Vaishnavi Gowda: ಸೀತಾ ರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಫೋಟೋಶೂಟ್; ಆಧುನಿಕ ಸೀತೆ ತುಂಬಾ ಹಾಟ್ ಅಂದ್ರು ಫ್ಯಾನ್ಸ್
- Seetha Rama Kannada serial actress Vaishnavi: ಕನ್ನಡ ಕಿರುತೆರೆ ಧಾರಾವಾಹಿ ಸೀತಾ ರಾಮದಲ್ಲಿ ಸೀತೆಯಾಗಿ ಕನ್ನಡಿಗರ ಹೃದಯ ಗೆದ್ದಿರುವ ನಟಿ ವೈಷ್ಣವಿ ಗೌಡ ಇದೀಗ ಹೊಸ ಗ್ಲಾಮರಸ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- Seetha Rama Kannada serial actress Vaishnavi: ಕನ್ನಡ ಕಿರುತೆರೆ ಧಾರಾವಾಹಿ ಸೀತಾ ರಾಮದಲ್ಲಿ ಸೀತೆಯಾಗಿ ಕನ್ನಡಿಗರ ಹೃದಯ ಗೆದ್ದಿರುವ ನಟಿ ವೈಷ್ಣವಿ ಗೌಡ ಇದೀಗ ಹೊಸ ಗ್ಲಾಮರಸ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(1 / 7)
ಕನ್ನಡ ಕಿರುತೆರೆ ಧಾರಾವಾಹಿ ಸೀತಾ ರಾಮದಲ್ಲಿ ಸೀತೆಯಾಗಿ ಕನ್ನಡಿಗರ ಹೃದಯ ಗೆದ್ದಿರುವ ನಟಿ ವೈಷ್ಣವಿ ಗೌಡ ಇದೀಗ ಹೊಸ ಗ್ಲಾಮರಸ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
(2 / 7)
ಸೀತಾ ರಾಮ ಸೀರಿಯಲ್ ನಟಿಯ ಹೊಸ ಫೋಟೋಶೂಟ್‌ಗೆ ಅಭಿಮಾನಿಗಳು ವಾಹ್ ಎಂದಿದ್ದಾರೆ. ಈ ಫೋಟೋಗಳಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ.
(3 / 7)
ನೆಕ್‌ಲೆಸ್ ಉಡುಗೆಯಲ್ಲಿ ವೈಷ್ಣವಿ ಗೌಡ ಅವರು ಗ್ಲಾಮರಸ್ ಆಗಿ ಕಾಣಿಸಿದ್ದಾರೆ. ಇವರು ತೆಳು ಬಣ್ಣದ ಅಂದದ ಉಡುಗೆ ತೊಟ್ಟಿದ್ದು, ಮೋಹಕವಾಗಿ ಕಾಣಿಸಿದ್ದಾರೆ.
(4 / 7)
ರಾಜಕುಮಾರಿ ಬೊಂಬೆ ಹುಡುಗಿ ನಗುಮುಖ ಚೆಲುವೆ ದೃಷ್ಟಿ ತೆಗೆದುಕೊಳ್ಳಿ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಕೆಲವರು ಪರ್ಪಲ್ ಪ್ರಿಟಿ ಗರ್ಲ್ ಎಂದಿದ್ದಾರೆ. ಇನ್ನು ಕೆಲವರು ಮೇಕಪ್ ಇಲ್ಲದೆ ಇದ್ದರೆ ಚಂದ ಎಂದಿದ್ದಾರೆ.
(5 / 7)
ಸೀತಾ ರಾಮ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಾಗಿದೆ. ಈ ವರ್ಷ ಜುಲೈ ತಿಂಗಳಲ್ಲಿ ಆರಂಭವಾದ ಸೀತಾ ರಾಮ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ ಅವರು ಸೀತೆಯಾಗಿ ನಟಿಸುತ್ತಿದ್ದಾರೆ.
(6 / 7)
ಸೀತಾ ರಾಮ ಸೀರಿಯಲ್ ಮರಾಠಿಯ ಧಾರಾವಾಹಿ ತುಜೀ ರೇಶಿಮ್‌ಗತ್‌ನ ರಿಮೇಕ್. ಕನ್ನಡದ ಸೀತಾರಾಮ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮತ್ತು ರಿತು ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(7 / 7)
ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಸೀರಿಯಲ್‌ನಲ್ಲಿ ಸೀತೆಯಾಗಿ ಸಾಂಪ್ರದಾಯಿಕ ಹೆಣ್ಣಿನಂತೆ ಕಾಣಿಸುವ ಇವರು ನಿಜ ಜೀವನದಲ್ಲಿ ತುಂಬಾ ಮಾಡರ್ನ್. ಸದ್ಯ ವೈಷ್ಣವಿ ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವೈಷ್ಣವಿ ಗೌಡ ಮಾಡರ್ನ್ ಲುಕ್‌ಗೆ ಎಲ್ಲರೂ ಸೂಪರ್ ಅನ್ನುತ್ತಿದ್ದಾರೆ.
ಇತರ ಗ್ಯಾಲರಿಗಳು