ಆನ್‌ಲೈನ್‌ ಸರಸ ಸಲ್ಲಾಪ ಆರಂಭಿಸಿದ ಭೂಮಿಕಾ, ಆಸ್ಪತ್ರೆಗೆ ಗೌತಮ್‌ನನ್ನು ಕರೆಸಿಕೊಂಡ ಶಕುಂತಲಾ ದೇವಿ ಪ್ಲ್ಯಾನ್‌ ಫ್ಲಾಪ್‌; ಅಮೃತಧಾರೆ ಸ್ಟೋರಿ
ಕನ್ನಡ ಸುದ್ದಿ  /  ಮನರಂಜನೆ  /  ಆನ್‌ಲೈನ್‌ ಸರಸ ಸಲ್ಲಾಪ ಆರಂಭಿಸಿದ ಭೂಮಿಕಾ, ಆಸ್ಪತ್ರೆಗೆ ಗೌತಮ್‌ನನ್ನು ಕರೆಸಿಕೊಂಡ ಶಕುಂತಲಾ ದೇವಿ ಪ್ಲ್ಯಾನ್‌ ಫ್ಲಾಪ್‌; ಅಮೃತಧಾರೆ ಸ್ಟೋರಿ

ಆನ್‌ಲೈನ್‌ ಸರಸ ಸಲ್ಲಾಪ ಆರಂಭಿಸಿದ ಭೂಮಿಕಾ, ಆಸ್ಪತ್ರೆಗೆ ಗೌತಮ್‌ನನ್ನು ಕರೆಸಿಕೊಂಡ ಶಕುಂತಲಾ ದೇವಿ ಪ್ಲ್ಯಾನ್‌ ಫ್ಲಾಪ್‌; ಅಮೃತಧಾರೆ ಸ್ಟೋರಿ

Amruthadhaare Serial Yesterday Episode: ಗೌತಮ್‌ ಮತ್ತು ಭೂಮಿಕಾ ಒಟ್ಟಿಗೆ ರಾತ್ರಿ ಕಳೆಯಬಾರದು ಎಂದು ಶಕುಂತಲಾದೇವಿ ಗೌತಮ್‌ನನ್ನು ಆಸ್ಪತ್ರೆಗೆ ಕರೆಸಿಕೊಳ್ಳುತ್ತಾಳೆ. ಅತ್ತೆಯ ಐಡಿಯಾ ಮನಗಂಡ ಭೂಮಿಕಾ ಫೋನ್‌ನಲ್ಲಿಯೇ ಗೌತಮ್‌ ಜತೆ ಪ್ರೀತಿಯ ಮಾತುಗಳನ್ನು ಆಡುತ್ತ ಶಕುಂತಲಾದೇವಿಯ ಹೊಟ್ಟೆ ಉರಿಸುತ್ತಾರೆ.

ಆನ್‌ಲೈನ್‌ ಸರಸ ಸಲ್ಲಾಪ ಆರಂಭಿಸಿದ ಭೂಮಿಕಾ, ಆಸ್ಪತ್ರೆಗೆ ಗೌತಮ್‌ನನ್ನು ಕರೆಸಿಕೊಂಡ ಶಕುಂತಲಾ ದೇವಿ ಪ್ಲ್ಯಾನ್‌ ಫ್ಲಾಪ್‌
ಆನ್‌ಲೈನ್‌ ಸರಸ ಸಲ್ಲಾಪ ಆರಂಭಿಸಿದ ಭೂಮಿಕಾ, ಆಸ್ಪತ್ರೆಗೆ ಗೌತಮ್‌ನನ್ನು ಕರೆಸಿಕೊಂಡ ಶಕುಂತಲಾ ದೇವಿ ಪ್ಲ್ಯಾನ್‌ ಫ್ಲಾಪ್‌

ಝೀ ಕನ್ನಡ ಅಮೃತಧಾರೆ ಸೀರಿಯಲ್‌ ಸ್ಟೋರಿ: ಅಮೃತಧಾರೆ ಧಾರಾವಾಹಿಯಲ್ಲಿ "ಮಗು ಎಂಬ ಉಡುಗೊರೆ" ಕುರಿತು ಖಡಕ್‌ ಆಗಿದ್ದಾರೆ. ಗೌತಮ್‌ ಮತ್ತು ಭೂಮಿಕಾರನ್ನು ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡುತ್ತಿದ್ದಾರೆ. ಇದರಿಂದ ಚಾಪೆ ಮೇಲೆ ಮಲಗುತ್ತಿದ್ದ ಭೂಮಿಕಾ ಹಾಸಿಗೆ ಮೇಲೆ ಮಲಗುವಂತಾಗಿದೆ. ಮತ್ತೊಂದೆಡೆ ಮದುವೆ ಕ್ಯಾನ್ಸಲ್‌ ಆಗಿರೋ ಖುಷಿಯಲ್ಲಿ ಪಾರ್ಥ ಭೂಮಿಕಾಳ ಮುಂದೆ ಖುಷಿ ವ್ಯಕ್ತಪಡಿಸುತ್ತಾನೆ. ಅತ್ತಿಗೆಗೆ ಥ್ಯಾಂಕ್ಸ್‌ ಹೇಳುತ್ತಾನೆ. "ಪ್ರೀತಿ ಅನ್ನೋದು ಜಸ್ಟ್‌ ಫೀಲಿಂಗ್ಸ್‌ ಅಲ್ಲ, ಅದು ಜವಾಬ್ದಾರಿ" "ಪ್ರೀತಿ ಮಾಡಿದರೆ ಸಾಲದು, ಪ್ರೀತಿನ ಹೇಗೆ ಮುಂದುವರೆಸಬೇಕು ಎಂದು ತಿಳಿದಿರಬೇಕು" ಎಂದು ಅತ್ತಿಗೆಯ ಸಲಹೆ ಇದ್ದೇ ಇರುತ್ತದೆ. ಎಲ್ಲದಕ್ಕೂ ಯೆಸ್‌ ಟೀಚರ್‌, ಯೆಸ್‌ ಅತ್ತಿಗೆ ಅನ್ನುತ್ತಾನೆ ಪಾರ್ಥ.

