ಕನ್ನಡ ಸುದ್ದಿ  /  ಮನರಂಜನೆ  /  Mahanati Gagana: ಮಹಾನಟಿ ಗಗನಾಳಿಗೆ ಬಂಪರ್‌, ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಅವಕಾಶ ಪಡೆದ ಚಿತ್ರದುರ್ಗದ ಪ್ರತಿಭೆ

Mahanati Gagana: ಮಹಾನಟಿ ಗಗನಾಳಿಗೆ ಬಂಪರ್‌, ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಅವಕಾಶ ಪಡೆದ ಚಿತ್ರದುರ್ಗದ ಪ್ರತಿಭೆ

Mahanati Reality Show Gagana:ಮಹಾನಟಿ ರಿಯಾಲಿಟಿ ಶೋನಲ್ಲಿ ತನ್ನ ಸಹಜ ಅಭಿನಯ, ಮುಗ್ಧ ನಟನೆಯಿಂದ ಜನಮನ ಗೆದ್ದ ಗಗನಾ ಇದೀಗ ಝೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸಿದ್ದೇ ಗೌಡರ ಅತ್ತೆ ಮಗಳಾಗಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ.

Mahanati Gagana: ಮಹಾನಟಿ ಗಗನಾಳಿಗೆ ಬಂಪರ್‌, ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಅವಕಾಶ
Mahanati Gagana: ಮಹಾನಟಿ ಗಗನಾಳಿಗೆ ಬಂಪರ್‌, ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಅವಕಾಶ

Mahanati Reality Show Gagana: ಝೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಪ್ರತಿಭಾನ್ವಿತ ಸ್ಪರ್ಧಿಗಳಿಗೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅವಕಾಶ ದೊರಕುವ ಸೂಚನೆಯಿದೆ. ಮಹಾನಟಿಯ ಮುಗ್ಧ ಪ್ರತಿಭೆ, ತನ್ನ ಸಹಜ ಅಭಿನಯದಿಂದ ಗಮನ ಸೆಳೆಯುತ್ತಿರುವ ಗಗನಾ ಈಗ ಸೀರಿಯಲ್‌ವೊಂದರಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಈ ಮೂಲಕ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಚಿಕ್ಕ ಪಾತ್ರ, ಅತಿಥಿ ಪಾತ್ರವಾಗಿದ್ದರೂ ಭರವಸೆ ಹುಟ್ಟಿಸಿದ್ದಾರೆ.

ಮಹಾನಟಿ ಸ್ಪರ್ಧಿಗಳಿಗೆ ಸೀರಿಯಲ್‌ ಭಾಗ್ಯ

ಮಹಾನಟಿ ರಿಯಾಲಿಟಿ ಶೋನಲ್ಲಿ ನಟಿಸುವ ಎಲ್ಲಾ ಸ್ಪರ್ಧಿಗಳಿಗೆ ಝೀ ಕನ್ನಡ ವಾಹಿನಿಯ ಸೀರಿಯಲ್‌ಗಳಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಅವಕಾಶ ನೀಡಲಾಗಿತ್ತು. ಇದೀಗ ಲಕ್ಷ್ಮೀ ನಿವಾಸದಲ್ಲಿ ಗಗನ ನಟಿಸಿ ಸೈ ಎಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ಸೀರಿಯಲ್‌ಗಳಲ್ಲಿ ಕಾಯಂ ಪಾತ್ರ ದೊರಕಿ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ಗಗನ ಆದರೂ ಅಚ್ಚರಿಯಿಲ್ಲ.

ಗಗನಾಳಿಗೆ ಸೀರಿಯಲ್‌ನಲ್ಲಿ ಅವಕಾಶ

ಈ ಮಹಾನಟಿ ಯಾವ ಸೀರಿಯಲ್‌ಗೆ ಎಂಟ್ರಿ ನೀಡಿದ್ದಾಳೆ, ಗೆಸ್‌ ಮಾಡಿ ಎಂದು ಝೀ ಕನ್ನಡ ವಾಹಿನಿಯ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಬಹುತೇಕ ನೆಟ್ಟಿಗರು "ಲಕ್ಷ್ಮೀ ನಿವಾಸ" ಎಂದಿದ್ದಾರೆ. ಹೌದು, ಮಹಾನಟಿ ರಿಯಾಲಿಟಿ ಶೋ ಮೂಲಕ ಎಲ್ಲರ ಗಮನ ಸೆಳೆದಿದ್ದ ಗಗನಾ ಈಗ ಲಕ್ಷ್ಮಿ ನಿವಾಸ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್‌ನ ಸಿದ್ದೇ ಗೌಡರ ಅತ್ತೆ ಮಗಳಾಗಿ ಸೀರಿಯಲ್‌ಗೆ ಎಂಟ್ರಿ ನೀಡಿದ್ದಾರೆ. ಈ ಮೂಲಕ ಉತ್ತಮ ಅವಕಾಶವನ್ನೇ ತನ್ನದಾಗಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

