ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳ ಹಬ್ಬ; ಇಂದಿನಿಂದ ಹೊಸ ಕಥೆಯ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಆರಂಭ
Shravani Subramanya Kannada Serial: ಜೀ ಕನ್ನಡ ವಾಹಿನಿಯಲ್ಲಿ ಮಾರ್ಚ್ 18ರಿಂದ ಹೊಸ ಕಥೆಯ ಶ್ರಾವಣಿ ಸುಬ್ರಮಣ್ಯ ಎಂಬ ಧಾರಾವಾಹಿ ಆರಂಭವಾಗುತ್ತಿದೆ. ಮಾ 18ರಿಂದ ಜೀ ಕನ್ನಡ ವಾಹಿನಿಯು ಮಹಾ ಸಂಚಿಕೆಯನ್ನೇ ಆರಂಭಿಸಲಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ಹೊಸ ಸೀರಿಯಲ್‌ಗಳ ಆಗಮನವಾಗುತ್ತಿದ್ದು, ಧಾರಾವಾಹಿ ಪ್ರಿಯರಿಗೆ ಮನರಂಜನೆಯ ಮಹಾಪೂರವೇ ದೊರಕಲಿದೆ. ಕಲರ್ಸ್ ಕನ್ನಡವು ಚುಕ್ಕಿತಾರೆ ಎಂಬ ಹೊಸ ಸೀರಿಯಲ್ ಅನ್ನು ಇಂದು ಆರಂಭಿಸಿದ್ದರೆ, ಜೀ ಕನ್ನಡವು ಶ್ರಾವಣಿ ಸುಬ್ರಮಣ್ಯ ಎಂಬ ಹೊಸ ಕಥೆಯನ್ನು ಮಾರ್ಚ್ 18ರಂದು ಆರಂಭಿಸುತ್ತಿದೆ. ಈ ಸೋಮವಾರದಿಂದ ಮಹಾಸೋಮವಾರದ, ಮಹಾಮನೋರಂಜನೆಯನ್ನ ಕರುನಾಡಿಗೆ ನೀಡಲು ಸಿದ್ದವಾಗಿರುವುದಾಗಿ ಜೀ ಕನ್ನಡ ವಾಹಿನಿ ತಿಳಿಸಿದೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆರಂಭ
ಕಳೆದ ಒಂದೇ ವರ್ಷ 3 ಸೀರಿಯಲ್ಲುಗಳನ್ನ ಲಾಂಚ್ ಮಾಡಿ ಅದನ್ನ ಹಿಟ್ ಲಿಸ್ಟ್‌ಗೆ ಸೇರಿಸಿರುವ ಜೀ ಕನ್ನಡ ವಾಹಿನಿ, ಈ ವರ್ಷದ ಮೊದಲ ಭಾಗದಲ್ಲೆ ಮತ್ತೊಂದು ಹೊಸ ಕಥೆಯನ್ನ ಲಾಂಚ್ ಮಾಡಲು ತಯಾರಿ ನಡೆಸಿಕೊಂಡಿದೆ. ನೀಲ ಪ್ರೊಡಕ್ಷನ್ ಅವರ ನಿರ್ಮಾಣದ ರೇಣುಕ ಪ್ರಸಾದ್ ನಿರ್ದೇಶನವಿರುವ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯು ಹೊಸ ಕಥಾ ಹಂದರದೊಂದಿಗೆ ತೆರೆಗೆ ಬರುತ್ತಿದೆ.
ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಸ್ಟೋರಿ
ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜೊತೆ ಎರಡು ನವಿರಾದ ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್ ಪ್ರೇಕ್ಷಕರ ಮುಂದಿಡಲಿದೆ.
ಹಿರಿಯ ಕಲಾವಿದರಾದ ಮೋಹನ್ ಮತ್ತು ಬಾಲರಾಜ್ ಇದೇ ಮೊದಲು ಬಾರಿಗೆ ಒಟ್ಟಾಗಿ ಪರದೆಯ ಮೇಲೇ ಕಾಣಿಸಿಕೊಳ್ಳಲ್ಲಿದ್ದು.ಇವರೊಂದಿಗೆ ಕನ್ನಡದ ಹಿರಿತೆರೆ ಮತ್ತು ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಯುವ ನಟನಟಿಯಾರಾದ ಅಮೋಘ ಮತ್ತು ಆಸಿಯಾ ಫಿರೋದ ಶ್ರಾವಣಿ ಸುಬ್ರಹ್ಮಣ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಪ್ರಸಾರ ಸಮಯ
ಶ್ರಾವಣಿ ಸುಬ್ರಹ್ಮಣ್ಯರ ಈ ಹೊಸ ಕಥೆಯನ್ನ ಇದೇ ಮಾರ್ಚ್ 18 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ನೋಡಬಹುದಾಗಿದೆ.
ಈ ಹೊಸ ಕಥೆಯ ನಡುವೆ ಕರುನಾಡಿನ ವೀಕ್ಷಕರನ್ನ ವರ್ಷಗಳ ಕಾಲ ಮನೋರಂಜಿಸಿದ್ದ ಜೀ಼ ಕನ್ನಡ ವಾಹಿನಿಯ ಎರಡು ಅಮೋಘ ಧಾರಾವಾಹಿಗಳಾದ ಪಾರು ಮತ್ತು ಹಿಟ್ಲರ್ ಕಲ್ಯಾಣ ಶುಭವಿದಾಯವನ್ನ ಹೇಳುವ ಮುಖಾಂತರ, ಮತ್ತೊಂದು ಮನೋರಂಜನೆ ಮಹಾಪರ್ವಕ್ಕೆ ನಾಂದಿ ಹಾಡಿದೆ.
ಈ ಎರಡು ಧಾರಾವಾಹಿಗಳು ಬಿಟ್ಟು ಹೋದ ಸ್ಥಳವನ್ನ ತುಂಬುವ ನಿಟ್ಟಿನಲ್ಲಿ ಈಗಾಗಲೇ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿಯು ಬದಲಾದ ಸಮಯವಾದ 6 ಗಂಟೆಗೆ ಪ್ರಸಾರವಾಗಲಿದ್ದು. 8.30 ಗಂಟೆಗೆ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಬದಲಾದ ಸಮಯವಾದ 6.30 ಕ್ಕೆ ಪ್ರಸಾರವಾಗಲಿದೆ.
ಇತ್ತೀಚೇಗಷ್ಟೆ ಪ್ರಸಾರ ಶುರುಮಾಡಿ ಜೀ ಕನ್ನಡದ ನಂ.1 ಧಾರಾವಾಹಿ ಪಟ್ಟ ಅಲಂಕರಿಸಿರುವ ಲಕ್ಷ್ಮೀ ನಿವಾಸ ಧಾರಾವಾಹಿಯು, ಇನ್ನು ಮುಂದೆ ಪ್ರತಿದಿನ ರಾತ್ರಿ 8 ರಿಂದ 9 ಗಂಟೆಯ ತನಕದ ಸುದೀರ್ಘ ಸಂಚಿಕೆಯನ್ನ ಪ್ರಸಾರಮಾಡಲಿದೆ. ಈ ಎಲ್ಲಾ ಬದಲಾವಣೆಯ ನಡುವೆ ಸಮಯ ಬದಲಾದರೂ ಮನೋರಂಜನೆ ಬದಲಾಗದು ಎಂದ ಸಂದೇಶವನ್ನ ವಾಹಿನಿ ಈ ಮೂಲಕ ನೀಡಿದೆ.