ಕನ್ನಡ ಸುದ್ದಿ  /  ಮನರಂಜನೆ  /  ಅನಿರುದ್ಧ್‌ ಜತ್ಕರ್‌ ನಟನೆಯ ಸೂರ್ಯವಂಶ ಸೀರಿಯಲ್‌ನ ಪ್ರಮೋ ಬಿಡುಗಡೆ, ಹೆಣ್ಮಕ್ಳ ಕೈಯಲ್ಲಿರೋ ರಿಮೋಟ್‌ ನಮಗಿನ್ನು ಸಿಗೋಲ್ಲ ಅಂದ್ರು ನೆಟ್ಟಿಗರು

ಅನಿರುದ್ಧ್‌ ಜತ್ಕರ್‌ ನಟನೆಯ ಸೂರ್ಯವಂಶ ಸೀರಿಯಲ್‌ನ ಪ್ರಮೋ ಬಿಡುಗಡೆ, ಹೆಣ್ಮಕ್ಳ ಕೈಯಲ್ಲಿರೋ ರಿಮೋಟ್‌ ನಮಗಿನ್ನು ಸಿಗೋಲ್ಲ ಅಂದ್ರು ನೆಟ್ಟಿಗರು

Udaya TV New Serial Suryavamsha: ಉದಯ ಟಿವಿಯಲ್ಲಿ ಸೂರ್ಯವಂಶ ಎಂಬ ಧಾರಾವಾಹಿ ಸದ್ಯದಲ್ಲಿಯೇ ಆರಂಭವಾಗಲಿದೆ. ಈ ಸೀರಿಯಲ್‌ಗೆ ಅನಿರುದ್ಧ್‌ ಜತ್ಕರ್‌ ಹೀರೋ. ಸೂರ್ಯವಂಶದ ಕುಡಿಯ ಕಥೆಯನ್ನು ಒಳಗೊಂಡ ಈ ಸೀರಿಯಲ್‌ನ ಪ್ರಮೋ ಭರ್ಜರಿಯಾಗಿದ್ದು, ಸಿನಿಮಾದ ಟ್ರೈಲರ್‌ ನೋಡಿದಂತೆ ಭಾಸವಾಗುತ್ತದೆ.

ಅನಿರುದ್ಧ್‌ ಜತ್ಕರ್‌ ನಟನೆಯ ಸೂರ್ಯವಂಶ ಸೀರಿಯಲ್‌ನ ಪ್ರಮೋ ಬಿಡುಗಡೆ
ಅನಿರುದ್ಧ್‌ ಜತ್ಕರ್‌ ನಟನೆಯ ಸೂರ್ಯವಂಶ ಸೀರಿಯಲ್‌ನ ಪ್ರಮೋ ಬಿಡುಗಡೆ

ಜೊತೆಜೊತೆಯಲ್ಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ಡಾ. ವಿಷ್ಣುವರ್ಧನ್‌ ಮೊಮ್ಮಗ ಅನಿರುದ್ಧ್‌ ಜತ್ಕರ್‌ ಇದೀಗ ಮತ್ತೊಂದು ಸೀರಿಯಲ್‌ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಉದಯ ಟಿವಿಯಲ್ಲಿ ಸೂರ್ಯವಂಶ ಎಂಬ ಧಾರಾವಾಹಿ ಸದ್ಯದಲ್ಲಿಯೇ ಆರಂಭವಾಗಲಿದೆ. ಈ ಸೀರಿಯಲ್‌ಗೆ ಅನಿರುದ್ಧ್‌ ಜತ್ಕರ್‌ ಹೀರೋ. ಸೂರ್ಯವಂಶದ ಕುಡಿಯ ಕಥೆಯನ್ನು ಒಳಗೊಂಡ ಈ ಸೀರಿಯಲ್‌ನ ಪ್ರಮೋ ಬಿಡುಗಡೆಯಾಗಿದೆ. "ಏನ್‌ ಗುರು ಸೀರಿಯಲ್‌ ಪ್ರಮೋ ಒಳ್ಳೆ ಸಿನಿಮಾ ಪ್ರಮೋದ ರೇಂಜ್‌ಗಿದೆ" ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಸೂರ್ಯವಂಶದ ನಾಯಕಿಯಾಗಿ ನಯನಾ ರಾಜ್‌ ನಟಿಸುತ್ತಿದ್ದಾರೆ.

