ಕನ್ನಡ ಸುದ್ದಿ  /  ಮನರಂಜನೆ  /  ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋನಲ್ಲಿ ಹುಲಿದರ್ಶನ; ಈ ಹುಲಿ ವೇಷಧಾರಿ ಯಾರು ಎಂದು ಗುರುತಿಸಿ, ಸುಳಿವು- ಮಾನಸಳ ಗಂಡ

ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋನಲ್ಲಿ ಹುಲಿದರ್ಶನ; ಈ ಹುಲಿ ವೇಷಧಾರಿ ಯಾರು ಎಂದು ಗುರುತಿಸಿ, ಸುಳಿವು- ಮಾನಸಳ ಗಂಡ

ಕಲರ್ಸ್‌ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ಟಿವಿಶೋ ಗಿಚ್ಚಿ ಗಿಲಿಗಿಲಿಯಲ್ಲಿ ಈ ವಾರ ಹುಲಿ ಕುಣಿತ ಇರಲಿದೆ. ತುಕಾಲಿ ಸಂತೋಷ್‌ ಹುಲಿ ವೇಷಧರಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋನಲ್ಲಿ ಹುಲಿದರ್ಶನ
ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋನಲ್ಲಿ ಹುಲಿದರ್ಶನ

ಬೆಂಗಳೂರು: ಗಿಚ್ಚಿ ಗಿಲಿಗಿಲಿಯನ್ನು ನಗುವಿನ ಕಚಗುಳಿ ಇಡುವ ತುಕಾಲಿ ಸಂತೊಷ್‌ ಹುಲಿ ವೇಷ ಧರಿಸಿದ್ದಾರೆ. ಮೊದಲ ನೋಟಕ್ಕೆ ಹುಲಿ ವೇಷಧಾರಿಯನ್ನು ನೋಡಿದರೆ ಇವರು ತುಕಾಲಿ ಸಂತೋಷ್‌ ಎಂದು ಗುರುಸಿಸುವುದು ಕಷ್ಟ. ಈ ವೀಕೆಂಡ್‌ನಲ್ಲಿ ಹುಲಿ ವೇಷವನ್ನು ಒಳಗೊಂಡ ಸ್ಕಿಟ್‌ ಇರುವ ಸೂಚನೆಯಿದೆ. ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿವಿ ಶೋ ಗಿಚ್ಚಿ ಗಿಲಿಗಿಲಿ ಈ ವರ್ಷ ಫೆಬ್ರವರಿ ತಿಂಗಳಲ್ಲಿ ಆರಂಭವಾಗಿತ್ತು. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ತುಕಾಲಿ ಸಂತೋಷ್‌ ಮತ್ತು ಅವರ ಪತ್ನಿ ಮಾನಸ ಈ ಶೋನಲ್ಲಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹುಲಿ ವೇಷದಲ್ಲಿ ತುಕಾಲಿ ಸಂತೋಷ್‌

