ಕನ್ನಡ ಸುದ್ದಿ  /  ಮನರಂಜನೆ  /  Sangeetha Diet Plan: ಬಿಗ್‌ಬಾಸ್‌ ಸ್ಪರ್ಧಿ ಸಂಗೀತಾ ಶೃಂಗೇರಿ ಫಿಟ್ನೆಸ್‌ ರಹಸ್ಯ; ಫಳಫಳ ಹೊಳೆಯುವ ತ್ವಚೆಯ ಗುಟ್ಟು ರಟ್ಟು

Sangeetha Diet Plan: ಬಿಗ್‌ಬಾಸ್‌ ಸ್ಪರ್ಧಿ ಸಂಗೀತಾ ಶೃಂಗೇರಿ ಫಿಟ್ನೆಸ್‌ ರಹಸ್ಯ; ಫಳಫಳ ಹೊಳೆಯುವ ತ್ವಚೆಯ ಗುಟ್ಟು ರಟ್ಟು

Actress Sangeetha Sringeri Diet Plan: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಪ್ರಮುಖ ಸ್ಪರ್ಧಿ ಸಂಗೀತಾ ಶೃಂಗೇರಿ ಅವರ ಸಿಕ್ಸ್‌ ಪ್ಯಾಕ್‌ ರಹಸ್ಯ, ಡಯೆಟ್‌ ಪ್ಲ್ಯಾನ್‌, ಫಳಫಳ ಹೊಳೆಯುವ ಮೈಕಾಂತಿ ಕುರಿತು ಫಿಟ್ನೆಸ್‌ ಪ್ರಿಯರಲ್ಲಿ ಕುತೂಹಲ ಇದ್ದೇ ಇರುತ್ತದೆ. 777 ಚಾರ್ಲಿ, ಹರ ಹರ ಮಹಾದೇವ್‌ ನಟಿಯ ಡಯೆಟ್‌ ಪ್ಲ್ಯಾನ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Sangeetha Diet Plan: ಬಿಗ್‌ಬಾಸ್‌ ಸ್ಪರ್ಧಿ ಸಂಗೀತಾ ಶೃಂಗೇರಿ ಫಿಟ್ನೆಸ್‌ ರಹಸ್ಯ
Sangeetha Diet Plan: ಬಿಗ್‌ಬಾಸ್‌ ಸ್ಪರ್ಧಿ ಸಂಗೀತಾ ಶೃಂಗೇರಿ ಫಿಟ್ನೆಸ್‌ ರಹಸ್ಯ

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಈ ವರ್ಷ ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡವರು ಸಂಗೀತಾ ಶೃಂಗೇರಿ. ತನ್ನ ವಿಭಿನ್ನ ಆಟಗಳಿಂದ ಹೊರಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‌ಗೂ ಒಳಗಾಗಿದ್ದಾರೆ. ದೊಡ್ಮನೆಯಲ್ಲಿ ತನ್ನ ಆಟದಿಂದಾಗಿ ಸದಾ ಸುದ್ದಿಯಲ್ಲಿರುವ ಸಂಗೀತಾ ಶೃಂಗೇರಿ ತನ್ನ ಸೌಂದರ್ಯ, ಹೊಳೆಯುವ ಮೈಕಾಂತಿ, ಸಿಕ್ಸ್‌ ಪ್ಯಾಕ್‌ ಇತ್ಯಾದಿ ಫಿಟ್ನೆಸ್‌ ಆಸಕ್ತಿಯಿಂದಲೂ ಗಮನ ಸೆಳೆಯುತ್ತಾರೆ. ಈ ಹಿಂದೆ ಸಂಗೀತಾ ಶೃಂಗೇರಿ ವಿವಿಧ ಸಂದರ್ಭಗಳಲ್ಲಿ ನೀಡಿರುವ ಹೇಳಿಕೆಗಳು, ವಿವಿಧ ವರದಿಗಳು, ಯೂಟ್ಯೂಬ್‌ ಸಂದರ್ಶನಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ನೋಡಿದರೆ ಸಂಗೀತಾ ಶೃಂಗೇರಿ ಅವರ ಸಿಕ್ಸ್‌ ಪ್ಯಾಕ್‌ ಬದಲಾವಣೆ ಸ್ಪೂರ್ತಿದಾಯಕ.

ಟ್ರೆಂಡಿಂಗ್​ ಸುದ್ದಿ

ಸಂಗೀತಾ ಶೃಂಗೇರಿಗೆ ಬಹುಕಾಲದಿಂದ ಸಿಕ್ಸ್‌ ಪ್ಯಾಕ್‌ ಹೊಂದಿರಬೇಕು ಎಂಬ ಕನಸಿತ್ತು. ಸುಮಾರು ಎರಡು ತಿಂಗಳ ಕಾಲ ಕಠಿಣ ಪರಿಶ್ರಮದಿಂದ ಮತ್ತು ವೃತ್ತಿಪರ ತರಬೇತುದಾರರ ನೆರವಿನಿಂದ ಇವರು ತನ್ನ ದೇಹದ ಆಕಾರವನ್ನು ಇನ್ನಷ್ಟು ಸುಂದರವಾಗಿಸಿದರು. ಜೀವನಶೈಲಿ ಬದಲಾವಣೆ, ಆಹಾರ ಕ್ರಮದಲ್ಲಿನ ಬದಲಾವಣೆಯು ಇವರ ಫಿಟ್ನೆಸ್‌ ಮತ್ತು ಮೈಕಾಂತಿಯ ಗುಟ್ಟು. ಇತ್ತೀಚೆಗೆ ಕಿಚ್ಚ ಸುದೀಪ್‌ ಅವರು ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಕೇಳಿದ ಪ್ರಶ್ನೆಗೂ ಇವರು ತನ್ನ ಡಯೆಟ್‌, ಜಿಮ್‌, ವರ್ಕೌಟ್‌ ಕುರಿತು ಮಾಹಿತಿ ನೀಡಿದ್ದರು.

