ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರಿನಲ್ಲಿ ಆಂಧ್ರ ರೆಸ್ಟೂರೆಂಟ್‌ ಆರಂಭಿಸಿದ ಸತ್ಯ ಸೀರಿಯಲ್‌ ನಟ ಸಾಗರ್‌ ಬಿಳಿಗೌಡ; ನಟನೆ ಜತೆ ಬಿಸ್ನೆಸ್‌ಗೆ ಜೈ ಎಂದ ಸೆಲೆಬ್ರಿಟಿಗಳಿವರು

ಬೆಂಗಳೂರಿನಲ್ಲಿ ಆಂಧ್ರ ರೆಸ್ಟೂರೆಂಟ್‌ ಆರಂಭಿಸಿದ ಸತ್ಯ ಸೀರಿಯಲ್‌ ನಟ ಸಾಗರ್‌ ಬಿಳಿಗೌಡ; ನಟನೆ ಜತೆ ಬಿಸ್ನೆಸ್‌ಗೆ ಜೈ ಎಂದ ಸೆಲೆಬ್ರಿಟಿಗಳಿವರು

ಸತ್ಯ ಸೀರಿಯಲ್‌ನ ಹೀರೋ ಸಾಗರ್‌ ಬಿಳಿಗೌಡ ಬೆಂಗಳೂರಿನ ಬನಶಂಕರಿಯಲ್ಲಿ ಬಹಮನಿ_ಎಸ್‌ ಎಂಬ ಹೊಸ ರೆಸ್ಟೂರೆಂಟ್‌ ಆರಂಭಿಸಿದ್ದಾರೆ. ಸೃಜನ್‌ ಲೋಕೆಶ್‌, ಶೈನ್‌ ಶೆಟ್ಟಿ, ಅಕುಲ್‌ ಬಾಲಾಜಿ, ಕಿರಣ್‌ ರಾಜ್‌, ಚಂದನ್‌ ಕುಮಾರ್‌, ಶ್ರುತಿ ನಾಯ್ಡು, ವೈಜಯಂತಿ ಅಡಿಗ, ಮೈಕಲ್‌, ಕಿಶನ್‌ ಬಿಳಗಲಿ ಈಗಾಗಲೇ ಹೋಟೆಲ್‌, ರೆಸಾರ್ಟ್‌, ರೆಸ್ಟೂರೆಂಟ್‌ ಬಿಸ್ನೆಸ್‌ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಆಂಧ್ರ ರೆಸ್ಟೂರೆಂಟ್‌ ಆರಂಭಿಸಿದ ಸತ್ಯ ಸೀರಿಯಲ್‌ ನಟ ಸಾಗರ್‌ ಬಿಳಿಗೌಡ
ಬೆಂಗಳೂರಿನಲ್ಲಿ ಆಂಧ್ರ ರೆಸ್ಟೂರೆಂಟ್‌ ಆರಂಭಿಸಿದ ಸತ್ಯ ಸೀರಿಯಲ್‌ ನಟ ಸಾಗರ್‌ ಬಿಳಿಗೌಡ

