Amruthadhaare September 12th Episode: ಅಮೃತಧಾರೆ ಸೀರಿಯಲ್‌ನಲ್ಲಿ ಇಂದು ನಡೆದ 8 ವಿದ್ಯಮಾನಗಳು, ಡುಮ್ಮಸರ್‌ ಲವ್‌ಗುರು ಆಗಬೇಕಿತ್ತಂತೆ!-televison news top 8 incidents in zee kannada serial amruthadhaare september 12th episode dumma sir loveguru pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare September 12th Episode: ಅಮೃತಧಾರೆ ಸೀರಿಯಲ್‌ನಲ್ಲಿ ಇಂದು ನಡೆದ 8 ವಿದ್ಯಮಾನಗಳು, ಡುಮ್ಮಸರ್‌ ಲವ್‌ಗುರು ಆಗಬೇಕಿತ್ತಂತೆ!

Amruthadhaare September 12th Episode: ಅಮೃತಧಾರೆ ಸೀರಿಯಲ್‌ನಲ್ಲಿ ಇಂದು ನಡೆದ 8 ವಿದ್ಯಮಾನಗಳು, ಡುಮ್ಮಸರ್‌ ಲವ್‌ಗುರು ಆಗಬೇಕಿತ್ತಂತೆ!

Amruthadhaare September 12th Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಇಂದು ಪ್ರಮುಖವಾಗಿ 8 ವಿದ್ಯಮಾನಗಳು ನಡೆದಿವೆ. ಗೌತಮ್‌ ಮತ್ತು ಭೂಮಿಕಾರ ಒಲವಧಾರೆ, ಚಮಕ್‌ಚಲ್ಲೋ ದಿಯಾಳನ್ನು ಭೇಟಿಯಾಗಲು ಮಲ್ಲಿಯೊಂದಿಗೆ ಹೊರಟ ಜೈದೇವ್‌ನ ಕಥೆಯ ಜತೆ ಪಾರ್ಥ-ಅಪೇಕ್ಷಾರ ಕಥೆಯೂ ಇಲ್ಲಿದೆ.

Amruthadhaare September 12th Episode: ಅಮೃತಧಾರೆ ಸೀರಿಯಲ್‌ನಲ್ಲಿ ನಡೆದ 8 ವಿದ್ಯಮಾನಗಳು
Amruthadhaare September 12th Episode: ಅಮೃತಧಾರೆ ಸೀರಿಯಲ್‌ನಲ್ಲಿ ನಡೆದ 8 ವಿದ್ಯಮಾನಗಳು

Amruthadhaare September 12th Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ ಪ್ರತಿನಿತ್ಯ ಒಂದಲ್ಲ ಒಂದು ವಿದ್ಯಮಾನಗಳಿಂದ, ತಿರುವುಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಕನ್ನಡ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಅಂದಹಾಗೆ, ಈ ಸೀರಿಯಲ್‌ನಲ್ಲಿ ಗೌತಮ್‌ ದಿವಾನ್‌ ಆಗಿ ರಾಜೇಶ್‌ ನಟರಂಗ್‌, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌ ನಟಿಸಿದ್ದಾರೆ. ಗೌತಮ್‌ ಮಲತಾಯಿ ಶಕುಂತಲಾದೇವಿಯಾಗಿ ವನಿತಾ ವಾಸು, ಭೂಮಿಕಾ-ಜೀವನ್‌ ತಂದೆ ಸದಾಶಿವನಾಗಿ ಸಿಹಿಕಹಿ ಚಂದ್ರು ನಟಿಸಿದ್ದಾರೆ. ಸದಾಶಿವನ ಹೆಂಡತಿ ಮಂದಾಕಿನಿಯಾಗಿ ಚೈತ್ರಾ ಶೆಣೈ ನಟಿಸಿದ್ದಾರೆ. ಅಪೇಕ್ಷಾ ಪಾತ್ರದಲ್ಲಿ ಅಮೃತ ನಾಯಕ್‌, ಮಹಿಮಾಳಾಗಿ ಸಾರಾ ಅಣ್ಣಯ್ಯ, ಜೀವನ್‌ ಪಾತ್ರದಲ್ಲಿ ಶಶಿ ಹೆಗಡೆ, ಜೈದೇವ್‌ ಆಗಿ ರಣವ್‌, ಆನಂದ್‌ ಪಾತ್ರದಲ್ಲಿ ಆನಂದ್‌, ಅಪರ್ಣಾ ಪಾತ್ರದಲ್ಲಿ ಸ್ವಾತಿ ನಟಿಸಿದ್ದಾರೆ. ಸೆಪ್ಟೆಂಬರ್‌ 12ರ ಅಮೃತಧಾರೆ ಎಪಿಸೋಡ್‌ನಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಅವುಗಳಲ್ಲಿ 8 ವಿದ್ಯಮಾನಗಳನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ.