ಗೌತಮ್‌ ಆಫೀಸ್‌ನಿಂದ ಬೇಗ ಹೊರಡುತ್ತಾನೆ. ಅದೇ ಸಮಯದಲ್ಲಿ ಮನೆಹಾಳ ಮಾವ ಕಾಲ್‌ ಮಾಡುತ್ತಾನೆ. ಶಕುಂತಲಾದೇವಿ ತುಸು ಅಪ್‌ಸೆಟ್‌ ಆಗಿದ್ದಾರೆ ಎನ್ನುತ್ತಾನೆ. ಈ ಮೂಲಕ ಭೂಮಿಕಾ ಜತೆ ರಾತ್ರಿ ಕಳೆಯುವುದಕ್ಕೆ ಬ್ರೇಕ್‌ ಹಾಕಲು ಪ್ಲ್ಯಾನ್‌ ಮಾಡುತ್ತಾರೆ. ಖಂಡಿತಾ ಬರ್ತಿನಿ ಎನ್ನುತ್ತಾನೆ ಗೌತಮ್‌. ಮನೆಯಲ್ಲಿ ಭೂಮಿಕಾ "ಗೌತಮ್‌ಗೆ ಇಷ್ಟವಾದದ್ದು ಏನಾದರೂ ಮಾಡ್ತಿನಿ" ಎಂದುಕೊಳ್ಳುತ್ತಾಳೆ. ಆ ಸಮಯದಲ್ಲಿ ಗೌತಮ್‌ ಕಾಲ್‌ ಮಾಡುತ್ತಾನೆ. "ನಾನು ಇವತ್ತು ಮನೆಗೆ ಬರ್ತಿಲ್ಲ. ಆಸ್ಪತ್ರೆಯಿಂದ ಅಮ್ಮ ಫೋನ್‌ ಮಾಡಿದ್ರು. ಇವತ್ತು ಆಸ್ಪತ್ರೆಯಲ್ಲೇ ಇರುವೆ" ಎನ್ನುತ್ತಾನೆ. ಭೂಮಿಕಾಳಿಗೆ ಬೇಸರದಲ್ಲಿ ಇರುತ್ತಾಳೆ. ಮಲ್ಲಿ ಅಲ್ಲಿಗೆ ಬರುತ್ತಾಳೆ.

ಭಾವನವರಿಗೆ ಯಾಕೆ ನೀವು ಏನೂ ಹೇಳೋದಿಲ್ಲ ಎಂದು ಮಲ್ಲಿ ಕೇಳುತ್ತಾಳೆ. ಅವರಿಗೆ ಅಮ್ಮನ ಮೇಲೆ ನಂಬಿಕೆ ಇದೆ. ನಾನು ಹೇಳಿದ್ರೆ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಎಷ್ಟಾದರೂ ನಾನು ಟೀಚರ್‌, ಯಾರನ್ನು ಹೇಗೆ ತಿದ್ದಬೇಕು ಎಂದು ತಿಳಿದಿದೆ ಎನ್ನುತ್ತಾಳೆ ಭೂಮಿಕಾ. ಇನ್ನೊಂದೆಡೆ ಆಸ್ಪತ್ರೆಗೆ ಬಂದ ಗೌತಮ್‌ ಶಕುಂತಲಾಳ ಕಾಳಜಿ ವಹಿಸುತ್ತಾನೆ. ಶಕುಂತಲಾರ ನಾಟಕೀಯ ಮಾತುಗಳು ಇರುತ್ತವೆ. ವಿಷಯ ಗೊತ್ತಿಲ್ಲದೆ ಗೌತಮ್‌ ತಾಯಿಗೆ ತನ್ನ ಪ್ರೀತಿಯನ್ನು ತೋರಿಸುತ್ತಾನೆ. ಸೆಂಟಿಮೆಂಟ್‌ ಎಂಬ ಸರಪಳಿಯಿಂದ ಗೌತಮ್‌ನನ್ನು ಕಟ್ಟಿಹಾಕಲು ಶಕುಂತಲಾ ಪ್ರಯತ್ನಿಸುತ್ತಾರೆ.