ಬೆಂಗಳೂರು: ಝೀ ಕನ್ನಡ ವಾಹಿನಿಯ ಸತ್ಯ ಸೀರಿಯಲ್‌ನ ಹೀರೋ ಸಾಗರ್‌ ಬಿಳಿಗೌಡ ಬೆಂಗಳೂರಿನ ಬನಶಂಕರಿಯಲ್ಲಿ ಬಹಮನಿ_ಎಸ್‌ ಎಂಬ ಹೊಸ ರೆಸ್ಟೂರೆಂಟ್‌ ಆರಂಭಿಸಿದ್ದಾರೆ. ಈ ರೆಸ್ಟೂರೆಂಟ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಹಲವು ಕನ್ನಡ ಸೀರಿಯಲ್‌, ಟಿವಿ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಈ ಬಹಮನೀಸ್‌ ರೆಸ್ಟೂರೆಂಟ್‌ನಲ್ಲಿ ದಕ್ಷಿಣ ಭಾರತದ ಖಾದ್ಯಗಳು ಇರಲಿವೆ. ವಿಶೇಷವಾಗಿ ಆಂಧ್ರ ವೆಜ್‌ ಮೀಲ್ಸ್‌ ಅನ್‌ಲಿಮಿಟೆಡ್‌ ಇರಲಿದೆ. ಇದರೊಂದಿಗೆ ದೊನ್ನೆ ಬಿರಿಯಾನಿ ಸೇರಿದಂತೆ ದಕ್ಷಿಣ ಭಾರತದ ಹಲವು ಫುಡ್‌ ಇಲ್ಲಿರಲಿದೆ. ಅಂದಹಾಗೆ, ಈ ರೆಸ್ಟೂರೆಂಟ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲವು ಸೆಲೆಬ್ರಿಟಿಗಳು ಭಾಗವಹಿಸಿ ಸೀರಿಯಲ್‌ ನಟನಿಗೆ ಶುಭ ಹಾರೈಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪತ್ನಿ ಸಿರಿರಾಜು ಮತ್ತು ಚಂದನ್‌ ಜತೆ ಸೇರಿ ಸಾಗರ್‌ ಬಿಳಿಗೌಡ ನೂತನ ರೆಸ್ಟೂರೆಂಟ್‌ ಆರಂಭಿಸಿದ್ದಾರೆ. ಸಾಗರ್‌ ಬಿಳಿಗೌಡರ ನೂತನ ರೆಸ್ಟೂರೆಂಟ್‌ಗೆ ಕಿರುತೆರೆಯ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ, ನಟಿ ಶ್ರಾವ್ಯ ರಾವ್‌ ಸೇರಿದಂತೆ ಹಲವು ಕಲಾವಿದರು ಆಗಮಿಸಿದ್ದಾರೆ. ಸತ್ಯ ಸೀರಿಯಲ್‌ ತಂಡದ ಹಲವು ಗೆಳೆಯ ಗೆಳತಿಯರು ಆಗಮಿಸಿದ್ದರು. ಒಟ್ಟಾರೆ ಕನ್ನಡದ ಹಲವು ನಟಿಯರು, ನಟರು ಹೋಟೆಲ್‌ ಬಿಸ್ನೆಸ್‌ ಮಾಡುತ್ತಿದ್ದು, ಈ ಬಳಗಕ್ಕೆ ಸಾಗರ್‌ ಬಿಳಿಗೌಡ ದಂಪತಿ ಸೇರಿದ್ದಾರೆ.

ಕನ್ನಡ ಸೆಲೆಬ್ರಿಟಿಗಳ ಹೋಟೆಲ್‌ ಬಿಸ್ನೆಸ್‌

ಸೃಜನ್‌ ಲೋಕೇಶ್‌, ಶೈನ್‌ ಶೆಟ್ಟಿ, ಅಕುಲ್‌ ಬಾಲಾಜಿ, ಕಿರಣ್‌ ರಾಜ್‌, ಚಂದನ್‌ ಕುಮಾರ್‌, ಶ್ರುತಿ ನಾಯ್ಡು, ವೈಜಯಂತಿ ಅಡಿಗ, ಬಿಗ್‌ಬಾಸ್‌ನ ಮೈಕಲ್‌, ಕಿಶನ್‌ ಬಿಳಗಲಿ ಸೇರಿದಂತೆ ಹಲವು ಕನ್ನಡ ಸೆಲೆಬ್ರಿಟಿಗಳು ಹೋಟೆಲ್‌, ರೆಸ್ಟೂರೆಂಟ್‌, ಡಾಭಾ ಇತ್ಯಾದಿಗಳನ್ನು ನಡೆಸುತ್ತ ಇದ್ದಾರೆ. ನಟನೆ ಜತೆಗೆ ಬಿಸ್ನೆಸ್‌ಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಸೃಜನ್‌ ಲೋಕೇಶ್‌ ಕೋಕು ಎಂಬ ಹೋಟೆಲ್‌ ಹೊಂದಿದ್ದಾರೆ. ಗಲ್ಲಿ ಕಿಚನ್‌ ಮೂಲಕ ಶೈನ್‌ ಶೆಟ್ಟಿ ಶೈನ್‌ ಆಗಿದ್ದಾರೆ. ಇದೇ ರೀತಿ ಇನ್ನೂ ಹಲವು ನಟ-ನಟಿಯರು ಹೋಟೆಲ್‌ ಬಿಸ್ನೆಸ್‌ ಮಾಡುತ್ತಿದ್ದಾರೆ. ಕೆಲವು ನಟನಟಿಯರಿಗೆ ಅಡುಗೆ ಮಾಡುವುದೆಂದರೆ ಅಚ್ಚುಮೆಚ್ಚು. ಸಮಯ ಸಿಕ್ಕಾಗ ತಮ್ಮ ಹೋಟೆಲ್‌ಗೆ ಹೋಗಿ ತಾವೇ ಶೆಫ್‌ ಆಗುತ್ತಾರೆ.