1. ಗೌತಮ್‌ ಅವರೇ ನೀವು ಲವ್‌ ಗುರು ಆಗಬೇಕಿತ್ತು!

ಅಪೇಕ್ಷಾ ಮತ್ತು ಪಾರ್ಥರ ನಡುವೆ ವೈಮನಸ್ಸು ಇದೆ ಎಂದು ತಿಳಿದ ಗೌತಮ್‌ ಐಡಿಯಾ ಮಾಡಿದ್ರು. ಅವರ ಐಡಿಯಾ ವರ್ಕ್‌ ಆದ ಖುಷಿಯನ್ನು ಭೂಮಿಕಾ ಇಂದಿನ ಎಪಿಸೋಡ್‌ನಲ್ಲಿ ಗೌತಮ್‌ ಮುಂದೆ ಹೇಳಿಕೊಂಡು ಖುಷಿಪಟ್ಟಿದ್ದಾರೆ. ಈ ಐಡಿಯಾ ಹೇಗೆ ಫ್ಲ್ಯಾಶ್‌ ಆಯ್ತು ಎಂದು ಭೂಮಿಕಾ ಕೇಳುತ್ತಾರೆ. "ಇದು ಸೈಕಾಲಜಿ ಅಷ್ಟೇ. ನಮ್ಮ ಸುತ್ತಮುತ್ತ ಇರುವವರನ್ನು ನೋಡಿಕೊಂಡು ಎಲ್ಲರೂ ಬದಲಾಗುತ್ತಾರೆ" ಎಂದು ಗೌತಮ್‌ ಎಂದಾಗ "ನೀವು ಲವ್‌ ಗುರು, ಸೈಕಾಲಜಿಸ್ಟ್‌ ಆಗಬೇಕಿತ್ತು" ಎಂದು ಭೂಮಿಕಾ ಹೇಳುತ್ತಾಳೆ. ಇವರಿಬ್ಬರ ನಡುವಿನ ಒಲವಧಾರೆ ಮತ್ತೆ ಇಂದಿನ ಎಪಿಸೋಡ್‌ನಲ್ಲಿ ಶುರುವಾಗಿದೆ.

