ಕನ್ನಡ ಸುದ್ದಿ  /  ಮನರಂಜನೆ  /  ಯಾರ ಐಡಿಯಾ ಒಪ್ಪದ ಶಿವಣ್ಣ ಕ್ಯಾಂಟಿನ್‌ ಹುಡುಗನ ಮಾತಿಗೆ ಜೈ ಅಂದ್ರು; ಡಿಫರೆಂಟ್‌ ಆಗಿರಲಿದೆ ಈ ಬಾರಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌

ಯಾರ ಐಡಿಯಾ ಒಪ್ಪದ ಶಿವಣ್ಣ ಕ್ಯಾಂಟಿನ್‌ ಹುಡುಗನ ಮಾತಿಗೆ ಜೈ ಅಂದ್ರು; ಡಿಫರೆಂಟ್‌ ಆಗಿರಲಿದೆ ಈ ಬಾರಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌

Dance Karnataka Dance Reality Show: ಈ ಬಾರಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ಹೇಗಿರಲಿದೆ? ಭಾಗವಹಿಸುವ ಸ್ಪರ್ಧಿಗಳು ಯಾರು? ಈ ಕುರಿತ ಸುಳಿವು ಶಿವರಾಜ್‌ ಕುಮಾರ್‌ ನಟನೆಯ ಪ್ರಮೋದಲ್ಲಿ ಕಾಣಿಸಿಕೊಂಡಿದೆ. ಬಾಸ್‌ ಶಿವಣ್ಣ ಯಾರ ಐಡಿಯಾವನ್ನು ಯಾಕೆ ಓಕೆ ಮಾಡಿದ್ರು ಎಂದು ತಿಳಿದುಕೊಳ್ಳೋಣ.

ಯಾರ ಐಡಿಯಾ ಒಪ್ಪದ ಶಿವಣ್ಣ ಕ್ಯಾಂಟಿನ್‌ ಹುಡುಗನ ಮಾತಿಗೆ ಜೈ ಅಂದ್ರು
ಯಾರ ಐಡಿಯಾ ಒಪ್ಪದ ಶಿವಣ್ಣ ಕ್ಯಾಂಟಿನ್‌ ಹುಡುಗನ ಮಾತಿಗೆ ಜೈ ಅಂದ್ರು

ಝೀ ಕನ್ನಡ ವಾಹಿನಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಜನಪ್ರಿಯ ರಿಯಾಲಿಟಿ ಶೋ. ವಿಶೇಷವಾಗಿ ಡ್ಯಾನ್ಸ್‌ ಪ್ರಿಯರ ನೆಚ್ಚಿನ ಕಾರ್ಯಕ್ರಮ ಇದಾಗಿದೆ. ಪ್ರತಿಬಾರಿಯೂ ಏನಾದರೂ ಹೊಸ ಥೀಮ್‌ನೊಂದಿಗೆ, ವಿನೂತನವಾಗಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಕಾರ್ಯಕ್ರಮವು ಬರುತ್ತ ಇತ್ತು. ಮುಂದಿನ ಸೀಸನ್‌ನಲ್ಲಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ ಹೇಗಿರಲಿದೆ? ಕುಣಿಯೋರು ಯಾರು? ಇದಕ್ಕೆ ಸಂಬಂಧಪಟ್ಟಂತೆ ಶಿವರಾಜ್‌ ಕುಮಾರ್‌ ಮತ್ತು ಟೀಮ್‌ನ ಪ್ರಮೋಷನ್‌ ಜಾಹೀರಾತನ್ನು ಝೀ ಕನ್ನಡ ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಮುಂದಿನ ಸೀಸನ್‌ನ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನ ಸ್ಪರ್ಧಿಗಳು ಯಾರಾಗಲಿದ್ದಾರೆ ಎಂಬ ಸುಳಿವು ನೀಡಲಾಗಿದೆ.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಮುಂದಿನ ಸೀಸನ್‌

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಮುಂದಿನ ಸೀಸನ್‌ ಯಾವಾಗ ಆರಂಭವಾಗಲಿದೆ ಎಂದು ಝೀಕನ್ನಡ ವಾಹಿನಿ ಇನ್ನೂ ದಿನಾಂಕ ಘೋಷಿಸಿಲ್ಲ. ಆದರೆ, ಮುಂದಿನ ಶೋ ಹೇಗಿರಲಿದೆ ಎಂಬ ಸುಳಿವನ್ನು ನೀಡಲಾಗಿದೆ. ಈ ಬಾರಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋನಲ್ಲಿ ಡ್ಯಾನ್ಸ್‌ ಮಾಡುವವರು "ಡ್ಯಾನ್ಸ್‌ ಗೊತ್ತಿಲ್ಲದೆ ಇರುವವರು" ಆಗಿರುವ ಸಾಧ್ಯತೆಯೂ ಇದೆ. ಇದಕ್ಕೆ ಸಂಬಂಧಪಟ್ಟಂತೆ ಹ್ಯಾಟ್ರಿಕ್‌ಹೀರೋ ಶಿವರಾಜ್‌ ಕುಮಾರ್‌ ಪ್ರಮೋ ವಿಡಿಯೋ ಆಸಕ್ತಿದಾಯಕವಾಗಿದೆ.

