ಬನ್ನೇರುಘಟ್ಟ ಉದ್ಯಾನವನದ ಕಬ್ ವಿಸ್ಪರರ್ ಸಾವಿತ್ರಿಯಮ್ಮನ ಕಥೆ ಟಿವಿಯಲ್ಲಿ ಪ್ರಸಾರ; ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  ಬನ್ನೇರುಘಟ್ಟ ಉದ್ಯಾನವನದ ಕಬ್ ವಿಸ್ಪರರ್ ಸಾವಿತ್ರಿಯಮ್ಮನ ಕಥೆ ಟಿವಿಯಲ್ಲಿ ಪ್ರಸಾರ; ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ

ಬನ್ನೇರುಘಟ್ಟ ಉದ್ಯಾನವನದ ಕಬ್ ವಿಸ್ಪರರ್ ಸಾವಿತ್ರಿಯಮ್ಮನ ಕಥೆ ಟಿವಿಯಲ್ಲಿ ಪ್ರಸಾರ; ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ

OMG yeh mera India: ವನ್ಯ ಮರಿಗಳ ಆರೈಕೆ ಮಾಡುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ "ಕಬ್ ವಿಸ್ಪರರ್" ಎಂದು ಪ್ರೀತಿಯಿಂದ ಕರೆಯಲ್ಪಡುವ ಸಾವಿತ್ರಿಯಮ್ಮ ಅವರ ಬದುಕಿನ ಕಥೆಯು ಹಿಸ್ಟರಿಟಿವಿ18 ವಾಹಿನಿಯ 'OMG! ಯೇ ಮೇರಾ ಇಂಡಿಯಾ" ಸಂಚಿಕೆಯಲ್ಲಿ ಪ್ರಸಾರಗೊಳ್ಳಲಿದೆ.

ಬನ್ನೇರುಘಟ್ಟ ಉದ್ಯಾನವನದ ಕಬ್ ವಿಸ್ಪರರ್ ಸಾವಿತ್ರಿಯಮ್ಮನ ಕಥೆ ಟಿವಿಯಲ್ಲಿ ಪ್ರಸಾರ
ಬನ್ನೇರುಘಟ್ಟ ಉದ್ಯಾನವನದ ಕಬ್ ವಿಸ್ಪರರ್ ಸಾವಿತ್ರಿಯಮ್ಮನ ಕಥೆ ಟಿವಿಯಲ್ಲಿ ಪ್ರಸಾರ

ಬೆಂಗಳೂರು: ಹಿಸ್ಟರಿಟಿವಿ18 ವಾಹಿನಿಯಲ್ಲಿ ಕರ್ನಾಟಕದ ಸಾಧಕಿಯೊಬ್ಬರ ಜೀವನಗಾಥೆ ಪ್ರಸಾರಗೊಳ್ಳಲಿದೆ. ವನ್ಯ ಮರಿಗಳ ಆರೈಕೆ ಮಾಡುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ "ಕಬ್ ವಿಸ್ಪರರ್" ಎಂದು ಪ್ರೀತಿಯಿಂದ ಕರೆಯಲ್ಪಡುವ ಸಾವಿತ್ರಿಯಮ್ಮ ಅವರ ಬದುಕಿನ ಕಥೆಯು ಹಿಸ್ಟರಿಟಿವಿ18 ವಾಹಿನಿಯ 'OMG! ಯೇ ಮೇರಾ ಇಂಡಿಯಾ" ಸಂಚಿಕೆಯಲ್ಲಿ ಪ್ರಸಾರಗೊಳ್ಳಲಿದೆ. ಈ ಸೋಮವಾರ (ಫೆಬ್ರವರಿ 26) ರಾತ್ರಿ 8 ಗಂಟೆಗೆ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದ್ದು, ಆಸಕ್ತರು ವೀಕ್ಷಿಸಬಹುದು.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾವಿತ್ರಿಯಮ್ಮ ಉದ್ಯಾನವನದ ಅತ್ಯಂತ ಕ್ರೂರ ಮತ್ತು ದುರ್ಬಲ ಪ್ರಾಣಿಗಳ ಆರೈಕೆ ಮಾಡುತ್ತಾರೆ. ಅವರ ಕಥೆಯು ವನ್ಯಜೀವಿ ಆರೈಕೆಯ ಸಾಮಾನ್ಯ ಕರ್ತವ್ಯಗಳನ್ನು ಮೀರಿದೆ. ಹೀಗಾಗಿ, ಹಿಸ್ಟರಿಟಿವಿ18 ನಲ್ಲಿ ಮಾತ್ರ ಪ್ರೀಮಿಯರ್ ಆಗುತ್ತಿರುವ 'OMG! ಯೇ ಮೇರಾ ಇಂಡಿಯಾ' ಶೋನಲ್ಲಿ ಇವರ ಜೀವನಗಾಥೆ ಪ್ರಸಾರವಾಗಲಿದೆ. ಯೇ ಮೇರಾ ಇಂಡಿಯಾದ ಹತ್ತನೇ ಸಂಚಿಕೆಯಲ್ಲಿ ಕರ್ನಾಟಕದ ಈ ಸಾಧಕಿಯ ಬದುಕಿನ ಚಿತ್ರಣವನ್ನು ಹಿಸ್ಟಿರಿ ಟಿವಿ ಬಿಚ್ಚಿಡಲಿದೆ.