ಸದ್ಯ ತುಕಾಲಿ ಸಂತೋಷ್‌ ಹುಲಿ ವೇಷದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲಿ ಗಿಚ್ಚಿಗಿಲಿಗಿಲಿ ಹೊಸ ಎಪಿಸೋಡ್‌ ಪ್ರಸಾರವಾಗಲಿದೆ. ಎಲ್ಲರೂ ಮಿಸ್‌ ಮಾಡದೆ ನೋಡಿ ಎಂದು ತುಕಾಲಿ ಸಂತೋಷ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ನಾನಾ ರೀತಿ ಕಾಮೆಂಟ್‌ ಮಾಡಿದ್ದಾರೆ. "ಇದು ಇದು ಚೆನ್ನಾಗಿರೋದು" "ಸೂಪರ್‌ ಕಾಸ್ಟ್ಯೂಮ್‌" "ಯಾರ್ ಗುರು ಬೆಕ್ಕಿಗೆ ಹುಲಿ ವೇಷ ಹಾಕಿದೋರು" "ಸರ್ ತುಕಾಲಿಯವರೇ ನಾನು ಅನ್ಕೊಂಡೆ ಹುಲಿ ಹಿಂಗೂ ಇರತ್ತಾ ಅಂತಾ but ಆಮೇಲೆ ಗೊತ್ತಾಯ್ತು ಹುಲಿಯಲ್ಲಿ ತುಕಾಲಿಯವರು ಇದಾರೆ ಅಂತಾ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಈ ವೀಕೆಂಡ್‌ನಲ್ಲಿ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಹುಲಿಯಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ತುಕಾಲಿ ಸಂತೋಷ್‌. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ತುಕಾಲಿ ಸಂತೋಷ್‌ ಉತ್ತಮವಾಗಿ ಆಡಿದ್ದರು. ಫಿನಾಲೆ ಹಂತದಲ್ಲಿ ಎಲಿಮಿನೇಟ್‌ ಆಗಿದ್ದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದೂರು ಹೊಸಹಳ್ಳಿಯಲ್ಲಿ ಜನಿಸಿದ ಇವರು ಕಲರ್ಸ್‌ ಕನ್ನಡದ ಮಜಾಭಾರತ ಮತ್ತು ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇವರು ಹಲವು ಸೀರಿಯಲ್‌ಗಳಲ್ಲಿಯೂ ನಟಿಸಿದ್ದಾರೆ. ಪುಟ್ಟಕ್ಕನ ಮಕ್ಕಳು ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಪ್ರಸಾರವಾಗುತ್ತಿದೆ. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಹಾಗೂ ನಟ ಕೋಮಲ್‌ ಕುಮಾರ್‌ ಈ ಶೋಗೆ ಜಡ್ಜ್‌ ಆಗಿದ್ದಾರೆ. ಈ ಹಿಂದೆ ಸಾಧು ಕೋಕಿಲ ಮತ್ತು ಶೃತಿ ಮಾತ್ರ ಈ ಶೋಗೆ ಜಡ್ಜ್‌ ಆಗಿದ್ದರು. ಸೀಸನ್‌ 3ರಲ್ಲಿ ಮೂರು ಜನರು ತೀರ್ಪುಗಾರರಾಗಿದ್ದಾರೆ. ‌ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್‌ಗಳಲ್ಲಿ ತುಕಾಲಿ ಸಂತೋಷ್‌ ಮತ್ತು ಅವರ ಪತ್ನಿ ಮಾನಸ ಪ್ರಮುಖರಾಗಿದ್ದಾರೆ.

ಬಿಗ್‌ಬಾಸ್‌ ಸೀಸನ್‌ ಎಂಟರ ವಿಜೇತ, ಮಜಾಭಾರತ, ಕಾಮಿಡಿ ಟಾಕೀಸ್‌ ಮುಂತಾದ ಕಾಯಕ್ರಮಗಳ ಮೂಲಕ ಮಿಂಚಿರುವ ಮಂಜು ಪಾವಗಡ ಕೂಡ ಜನರನ್ನು ನಗಿಸುತ್ತಿದ್ದಾರೆ. ಬಿಗ್‌ಬಾಸ್ ಸೀಸನ್‌ ಒಂಬತ್ತರಲ್ಲಿ ರಂಜಿಸಿದ್ದ ಇನ್ನೊಬ್ಬ ಹೆಸರಾಂತ ಮಜಾಭಾರತ ಮತ್ತು ಗಿಚ್ಚಿಗಿಲಿ ಕಲಾವಿದ ವಿನೋದ್‌ ಗೊಬ್ಬರಗಾಲ ಕೂಡ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದ್ದಾರೆ. ಈ ಬಾರಿಯ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಕೆಲವರು ಭಾಗವಹಿಸಿದ್ದಾರೆ. ಡ್ರೋಣ್‌ ಪ್ರತಾಪ್‌ ಮತ್ತು ಇಶಾನಿ ಕೂಡ ಜನರನ್ನು ನಗಿಸಲು ಯತ್ನಿಸಿದ್ದರು.

IPL_Entry_Point