ಟ್ರೆಂಡಿಂಗ್​ ಸುದ್ದಿ

ಒಂದು ಮೀಟಿಂಗ್‌ ಹಾಲ್‌. ಎಲ್ಲರೂ ದುಂಡು ಮೇಜಿನ ಸಮ್ಮೇಳನದಂತೆ ಕುಳಿತಿದ್ದಾರೆ. ಕಾರ್ಪೊರೇಟ್‌ ಕಂಪನಿಯೊಂದರ ದೊಡ್ಡ ಸಭೆಯಂತೆ ಇದೆ. ಅಲ್ಲಿರುವವರು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಮೀಟಿಂಗ್‌ನಲ್ಲಿ ತಮ್ಮ ಐಡಿಯಾಗಳನ್ನು ಶೇರ್‌ ಮಾಡಲು ರೆಡಿಯಾಗಿದ್ದಾರೆ. ಒಬ್ಬರ ಐಡಿಯಾ ಇನ್ನೊಬ್ಬರಿಗೆ ತಿಳಿಯದಂತೆ ತಮ್ಮ ಐಡಿಯಾಗಳನ್ನು ಅಡಿಗಿಸಿಡುತ್ತ ಇದ್ದಾರೆ. ತಮ್ಮ ಐಡಿಯಾಗಳ ಮೂಲಕ ಬಾಸ್‌ನ ಮೆಚ್ಚಿಸಬೇಕು ಎಂಬ ತುಡಿತ ಎಲ್ಲರಲ್ಲಿಯೂ ಇದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌, ರಕ್ಷಿತಾ ಸೇರಿದಂತೆ ಹಲವು ಜನರು ತಮ್ಮ ಐಡಿಯಾ ಹಂಚಿಕೊಳ್ಳಲು ರೆಡಿಯಾಗಿದ್ದಾರೆ. ಆಗ ಬಾಸ್‌ ಶಿವಣ್ಣ ಆಗಮಿಸುತ್ತಾರೆ.

ಬಾಸ್‌ ಶಿವಣ್ಣನಿಗೆ ಯಾರ ಐಡಿಯಾ ಇಷ್ಟವಾಯ್ತು?

ರಕ್ಷಿತಾ ಅವರು ತಮ್ಮ ಐಡಿಯಾ ಶೇರ್‌ ಮಾಡುತ್ತಾರೆ. "ವಿನ್ನರ್ಸ್‌ಗೆ ನೂಡಲ್ಸ್‌ ಆರ್ಡರ್‌ ಮಾಡಿದ್ರೆ ಹೇಗೆ?" ಎನ್ನುತ್ತಾರೆ. ಅದಕ್ಕೆ ಶಿವರಾಜ್‌ ಕುಮಾರ್‌ "ನಾನು ಇಲ್ಲಿ ಮೀಟಿಂಗ್‌ ಮಾಡ್ತಾ ಇರೋದು ಊಟಕ್ಕೆ ಅಲ್ಲ. ಈ ಸೀಸನ್‌ಗೆ ಯಾವ ಕಂಟೆಸ್ಟ್‌ಗಳನ್ನು ತೆಗೆದುಕೊಳ್ಳುವುದು ಎನ್ನುವುದನ್ನು ಚರ್ಚಿಸೋಕ್ಕೆ" ಎನ್ನುತ್ತಾರೆ. "ನಾವು ಯಾಕೆ ಹೌಸ್‌ ವೈಫ್‌ನ ಕರೆಸಿ ಕಂಟೆಸ್ಟ್‌ ಆಗಿ ಮಾಡಬಾರದು" ಎಂದು ತಾನೇ ಬುದ್ಧಿವಂತ ಎನ್ನುವಂತೆ ಮತ್ತೊಬ್ಬರು ಐಡಿಯಾ ಷೇರ್‌ ಮಾಡುತ್ತಾರೆ. "ಮಾಸ್ಟರ್‌ಜೀ, ಅವರು ಶಾಪಿಂಗ್‌ಗೆ ಹೋದ್ರೆ ಶೂಟಿಂಗ್‌ ಮುಗಿದ್ರೂ ಬರೋದಿಲ್ಲ" ಎಂದು ಆ ಐಡಿಯಾವನ್ನೂ ನಿರಾಕರಿಸ್ತಾರೆ ಶಿವಣ್ಣ.

ರಾಘವೇಂದ್ರ ರಾಜ್‌ ಕುಮಾರ್‌ ಐಡಿಯಾ ಏನು?