ಯಾರಿವರು ಸಾವಿತ್ರಿಯಮ್ಮ?

2002ರಲ್ಲಿ ತನ್ನ ಪತಿಯ ಅಕಾಲಿಕ ಮರಣದ ನಂತರ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಸಾವಿತ್ರಿಯಮ್ಮ ಸೇರುತ್ತಾರೆ. ಆರಂಭದಲ್ಲಿ ಹೊಟ್ಟೆಪಾಡಿನ ಕೆಲಸಕ್ಕಾಗಿ ಇಲ್ಲಿ ಸೇರುತ್ತಾರೆ. ಆಕಸ್ಮಿಕವಾಗಿ ಉದ್ಯಾನವನ ಸೇರಿದ ಇವರು ಅತ್ಯಂತ ಪ್ರೀತಿಯಿಂದ ಪ್ರಾಣಿಗಳನ್ನು ಆರೈಕೆ ಮಾಡಿದ್ದಾರೆ. ಕೆಲವೇ ವರ್ಷಗಳಲ್ಲಿ ಸಾವಿತ್ರಿಯಮ್ಮ ಉದ್ಯಾನವನದಲ್ಲಿ ಹಲವಾರು ಸಿಂಹ, ಚಿರತೆ ಮತ್ತು ಹುಲಿ ಮರಿಗಳಿಗೆ ಅಕ್ಕರೆಯ ಅಮ್ಮ ಆಗಿದ್ದಾರೆ. ಈ ಪ್ರಾಣಿಗಳ ಆರೈಕೆಗಾಗಿ ತನ್ನನ್ನು ಮುಡುಪಾಗಿಟ್ಟುಕೊಂಡು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾವಿತ್ರಿಯಮ್ಮನ ಕೆಲಸಗಳೇನು? ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅವರು ಕ್ಲಬ್‌ ವಿಸ್ಟರ್‌ ಕೆಲಸವನ್ನು ಹೇಗೆ ಮಾಡುತ್ತಾರೆ ಇತ್ಯಾದಿಗಳನ್ನು ‘OMG! ಯೇ ಮೇರಾ ಇಂಡಿಯಾ’ದಲ್ಲಿ ನೋಡಬಹುದು ಎಂದು ಪ್ರಕಟಣೆಯಲ್ಲಿ ಹಿಸ್ಟರಿ ಟಿವಿ ತಿಳಿಸಿದೆ.

ಅಂದಹಾಗೆ ಈ ಶೋನದಲ್ಲಿ ಕೇವಲ ಸಾವಿತ್ರಮ್ಮನ ಕಥೆ ಮಾತ್ರ ಇರುವುದಲ್ಲ. ವನ್ಯ ಮರಿಗಳ ಮತ್ತು ಬೆಂಗಳೂರಿನ ಈ ತಾಯಿಯ ನಡುವಿನ ಬಾಂಧವ್ಯದ ಜೊತೆಗೆ ದೇಶದ ಉದ್ದ ಮತ್ತು ಅಗಲದ ಇತರ ನಂಬಲಾಗದ ಕಥೆಗಳು, ಮಕ್ಕಳು ಹೋಗಲು ಇಷ್ಟಪಡುವ ಶಾಲೆಗಳನ್ನು ನಿರ್ಮಿಸುವ ವ್ಯಕ್ತಿ ಸೇರಿದಂತೆ ಇನ್ನೂ ಹೆಚ್ಚು ಕಥೆಗಳು ಇರಲಿವೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಗ್ಗೆ

ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನವು260.51 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು ಸಿಂಹ ಮತ್ತು ಹುಲಿಗಳ ಸಫಾರಿಯನ್ನು ಕೈಗೊಳ್ಳಬಹುದು. ಇಲ್ಲಿನ ಟಿಕೆಟ್‌ ದರದ ಕುರಿತು ಬೆನ್ನೇರುಘಟ್ಟ ಉದ್ಯಾನವನದ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯಬಹುದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹಾವು ಉದ್ಯಾನವನ, ಚಿಟ್ಟೆ ಉದ್ಯಾನವನ, ಮೃಗಾಲಯ ಮತ್ತು ಮಕ್ಕಳಿಗಾಗಿ ಪ್ರಕೃತಿ ಶಿಬಿರವಿದೆ. ನಾಗರಹಾವು , ಪ್ಯಾಂಥರ್ಸ್, ಮೊಸಳೆಗಳು, ಕರಡಿಗಳು, ಜಿಂಕೆ ಮತ್ತು ಪಕ್ಷಿಗಳಂತಹ ಹಲವು ವನ್ಯಜೀವಿಗಳು ಇಲ್ಲಿವೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 19 ಸಿಂಹಗಳನ್ನು 5 ಹೆಕ್ಟೇರು ಪ್ರದೇಶದಲ್ಲಿ ಸಾಕಲಾಗಿದೆ ಹಾಗೂ ಸಿಂಹದ ಸಫಾರಿಯ ಸಮಯದಲ್ಲಿ ನಾವು ಸಿಂಹಗಳನ್ನು ಹತ್ತಿರದಿಂದ ನೋಡಬಹುದು.

Whats_app_banner