ಕನ್ನಡ ಸುದ್ದಿ  /  Entertainment  /  Televison News Rakshith Shetty Rukmini Vasanth Sapta Sagaradaache Ello Side A World Television Primeire Details Pcp

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಟಿವಿಯಲ್ಲಿ ಪ್ರಸಾರ, ಸೈಡ್‌ ಎ ಅಥವಾ ಬಿ, ಚಾನೆಲ್‌ ಯಾವುದು, ಮನೆಯಲ್ಲೇ ನೋಡಿ ಮನು ಪ್ರಿಯಾ ಪ್ರೇಮಕಾವ್ಯ

Sapta Sagaradaache Ello Side A: ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸಿನಿಮಾವು ಶೀಘ್ರದಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮನು ಮತ್ತು ಪ್ರಿಯಾ ಪ್ರೇಮಕಥೆಯನ್ನು ಒಟಿಟಿ ಮತ್ತು ಚಿತ್ರಮಂದಿರಗಳಲ್ಲಿ ನೋಡದೆ ಇರುವವರು ಮಿಸ್‌ ಮಾಡದೆ ಟಿವಿಯಲ್ಲಿ ನೋಡಬಹುದು.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಟಿವಿಯಲ್ಲಿ ಪ್ರಸಾರ, ಸೈಡ್‌ ಎ ಅಥವಾ ಬಿ, ಚಾನೆಲ್‌ ಯಾವುದು, ಮನೆಯಲ್ಲೇ ನೋಡಿ ಮನು ಪ್ರಿಯಾ ಪ್ರೇಮಕಾವ್ಯ
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಟಿವಿಯಲ್ಲಿ ಪ್ರಸಾರ, ಸೈಡ್‌ ಎ ಅಥವಾ ಬಿ, ಚಾನೆಲ್‌ ಯಾವುದು, ಮನೆಯಲ್ಲೇ ನೋಡಿ ಮನು ಪ್ರಿಯಾ ಪ್ರೇಮಕಾವ್ಯ

ಬೆಂಗಳೂರು: ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಸಾಕಷ್ಟು ಜನರು ಚಿತ್ರಮಂದಿರಗಳಲ್ಲಿ ವೀಕ್ಷಿಸಿದ್ದಾರೆ. ಚಿತ್ರಮಂದಿರದಲ್ಲಿ ನೋಡಲಾಗದವರು ಒಟಿಟಿಯಲ್ಲಿ ವೀಕ್ಷಿಸಿದ್ದಾರೆ. ಈ ಎರಡೂ ಕಡೆ ವೀಕ್ಷಿಸಲು ಅವಕಾಶ ದೊರಕದೆ ಇರುವವರು ಇದೀಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಮನೆಯಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಒಂದು ಅನನ್ಯ ಪ್ರೇಮಕಥೆಯ ಸಿನಿಮಾ ನೋಡಲು ಬಯಸುವವರು ಸದ್ಯದಲ್ಲಿಯೇ ಈ ಸಿನಿಮಾ ವೀಕ್ಷಿಸಬಹುದು.

ಝೀ ಕನ್ನಡ ಚಾನೆಲ್‌ನಲ್ಲಿ ಸಪ್ತ ಸಾಗರದಾಚೆ ಎಲ್ಲೋ

ಈ ಕನ್ನಡ ಈಗಾಗಲೇ ಈ ಕುರಿತು ಮಾಹಿತಿ ನೀಡಿದೆ. "ಸುಡುವ ಭಾವನೆಗಳ ಕಡು ಸಂಘರ್ಷ, ಪ್ರೇಕ್ಷಕರ ಹೃದಯ ಕಾಡುವ ಕಥೆ, ರಕ್ಷಿತ್ ಶೆಟ್ಟಿ & ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಅತೀ ಶೀಘ್ರದಲ್ಲಿ" ಎಂದು ಝೀ ಕನ್ನಡ ಪೋಸ್ಟ್‌ ಮಾಡಿದೆ. ಆದರೆ, ಯಾವಾಗ ಎಂಬ ವಿವರವನ್ನು ವಾಹಿನಿ ನೀಡಿಲ್ಲ. ಮೂಲಗಳ ಪ್ರಕಾರ ಸದ್ಯದಲ್ಲಿಯೇ ಈ ಸಿನಿಮಾ ಪ್ರಸಾರವಾಗಲಿದೆ.