 

ಝೀ ಕನ್ನಡ ವಾಹಿನಿಯ ಮಹಾನಟಿ ಎಂಬ ಹೊಸ ರಿಯಾಲಿಟಿ ಶೋಗೆ ಗಗನಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆರಂಭದಿಂದಲೇ ತನ್ನ ಮುಗ್ಧ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದರು. ಇವರ ಸಹಜ ಮಾತುಗಳು ಎಲ್ಲರನ್ನೂ ಸೆಳೆದಿತ್ತು. ಜಡ್ಜ್‌ಗಳಾದ ರಮೇಶ್‌ ಅರವಿಂದ್‌, ಪ್ರೇಮಾ, ನಿಶ್ವಿಕಾ ನಾಯ್ಡ್‌ ಮತ್ತು ತರುಣ್‌ ಸುಧೀರ್‌ ಅವರ ಫೇವರಿಟ್‌ ಸ್ಪರ್ಧಿಯಾಗಿ ಹೊರಹೊಮ್ಮಿದ್ದರು.

ಈ ಪ್ರತಿಭಾನ್ವಿತೆ ಈಗ ಸೀರಿಯಲ್‌ ಮೂಲಕವೂ ಪ್ರೇಕ್ಷಕರ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಮಹಾನಟಿಯಲ್ಲಿ ತನಗೆ ಕೊಟ್ಟ ಡೈಲಾಗ್‌ಗಳನ್ನು ಅತ್ಯುತ್ತಮವಾಗಿ ಡೆಲಿವರಿ ಮಾಡುತ್ತ ಎಲ್ಲರ ಸೆಳೆಯುತ್ತಿದ್ದರು. ಯಾವುದೇ ವಿಷಯ ಕೊಟ್ಟರೂ ಸ್ಪಾಟ್‌ನಲ್ಲಿಯೇ ಅದಕ್ಕೊಂದು ಸ್ಕಿಟ್‌ ರೆಡಿ ಮಾಡಿ ಡೈಲಾಗ್‌ ಹೇಳುವಂತಹ ವಿಶೇಷ ಪ್ರತಿಭೆ ಹೊಂದಿರುವ ಗಗನಾಳಿಗೆ ಈಗ ಅಭಿಮಾನಿಗಳ ಬಳಗವೂ ಹುಟ್ಟಿಕೊಂಡಿದೆ. ಸಾಕಷ್ಟು ಜನರು ಗಗನಾಳನ್ನು ಮೆಚ್ಚಿಕೊಂಡಿದ್ದಾರೆ.

ಮಹಾನಟಿ ರಿಯಾಲಿಟಿ ಶೋನಲ್ಲಿ ಸ್ಪಾಟ್‌ನಲ್ಲಿಯೇ ಡೈಲಾಗ್‌ ರೆಡಿ ಮಾಡಿಕೊಂಡು ಅಭಿನಯಿಸುವ ಈಕೆಯ ಪ್ರತಿಭೆ ಜಡ್ಜ್‌ಗಳಿಗೆ ತುಂಬಾ ಇಷ್ಟವಾಗಿತ್ತು. ನಟಿಯಾಗಿ ಅಲ್ಲದೆ ಇದ್ದರೂ ಸ್ಕ್ರಿಪ್ಟ್‌ ರೈಟರ್‌ ಆಗಿಯೂ ಕೆಲಸ ಮಾಡಬಹುದು ಎಂದು ತರುಣ್‌ ಸುಧೀರ್‌ ಹೇಳಿದ್ದರು. ರಿಯಾಲಿಟಿ ಶೋ ವೇದಿಕೆಯಲ್ಲಿಯೇ ಈಕೆಯ ಸ್ಕ್ರಿಪ್ಟ್‌ ಮೆಚ್ಚಿ ತರುಣ್‌ ಸುಧೀರ್‌ 501 ರೂಪಾಯಿಯ ಸಂಭಾವನೆ ನೀಡಿದ್ದರು.

