ಅಮೃತಧಾರೆ ಧಾರಾವಾಹಿ ಆಗಸ್ಟ್‌ 31: ಗೌತಮ್‌ ದಿವಾನ್‌ ಮನೆಯಲ್ಲಿ ಆನಂದದ ಪಾಯಸದೂಟ, ಚಿಂತೆ ಮರೆಯಲು ಮನೆಬಿಟ್ಟ ಸದಾಶಿವ-televison news will anand tell goutham about jaydevs misdeed amruthadhaare serial today episode pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ ಆಗಸ್ಟ್‌ 31: ಗೌತಮ್‌ ದಿವಾನ್‌ ಮನೆಯಲ್ಲಿ ಆನಂದದ ಪಾಯಸದೂಟ, ಚಿಂತೆ ಮರೆಯಲು ಮನೆಬಿಟ್ಟ ಸದಾಶಿವ

ಅಮೃತಧಾರೆ ಧಾರಾವಾಹಿ ಆಗಸ್ಟ್‌ 31: ಗೌತಮ್‌ ದಿವಾನ್‌ ಮನೆಯಲ್ಲಿ ಆನಂದದ ಪಾಯಸದೂಟ, ಚಿಂತೆ ಮರೆಯಲು ಮನೆಬಿಟ್ಟ ಸದಾಶಿವ

ಅಮೃತಧಾರೆ ಧಾರಾವಾಹಿ ಆಗಸ್ಟ್‌ 31 ಎಪಿಸೋಡ್‌: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್‌ ಆರೋಗ್ಯ ಸುಧಾರಿಸಿದೆ. ಗೆಳೆಯ ಹುಷಾರಾಗಿರುವುದು ಗೌತಮ್‌ ದಿವಾನ್‌ಗೆ ಖುಷಿ ತಂದಿದೆ. ಭೂಮಿಕಾ ಈ ಖುಷಿಯಲ್ಲಿ ಪಾಯಸ ಮಾಡಿದ್ದಾನೆ. ಇದರ ನಡುವೆ ಶತ್ರುಪಕ್ಷದ ಎಂದಿನ ತಳಮಳ ಮುಂದುವರೆದಿದೆ.

ಅಮೃತಧಾರೆ ಧಾರಾವಾಹಿ: ಆನಂದ್‌ ಹುಷಾರಾದ ಖುಷಿಗೆ ಪಾಯಸದೂಟ
ಅಮೃತಧಾರೆ ಧಾರಾವಾಹಿ: ಆನಂದ್‌ ಹುಷಾರಾದ ಖುಷಿಗೆ ಪಾಯಸದೂಟ

ಅಮೃತಧಾರೆ ಧಾರಾವಾಹಿ ಆಗಸ್ಟ್‌ 31 ಸಂಚಿಕೆ: ಗೌತಮ್‌ ಖುಷಿಯಾಗಿದ್ದಾರೆ. ಮನೆಯಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ಆನಂದ್‌ ಆರೋಗ್ಯ ಸುಧಾರಿಸಿದ್ದು ಆಪ್ತಗೆಳೆಯನ ಮನಸ್ಸಲ್ಲಿ ಖುಷಿಯ ಅಲೆ ಎಬ್ಬಿಸಿದೆ. ಈ ಖುಷಿಯನ್ನು ಭೂಮಿಕಾಳ ಜತೆ ಹಂಚಿಕೊಳ್ಳುತ್ತಿದ್ದಾನೆ. "ನಾನು ದೇವರಲ್ಲಿ ಆನಂದ್‌ಗಾಗಿ ಬೇಡಿಲ್ಲ. ನನಗಾಗಿ ಬೇಡಿದೆ. ಅವನು ಯಾವಾಗಲೂ ನನ್ನ ಜತೆಯಲ್ಲಿ ಇರುವಂತೆ ಬೇಡಿಕೊಂಡೆ. ಯಾವಾಗಲೂ ಗೆಳೆಯ ಗೆಳೆಯ ಅನ್ನುತ್ತಿದ್ದ. ಅವನನ್ನು ಕಳೆದುಕೊಳ್ಳುವ ಭಯವಾಯಿತು" ಎಂದೆಲ್ಲ ಗೌತಮ್‌ ಹೇಳುತ್ತಾರೆ. ಇನ್ನೊಂದೆಡೆ ಆನಂದ್‌ ಮನಸ್ಸಲ್ಲಿ ಬೇರೆಯೇ ಯೋಚನೆ. ಗೌತಮ್‌ ಮುಂದೆ ಬಂದಾಗ ಆನಂದ್‌ "ಜೈದೇವ್‌ ವಿಚಾರ"ಹೇಳಬೇಕೆಂದುಕೊಳ್ಳುತ್ತಾನೆ. "ಗೆಳೆಯ ಈ ಆಕ್ಸಿಡೆಂಟ್‌ ಆದ ಬಳಿಕ ನನಗೆ ರಿಯಲೈಸ್‌ ಆಗಿರುವುದು ಏನೆಂದರೆ... ನನಗೆ ಏನು ಹೇಳಬೇಕೋ ಅದನ್ನು ಹೇಳಬೇಕು" ಎನ್ನುತ್ತಾನೆ. ಸತ್ಯ ಗೊತ್ತಾದ ಬಳಿಕ ಗೆಳೆಯ ಯಾವ ರೀತಿ ರಿಯಾಕ್ಟ್‌ ಮಾಡುತ್ತಾನೆ ಎನ್ನುವುದನ್ನೂ ಯೋಚಿಸುತ್ತಾನೆ. ಸತ್ಯವನ್ನು ಹೇಳುವುದೋ ಬೇಡವೋ ಎಂದು ಯೋಚಿಸುತ್ತಾನೆ. ಅದೇ ಸಮಯದಲ್ಲಿ ಹೊರಗೆ ಹೋಗಿದ್ದ ಜೈದೇವ್‌ ಬರುತ್ತಾನೆ. ಆ ಸಮಯದಲ್ಲಿ ಅಪರ್ಣಾ ಜೈದೇವ್‌ಗೆ ಥ್ಯಾಂಕ್ಸ್‌ ಹೇಳುತ್ತಾರೆ. "ನೀವು ಮಾತನಾಡಿದ ಬಳಿಕ ಆನಂದ್‌ ಹುಷಾರಾದ. ನಿಮಗೆ ಕ್ರೆಡಿಟ್‌ ಸಿಗಬೇಕು" ಎಂದು ಅಪರ್ಣಾ ಹೇಳುತ್ತಾಳೆ. ಆನಂದ್‌ ಹೇಗಿದ್ದಾನೆ ಎಂದಾಗ "ಗೌತಮ್‌ ಜತೆ ಮಾತನಾಡುತ್ತ ಇದ್ದಾರೆ" ಎಂದಾಗ ಜೈದೇವ್‌ಗೆ ಭಯವಾಗುತ್ತದೆ. "ನಾನು ಮಾತನಾಡಿ ಬರುವೆ" ಎಂದು ಜೈದೇವ್‌ ಹೋಗುತ್ತಾನೆ.

ಸತ್ಯ ಹೇಳಲು ನಾನಾ ಅಡ್ಡಿ

ಆನಂದ್‌ ಯೋಚನೆ ಮಾಡುತ್ತಾ ಇದ್ದಾನೆ. "ಕೆಲವೊಮ್ಮೆ ನಾವು ಕೇಳಿದಂತೆ ಇರೋದಿಲ್ಲ. ಕಣ್ಣಿಗೆ ಕಾಣೋದು ಒಂದಾದರೆ ಸತ್ಯ ಬೇರೆಯೇ ಇರುತ್ತದೆ" ಎಂದು ಹೇಳುವಾಗ ಜೈದೇವ್‌ ಎಂಟ್ರಿ ನೀಡುತ್ತಾನೆ. "ಆನಂದ್‌ ನೀವು ಹುಷಾರಾಗಿದ್ದು ಕೇಳಿ ಖುಷಿಯಾಯ್ತು" ಎಂದಾಗ ಆನಂದ್‌ "ಹೌದು, ಇನ್ನೂ ಮಾಡಬೇಕಾದದ್ದು ತುಂಬಾ ಇದೆ" ಎನ್ನುತ್ತಾನೆ. ಇದ್ಯಾಕೋ ನನಗೆ ಕೌಂಟರ್‌ ಕೊಟ್ಟಂತೆ ಇದೆ ಎಂದು ಜೈದೇವ್‌ ಯೋಚಿಸುತ್ತಾನೆ. "ನೀವು ಮಿರಾಕಲ್‌. ನೀವು ಇಷ್ಟು ಬೇಗ ಗುಣ ಆದ್ರಿ" ಎಂದೆಲ್ಲ ಹೇಳುವಾಗ ಆನಂದ್‌ ಒಂದು ರೀತಿ ಲುಕ್‌ ನೀಡುತ್ತಾನೆ. ಈ ಲುಕ್‌ ನೋಡಿದ್ರೆ ಯಾಕೋ ನನ್ನ ಬುಡಕ್ಕೆ ಬರುವಂತೆ ಇದೆ ಎಂದು ಜೈದೇವ್‌ ಯೋಚಿಸುತ್ತಾನೆ. ಈ ಸಮಯದಲ್ಲಿ ಒಂದು ನಾಟಕೀಯವಾಗಿ ಮಾತನಾಡುತ್ತಾನೆ. ಆನಂದ್‌ ಕೂಡ ಏನೂ ಗೊತ್ತಿಲ್ಲದಂತೆ ಮಾತನಾಡುತ್ತಾನೆ.

ಶಕುಂತಲಾದೇವಿ ಮತ್ತು ರಮಾಕಾಂತ್‌ ಮಾತನಾಡುತ್ತ ಇದ್ದಾರೆ. "ಆನಂದ್‌ ಹುಷಾರಾಗಿದ್ದಾನೆ. ಈ ಮನೆಯಿಂದ ತೊಲಗುತ್ತಾನೆ" ಎಂದು ಶಕುಂತಲಾದೇವಿ ಹೇಳುತ್ತಾರೆ.

ಅಪೇಕ್ಷಾ ಮತ್ತು ಪಾರ್ಥ ಸಿನಿಮಾ ನೋಡಿ ಬಂದು ಖುಷಿಯಾಗಿ ಮಾತನಾಡುತ್ತಾರೆ. ಮನೆಗೆ ವಾಪಸ್‌ ಬಂದಾಗ ಮಲ್ಲಿ ಎದುರಾಗುತ್ತಾಳೆ. "ಆನಂದ್‌ಗೆ ಪ್ರಜ್ಞೆ ಬಂತು" ಎಂದು ಸುದ್ದಿ ಹೇಳುತ್ತಾಳೆ. ಅದನ್ನು ಕೇಳಿ ಅವರಿಬ್ಬರಿಗೆ ಖುಷಿಯಾಗುತ್ತದೆ.

ಸದಾಶಿವ ನಾಪತ್ತೆಯಾಗಿದ್ದಾನೆ. ಮನೆಯಲ್ಲಿ ಎಲ್ಲರೂ ಆತಂಕಗೊಂಡಿದ್ದಾರೆ. ಮೂರು ದಿನದಿಂದ ಮನೆಗೆ ಬಂದಿಲ್ಲ ಎಂದು ಚಿಂತೆಯಲ್ಲಿದ್ದಾರೆ. ಭೂಮಿಕಾನಿಗೆ ಹೇಳು ಎಂದರೂ ಜೀವನ್‌ ಹೇಳೋದಿಲ್ಲ. ಆಕೆಗೆ ಬೇಸರವಾಗಬಹುದು ಹೇಳೋದು ಬೇಡ ಎನ್ನುತ್ತಾರೆ. "ನೀವು ಟೆನ್ಷನ್‌ ಮಾಡಬೇಡಿ. ನಾನು ವಾಪಸ್‌ ಬರ್ತಿನಿ" ಎಂದು ಲೆಟರ್‌ ಬರೆದು ಸದಾಶಿವ ಹೋಗಿದ್ದಾರೆ. ಆ ಸಮಯದಲ್ಲಿ ಸದಾಶಿವ ಕಾಲ್‌ ಮಾಡುತ್ತಾರೆ. "ಮಂದಾಕಿನಿ, ನನ್ನ ಮನಸ್ಸು ಸರಿಯಾಗಿರಲಿಲ್ಲ. ನೆಮ್ಮದಿಗಾಗಿ ಬಂದೆ. ಚಿಂತೆ ಮಾಡಬೇಡ" ಎಂದು ಹೇಳಿ ಫೋನ್‌ ಕಟ್‌ ಮಾಡುತ್ತಾರೆ.

ಆನಂದ್‌ ಬಳಿಗೆ ಬಂದ ಪಾರ್ಥ ಖುಷಿಯಿಂದ ಮಾತನಾಡುತ್ತಾನೆ. ಅಪೇಕ್ಷಾ ಕೂಡ ಕುಶಲ ಸಮಾಚಾರ ವಿಚಾರಿಸುತ್ತಾಳೆ. ಒಂದಿಷ್ಟು ಮಾತನಾಡುತ್ತಾರೆ. "ಆನಂದ್‌ ಹುಷಾರಾದ್ರೆ ನಾನು ಖುಷಿಯಿಂದ ಕುಣಿದು ಬಿಡ್ತಿನಿ ಅಂತ ಹೇಳಿದ್ಯಂತೆ. ಸರಿ ಡ್ಯಾನ್ಸ್‌ ಮಾಡು" ಎಂದು ಆನಂದ್‌ ಹೇಳುತ್ತಾನೆ. "ಅತ್ತೆ ಹೇಳಿದ್ದು ನಿಜ, ಆನಂದ್‌, ಅಪರ್ಣಾ ಅಂದ್ರೆ ವಿಶೇಷವಾದ ಪ್ರೀತಿ ಮನೆಯಲ್ಲಿದೆ" ಎಂದು ಅಪೇಕ್ಷಾ ಹೇಳುತ್ತಾಳೆ. ಇನ್ನೊಂದೆಡೆ ಭೂಮಿಕಾ ಆನಂದ್‌ ಹುಷಾರಾದ ಲೆಕ್ಕದಲ್ಲಿ ಭೂಮಿಕಾ ಪಾಯಸ ಮಾಡುತ್ತಾ ಇದ್ದಾರೆ. ಮಲ್ಲಿ ಗೌತಮ್‌ ಮತ್ತು ಆನಂದ್‌ಗೆ ಪಾಯಸ ತಂದು ನೀಡುತ್ತಾಳೆ. ಇನ್ನೊಂದೆಡೆ ಜೈದೇವ್‌ ಟೆನ್ಷನ್‌ನಲ್ಲಿ ಯೋಚಿಸುತ್ತಾ ಇದ್ದಾನೆ. ಅಲ್ಲಿಗೆ ಬಂದ ಮಲ್ಲಿ ಪಾಯಸ ನೀಡುತ್ತಾಳೆ. ಅವನ ಟೆನ್ಷನ್‌ ಮುಂದುವರೆಯುತ್ತದೆ. ಆನಂದ್‌ ಹುಷಾರಾದ ಖುಷಿಯಲ್ಲಿ ತನ್ನ ಮನೆಗೆ ಹೊರಡುತ್ತಾನೆ. ಎಲ್ಲರೂ ಆತನನ್ನು ಬೀಳ್ಕೊಡುತ್ತಾರೆ.́

ಅಮೃತಧಾರೆ ಕನ್ನಡ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)