2. ಗರ್ಭಿಣಿಯರು ವಾಕಿಂಗ್‌ ಮಾಡೋದು ಮುಖ್ಯ

ಮಲ್ಲಿ ಜತೆ ಜೈದೇವ್‌ಗೆ ಟೈಂಪಾಸ್‌ ಆಗುತ್ತಿಲ್ಲ. ಚಮಕ್‌ಚಲ್ಲೋ ದಿಯಾಳ ನೆನಪಲ್ಲಿ ಇದ್ದಾನೆ. ಈ ಸಮಯದಲ್ಲಿ ಪುಸ್ತಕವೊಂದನ್ನು ಓದುತ್ತ ಜೈದೇವ್‌ "ಗರ್ಭಿಣಿಯರು ವಾಕಿಂಗ್‌ ಮಾಡುವುದು ತುಂಬಾ ಮುಖ್ಯ" ಎಂಬ ಸಾಲನ್ನು ಓದುತ್ತಾನೆ. ಡಾಕ್ಟರ್‌ ಕೂಡ ಇದೇ ಹೇಳಿದ್ದಾರೆ, ನಾವಿಬ್ಬರು ವಾಕಿಂಗ್‌ ಮಾಡೋಣ ಬಾ ಎಂದು ಹೇಳಿದ್ದಾರೆ. ವಾಕಿಂಗ್‌ ಮಾಡೋದು ಬೋರ್‌ ಆದ್ರೆ ಲಾಂಗ್‌ ಡ್ರೈವ್‌ ಹೋಗೋಣ್ವ ಎಂದು ಕೇಳುತ್ತಾನೆ. "ಗಂಡನ ಜತೆ ಸುತ್ತಾಡೋದು ಇಷ್ಟ. ಹೋಗೋಣ ರೀ" ಎನ್ನುತ್ತಾಳೆ. ಈ ಮೂಲಕ ದಿಯಾಳನ್ನು ಭೇಟಿಯಾಗಲು ಐಡಿಯಾ ಮಾಡುತ್ತಾನೆ. ಇದಾದ ಬಳಿಕ ದಿಯಾಳಿಗೆ ಭೇಟಿಯಾಗುವೆ ಎಂದು ಮೆಸೆಜ್‌ ಮಾಡುತ್ತಾನೆ.

3. ಅಪೇಕ್ಷಾಳ ಬೆಂಕಿಗೆ ತುಪ್ಪ ಸುರಿದ ಶಕುಂತಲಾದೇವಿ

ಅಪೇಕ್ಷಾ ಡಲ್‌ನಲ್ಲಿದ್ದಾಳೆ. ಏನಾಯ್ತು ಎಂದು ಶಕುಂತಲಾದೇವಿ ಕೇಳುತ್ತಾರೆ. "ಎಲ್ಲರೂ ಭೂಮಿಕಾ ಭೂಮಿಕಾ ಎನ್ನುತ್ತಾರೆ. ಎಲ್ಲರೂ ಅವಳನ್ನು ತಲೆಮೇಲೆ ಹೊತ್ತುಕೊಂಡು ಹೋಗುತ್ತಾರೆ. ಪಾರ್ಥ ಕೂಡ ಅದೇ ರೀತಿ ಮಾಡ್ತಾರೆ" ಎಂದೆಲ್ಲ ತನ್ನ ನೋವನ್ನು ತೋಡಿಕೊಳ್ಳುತ್ತಾಳೆ. "ಬೆಂಕಿ ಚೆನ್ನಾಗಿ ಹತ್ತಿಕೊಂಡಿದೆ" ಎಂದು ಶಕುಂತಲಾದೇವಿ ಖುಷಿ ಪಡುತ್ತಾಳೆ. ಈ ಸಮಯದಲ್ಲಿ ನಾಜೂಕಾಗಿ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಶಕುಂತಲಾದೇವಿ ಮುಂದುವರೆಸುತ್ತಾರೆ.

4. ಹೊರಗೆ ಹೋದ ಮಲ್ಲಿ- ಜೈದೇವ್‌

ಮಲ್ಲಿ ಮತ್ತು ಜೈದೇವ್‌ ವಾಕಿಂಗ್‌ ಹೊರಟಾಗ ಅಲ್ಲಿ ಭೂಮಿಕಾ ಎದುರಾಗುತ್ತಾಳೆ. ಹೊರಗಡೆ ಸುತ್ತಾಡಿ ಬರಲು ಹೋಗುತ್ತಿದ್ದೇವೆ ಎಂದು ಮಲ್ಲಿ ಹೇಳುತ್ತಾಳೆ. "ಕಳುಹಿಸಿಕೊಡ್ಲ ಬೇಡ್ಲ" ಎಂದು ಭೂಮಿಕಾ ಯೋಚಿಸುತ್ತಾಳೆ. "ಹೋಗ್ಬನ್ನಿ, ಕತ್ತಲೆಯಾಗುವ ಮೊದಲು ಬನ್ನಿ" ಎಂದು ಭೂಮಿಕಾ ಕಳುಹಿಸುತ್ತಾಳೆ. ಜತೆಗೆ ಗರ್ಭಿಣಿಯ ಕಾಳಜಿಯ ಮಾತುಗಳನ್ನು ಆಡುತ್ತಾಳೆ.