ಕತ್ರಿಗುಪ್ಪೆಯಲ್ಲಿದೆ ಸೃಜನ್‌ ಲೋಕೇಶ್‌ ಹೋಟೆಲ್‌

ಮಜಾ ಟಾಕೀಸ್‌ ಖ್ಯಾತಿಯ ಸೃಜನ್‌ ಲೋಕೇಶ್‌ ಬೆಂಗಳೂರಿನ ಕತ್ರಿಗುಪ್ಪೆಯ ತನ್ನ ಮನೆಯ ಪಕ್ಕವೇ ಒಂದು ಸುಂದರ ರೆಸ್ಟೂರೆಂಟ್‌ ಹೊಂದಿದ್ದಾರೆ. ತನ್ನ ಮನೆಯ ಪಕ್ಕದ ರಸ್ತೆಯಲ್ಲಿ, ಕತ್ರಿಗುಪ್ಪೆಯ ಪ್ರಮುಖ ರಸ್ತೆಯಲ್ಲಿ ಕೋಕು ಎಂಬ ಹೋಟೆಲ್‌ ಅನ್ನು ಸೃಜನ್‌ ಲೋಕೇಶ್‌ ಹೊಂದಿದ್ದಾರೆ. ಹೋಟೆಲ್‌ ಒಳಗೆ ಲೈವ್‌ ಕ್ರಿಕೆಟ್‌ ಇತ್ಯಾದಿ ನೋಡಲು ದೊಡ್ಡ ಟೀವಿ ಇದೆ. ಮೆಲುವಾದ ಸಂಗೀತ ಕಿವಿಗೆ ಕೇಳಿಬರುತ್ತದೆ. ನಾನ್‌ವೆಜ್‌ ಪ್ರಿಯರಿಗೆ ಇಲ್ಲಿ ರುಚಿಕರ ಫುಡ್‌ ದೊರಕುತ್ತದೆ.

ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ ಬಳಿ ಶೈನ್‌ ಶೆಟ್ಟಿಯ ಗಲ್ಲಿ ಕಿಚನ್‌

ಬಿಗ್‌ಬಾಸ್‌ ಕನ್ನಡ ಸೀಸನ್‌ 7ರಲ್ಲಿ ಗೆಲುವು ಪಡೆದ ಶೈನ್‌ ಶೆಟ್ಟಿ ಕೂಡ ಹೋಟೆಲ್‌ ಬಿಸ್ನೆಸ್‌ ಹೊಂದಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ ಸಮೀಪದಲ್ಲಿರುವ ಇವರ ಗಲ್ಲಿ ಕಿಚನ್‌ ವಿನೂತನ ಕಲ್ಪನೆಯ ತಿಂಡಿಬಂಡಿ. ಈಗ ಸ್ವಂತ ಕಟ್ಟಡದಲ್ಲಿ ಹೋಟೆಲ್‌ ನಡೆಸಲಾಗುತ್ತಿದೆ. ಆರಂಭದಲ್ಲಿ ಇವರು ಒಂದು ಗಲ್ಲಿ ಕಿಚನ್‌ ಹೊಂದಿದ್ದಾರೆ. ಈಗ ಇವರ ಗಲ್ಲಿ ಕಿಚನ್‌ ಸಂಖ್ಯೆ ಮೂರಕ್ಕೆ ತಲುಪಿದೆ.

