Success Tips: ಜೀವನದಲ್ಲಿ ಏನಾದರೂ ಸಾಧಿಸಬೇಕೇ? ಅಮೃತಧಾರೆ ಸೀರಿಯಲ್‌ ನಟ ಕರಣ್‌ ನೀಡಿದ ಈ ಸಕ್ಸಸ್‌ ಟಿಪ್ಸ್‌ ಫಾಲೋ ಮಾಡಿ-televison news how to be successful in life amruthadhaare serial actor karan motivational tips for fans pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Success Tips: ಜೀವನದಲ್ಲಿ ಏನಾದರೂ ಸಾಧಿಸಬೇಕೇ? ಅಮೃತಧಾರೆ ಸೀರಿಯಲ್‌ ನಟ ಕರಣ್‌ ನೀಡಿದ ಈ ಸಕ್ಸಸ್‌ ಟಿಪ್ಸ್‌ ಫಾಲೋ ಮಾಡಿ

Success Tips: ಜೀವನದಲ್ಲಿ ಏನಾದರೂ ಸಾಧಿಸಬೇಕೇ? ಅಮೃತಧಾರೆ ಸೀರಿಯಲ್‌ ನಟ ಕರಣ್‌ ನೀಡಿದ ಈ ಸಕ್ಸಸ್‌ ಟಿಪ್ಸ್‌ ಫಾಲೋ ಮಾಡಿ

ಅಮೃತಧಾರೆ ಕನ್ನಡ ಧಾರಾವಾಹಿಯಲ್ಲಿ ಪಾರ್ಥನಾಗಿ ಎಲ್ಲರ ಮನೆಹುಡುಗನಾಗಿರುವ ಕರಣ್‌ ಸೋಷಿಯಲ್‌ ಮೀಡಿಯಾದಲ್ಲಿ ಸ್ಪೂರ್ತಿದಾಯಕ ಸಲಹೆಯೊಂದನ್ನು ನೀಡಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತಿದ್ರೆ ಏನು ಮಾಡಬೇಕು ಎಂದು ಹೇಳಿದ್ದಾರೆ.

ಅಮೃತಧಾರೆ ಸೀರಿಯಲ್‌ ನಟ ಕರಣ್‌
ಅಮೃತಧಾರೆ ಸೀರಿಯಲ್‌ ನಟ ಕರಣ್‌

ಯಶಸ್ಸು ಬಯಸಲು ಏನು ಮಾಡಬೇಕು? ಜೀವನದಲ್ಲಿ ಸಕ್ಸಸ್‌ ಗಳಿಸುವುದು ಹೇಗೆ? ಯಶಸ್ವಿ ವ್ಯಕ್ತಿಯಾಗುವುದು ಹೇಗೆ? ಹೀಗೆ ಸಕ್ಸಸ್‌ಗೆ ಸಂಬಂಧಪಟ್ಟಂತೆ ಸಾಕಷ್ಟು ಪ್ರಶ್ನೆಗಳು ಬಹುತೇಕರಲ್ಲಿ ಇರಬಹುದು. ಈಗಾಗಲೇ ಜೀವನದಲ್ಲಿ ಏನಾದರೂ ಸಾಧನೆ ಮಾಡಿರುವ ಸೆಲೆಬ್ರಿಟಿಗಳನ್ನು ನೋಡಿದಾಗ ಅವರಂತೆಯೇ ನಾವಾಗಬೇಕು ಎಂದು ಬಯಸುವುದು ಸಹಜ. ಯಶಸ್ಸು ಗಳಿಸಲು ನಮ್ಮ ಜೀವನದ ಪುಟ್ಟಪುಟ್ಟ ಹೆಜ್ಜೆಗಳು, ಒಳ್ಳೆಯ ಕೆಲಸಗಳು, ಪಾಸಿಟಿವ್‌ ಮೈಂಡ್‌ಸೆಟ್‌ ನೆರವಾಗುತ್ತವೆ. ಕೆಲವೊಂದು ವಿಷಯಗಳು ಸರಳವಾಗಿ ಕಂಡರೂ ನಮ್ಮನ್ನು ಯಶಸ್ವಿ ವ್ಯಕ್ತಿಗಳಾಗಲು ಮಾಡುವಲ್ಲಿ ಸಾಕಷ್ಟು ಪ್ರಭಾವ ಬೀರುತ್ತವೆ. ಅಮೃತಧಾರೆ ಧಾರಾವಾಹಿ ನಟ ಕರಣ್‌ (ಸೀರಿಯಲ್‌ನಲ್ಲಿ ಪಾರ್ಥ, ಭಾವನತಮ್ಮ, ಅಪೇಕ್ಷಾಳ ಪ್ರೇಮಿ) ಇನ್‌ಸ್ಟಾಗ್ರಾಂನಲ್ಲಿ ಸರಳ ಪ್ರಭಾವಶಾಲಿ ಸಲಹೆಯೊಂದನ್ನು ನೀಡಿದ್ದಾರೆ.

