Gadar 2: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಗದರ್ 2 ಪ್ರಸಾರ; ಸ್ವಾತಂತ್ರ್ಯ ದಿನದಂದು ಸನ್ನಿ ಡಿಯೋಲ್ ನಟನೆಯ ದೇಶಭಕ್ತಿಯ ಸಿನಿಮಾ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Gadar 2: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಗದರ್ 2 ಪ್ರಸಾರ; ಸ್ವಾತಂತ್ರ್ಯ ದಿನದಂದು ಸನ್ನಿ ಡಿಯೋಲ್ ನಟನೆಯ ದೇಶಭಕ್ತಿಯ ಸಿನಿಮಾ ನೋಡಿ

Gadar 2: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಗದರ್ 2 ಪ್ರಸಾರ; ಸ್ವಾತಂತ್ರ್ಯ ದಿನದಂದು ಸನ್ನಿ ಡಿಯೋಲ್ ನಟನೆಯ ದೇಶಭಕ್ತಿಯ ಸಿನಿಮಾ ನೋಡಿ

Gadar 2: ಕಳೆದ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಸಂಚಲನ ಉಂಟು ಮಾಡಿದ್ದ ಗದರ್‌ 2 ಸಿನಿಮಾ ಇದೀಗ ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರೀಮಿಯರ್‌ ಆಗಲಿದೆ. 22 ವರ್ಷಗಳ ಹಿಂದಿನ ಗದರ್‌ ಸಿನಿಮಾದ ಸೀಕ್ವೆಲ್‌ನಲ್ಲಿ ಸನ್ನಿ ಡಿಯೋಲ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Gadar 2: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಗದರ್ 2 ಪ್ರಸಾರ
Gadar 2: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಗದರ್ 2 ಪ್ರಸಾರ

ಬೆಂಗಳೂರು: ಕಳೆದ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಸಂಚಲನ ಉಂಟು ಮಾಡಿದ್ದ ಗದರ್‌ 2 ಸಿನಿಮಾ ಇದೀಗ ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರೀಮಿಯರ್‌ ಆಗಲಿದೆ. 22 ವರ್ಷಗಳ ಹಿಂದಿನ ಗದರ್‌ ಸಿನಿಮಾದ ಸೀಕ್ವೆಲ್‌ನಲ್ಲಿ ಸನ್ನಿ ಡಿಯೋಲ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಈ ಬಾರಿ ಕನ್ನಡ ಕಿರುತೆರೆಗಳು ಸ್ವಾತಂತ್ರ್ಯ, ದೇಶಭಕ್ತಿಗೆ ಸಂಬಂಧಪಟ್ಟ ಹಿಟ್‌ ಸಿನಿಮಾಗಳು ಪ್ರಸಾರ ಮಾಡುವ ಸೂಚನೆ ನೀಡಿವೆ. ಈಗಾಗಲೇ ಗದರ್‌ 2 ಸಿನಿಮಾ ಪ್ರಸಾರದ ಕುರಿತು ವಾಹಿನಿಯು ಅಧಿಕೃತವಾಗಿ ಪ್ರಕಟಿಸಿದೆ.

ಎಲ್ಲಿ ಯಾವಾಗ ಗದರ್‌ 2 ಪ್ರಸಾರ?

ಇದೇ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಗದರ್‌ 2 ಸಿನಿಮಾವು ಝೀ ಕನ್ನಡ (ಝೀ ಫಿಕ್ಚರ್‌)ದಲ್ಲಿ ಪ್ರಸಾರವಾಗಲಿದೆ. "ಸ್ವಾತಂತ್ರ್ಯ ದಿನದ ಪ್ರಯುಕ್ತ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ದೇಶಪ್ರೇಮ ಮೆರೆದ Blockbuster ಪಿಚ್ಚರ್. ಸನ್ನಿ ಡಿಯೋಲ್, ಅಮೀಷ ಪಟೇಲ್ ಅಭಿನಯದ "ಗದರ್ 2" ಗುರುವಾರ ಸಂಜೆ 7ಕ್ಕೆ ಪ್ರಸಾರವಾಗಲಿದೆ" ಎಂದು ಝೀ ಫಿಕ್ಚರ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಇದೇ ಸಮಯದಲ್ಲಿ ಗದರ್‌ 2 ಸಿನಿಮಾದ ಕನ್ನಡ ಟ್ರೇಲರ್‌ ಅನ್ನೂ ಹಂಚಿಕೊಂಡಿದೆ.