ರೆಸಾರ್ಟ್‌ ಓನರ್‌ ಅಕುಲ್‌ ಬಾಲಾಜಿ

ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಅಕುಲ್‌ ಬಾಲಾಜಿ ಅವರು ಸ್ವಂತ ರೆಸಾರ್ಟ್‌ ಹೊಂದಿದ್ದಾರೆ. ಬಹುಕಾಲದಿಂದ ಇವರು ರೆಸ್ಟೂರೆಂಟ್‌ ಬಿಸ್ನೆಸ್‌ ಹೊಂದಿದ್ದಾರೆ. ಇವರಿಗೆ ಅಡುಗೆ ಮಾಡೋದೆಂದ್ರೆ ಅಚ್ಚುಮೆಚ್ಚು ಎಂದು ಸಾಕಷ್ಟು ಸಲ ಹೇಳಿಕೊಂಡಿದ್ದಾರೆ.

ಹೋಟೆಲ್‌ ಪ್ರಾಂಚೈಸಿ ಹೊಂದಿರುವ ಚೈತ್ರಾ ವಾಸುದೇವನ್‌

ಚೈತ್ರಾ ವಾಸುದೇವನ್‌ ಅವರ ಕುಟುಂಬದ ಹೋಟೆಲ್‌ ಬೆಂಗಳೂರಿನಲ್ಲಿದೆ. ಇವರ ಹೋಟೆಲ್‌ ಫ್ರಾಂಚೈಸಿ ಬೆಂಗಳೂರಿನ ವಿವಿಧೆಡೆ ಇದೆ. ಚೈತ್ರಾ ಕೂಡ ಈ ಹೋಟೆಲ್‌ ಬಿಸ್ನೆಸ್‌ನಲ್ಲಿ ಕೈಜೋಡಿಸಿದ್ದಾರೆ.

ಬಿಸ್ನೆಸ್‌ಗೆ ಸೈ ಎಂದ ಇನ್ನಷ್ಟು ಸೆಲೆಬ್ರಿಟಿಗಳು

ಕನ್ನಡ ನಟ ಕಿರಣ್‌ ರಾಜ್‌ ಕೂಡ ಸ್ವಂತ ರೆಸ್ಟೂರೆಂಟ್‌ ಹೊಂದಿದ್ದಾರೆ. ಜತೆಗೆ ಸ್ವಂತ ಬಟ್ಟೆ ಬ್ರಾಂಡ್‌ ಕೂಡ ಹೊಂದಿದ್ದಾರೆ. ಕನ್ನಡ ನಟ ಚಂದನ್‌ ಕುಮಾರ್‌ ಅವರು ವೆಜ್‌ ಮತ್ತು ನಾನ್‌ ವೆಜ್‌ ಬಿರಿಯಾನಿ ಹೋಟೆಲ್‌ ಹೊಂದಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಹೋಟೆಲ್‌ ಬಿಸ್ನೆಸ್‌ ಮಾಡುತ್ತಿದ್ದಾರೆ. ಕನ್ನಡ ಕಿರುತೆರೆ ನಟಿ ಶೃತಿ ನಾಯ್ಡು ಅವರು ಮೈಸೂರಿನಲ್ಲಿ ಮೈಸೂರು ಮಿರ್ಚಿ ಎಂಬ ಹೋಟೆಲ್‌ ನಡೆಸುತ್ತಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿ, ಡ್ಯಾನ್ಸರ್‌ ಕಿಶನ್‌ ಬಿಳಗಲಿ ಬೆಂಗಳೂರಿನಲ್ಲಿ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಹೊಂದಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಸ್ಪರ್ಧಿಯಾಗಿದ್ದ ವೈಜಯಂತಿ ಅಡಿಗ ಕೂಡ ಹೋಟೆಲ್‌ ಬಿಸ್ನೆಸ್‌ ಹೊಂದಿದ್ದಾರೆ.

ಟಿ20 ವರ್ಲ್ಡ್‌ಕಪ್ 2024