ಅಮೃತಧಾರೆ ನಟ ಕರಣ್‌ ನೀಡಿರುವ ಸಕ್ಸಸ್‌ ಟಿಪ್ಸ್‌

"ನಾನು ಊರಲ್ಲಿದ್ದಾಗ ನನ್ನ ಅಪ್ಪ ನನಗೆ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಕಣ್ಣ ನೀನು ಜೀವನದಲ್ಲಿ ಏನಾದರು ಸಾಧಿಸಬೇಕು ಅಂತಿದ್ರೆ ಮೊದಲು ಎದ್ದು ತಕ್ಷಣ, ಬೆಡ್‌ಶೀಟ್‌ನ ನೀಟಾಗಿ ಹಾಸಿ, ರಗ್‌ನ ನೀಟಾಗಿ ಫೋಲ್ಡ್ ಮಾಡಿ ರೂಮಿನಿಂದ ಹೊರಗೆ ಬಾ ಎಂದು ಹೇಳುತ್ತಿದ್ದರು. ನಾವು ಮಲಗಿರ್ತಿವಿ ಅಲ್ವಾ, ಆ ಬೆಡ್‌ನ ಮೇಲಿರುವ ಬೆಡ್‌ಶೀಟ್‌ ಅನ್ನು ನೀಟಾಗಿ ಹಾಸಬೇಕು. ರಗ್ಗನ್ನು ನೀಟಾಗಿ ಮಡುಚಬೇಕು. ಈ ಸಿಂಪಲ್‌ ಟಾಸ್ಕ್‌ ಅನ್ನು ಇನ್ನೂ ನನಗೆ ಅಳವಡಿಸಿಕೊಳ್ಳಲು ಆಗಲಿಲ್ಲ. ಬಟ್‌ ಟ್ರೈ ಮಾಡ್ತಾ ಇದ್ದೀನಿ. ನೋಡಿ ಈ ರೀತಿಯ ಒಂದು ಆಲೋಚನೆ ಏನಿದೆ, ಇದು ಏನು ಸೂಚಿಸುತ್ತದೆ ಅಂದ್ರೆ ಲೈಫ್‌ನಲ್ಲಿ ಡಿಸ್‌ಪ್ಲೀನ್‌, ಶಿಸ್ತು ತುಂಬಾ ಅಗತ್ಯ. ನಿಮಗೆ ಇಷ್ಟಾನೋ ಕಷ್ಟಾನೋ ಕೆಲವೊಂದು ಕೆಲಸವನ್ನು ಮಾಡಲೇಬೇಕು" ಎಂದು ಕರಣ್‌ ಸಲಹೆ ನೀಡಿದ್ದಾರೆ.

ಬೆಳಗ್ಗೆ ಎದ್ದ ತಕ್ಷಣ ನಾವು ಯಾವ ರೀತಿ ದಿನವನ್ನು ಆರಂಭಿಸುತ್ತೇವೆ ಎನ್ನುವುದರ ಫಲಿತಾಂಶ ದಿನದ ಉದ್ದಕ್ಕೂ ದೊರಕುತ್ತದೆ. ಬೆಳಗ್ಗೆ ಎದ್ದಾಗ ಶಿಸ್ತಿನಿಂದ ಬೆಡ್‌ಶೀಟ್‌ ಹಾಸುವುದು, ರಗ್ಗು ಮಡುಚುವುದು ಕೂಡ ಉತ್ತಮ ದಿನಕ್ಕೆ ನೆರವಾಗುತ್ತದೆ. ನಮಗೆ ದಿನದ ಆರಂಭದಲ್ಲಿಯೇ ಶಿಸ್ತಿನ ಪಾಠ ಹೇಳುತ್ತದೆ ಎಂದು ಸಿಂಪಲ್‌ ಆಗಿ ಕರಣ್‌ ಹೇಳಿದ್ದಾರೆ.

ಪಾರ್ಥನಾಗಿ ಪ್ರೀತಿ ಗಳಿಸಿದ ಕರಣ್‌

ಸದ್ಯ ಕರಣ್‌ ಅಮೃತಧಾರೆ ಸೀರಿಯಲ್‌ನಲ್ಲಿ ಪಾರ್ಥನಾಗಿ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದಾನೆ. ಅಪೇಕ್ಷಾ ಎಂಬ ಮುದ್ದಾದ ಹುಡುಗಿ ಜತೆ ಮುದ್ದಾದ ಪ್ರೇಮಕಥೆ ನಡೆಯುತ್ತಿದೆ. ಇವರಿಬ್ಬರ ಜೋಡಿ ಸೀರಿಯಲ್‌ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟವಾಗಿತ್ತು. ಕೆಲವು ದಿನಗಳ ಹಿಂದೆ ಇವರಿಬ್ಬರ ಪ್ರೀತಿಗೆ ಜೈದೇವ್‌ ಅಡ್ಡಿಯಾಗಿದ್ದ. ಅಪೇಕ್ಷಾಳನ್ನು ತಾನು ಮದುವೆಯಾಗಲು ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಸಾಕಷ್ಟು ಬೇಜಾರಾಗಿತ್ತು. ಆದರೆ, ಜೈದೇವ್‌ಗೆ ಮಲ್ಲಿ ಜತೆ ವಿವಾಹವಾದ ಬಳಿಕ ಅಪೇಕ್ಷಾ ಮತ್ತು ಪಾರ್ಥ ಖುಷಿಯಲ್ಲಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್‌ ಸಂಗತಿಯೆಂದರೆ ಇವರಿಬ್ಬರ ಲವ್‌ ಸ್ಟೋರಿ ಭೂಮಿಕಾಳಿಗೆ ತಿಳಿದುಬಿಟ್ಟಿದೆ. ಕಳ್ಳ ಪಾರ್ಥ ಅಪ್ಪಿಗೆ ಕಿಸ್‌ ನೀಡುವುದನ್ನೂ ಭೂಮಿಕಾ ನೋಡಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಭಾವನತಮ್ಮನಿಗೂ ಅತ್ತಿಗೆತಂಗಿಗೂ ಪೆಪ್ಪೆಪ್ಪೆ ಡುಂಡುಂ ಮದುವೆ ನಡೆದರೆ ಅಚ್ಚರಿಯಿಲ್ಲ.

mysore-dasara_Entry_Point