ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಅಸುರ ಚಿತ್ರದ ಹಾಡಿನ ಮರುಸೃಷ್ಟಿ; ಹಳೆ ನೆನಪಿನಲ್ಲಿ ಪುಳಕಗೊಂಡ ಶಿವಣ್ಣ
ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಅಭಿನಯಿಸಿದ ಅರಸು ಚಿತ್ರದ ಹಾಡೊಂದನ್ನು ರಿಕ್ರಿಯೇಟ್ ಮಾಡಲಾಗಿತ್ತು. ತಮ್ಮ ಹಳೆ ದಿನಗಳನ್ನು ನೆನಪಿಸಿಕೊಂಡು ಒಮ್ಮೆ ಹಳೆ ಸೆಟ್‌ಗೆ ಹೋಗಿ ಬಂದಂತಾಯ್ತು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಶಿವರಾಜ್ ಕುಮಾರ್ ಅವರು ಅಭಿನಯಿಸಿದ ಸಿನಿಮಾದ ಹಾಡನ್ನು ರಿಕ್ರಿಯೇಟ್ ಮಾಡಲಾಗಿದೆ. ಅಸುರ ಸಿನಿಮಾದ 'ನಂಗು ಮೊದಲು ನಿಂಗು ಮೊದಲು' ಹಾಡನ್ನು ವೇದಿಕೆಯ ಮೇಲೆ ಮತ್ತೆ ರಿಕ್ರಿಯೇಟ್ ಮಾಡಿದ್ದಾರೆ. ಯಶಸ್ವಿನಿ ಹಾಗೂ ಅವರ ಸಂಗಡಿಗರು ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಇದನ್ನು ನೋಡುತ್ತಾ ಶಿವರಾಜ್ ಕುಮಾರ್ ಕಳೆದು ಹೋಗಿದ್ದಾರೆ. ನಾವೂ ಆಗ ಹೀಗೆ ಮಾಡಿದ್ವಿ ಎಂದು ಹೇಳುತ್ತಾ ಖುಷಿಪಟ್ಟಿದ್ದಾರೆ. ಶಿವರಾಜ್ ಕುಮಾರ್ ಅವರ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಈ ಸಂಚಿಕೆ ತುಂಬಾ ವಿಶೇಷವಾಗಿ ಮೂಡಿ ಬಂದಿದೆ.
ಇನ್ನು ರಕ್ಷಿತಾ ಅವರೂ ಶಿವರಾಜ್ ಕುಮಾರ್ ಅವರ ಸಂತೋಷವನ್ನು ನೋಡುತ್ತಾ, ತಾವೂ ಖುಷಿಪಟ್ಟಿದ್ದಾರೆ. ವೇದಿಕೆಯ ಮಧ್ಯದಲ್ಲಿ ಹಲವಾರು ಡ್ಯಾನ್ಸರ್ಸ್ ಹೋಗಿ ಬಂದು ಮಾಡುತ್ತಾ ಒಂದು ಹೊಸ ವಾತಾವರಣವನ್ನು ಸೃಷ್ಟಿ ಮಾಡಲಾಗಿತ್ತು. ಎಲ್ಲಾ ಡ್ಯಾನ್ಸ್ ತರ ಇದು ಆಗಿರಲಿಲ್ಲ. ಬೇಕು ಎಂದೇ ಹೊಸ ಲೋಕವೊಂದನ್ನು ಸೃಷ್ಟಿ ಮಾಡಿದ್ದರು. ಶಿವರಾಜ್ ಕುಮಾರ್ ಅವರು ಡ್ಯಾನ್ಸ್ ನಡೆಯುತ್ತಾ ಇರುವ ಸಂದರ್ಭದಲ್ಲೇ ಚಪ್ಪಾಳೆ ತಟ್ಟುತ್ತಾ ನಗುತ್ತಾ ಆನಂದಪಡುತ್ತಿದ್ದರು.
ನಾವ್ ಏನ್ ಶೂಟ್ ಮಾಡಿದ್ವೋ ಅದನ್ನೇ ನೋಡಿದ ಹಾಗಾಯ್ತು ಎಂದು ಶಿವರಾಜ್ ಕುಮಾರ್ ಕಾಂಪ್ಲಿಮೆಂಟ್ ನೀಡಿದ್ದಾರೆ. ಅವರ ಮಾತನ್ನು ಕೇಳಿ ಯಶಸ್ವಿನಿ ಖುಷಿಯಾಗಿದ್ದಾರೆ. ಅಸುರ 2001ರಲ್ಲಿ ತೆರೆಕಂಡ ಕನ್ನಡ ಸಾಹಸ ಚಿತ್ರವಾಗಿದ್ದು, ಎಸ್. ಮಹೇಂದರ್ ನಿರ್ದೇಶಿಸಿದ್ದಾರೆ. ಶಿವರಾಜ್ ಕುಮಾರ್ ಮತ್ತು ದಾಮಿನಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಘುವರನ್ ಮತ್ತು ಅನಂತ್ ನಾಗ್ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಿನ ಕಾಲದಲ್ಲಿ ಹೇಗೆ ಇದನ್ನು ಶೂಟ್ ಮಾಡಲಾಗಿತ್ತೋ ಇಲ್ಲೂ ಅದೇ ರೀತಿ ಅದೇ ಸೀನ್‌ಗಳು ಮತ್ತು ಅದೇ ಸ್ಟೆಪ್‌ಗಳನ್ನು ಬಳಕೆ ಮಾಡಿ, ರಿಕ್ರಿಯೇಟ್ ಮಾಡಲಾಗಿತ್ತು.