Raanav Gowda: ನಟ ರಾಣವ್‌ ಗೌಡ ನಟನೆ ಬೆಂಕಿ ಕಣ್ರೀ, ಕನ್ನಡಕ್ಕೊಬ್ಬ ಒಳ್ಳೆ ವಿಲನ್‌ ಸಿಕ್ರು; ಅಮೃತಧಾರೆ ಜೈದೇವ್‌ ನಟನೆಗೆ ಎಲ್ಲೆಡೆ ಶ್ಲಾಘನೆ-televison news who is raanav r gowda amruthadhaare jaidev details raanav serials movies personal life details ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Raanav Gowda: ನಟ ರಾಣವ್‌ ಗೌಡ ನಟನೆ ಬೆಂಕಿ ಕಣ್ರೀ, ಕನ್ನಡಕ್ಕೊಬ್ಬ ಒಳ್ಳೆ ವಿಲನ್‌ ಸಿಕ್ರು; ಅಮೃತಧಾರೆ ಜೈದೇವ್‌ ನಟನೆಗೆ ಎಲ್ಲೆಡೆ ಶ್ಲಾಘನೆ

Raanav Gowda: ನಟ ರಾಣವ್‌ ಗೌಡ ನಟನೆ ಬೆಂಕಿ ಕಣ್ರೀ, ಕನ್ನಡಕ್ಕೊಬ್ಬ ಒಳ್ಳೆ ವಿಲನ್‌ ಸಿಕ್ರು; ಅಮೃತಧಾರೆ ಜೈದೇವ್‌ ನಟನೆಗೆ ಎಲ್ಲೆಡೆ ಶ್ಲಾಘನೆ

Who is Raanav R Gowda?: ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ಎಂಬ ನೆಗೆಟಿವ್‌ ಪಾತ್ರದಲ್ಲಿ ನಟಿಸುವ ರಾಣವ್‌ ಆರ್‌ ಗೌಡ ಕೆಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅರಮನೆ, ತುಳಸಿ, ಜೀವನದಿ, ರಾಜಕುಮಾರಿ, ವರಲಕ್ಷ್ಮಿ ಸ್ಟೋರ್ಸ್‌, ಮತ್ತೆ ವಸಂತ, ಕನ್ಯಾದಾನ, ಕನ್ಯಾದಾನ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.

Raanav Gowda: ನಟ ರಾಣವ್‌ ಗೌಡ ನಟನೆ ಬೆಂಕಿ ಕಣ್ರೀ, ಕನ್ನಡಕ್ಕೊಬ್ಬ ಒಳ್ಳೆ ವಿಲನ್‌ ಸಿಕ್ರು
Raanav Gowda: ನಟ ರಾಣವ್‌ ಗೌಡ ನಟನೆ ಬೆಂಕಿ ಕಣ್ರೀ, ಕನ್ನಡಕ್ಕೊಬ್ಬ ಒಳ್ಳೆ ವಿಲನ್‌ ಸಿಕ್ರು

ಬೆಂಗಳೂರು: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ಗೆ ನೆಗೆಟಿವ್‌ ಶೇಡ್‌ ಇರುವ ಪಾತ್ರ. ಇದರ ನಡುವೆ ಅಣ್ಣನಿಗೆ ಒಳ್ಳೆಯ ತಮ್ಮನಾಗಿ, ಮಲ್ಲಿಗೆ ಒಳ್ಳೆಯ ಗಂಡನಾಗಿ ನಾಟಕ ಮಾಡುವಂತಹ ಪಾತ್ರ. ಇಲ್ಲಿಯವರೆಗೆ ಈತನ ವಿಲನ್‌ ಪಾತ್ರದಲ್ಲಿ ಅಂತಹ ರೋಷ ಇರಲಿಲ್ಲ. ಆದರೆ, ಇತ್ತೀಚಿನ ಸಂಚಿಕೆಯಲ್ಲಿ ಗೌತಮ್‌ ದಿವಾನ್‌ ಎದುರು ಮಾತನಾಡುವಂತಹ ಸನ್ನಿವೇಶದಲ್ಲಿ ರಾಣವ್‌ ಗೌಡನ ವಿಲನ್‌ ನಟನೆ ಪ್ರತಿಭೆ ಹೊರಬಿದ್ದಿದೆ. "ವಾಹ್‌ ಎಂತಹ ನಟನೆ" ಎಂದು ಕಿರುತೆರೆ ಪ್ರೇಕ್ಷಕರು ಹೊಗಳಿದ್ದಾರೆ.

ತನ್ನ ಪ್ರಿಯೆ ದಿಯಾಳಿಗೆ ಕಾರು ಗಿಫ್ಟ್‌ ನೀಡಲು ರಾಣವ್‌ ಗೌಡ ಶೋರೂಂಗೆ ಬಂದಿದ್ದಾನೆ. ಆ ಸಮಯದಲ್ಲಿ ಅಲ್ಲಿಗೆ ಗೌತಮ್‌ ಮತ್ತು ಆನಂದ್‌ ಕೂಡ ಬಂದಿದ್ದಾರೆ. ತನ್ನ ನಲ್ಲೆಯ ಜತೆ ಲಲ್ಲೆಗೆರೆಯುತ್ತಿರುವ ಜೈದೇವ್‌ನ ನೋಡಿ ಗೌತಮ್‌ ಕೋಪಗೊಂಡಿದ್ದಾನೆ. ಆದರೆ, ಈ ಸಮಯದಲ್ಲಿ ಜೈದೇವ್‌ಗೆ ಬೈದ್ರೆ ಪರಿಸ್ಥಿತಿ ಹೇಗಿರಬಹುದು ಎಂದು ಯೋಚಿಸಿದ್ದಾನೆ. ಈ ಸಮಯದಲ್ಲಿ ತಾನು ಜೈದೇವ್‌ ಕೊರಳಪಟ್ಟಿ ಹಿಡಿದರೆ ಏನಾಗಬಹುದು ಎಂದು ಕಲ್ಪಿಸಿಕೊಂಡಿದ್ದಾನೆ. ಆ ಕಲ್ಪನೆಯೇ ಅದ್ಭುತ ಸೀನ್‌ ಆಗಿ ಹೊರಹೊಮ್ಮಿದೆ.

ಇದೇ ಮೊದಲ ಬಾರಿಗೆ ಗೌತಮ್‌ ಎದುರು ಜೈದೇವ್‌ ಅಬ್ಬರಿಸಿ ಮಾತನಾಡುವಂತಹ ಸನ್ನಿವೇಶ ಇದಾಗಿದೆ. ಈ ಸನ್ನಿವೇಶಕ್ಕೆ ತಕ್ಕಂತೆ ಅದ್ಭುತವಾಗಿ ಹಿನ್ನೆಲೆ ಸಂಗೀತವೂ ಈ ದೃಶ್ಯದಲ್ಲಿತ್ತು. ಒಟ್ಟಾರೆ, ಈ ಸೀನ್‌ ಕಿರುತೆರೆ ಪ್ರೇಕ್ಷಕರಿಗೆ ರೋಮಾಂಚನ ಉಂಟುಮಾಡಿದ್ದು ನಿಜ.

"ಜೈದೇವ್‌ ಒಳ್ಳೆಯ ನಟನೆ" "ಆಕ್ಟಿಂಗ್‌ ಬೆಂಕಿ" "ಅತ್ಯುತ್ತಮ ನಟನೆ ಜೆಡಿ. ನೀನು ಸ್ಯಾಂಡಲ್‌ವುಡ್‌ನಲ್ಲಿ ವಿಲನ್‌ ಪಾತ್ರಕ್ಕೆ ಸೂಕ್ತ ವ್ಯಕ್ತಿ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಎಲ್ಲೆಡೆ ಅಮೃತಧಾರೆ ಸೀರಿಯಲ್‌ನ  ಜೈದೇವ್‌ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಯಾರಿದು ಜೈದೇವ್‌? ಈ ಪಾತ್ರಕ್ಕೆ ಬಣ್ಣ ಹಚ್ಚಿದ ರಾಣವ್‌ ಗೌಡ ಯಾರು? ಈ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.

ರಾಣವ್‌ ಗೌಡ ಪರಿಚಯ

ನಟ ರಾಣವ್‌ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮೂಲಕವೂ ಅಭಿಮಾನಿ ಬಳಗ ಹೊಂದಿದ್ದಾರೆ. ಇವರು ಬಾಲನಟನಾಗಿ ತುಳಸಿ ಸೀರಿಯಲ್‌ನಲ್ಲಿ ನಟಿಸಿದ್ದರು. ಆರನೇ ತರಗತಿಯಲ್ಲಿ ಓದುತ್ತಿರುವಾಗಲೇ ನಟಿ ಸುಧಾರಾಣಿ ಜತೆ ನಟಿಸಿದ್ದರು. ಎಂಜಿನಿಯರಿಂಗ್‌ ಅರ್ಧಕ್ಕೆ ಬಿಟ್ಟು ನಟನೆಗೆ ಮರಳಿದ ಇವರು ಉದಯ ಟಿವಿಯ ಅರಮನೆ ಸೀರಿಯಲ್‌ನಲ್ಲಿ ನಾಯಕನ ಗೆಳೆಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಇದಾದ ಬಳಿಕ ಬಿ ಸುರೇಶ್‌ರ ಜೀವನದಿ ಸೀರಿಯಲ್‌ನಲ್ಲಿ ವಿಲನ್‌ ಮಗನ ಫ್ರೆಂಡ್‌ ಆಗಿ ನಟಿಸಿದ್ದರು.

ರಾಜಕುಮಾರಿ ಎಂಬ ಸೀರಿಯಲ್‌ ಕಸ್ತೂರಿ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಈ ಸೀರಿಯಲ್‌ನಲ್ಲಿ ರಾಣವ್‌ ಗೌಡ ಎರಡನೇ ನಾಯಕನಾಗಿದ್ದರು. ನಾಯಕನ ತಂಗಿಯನ್ನೇ ಪ್ರೀತಿಸುವ ಪಾತ್ರದಲ್ಲಿ ನಟಿಸಿದ್ದರು. ರಾಣವ್‌ ಗೌಡ ಈ ಸೀರಿಯಲ್‌ ಮೂಲಕ ವಿಲನ್‌ ಪಾತ್ರಕ್ಕೂ ಸೈ ಎಂದು ತೋರಿಸಿಕೊಟ್ಟರು. ಸ್ಟಾರ್‌ ಸುವರ್ಣದ ವರಲಕ್ಷ್ಮಿ ಸ್ಟೋರ್ಟ್ಸ್‌ ಸೀರಿಯಲ್‌ನಲ್ಲಿ ಕನ್ವರ್‌ ಪಾತ್ರದಲ್ಲಿ ಅಬ್ಬರಿಸಿದ್ದರು. ಮತ್ತೆ ವಸಂತ ಸೀರಿಯಲ್‌ನಲ್ಲೂ ಬಣ್ಣ ಹಚ್ಚಿದ್ದರು. ಉದಯಟಿವಿಯ ಕನ್ಯಾದಾನ ಸೀರಿಯಲ್‌ನಲ್ಲೂ ನಟಿಸಿದ್ದರು.

ಕಮಲಿ ಸೀರಿಯಲ್‌ನಲ್ಲಿ ಅಮರ್‌ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಕನ್ಯಾದಾನ ಸೀರಿಯಲ್‌ ಮೂಲಕವೂ ಪ್ರೇಕ್ಷಕರ ಮನಗೆದ್ದಿದ್ದರು. ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್‌ ಅಥವಾ ಜೆಡಿಯಾಗಿ ಮಿಂಚುತ್ತಿದ್ದಾರೆ. ಸೀರಿಯಲ್‌ ಆರಂಭದಿಂದಲೇ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಮಲ್ಲಿ ಮುಂದೆ ಮಾತ್ರ ಒಳ್ಳೆಯವನ ರೀತಿ ನಾಟಕವಾಡುತ್ತಿದ್ದ ಪಾತ್ರ ಇದಾಗಿತ್ತು. ಇದೀಗ ಜೈದೇವ್‌ ಅಬ್ಬರಿಸಿದ್ದು, ಸ್ಯಾಂಡಲ್‌ವುಡ್‌ಗೆ ಒಳ್ಳೆ ವಿಲನ್‌ ಆಗಬಹುದು ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಕನ್ನಡ ಸಿನಿಮಾಗಳಲ್ಲಿಯೂ ರಾಣವ್‌ ಗೌಡ ನಟಿಸಿದ್ದಾರೆ. ವಿರಾಟ್‌ ಸಿನಿಮಾದಲ್ಲೂ ನಟಿಸಿದ್ದಾರೆ. ಮತ್ತೆ ಬಾ ಉಪೇಂದ್ರ, ಶ್ರೀಕಂಠ ಸಿನಿಮಾದಲ್ಲಿ ನಟಿಸಿದ್ದಾರೆ.