ರಕ್ಷಿತ್‌ ಶೆಟ್ಟಿ ನಿರ್ಮಿಸಿ ನಾಯಕನಾಗಿ ನಟಿಸಿರುವ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮೋಡಿ ಮಾಡಿದೆ. ಸಾಕಷ್ಟು ಜನರು ಇದು ಅದ್ಭುತ ಪ್ರೇಮ ಕಾವ್ಯ. ನೋಡಿದರೆ ಕಣ್ಣಿರು ತರಿಸುತ್ತದೆ ಎಂದಿದ್ದಾರೆ. ಸಾಕಷ್ಟು ಜನರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೋಡಿ ಕಣ್ಣೀರು ಸುರಿಸಿದ್ದಾರೆ. ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗಿತ್ತು.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾಗಳು ಈಗಾಗಲೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸಿನಿಮಾವನ್ನು ಹೇಮಂತ್‌ ಎಂ ರಾವ್‌ ನಿರ್ದೇಶಿಸಿದ್ದಾರೆ. ರಕ್ಷಿತ್‌ ಶೆಟ್ಟಿ ನಿರ್ಮಾಣದ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ನಟನೆ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಚರಣ್‌ ರಾಜ್‌ ಸಂಗೀತ, ಅದ್ವೈತ ಗುರುಮೂರ್ತಿ ಸಿನಿಮಾಟೊಗ್ರಫಿ ಈ ಸಿನಿಮಾಕ್ಕಿದೆ. ಸುನಿಲ್‌ ಎಸ್‌ ಭಾರಧ್ವಾಜ್‌ ಮತ್ತು ಹೇಮಂತ್‌ ಎಂ ರಾವ್‌ ಸಂಕಲನ ಮಾಡಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವು ಸೆಪ್ಟೆಂಬರ್‌ 1, 2023ರಂದು ಬಿಡುಗಡೆಯಾಗಿತ್ತು. ವಿಮರ್ಶಕರಿಂದ ಮೆಚ್ಚುಗೆ ಪಡೆದ ಈ ಸಿನಿಮಾದ ಎರಡನೇ ಭಾಗ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯು ನವೆಂಬರ್‌ 17, 2023ರಂದು ಬಿಡುಗಡೆಯಾಗಿತ್ತು.

ಈ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಮನುವಾಗಿ, ರುಕ್ಮಿಣಿ ವಸಂತ್‌ ಅವರು ಪ್ರಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭು ಪಾತ್ರದಲ್ಲಿ ಅಚ್ಯುತ್‌ ಕುಮಾರ್‌, ಪ್ರಿಯಾ ತಾಯಿಯಾಗಿ ಪವಿತ್ರಾ ಲೋಕೇಶ್‌ ನಟಿಸಿದ್ದಾರೆ. ಶಂಕ್ರೇ ಗೌಡನಾಗಿ ಅವಿನಾಶ್‌, ಪಾಟೀಲನಾಗಿ ಶರತ್‌ ಲೋಹಿತಾಶ್ವ ಕಾಣಿಸಿಕೊಂಡಿದ್ದಾರೆ. ಸೋಮನಾಗಿ ರಮೇಶ್‌ ಇಂದಿರಾ, ಜೈಲರ್‌ ಆಗಿ ಗೋಪಾಲ್‌ ಕೃಷ್ಣ ದೇಶಪಾಂಡೆ, ಜೈಲರ್‌ಗಳಾಗಿ ಅಶೋಕ್‌ ಶರ್ಮಾ, ಸುನಿಲ್‌ ಕುಲಕರ್ಣಿ, ಅಶ್ವಿನ್‌ ಹಾಸನ್‌ ನಟಿಸಿದ್ದಾರೆ. ಪ್ರಿಯಾ ತಂದೆಯಾಗಿ ರಾಜೇಶ್‌ ಎಸ್‌ ರಾವ್‌ ನಟಿಸಿದ್ದಾರೆ.