ಮಹಾನಟಿಯ ಗಗನಾ ಟ್ರೋಲ್‌ಗೂ ಒಳಗಾಗಿದ್ದರು. ನಿಮ್ಮ ತಂಗಿ ಮೆಕ್ಯಾನಿಕ್‌ನನ್ನು ಲವ್‌ ಮಾಡಿದ್ದರೆ, ಮದುವೆ ಆಗಿದ್ದರೆ ಏನು ಮಾಡುತ್ತೀಯ ಎಂಬ ಸ್ಕಿಟ್‌ನಲ್ಲಿ "ಮೆಕ್ಯಾನಿಕ್‌ನನ್ನು ಮದುವೆಯಾದರೆ ಗ್ರೀಸ್‌ ತಿಂದು ಬದುಕಬೇಕಾಗುತ್ತದೆ" ಎಂಬ ಡೈಲಾಗ್‌ ಡೆಲಿವರಿ ಮಾಡಿದ್ದರು. ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿರುವ ಸಾವಿರಾರು ಜನರಿಗೆ ಇದರಿಂದ ಅವಮಾನವಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಷಯದ ಕುರಿತು ವಿರೋಧ ವ್ಯಕ್ತವಾಗಿತ್ತು. ರಮೇಶ್‌ ಅರವಿಂದ್‌, ಗಗನಾ ಸೇರಿದಂತೆ ಹಲವರ ವಿರುದ್ಧ ಪೊಲೀಸ್‌ ದೂರೂ ನೀಡಲಾಗಿತ್ತು.

ಲಕ್ಷ್ಮೀ ನಿವಾಸ ಸೀರಿಯಲ್‌ ಕುರಿತು

ಲಕ್ಷ್ಮೀ ನಿವಾಸವು ಝೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ, ಸೈಕೊ ವರ್ತನೆಯ ಜಯಂತ್‌ ಮೂಲಕ ಈ ಸೀರಿಯಲ್‌ ಹೆಚ್ಚು ಪ್ರಚಾರಕ್ಕೆ ಬಂದಿತ್ತು. ಅನಾಥನಾದ ಜಯಂತ್‌ ಎಂಬ ಶ್ರೀಮಂತ ಮಧ್ಯಮ ವರ್ಗದ ಜಾಹ್ನವಿಯನ್ನು ಮದುವೆಯಾಗಿದ್ದಾನೆ. ಈತ ತನ್ನ ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಾನೆ. ಅತಿಯಾದ ಪ್ರೀತಿಯಿಂದ ಪೊಸೆಸಿವ್‌ನೆಸ್‌ ಬೆಳೆಸಿಕೊಂಡಿದ್ದಾನೆ. ಹೆಂಡತಿಯ ಬಗ್ಗೆ ಯಾರು ಮಾತನಾಡಿದರೂ, ಆಕೆಯ ಜತೆಗೆ ಯಾರಿಗಾದರೂ ಸಲಿಗೆಯಿದ್ದರೂ ಈತ ಸಹಿಸಲಾರ. ಕೆಟ್ಟ ದೃಷ್ಟಿಯಿಂದ ನೋಡಿದವರ ವಿರುದ್ಧ ಫೈಟಿಂಗ್‌ಗೂ ರೆಡಿ. ಕೆಲವೊಮ್ಮೆ ಈ ವಿಷಯದಲ್ಲಿ ಮೃಗದ ರೀತಿ ವರ್ತಿಸುವ ಈತನ ಪಾತ್ರದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳಾಗಿವೆ.

ಲಕ್ಷ್ಮೀ ನಿವಾಸ ಸೀರಿಯಲ್‌ ಪಾತ್ರ ಪರಿಚಯ

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟ ಅಜಯ್‌ ರಾಜ್‌ ಹರೀಶ್‌ ಪಾತ್ರ ಮಾಡುತ್ತಿದ್ದಾರೆ. ಭಾವನಾ ಪಾತ್ರದಲ್ಲಿ ದಿಶಾ ಮದನ್‌, ಸಿದ್ದೇಗೌಡರು ಪಾತ್ರದಲ್ಲಿ ಧನಂಜಯ್‌ ನಟಿಸುತ್ತಿದ್ದಾರೆ. ಚಂದನಾ ಅನಂತಕೃಷ್ಣ ಅವರು ಜಾಹ್ನವಿ ಪಾತ್ರದಲ್ಲಿ ಮಿಂಚಿದ್ದಾರೆ. ಸಂತೋಷ್‌ ಎಂಬ ಪಾತ್ರದಲ್ಲಿ ನಟ ಮಧು ಹೆಗಡೆ ನಟಿಸುತ್ತಿದ್ದಾರೆ. ಲಕ್ಷ್ಮಿ ಹೆಗಡೆ, ದೀಪಕ್‌ ಸುಬ್ರಹ್ಮಣ್ಯ, ಶ್ವೇತ ಮುಂತಾದವರು ಈ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.