"ಮಾಮಾ, ನಾವು ಬಡ ಕುಟುಂಬದವರು, ಬಡ ಡ್ಯಾನ್ಸರ್‌ಗಳನ್ನು ಕರೆಸಿ ಅವರಿಗೆ ಒಂದು ವೇದಿಕೆ ಕಲ್ಪಿಸಿಕೊಡಬಾರದೇಕೆ" ಎಂದು ರಾಘವೇಂದ್ರ ರಾಜ್‌ಕುಮಾರ್‌ ಐಡಿಯಾ ನೀಡುತ್ತಾರೆ. "ರಘು ಪ್ರತಿಸೀಸನ್‌ನಲ್ಲೂ ಇದನ್ನು ತೋರಿಸಿಯೇ ತೋರಿಸ್ತಿವಿ. ಇದರ ಜತೆಗೆ ಏನಾದರೂ ಡಿಫರೆಂಟ್‌ ಆಗಿ ಯೋಚಿಸಬೇಕು. ಗೈಸ್‌ ಥಿಂಕ್‌ ಔಟ್‌ ಆಫ್‌ ದಿ ಬಾಕ್ಸ್‌" ಎಂದು ಅಬ್ಬರಿಸುತ್ತಾರೆ ಶಿವಣ್ಣ.

ಕ್ಯಾಂಟಿನ್‌ ಹುಡುಗನ ಐಡಿಯಾ

ಆಗ ಆಫೀಸ್‌ ಸಹಾಯಕ/ಕ್ಯಾಂಟಿನ್‌ ಹುಡುಗ ಕೆಜಿಎಫ್‌ ಸಿನಿಮಾದ ಶೈಲಿಯಲ್ಲಿ ನಡುಗುವ ಕೈಗಳಿಂದ ಟೀ ತರುತ್ತಾನೆ. ಆತನೇ ತನ್ನ ಐಡಿಯಾ ಶೇರ್‌ ಮಾಡುತ್ತಾನೆ. "ಸರ್‌ ನಾನೊಂದು ಹೇಳ್ಲಾ. ಕುಣಿಯೋಕ್ಕೆ ಗೊತ್ತಿಲ್ಲದೆ ಇರುವವರ ಕೈಲಿ ಕುಣಿಸ್ರಲ್ಲ" ಅನ್ನುತ್ತಾನೆ. "ಯಾಕೆಂದ್ರೆ ಜನ, ಜನರೇಷನ್‌ ಎರಡೂ ಚೇಂಜ್‌ ಆಗೈತೆ" ಎನ್ನುತ್ತಾನೆ. ಸಹಾಯಕ ಹುಡುಗನ ಐಡಿಯಾ ಕೇಳಿ ಉಳಿದಿವರಿಗೆ ಟೆನ್ಷನ್‌ ಆಗುತ್ತದೆ. ನಾವೆಲ್ಲ ಇಷ್ಟು ದೊಡ್ಡ ಸೀಟಲ್ಲಿ ಕುಳಿತವರ ಐಡಿಯಾಕ್ಕಿಂತ ಇವನ ಐಡಿಯಾ ಡಿಫರೆಂಟ್‌ ಇರೋದು ಅವರಿಗೆ ಹೊಟ್ಟೆ ಉರಿಸುತ್ತದೆ. "ಅಯ್ಯೋ ಈ ಅಪ್ಪ, ಹೋಗು ಪಕೋಡನೂ ತೆಗೆದುಕೊಂಡು ಬಾ" ಎನ್ನುತ್ತಾರೆ ರಕ್ಷಿತಾ. ಆ ಸಮಯದಲ್ಲಿ ಶಿವಣ್ಣ ತನ್ನ ಸ್ಟೈಲ್‌ನಲ್ಲಿ ಟೀ ಕುಡಿಯುತ್ತಾ ಯೋಚಿಸುತ್ತಾರೆ. ಇದನ್ನು ನೋಡಿದಾಗ ಉಳಿದವರಿಗೆ ಆತಂಕವಾಗುತ್ತದೆ. "ಅಣ್ಣ... ನೋ ನೋ, ಪ್ಲೀಸ್‌ ಅಣ್ಣ... ಬೇಡ ಅಣ್ಣ" ಎನ್ನುತ್ತಾರೆ. ಹೊಸ ರೂಪದಲ್ಲಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಎಂಬ ಹಿನ್ನೆಲೆ ಧ್ವನಿ ಕೇಳಿಸುತ್ತಾದೆ. ಹಾಗಾದರೆ, ಈ ಬಾರಿ ಡ್ಯಾನ್ಸ್‌ ಗೊತ್ತಿಲ್ಲದೆ ಇರುವವರನ್ನು ಕುಣಿಸಲು ಸಿದ್ಧತೆ ನಡೆದಿದೆಯೇ? ಹೌದು ಅನ್ನುತ್ತಿದೆ ಈ ಪ್ರಮೋ.