5. ಅತ್ತಿಗೆ ನನಗೆ ಎರಡನೇ ತಾಯಿ ತರಹ ಎಂದ ಪಾರ್ಥ

ಅಪೇಕ್ಷಾ ಪಾರ್ಥ ಮಾತನಾಡುತ್ತಿದ್ದಾರೆ. "ಇಷ್ಟು ಸೀರಿಯಸ್‌ ಆಗಬೇಡಿ" ಎಂದು ಅಪೇಕ್ಷಾ ಹೇಳುತ್ತಾಳೆ. "ಸ್ವಲ್ಪ ನನ್ನ ಆಂಗಲ್‌ನಿಂದ ನೋಡಿ. ನನ್ನನ್ನು ವಿಲನ್‌ ಮಾಡಬೇಡಿ" ಎನ್ನುತ್ತಾಳೆ. "ಇಲ್ಲಿ ನನ್ನ ಫಾಲ್ಟ್‌, ಅತ್ತಿಗೆ ಫಾಲ್ಟ್‌, ನಿನ್ನ ಫಾಲ್ಟ್‌ ಇಲ್ಲ. ಮಾತುಮಾತಿಗೆ ಅತ್ತಿಗೆಯನ್ನು ಬ್ಲೇಮ್‌ ಮಾಡಬೇಡಿ. ಆಕೆ ತುಂಬಾ ಅದ್ಭುತ ವ್ಯಕ್ತಿ. ಅತ್ತಿಗೆ ನನಗೆ ಎರಡನೇ ಅಮ್ಮ ತರಹ" ಎಂದೆಲ್ಲ ಪಾರ್ಥ ಹೇಳುತ್ತಾನೆ. ಇದನ್ನು ವಿರೋಧಿಸಲು ಅಪೇಕ್ಷಾ ಮುಂದಾದಗ ತಡೆಯುತ್ತಾನೆ. "ಅತ್ತೆ ಬಿಟ್ರೆ ನನಗೆ ಯಾರೂ ನನಗೆ ಸಪೋರ್ಟ್‌ ಮಾಡೋದಿಲ್ಲ" ಎಂದುಕೊಳ್ಳುತ್ತಾಳೆ.

6. ಚಮಕ್‌ಚಲ್ಲೋ ಭೇಟಿ ಮಾಡಲು ಹೊರಟ ಜೈದೇವ್‌

ಜೈದೇವ್‌ ಮಲ್ಲಿಯನ್ನು ಹೊರಗೆ ಕರೆದುಕೊಂಡು ಹೋದ ಸಂಗತಿಯನ್ನು ಗೌತಮ್‌ಗೆ ಹೇಳುತ್ತಾರೆ. "ದಿಯಾಳನ್ನು ಭೇಟಿಯಾಗಲು ಹೋಗಿರಬಹುದು" ಎಂದು ಭೂಮಿಕಾ ಹೇಳುತ್ತಾರೆ. ಇಬ್ಬರೂ ಅವರಿಬ್ಬರನ್ನು ಹುಡುಕುತ್ತಾ ಹೊರಗೆ ಹೋಗುತ್ತಾರೆ. ಇದೇ ಸಮಯದಲ್ಲಿ ಸುಸು ಮಾಡಲೆಂದು ಕಾರು ನಿಲ್ಲಿಸುತ್ತಾನೆ ಜೈದೇವ್‌. ದಿಯಾಳಿಗೆ ಕಾಲ್‌ ಮಾಡಿ ಭೇಟಿಯಾಗಲು ತಿಳಿಸುತ್ತಾನೆ.