"ರಾಕ್ಷಸನು ನೀನೇನಾ! ರಕ್ಷಕನು ನೀನೇನಾ! ‘ಸೂರ್ಯವಂಶ’ದ ಕುಡಿ ನಿಮ್ಮ ಮುಂದೆ ಶೀಘ್ರದಲ್ಲಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಉದಯ ಟಿವಿ ಸೂರ್ಯವಂಶದ ಪ್ರಮೋವನ್ನು ಹಂಚಿಕೊಂಡಿದೆ. ಈ ಪ್ರಮೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. "ದಾದಾ ಅಳಿಯ ಅನಿರುದ್ದ್ ಯಾವಾಗಲು ಸೂಪರ್.... ಆಲ್ ದ ಬೆಸ್ಟ್" "ಧಾರಾವಾಹಿಯನ್ನು ಸಿನಿಮಾಟಿಕ್‌ ಆಗಿ ತೆಗೆಯೋದು ಸುಮ್ನೆ ನಾ, ಸೂಪರ್‌ ಆಗಿದೆ" "ಇನ್ಮೇಲಿಂದ ಈ ಚಾನೆಲ್ ಬದಲಿಸಿ ಬೇರೆ ನೋಡೋ ಹಾಗಿಲ್ಲ ಮತ್ತೆ ಹೆಣ್ಣ್ ಮಕ್ಳ ಕೈಲಿರೋ ರಿಮೋಟ್ ನಮಗೆ ಸಿಗೋದೇ ಇಲ್ಲ" ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಪ್ರಮೋಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಳೆದ ವರ್ಷವೇ ಸೂರ್ಯವಂಶ ಧಾರಾವಾಹಿ ಕುರಿತು ಘೋಷಣೆ ಮಾಡಲಾಗಿತ್ತು. ಇದೀಗ ಬಿಡುಗಡೆಯಾದ ಪ್ರಮೋವನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ಸೀರಿಯಲ್‌ನ ಕಥೆ ಸತ್ಯನಾರಾಯಣಪುರ ಎಂಬ ಊರಿನಲ್ಲಿ ನಡೆಯುತ್ತದೆ. ಈ ಧಾರಾವಾಹಿಗೆ ಕಲಾ ಸಾಮ್ರಾಟ್‌ ಎಸ್‌ ನಾರಾಯಣ್‌ ಡೈರೆಕ್ಷನ್‌ ಮಾಡುತ್ತಿದ್ದಾರೆ.

ಸೂರ್ಯವಂಶದ ಪ್ರಮೋ ಝಲಕ್‌

"ಇನ್‌ಸ್ಪೆಕ್ಟರ್‌, ಏನಾಗಿದೆ ಈ ಊರಿಗೆ, ಎಲ್ಲಿ ನೋಡಿದ್ರೂ ಹಿಂಸಾಚಾರ, ಎಂತಹ ಧರಿದ್ರ ಊರಿದು" ಎಂದು ಹೀರೋಯಿನ್‌ ಕೇಳುತ್ತಾಳೆ. ಅದಕ್ಕೆ ಇನ್‌ಸ್ಪೆಕ್ಟರ್‌ "ಶಟ್‌ಅಪ್‌, ಯಾವ ಊರಿನ ಬಗ್ಗೆ ಮಾತನಾಡುತ್ತಿದ್ದಿಯಾ? ಇದು ಸೂರ್ಯವಂಶ ಆಳಿದ ಊರಿದು" ಎಂದು ಹೇಳುತ್ತಾರೆ. "ಅದು ಆವಾಗʼʼ ಎಂದು ಆಕೆ ಹೇಳುತ್ತಾಳೆ. "ಈಗಲೂ ಆ ಕಾಲ ಬರುತ್ತದೆ. ಸೂರ್ಯವಂಶದ ಕುಡಿ ಸತ್ಯಮೂರ್ತಿಯವರ ಮೊಮ್ಮಗ ಬರುತ್ತಿದ್ದಾನೆ ಎಂದು ಇನ್‌ಸ್ಪೆಕ್ಟರ್‌ ಹೇಳುತ್ತಾರೆ. ಹಿನ್ನೆಲೆಯಲ್ಲಿ ಹೊಡೆದಾಟದ ದೃಶ್ಯಗಳು ಕಾಣಿಸುತ್ತವೆ. "ಯಾವನ್ರಿ ಇವನು ರಾಕ್ಷಸನ ಎಂದು ಹೀರೋಯಿನ್‌ ಕೇಳಿದಾಗ "ರಾಕ್ಷಸ ಅಲ್ಲಮ್ಮ ರಕ್ಷಕ" ಎಂದು ಜನರು ಹೇಳುತ್ತಾರೆ. ಅನಿರುದ್ಧ್‌ ಜತ್ಕರ್‌ ನಟನೆಯ ಸೂರ್ಯವಂಶದ ಪ್ರಮೋ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಡಾ. ವಿಷ್ಣುವರ್ಧನ್‌ ನಟನೆಯ ಸೂರ್ಯವಂಶ ಸಿನಿಮಾವು 1999ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಎಸ್‌. ನಾರಾಯಣ್‌ ನಿರ್ದೇಶಣ ಮಾಡಿದ್ದರು. ಇದೀಗ ಇದೇ ಹೆಸರಿನ ಸೀರಿಯಲ್‌ ಅನ್ನೂ ಎಸ್‌. ನಾರಾಯಣ್‌ ನಿರ್ದೇಶನ ಮಾಡುತ್ತಿದ್ದಾರೆ. ಸೂರ್ಯವಂಶ ಸಿನಿಮಾದಲ್ಲಿ ಡಾ. ವಿಷ್ಣುವರ್ಧನ್‌ ಅವರು ಡಬಲ್‌ ಆಕ್ಟಿಂಗ್‌ ಮಾಡಿದ್ದರು. ಈ ಚಿತ್ರದಲ್ಲಿ ಇಷಾ ಕೊಪ್ಟಿಕರ್‌, ಲಕ್ಷ್ಮಿ, ಹೇಮಾ ಚೌಧರಿ, ವಿಜಯಲಕ್ಷ್ಮಿ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಎಸ್‌. ನಾರಾಯಣ್‌ ಮುಂತಾದ ಕಲಾವಿದರು ನಟಿಸಿದ್ದರು.