ಕನ್ನಡ ಸುದ್ದಿ  /  Entertainment  /  Televison News Sapta Sagaradache Ello Side Televison Primium March 10 Zee Movies Watch In Home Pcp

ಕಿರುತೆರೆಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆ, ಟಿವಿಯಲ್ಲೇ ನೋಡಿ ರಕ್ಷಿತ್‌ ಶೆಟ್ಟಿ ರುಕ್ಮಿಣಿ ವಸಂತ್‌ ಸಿನಿಮಾ

ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಸಿನಿಮಾವು ಈಗ ಒಟಿಟಿಯಿಂದ ಕಿರುತೆರೆಗೆ ಆಗಮಿಸಿದೆ. ಇದೇ ಭಾನುವಾರ (ಮಾ 10) ಜೀ ಕನ್ನಡ ವಾಹಿನಿಯಲ್ಲಿ ಮನು ಮತ್ತು ಪ್ರಿಯಾ ಪ್ರೇಮಕಥೆಯ ಸಿನಿಮಾ ಬಿಡುಗಡೆಯಾಗಲಿದೆ.

ಕಿರುತೆರೆಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆ
ಕಿರುತೆರೆಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆ

ಬೆಂಗಳೂರು: ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಸಿನಿಮಾವು ಈಗ ಒಟಿಟಿಯಿಂದ ಕಿರುತೆರೆಗೆ ಆಗಮಿಸಿದೆ. ಇದೇ ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಮನು ಮತ್ತು ಪ್ರಿಯಾ ಪ್ರೇಮಕಥೆಯ ಸಿನಿಮಾ ಬಿಡುಗಡೆಯಾಗಲಿದೆ.

"ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ಎಮೋಷನಲ್ ಬ್ಲಾಕ್ ಬಸ್ಟರ್, ರಕ್ಷಿತ್ ಶೆಟ್ಟಿ & ರುಕ್ಮಿಣಿ ವಸಂತ್ ಅಭಿನಯದ ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್‌ ಎ ಸಿನಿಮಾ ಇದೇ ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ" ಎಂದು ಜೀ ಕನ್ನಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದೆ. ಈ ಸುದ್ದಿ ಕೇಳಿ ಕಿರುತೆರೆ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. "ತುಂಬಾ ಸುಂದರವಾದ ಸಿನಿಮಾ. ಮತ್ತೊಮ್ಮೆ ಟಿವಿಯಲ್ಲಿ ನೋಡುತ್ತೇವೆ" ಎಂದೆಲ್ಲ ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ "ಸುಡುವ ಭಾವನೆಗಳ ಕಡು ಸಂಘರ್ಷ, ಪ್ರೇಕ್ಷಕರ ಹೃದಯ ಕಾಡುವ ಕಥೆ, ರಕ್ಷಿತ್ ಶೆಟ್ಟಿ & ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಅತೀ ಶೀಘ್ರದಲ್ಲಿ" ಎಂದು ಝೀ ಕನ್ನಡ ಪೋಸ್ಟ್‌ ಮಾಡಿತ್ತು. ಇದೀಗ ಇದೇ ಭಾನುವಾರ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಕಿರುತೆರೆ ಪ್ರೇಕ್ಷಕರ ಕಾಯುವಿಕೆಗೆ ಚುಕ್ಕಿಯಿಟ್ಟಿದೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾಗಳು ಈಗಾಗಲೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ. ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಪ್ರಸಾರವಾಗುತ್ತಿದೆ.

ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸಿನಿಮಾಕ್ಕೆ ಹೇಮಂತ್‌ ಎಂ ರಾವ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ರಕ್ಷಿತ್‌ ಶೆಟ್ಟಿ ನಿರ್ಮಾಣದ ಈ ಸಿನಿಮಾದಲ್ಲಿ ಮನುವಾಗಿ ರಕ್ಷಿತ್‌, ಪ್ರಿಯಾಳಾಗಿ ರುಕ್ಮಿಣಿ ವಸಂತ್‌ ನಟನೆ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಚರಣ್‌ ರಾಜ್‌ ಸಂಗೀತ, ಅದ್ವೈತ ಗುರುಮೂರ್ತಿ ಸಿನಿಮಾಟೊಗ್ರಫಿ ಈ ಸಿನಿಮಾಕ್ಕಿದೆ. ಸುನಿಲ್‌ ಎಸ್‌ ಭಾರಧ್ವಾಜ್‌ ಮತ್ತು ಹೇಮಂತ್‌ ಎಂ ರಾವ್‌ ಸಂಕಲನ ಮಾಡಿದ್ದಾರೆ. ಇದಾದ ಬಳಿಕ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಬಿಡುಗಡೆಯಾಗಿತ್ತು. ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌ ಮಾತ್ರವಲ್ಲದೆ ಚೈತ್ರಾ ಜೆ. ಆಚಾರ್‌ ಕೂಡ ಸೈಡ್‌ ಬಿಯಲ್ಲಿ ನಟಿಸಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವು ಸೆಪ್ಟೆಂಬರ್‌ 1, 2023ರಂದು ಬಿಡುಗಡೆಯಾಗಿತ್ತು. ವಿಮರ್ಶಕರಿಂದ ಮೆಚ್ಚುಗೆ ಪಡೆದ ಈ ಸಿನಿಮಾದ ಎರಡನೇ ಭಾಗ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯು ನವೆಂಬರ್‌ 17, 2023ರಂದು ಬಿಡುಗಡೆಯಾಗಿತ್ತು. ಇದೀಗ ಇದೇ ಭಾನುವಾರ ಮಾರ್ಚ್‌ 10ರಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ.