Manchu Family Feud: ಮಂಚು ಮೋಹನ್ ಬಾಬು ಕುಟುಂಬದಲ್ಲಿ ಕಲಹ; ತಂದೆ ಮಗನ ನಡುವೆಯೇ ಸಂಘರ್ಷ
ಮಂಚು ಮೋಹನ್ ಬಾಬು ಕುಟುಂಬದಲ್ಲಿ ಕಲಹ ಏರ್ಪಟ್ಟಿದೆ. ಮಂಚು ಮೋಹನ್ ಬಾಬು ಹಾಗೂ ಅವರ ಕಿರಿಯ ಮಗ ಮನೋಜ್ ಬಾಬು ನಡುವೆ ಗಲಾಟೆಯಾಗಿ ದೈಹಿಕ ಹಲ್ಲೆಯಾಗಿದೆ. ಕಳೆದ ಮೂರು ದಿನಗಳಿಂದಲೂ ಸಂಘರ್ಷ ಮುಂದುವರೆದಿದೆ.
ಕಳೆದ ಮೂರು ದಿನಗಳಿಂದ ಮಂಚು ಮೋಹನ್ ಬಾಬು ಕುಟುಂಬದಲ್ಲಿ ಕಲಹ ಏರ್ಪಟ್ಟಿದೆ. ಹಿರಿಯ ತೆಲುಗು ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿರುವ ಮೋಹನ್ ಬಾಬು ಅವರು ಈಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತೆಲುಕು ಲೋಕಲ್ ಮೀಡಿಯಾಗಳು ಈ ಬಗ್ಗೆ ವರದಿ ಮಾಡಿದೆ. ಅಪ್ಪ ಹಾಗೂ ಮಗನ ನಡುವೆಯೇ ಕಲಹ ಉಂಟಾಗಿದ್ದು ಅದು ಮೋಹನ್ ಬಾಬು ಅವರ ಮೇಲೆ ದೈಹಿಕ ಹಲ್ಲೆ ಮಾಡುವಷ್ಟು ಮುಂದುವರೆದಿದೆ. ಮಂಗಳವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಮೋಹನ್ ಬಾಬು ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಂಚು ವಿಷ್ಣು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ.
ಮೋಹನ್ ಬಾಬು ಆಸ್ಪತ್ರೆಗೆ ದಾಖಲು
ಜಾಲ್ ಪಲ್ಲಿ ಅವರ ನಿವಾಸದಲ್ಲಿ ಅವರ ಮಗ ಮನೋಜ್ ಜೊತೆಗೇ ಕಲಹವಾಗಿದೆ. ಅವರ ತಲೆಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಮೋಹನ್ ಬಾಬು ಅವರ ಆರೋಗ್ಯ ಬುಲೆಟಿನ್ ಇನ್ನೂ ಮಾಧ್ಯಮಗಳಿಗೆ ಲಭ್ಯವಾಗಿಲ್ಲ. ಇಂದು ಮಧ್ಯಾಹ್ನ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ. ನಟ ಮಂಚು ಮೋಹನ್‌ಬಾಬು ಕುಟುಂಬದಲ್ಲಿ ಕಳೆದ ಮೂರು ದಿನಗಳಿಂದ ಗಲಾಟೆ ನಡೆಯುತ್ತಲೇ ಇತ್ತು ಎಂದು ಹೇಳಲಾಗುತ್ತಿದೆ. ಅದೇ ಗಲಾಟೆ ಇನ್ನಷ್ಟು ಮುಂದುವರೆದು ಈ ರೀತಿಯಾಗಿದೆ.