ಬಿಗ್‌ಬಾಸ್‌ ಸ್ಪರ್ಧಿ ಸಂಗೀತಾ ಶೃಂಗೇರಿ ತನ್ನ ಹದಿನೆಂಟನೇ ವಯಸ್ಸಿನಲ್ಲಿಯೇ ನಟನೆ ಆರಂಭಿಸಿದ್ದರು. ಹರ ಹರ ಮಹಾದೇವ ಕನ್ನಡ ಧಾರಾವಾಹಿಯಲ್ಲಿ ಇವರು ಸತಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ನನ್ನ ನೇರ ನಿಷ್ಠುರ ವರ್ತನೆಯಿಂದ ಸಂಗೀತಾ ಶೃಂಗೇರಿ ವೀಕ್ಷಕರ ಗಮನ ಸೆಳೆದಿದ್ದಾರೆ.

"ನನಗೆ ಯಾವುದೇ ತೂಕ ಹೆಚ್ಚಳ ಸಮಸ್ಯೆ ಇರಲಿಲ್ಲ. ಆದರೆ, ನನ್ನ ಸ್ನಾಯು ಬಿಗಿ ಕಡಿಮೆಯಾಗಿತ್ತು. ಪಿಸಿಒಡಿ ತೊಂದರೆ ಕಾಣಿಸಿಕೊಂಡಿತು. ಇದನ್ನು ಸರಿಪಡಿಸಲು ವೈದ್ಯರ ಸಮಲೋಚನೆ ಪಡೆಯುವ ಬದಲು ನಾನೇ ಫಿಟ್‌ ಆಗಬೇಕೆಂಬ ದೃಢ ಸಂಕಲ್ಪ ಮಾಡಿದೆ. ಕೋಚ್‌ ಸೆವೆನ್‌ ಭೇಟಿಯಾದಗ ನನ್ನ ಆರೋಗ್ಯ ಸ್ಥಿತಿ ಅವಲೋಕಿಸಿ ಡಯೆಟ್‌ ಪ್ಲ್ಯಾನ್‌ ನೀಡಿದ್ರು. ನನ್ನ ದೇಹ ಪ್ರಕೃತಿಗೆ ಹೊಂದಿಕೆಯಾಗುವಂತಹ ವರ್ಕೌಟ್‌ ತಿಳಿಸಿದ್ರು. ತುಸು ತುಸು ತಿನ್ನುವುದು, ಹೆವಿ ತಿನ್ನದೆ ಇರುವುದು ಇತ್ಯಾದಿ ಡಯೆಟ್‌ ಪ್ಲ್ಯಾನ್‌ಮ ಆಡಲಾಯಿತು. ಇದಾದ ಬಳಿಕ ನನ್ನ ಮನಸ್ಸು ಮತ್ತು ದೇಹ ಫಿಟ್‌ ಆಯ್ತು. ಇದರಿಂದ ದೇಹದ ಫಿಟ್ನೆಸ್‌ ಮಾತ್ರ ಬದಲಾವಣೆಯಾಗದೆ ನನ್ನ ಚರ್ಮದ ಕಾಂತಿಯು ಸಹಜವಾಗಿ ಗ್ಲೋ ಆಯ್ತು" ಎಂದು ತನ್ನ ಫಿಟ್ನೆಸ್‌ ಮತ್ತು ತ್ವಚೆಯ ಗುಟ್ಟನ್ನು ತಿಳಿಸಿದ್ದರು.

ಬಿಗ್‌ಬಾಸ್‌ ಮನೆಯಲ್ಲಿ ಪ್ರತಿವಾರ ಸಂಗೀತಾ ಶೃಂಗೇರಿ ಯಾವುದಾದರೂ ಕಾರಣಕ್ಕೆ ಚರ್ಚೆಯ ವಿಷಯವಾಗುತ್ತಾರೆ. ಒಟ್ಟಾರೆ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಕಾರ್ತಿಕ್‌ ಜತೆ ಇವರ ಕಾದಾಟ ಇದ್ದೇ ಇರುತ್ತದೆ. ನಿನ್ನೆಯ ಎಪಿಸೋಡ್‌ನಲ್ಲು "ನನ್ನ ಬಗ್ಗೆ ಕಾರ್ತಿಕ್‌ ಮಾತನಾಡಿದ್ದು ಇಷ್ಟವಾಗಿಲ್ಲ. ಕಾರ್ತಿಕ್‌ ತುಂಬಾ ಅಹಂಕಾರಿ ಅನಿಸುತ್ತದೆ" ಎಂದು ಸಂಗೀತಾ ಶೃಂಗೇರಿ ನೇರವಾಗಿ ಹೇಳಿದ್ದರು.

ಟಿ20 ವರ್ಲ್ಡ್‌ಕಪ್ 2024