲು ಪ್ಯಾನ್‌ ಬಿಸಿಮಾಡಿ. ಧನಿಯಾ ಹಾಕಿ. ಕರಿಮೆಣಸು ನಾಲ್ಕೈದು ಹಾಕಿ. ಐದು ಮೆಣಸಿನ ಕಾಯಿ ಹಾಕಿ. ಖಾರ ಜಾಸ್ತಿ ಬೇಕಿದ್ರೆ ಇನ್ನಷ್ಟು ಮೆಣಸು ಹಾಕಿ. ಆಫ್‌ ಮಾಡಿ ತಣ್ಣಗಾಗಲು ಬಿಡಿ.
  2. ಇವಿಷ್ಟನ್ನು ಮಿಕ್ಸಿ ಜಾರ್‌ಗೆ ಹಾಕಿ ನೀರು ಹಾಕದೆ ಪುಡಿಮಾಡಿಕೊಳ್ಳಿ.
  3. ತೊಳೆದಿಟ್ಟ ಸುಮಾರು ಅರ್ಧ ಕೆಜಿ ಚಿಕನ್‌ ಅನ್ನು ಮ್ಯಾರಿನೇಟ್‌ ಮಾಡಬೇಕು. ಇದಕ್ಕೆ ಒಂದು ಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ ಹಾಕಿ. ಜೀರಾ ಪೌಡರ್‌ , ಗರಂ ಮಸಲಾ, ಮೆಣಸಿನಪುಡಿ ಹಾಕಿ ಮ್ಯಾರಿನೇಟ್‌ ಮಾಡಿ. ಇದರೊಂದಿಗೆ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟ ಮಸಾಲವನ್ನೂ ಚಿಕನ್‌ಗೆ ಹಾಕಿ ಮ್ಯಾರಿನೇಟ್‌ ಮಾಡಿ.
  4. ಒಂದು ಪ್ಯಾನ್‌ನಲ್ಲಿ ತುಪ್ಪ ಹಾಕಿ. ಇದಕ್ಕೆ ಮ್ಯಾರಿನೇಟ್‌ ಆದ ಚಿಕನ್‌ ಹಾಕಿ. ಕಟ್‌ ಮಾಡಿಟ್ಟ ಟೊಮೆಟೊ ಹಾಕಿ. ಹೆಚ್ಚಿಕೊಂಡಿರುವ ಎರಡು ಮೆಣಸಿನ ಕಾಯಿ ಹಾಕಿ.
  5. ಒಂದು ಚಮಚ ನಿಂಬೆರಸ, ಕಸ್ತೂರಿ ಮೇಥಿ ಹಾಕಿ. ಮುಚ್ಚಳ ಹಾಕಿ ಬೇಯಿಸಿ. ಬುಲೆಟ್‌ ಚಿಕನ್‌ ರೆಸಿಪಿ ರೆಡಿ.

ಬುಲೆಟ್‌ ಚಿಕನ್‌ ರೆಸಿಪಿ ಮಾಡುವ ವಿಧಾನದ ವಿಡಿಯೋ ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: ಸುದೀಪಣ್ಣನ ಫಿಲ್ಮ್‌ ರಿಲೀಸ್‌ ಆದಾಗ ದರ್ಶನ್‌ ಫ್ಯಾನ್ಸ್‌ ನೋಡ್ತಾರೆ, ಸ್ಟಾರ್‌ ವಾರ್‌ ಏನೂ ಇಲ್ಲ; ರಕ್ಷಕ್‌ ಬುಲೆಟ್‌ ಹೀಗಂದ್ರು

ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌ ಬುಲೆಟ್‌ ಇತ್ತೀಚೆಗೆ ತನ್ನ ಆರ್‌ಬಿ 01 ಎಂಬ ಹೆಸರಿಡದ ಸಿನಿಮಾದ ಕುರಿತು ಘೋಷಿಸಿದ್ದರು. ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನದ ಸಮಯದಲ್ಲಿ ಈ ಹೊಸ ಚಿತ್ರದ ಕುರಿತು ಮಾಹಿತಿ ನೀಡಿದ್ದರು. ಇವರು ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲೂ ಸ್ಪರ್ಧಿಸಿದ್ದರು.

Whats_app_banner