ಮನೆಯಲ್ಲಿ ಒಬ್ಬರೇ ಭೂಮಿಕಾ ಬೇಸರದಲ್ಲಿ ಇರುತ್ತಾರೆ. ಆ ಸಮಯದಲ್ಲಿ ಗೌತಮ್‌ಗೆ ಕಾಲ್‌ ಮಾಡುತ್ತಾಳೆ. ಗೌತಮ್‌ ಡಾಕ್ಟರ್‌ ಬಳಿಗೆ ಹೋಗಿರುತ್ತಾನೆ. ಹಲವು ಬಾರಿ ಕಾಲ್‌ ಮಾಡಿದಾಗ ಶಕುಂತಲಾದೇವಿ ಆ ಫೋನ್‌ ಅನ್ನು ಸ್ವಿಚ್‌ ಆಫ್‌ ಮಾಡುತ್ತಾಳೆ. ಇವರು ಯಾವತ್ತೂ ಸ್ವಿಚ್‌ ಆಫ್‌ ಮಾಡೋದಿಲ್ಲ ಎಂದುಕೊಳ್ಳುತ್ತಾಳೆ ಭೂಮಿಕಾ. ಬಳಿಕ ಭೂಮಿಕಾ ಶಕುಂತಲಾರ ನಂಬರ್‌ಗೆ ಕಾಲ್‌ ಮಾಡುತ್ತಾಳೆ. ಆಗ ಗೌತಮ್‌ ಬಂದಿರುತ್ತಾನೆ. ಅತ್ತೆಗೆ ಹೊಟ್ಟೆ ಉರಿಯುವಂತೆ ಒಂದಿಷ್ಟು ಮಾತನಾಡುತ್ತಾಳೆ. ಸರಿ ಅವರಿಗೆ ಫೋನ್‌ ಕೊಡಿ ಎನ್ನುತ್ತಾಳೆ. ಯಾವತ್ತೂ ಅವರ ಫೋನ್‌ ಸ್ವಿಚ್‌ ಆಫ್‌ ಆಗೋಲ್ಲ. ನನಗೆ ಡೌಟ್‌ ಬಂತು. ಹೀಗಾಗಿ, ಅವರಿಗೆ ಫೋನ್‌ ಕೊಡಿ ಅನ್ನುತ್ತಾಳೆ. "ಮನೆಗೆ ಬರೋಲ್ಲ ಅಂದ್ರಲ್ಲ, ಡ್ರೈವರ್‌ ಮೂಲಕ ಊಟ ಕಳುಹಿಸಿದ್ದೀನಿ" ಎನ್ನುತ್ತಾಳೆ. ಆ ಸಮಯದಲ್ಲಿ ಊಟ ಬರುತ್ತದೆ. ಆಸ್ಪತ್ರೆಗೆ ಬಂದರೂ ಭೂಮಿಕಾಳ ಊಟ, ಭೂಮಿಕಾಳ ಮಾತುಗಳ ಜತೆ ಊಟ ಮಾಡುತ್ತಾನೆ. ಈ ಮೂಲಕ ಆಸ್ಪತ್ರೆಯಲ್ಲಿ ಶಕುಂತಲಾದೇವಿಗೆ ಹೊಟ್ಟೆ ಉರಿಯುವಂತಹ ವಾತಾವರಣ ಸೃಷ್ಟಿಯಾಗುತ್ತದೆ.

ಆಕೆ ಕಳುಹಿಸಿಕೊಟ್ಟ ಊಟವನ್ನು ಹೊಗಳುತ್ತ ಮಾತನಾಡುತ್ತಾನೆ. ತುಂಬಾ ಸಮಯ ಇದೇ ರೀತಿ ಫೋನ್‌ನಲ್ಲಿಯೇ ಇರುತ್ತಾರೆ. ಶಕುಂತಲಾದೇವಿಗೆ ತಲೆನೋವು ಬರುವಂತಹ ವಾತಾವರಣ. "ಅವನಿಗೆ ಹೀಗೆ ತಿನ್ನಿಸಿ ತಿನ್ನಿಸಿ ಆತನ ಮನಸ್ಸು ಗೆದ್ದಿದ್ದಾಳೆ" ಎನ್ನುತ್ತಾಳೆ ಶಕುಂತಲಾದೇವಿ. ಹೀಗೆ ಆಸ್ಪತ್ರೆಯಲ್ಲಿ ಪೂರ್ತಿ ಹೆಂಡತಿಯ ಧ್ಯಾನದಲ್ಲಿಯೇ ಇರುತ್ತಾನೆ. ಆನ್‌ಲೈನ್‌ ಸರಸ ಸಲ್ಲಾಪ ಮುಂದುವರೆಯುತ್ತದೆ. ಆಸ್ಪತ್ರೆಗೆ ಗೌತಮ್‌ನನ್ನು ಕರೆಸಿಕೊಂಡ ಶಕುಂತಲಾದೇವಿಯ ಪ್ಲ್ಯಾನ್‌ ಫೇಲ್‌ ಆಗುತ್ತದೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

 

Whats_app_banner