7. ಅಪೇಕ್ಷಾಳ ಮನವೋಲಿಸಲು ಪ್ರಯತ್ನಿಸಿದ ಪಾರ್ಥ

ಎಲ್ಲೋ ಹೊರಗೆ ಹೋದ ಅಪೇಕ್ಷಾ ಬರುತ್ತಾಳೆ. "ನಾನು ನಿಮ್ಮನ್ನು ನೋಡಲು ಚಂದ ಇದ್ದೀರಿ ಎಂದು ಇಷ್ಟಪಟ್ಟಿಲ್ಲ. ನಿಮಗೆ ಒಂದು ಒಳ್ಳೆಯ ಮನಸ್ಸಿದೆ. ನೀವು ಎಲ್ಲರ ಜತೆ ಚೆನ್ನಾಗಿ ಇರ್ತಿರಿ ಎಂದು ಮದುವೆಯಾದೆ. ಎಲ್ಲವೂ ಸರಿಯಾಗಿದೆ. ಒಂದೇ ಒಂದು ವಿಚಾರದಿಂದ ನನ್ನ ಮನಸ್ಸಿಗೆ ತುಂಬಾ ಹರ್ಟ್‌ ಆಗ್ತಾ ಇದೆ. ನೀವು ಅತ್ತಿಗೆಯನ್ನು ಟ್ರೀಟ್‌ ಮಾಡೋದು ಸರಿಯಿಲ್ಲ. ಮದುವೆಯ ಸಮಯದಲ್ಲಿ ಅವರ ಬೆಂಬಲ ಸಿಗಲಿಲ್ಲ. ಆದರೆ, ಈಗ ಅದನ್ನು ಮನಸ್ಸಲ್ಲಿ ಇಟ್ಟುಕೊಳ್ಳಬೇಕಿಲ್ಲ. ಮೊದಲಿನಂತೆ ಅತ್ತಿಗೆಯ ಜತೆ ಇರಿ. ನನಗೋಸ್ಕರ ಇದನ್ನೆಲ್ಲ ಮರೆತುಬಿಡಿ" ಎಂದು ಪಾರ್ಥ ಕೇಳುತ್ತಾನೆ. "ಈಗಲೂ ಅಕ್ಕನಿಗೆ ಸಪೋರ್ಟ್‌ ಮಾಡ್ತಾ ಇದ್ದಾನೆ. ಅಕ್ಕ ನನಗೆ ಸಪೋರ್ಟ್‌ ಮಾಡಬೇಕಿತ್ತು" ಎಂದು ಅಪೇಕ್ಷಾ ಯೋಚಿಸುತ್ತಾಳೆ. ಮುಂದಿನ ಸಂಚಿಕೆಯಲ್ಲಿ ಇವರಿಬ್ಬರ ನಡುವೆ ರೋಮ್ಯಾಂಟಿಕ್‌ ಸೀನ್‌ ನಡೆಯಲಿದೆ. ಈ ಕುರಿತ ವಿವರಕ್ಕೆ ಮುಂದಿನ ವಿಡಿಯೋ ನೋಡಿ.

8. ಆನಂದ್‌- ಅಪರ್ಣಾ ಮುದ್ದಿನ ಮಾತುಗಳು

ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತಾರೆ. ಆನಂದ್‌ಗೆ ಆಫೀಸ್‌ಗೆ ಹೋಗಲು ಆಸೆಯಿದೆ. ಆದರೆ, ಅಪರ್ಣಾ ಬಿಡುತ್ತಿಲ್ಲ. ಇದೇ ಸಮಯದಲ್ಲಿ ಪಕ್ಕದ ಮನೆಯ ಆಂಟಿಯ ವಿಷಯ ಇಟ್ಟುಕೊಂಡು ರೇಗಿಸುತ್ತಾಳೆ. ಇವರಿಬ್ಬರ ಪ್ರೀತಿಯ ಮಾತುಗಳು ಮುಂದುವರೆಯುತ್ತದೆ.

mysore-dasara_Entry_Point