ಗದರ್‌ 2 ಸಿನಿಮಾದ ಬಗ್ಗೆ

2023ರಲ್ಲಿ ಅನಿಲ್‌ ಶರ್ಮಾ ನಿರ್ದೇಶನದಲ್ಲಿ ಐತಿಹಾಸಿಕ ಸಾಹಸಮಯ ಸಿನಿಮಾವನ್ನು ಬಿಡುಗಡೆ ಮಾಡಲಾಯಿತು. ಸನ್ನಿ ಡಿಯೋಲ್‌, ಅಮೀಷಾ ಪಾಟೇಲ್‌, ಉತ್ಕರ್ಷ ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 1971ರ ಭಾರತ- ಪಾಕಿಸ್ತಾನ ಯುದ್ಧಕ್ಕೆ ಸಂಬಂಧಪಟ್ಟಂತೆ ಕಥೆಯನ್ನು ಇದು ಹೊಂದಿದೆ. ಜೈಲಿನಲ್ಲಿರುವ ತನ್ನ ಮಗ ಚರಣ್‌ಜೀತ್ "ಜೀತೆ" ಸಿಂಗ್‌ನನ್ನು ರಕ್ಷಿಸಲು ತಾರಾ ಸಿಂಗ್ ಭಾರತ ಮತ್ತು ಪಾಕಿಸ್ತಾನಕ್ಕೆ ಹಿಂತುರುಗುವ ಕಥೆಯನ್ನು ಇದು ಹೊಂದಿದೆ.

ಗದರ್‌ 2 ಸಿನಿಮಾವು ಆಗಸ್ಟ್‌ 11, 2023ರಂದು ಬಿಡುಗಡೆಯಾಗಿತ್ತು. ಅಂದರೆ, ಸ್ವಾತಂತ್ರ್ಯ ದಿನಾಚರಣೆಯ ವಾರದಲ್ಲಿ ರಿಲೀಸ್‌ ಆಗಿತ್ತು. ಸಿನಿಮಾದ ಕುರಿತು ನಕಾರಾತ್ಮಕ ವಿಮರ್ಶೆಗಳಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಗಳಿಸಿತ್ತು. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 691.08 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದು ಕಳೆದ ವರ್ಷ ಅತ್ಯಧಿಕ ಗಳಿಕೆ ಮಾಡಿದ ಅಗ್ರ ಐದು ಸಿನಿಮಾಗಳಲ್ಲಿ ಒಂದಾಗಿ ಸ್ಥಾನ ಪಡೆದಿತ್ತು. ಗದರ್‌ ಬಳಿಕ ಕಳೆದ ವರ್ಷ ಹಲವು ಸಿನಿಮಾಗಳು ಭರ್ಜರಿ ಗಳಿಕೆ ಮಾಡಿದ್ದವು.

ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹಲವು ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್‌ ಆಗಲು ಕಾಯುತ್ತಿವೆ. ಆಗಸ್ಟ್‌ ತಿಂಗಳ ಆರಂಭದಿಂದಲೇ ಥಿಯೇಟರ್‌ಗಳು ತುಂಬಲು ಆರಂಭವಾಗಿದ್ದು, ಸಿನಿಮಾ ನಿರ್ಮಾಪಕರಲ್ಲಿ ಕಿರುನಗೆ ಮೂಡಿಸಿದೆ. ಕಳೆದ ವಾರ ಕನ್ನಡದಲ್ಲಿ ಭೀಮ ಸಿನಿಮಾ ರಿಲೀಸ್‌ ಆಗಿತ್ತು. ಕರ್ನಾಟಕದ ಬಾಕ್ಸ್‌ ಆಫೀಸ್‌ನಲ್ಲಿ ದುನಿಯಾ ವಿಜಯ್‌ ನಟನೆಯ ಭೀಮ ಸಿನಿಮಾ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಈ ವಾರ ಅಂದರೆ, ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಹಲವು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ.

ಆಗಸ್ಟ್‌ 15ರಂದು ಹಲವು ಸಿನಿಮಾಗಳು ರಿಲೀಸ್‌ ಆಗಲಿವೆ. ಕನ್ನಡದ ಬಹುನಿರೀಕ್ಷಿತ ಸಿನಿಮಾಗಳೂ ಅಂದೇ ರಿಲೀಸ್‌ ಆಗಲಿವೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಚಿತ್ರವು ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ದೊಡ್ಡಮಟ್ಟದಲ್ಲಿ ಹಿಟ್‌ ಆಗಿವೆ. ಚಿಯಾನ್‌ ವಿಕ್ರಮ್‌ ನಟನೆಯ ಕೋಲಾರ ಚಿನ್ನದ ಗಣಿಯ ಇನ್ನೊಂದು ಕಥೆ ಹೇಳಲೀರುವ ತಂಗಲಾನ್‌ ಸಿನಿಮಾವು ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಇದು ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರವಾಗಿದೆ. ಆಗಸ್ಟ್‌ 15ರಂದು ರಾಮ್ ಪೋತಿನೇನಿ ಮತ್ತು ಸಂಜಯ್ ದತ್ ನಟನೆಯ ಡಬಲ್‌ ಐಸ್ಮಾರ್ಟ್‌ ತೆಲುಗು ಸಿನಿಮಾ ರಿಲೀಸ್‌ ಆಗಲಿದೆ.

Whats_app_banner