ಸಂಘರ್ಷಗಳು ಈಗ ಹೆಚ್ಚು ಮುಂದುವರಿದು ದೈಹಿಕ ಹಲ್ಲೆಗಳೇ ಆಗಿದೆ. ಮೋಹನ್ ಬಾಬು ಮತ್ತು ಅವರ ಕಿರಿಯ ಪುತ್ರ ಮಂಚು ಮನೋಜ್ ನಡುವಿನ ವಿವಾದ ಮಂಗಳವಾರ (ಡಿ.10) ಹೆಚ್ಚಾಗಿತ್ತು. ಜಲಪಲ್ಲಿಯಲ್ಲಿರುವ ಮೋಹನ್ ಬಾಬು ನಿವಾಸದಲ್ಲಿ ಮನೋಜ್ ಅವರ ಬೌನ್ಸರ್ ಗಳು ಹಾಗೂ ಮೋಹನ್ ಬಾಬು ರಕ್ಷಣೆಗೆ ಅವರ ಹಿರಿಯ ಪುತ್ರ ವಿಷ್ಣು ನೇಮಿಸಿದ್ದ ಬೌನ್ಸರ್ ಗಳ ನಡುವೆ ಘರ್ಷಣೆ ನಡೆದಿದೆ. ಮೋಹನ್‌ಬಾಬು ಮನೋಜ್ ಮತ್ತು ಅವರ ಪತ್ನಿ ಮೌನಿಕಾಳನ್ನು ಮನೆಗೆ ಪ್ರವೇಶಿಸಲು ಬಿಡದಿದ್ದಾಗ ಈ ಘರ್ಷಣೆಯಾಗಿದೆ.
ದೂರು ದಾಖಲಿಸಿದ್ದ ಮೋಹನ್ ಬಾಬು
ಮೋಹನ್ ಬಾಬು ಅವರು ತಮ್ಮ ಕಿರಿಯ ಮಗ ಮಂಚು ಮನೋಜ್ ಮತ್ತು ಅವರ ಪತ್ನಿ ಮೌನಿಕಾ ವಿರುದ್ಧ ಡಿಸೆಂಬರ್ 9 ರಂದು ದೂರು ಕೂಡ ದಾಖಲಿಸಿದ್ದರು. ಆದರೂ ಈ ಘಟನೆ ನಡೆದಿದೆ. ಮೋಹನ್ ಬಾಬು ತಮ್ಮ ಮನೆಯಲ್ಲಿ ನಡೆದ ಘರ್ಷಣೆಯ ಆಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಮೋಹನ್ ಬಾಬು ಅವರಿಗೆ ಮೂವರು ಮಕ್ಕಳು ಮಂಚು ಲಕ್ಷ್ಮಿ, ಮಂಚು ಮನೋಜ್ ಹಾಗೂ ಮಂಚು ವಿಷ್ಣು.
2023ರಲ್ಲೂ ನಡೆದಿತ್ತು ಅಪ್ಪ, ಮಕ್ಕಳ ಕಲಹ
ಮಂಚು ಮನೋಜ್ ಹಾಗೂ ವಿಷ್ಣು ಈಗಾಗಲೇ ಬೇರೆ ಬೇರೆ ಮನೆ ಮಾಡಿ ಬದುಕುತ್ತಿದ್ದಾರೆ. ಮನೋಜ್ ಎರಡನೇ ಮದುವೆ ಆಗಿದ್ದರು. ಮೊದಲಿನಿಂದಲೇ ಅಣ್ಣ ತಮ್ಮಂದಿರ ನಡುವೆ ಆಸ್ತಿಗಾಗಿ ಗಲಾಟೆ ನಡೆಯುತ್ತಲೇ ಇತ್ತು. ಮೋಹನ್ ಬಾಬು ತಮ್ಮ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಮೂವರೂ ಮಕ್ಕಳಿಗೂ ಹಂಚಿದ್ದಾರಂತೆ. ಮೋಹನ್ ಬಾಬು ಹೈದರಾಬಾದ್‌ನ ಷಾದ್ ನಗರ್ ರಿಜಿಸ್ಟರ್ ಆಫೀಸ್ ಬಳಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ಧರು. ಅವರನ್ನು ಮಾತನಾಡಿಸಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆಗಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ವಿಭಾಗ